ಅಭಿಷೇಕ್ ಅಂಬರೀಶ್ ಗೆ ಜೊತೆಯಾದ ಸಪ್ತಮಿ ಗೌಡ. ಇಡಿ ರಾಜ್ಯವೇ ಖುಷಿ ಪಡುವ ವಿಚಾರ ಹಂಚಿಕೊಂಡಿದ್ದಾರೆ.

ಕಾಂತರಾ ಸಿನಿಮಾದ ಸಿಂಗಾರ ಸಿರಿ ಸಪ್ತಮಿ ಗೌಡ ಅವರು ಈ ಸಿನಿಮಾದಲ್ಲಿ ನಿಭಾಯಿಸಿದ ಲೀಲಾ ಪಾತ್ರದಿಂದ ಸ್ಯಾಂಡಲ್ ವುಡ್ ಅಲ್ಲಿ ಮಾತ್ರವಲ್ಲದೆ ಬೇರೆ ಭಾಷೆಗಳಿಂದ ಕೂಡ ಹಲವು ಆಫರ್ ಗಳನ್ನು ಪಡೆಯುತ್ತಿದ್ದಾರೆ. ಕಾಂತಾರ ಸಿನಿಮಾ ಪಾನ್ ಇಂಡಿಯಾ ಸಿನಿಮಾ ಆಗಿ ದೇಶದಾದ್ಯಂತ ಅಬ್ಬರಿಸುತ್ತಿರುವ ಕಾರಣ ಈ ಸಿನಿಮಾವನ್ನು ನೋಡಿದ ಎಲ್ಲಾ ಇಂಡಸ್ಟ್ರಿಯವರು ಕೂಡ ಸಪ್ತಮಿ ಗೌಡ ಅವರ ಟ್ಯಾಲೆಂಟ್ ಹಾಗೂ ಗ್ಲಾಮರ್ ಅನ್ನು ಗುರುತಿಸಿ ತಮ್ಮ ಭಾಷೆ ಸಿನಿಮಾಗಳು ನಟಿಸುವಂತೆ ಕೇಳುತ್ತಿದ್ದಾರೆ.

ಈ ಬಗ್ಗೆ ಸಪ್ತಮಿ ಗೌಡ ಅವರೇ ಸಂದರ್ಶನ ಒಂದರಲ್ಲಿ ಹೇಳಿಕೊಂಡಿದ್ದರು. ಡಾಲಿ ಧನಂಜಯ್ ಅವರ ನಟನೆಯ ಪಾಪ್ ಕಾರ್ನ್ ಮಂಕಿ ಟೈಗರ್ ಸಿನಿಮಾದಲ್ಲಿ ಮಂದಿ ಸೀನನ ಹೆಂಡತಿ ಆಗಿ ಬಜಾರಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಸಪ್ತಮಿ ಗೌಡ ಅವರು ಬೋಲ್ಡ್ ಆಗಿ ಬೀಪ್ ಸೌಂಡ್ ಹಾಕುವಂತಹ ಡೈಲಾಗ್ಗಳನ್ನು ಹೇಳಿ ಪ್ರೇಕ್ಷಕರ ಗಮನ ಸೆಳೆದಿದ್ದರು.

ಈಕೆಯೇ ಈಗ ಕಾಂತಾರ ಸಿನಿಮಾದ ಮುಗ್ಧ ಲೀಲಾ ಆಗಿ ಅಭಿನಯಿಸಿದ್ದು ಎಂದರೆ ಒಂದು ಕ್ಷಣ ನಂಬಲು ಅಸಾಧ್ಯ. ಅಷ್ಟು ಚೆನ್ನಾಗಿ ಪಾತ್ರಕ್ಕೆ ಹೊಂದಿಕೊಂಡು ತಾನೆ ಪಾತ್ರವಾಗುವ ಸಪ್ತಮಿ ಗೌಡ ಅವರ ಟ್ಯಾಲೆಂಟ್ ಮೆಚ್ಚಲೇಬೇಕು. ಕಾಂತರಾ ಸಿನಿಮಾದಲ್ಲಿ ಮೇಕಪ್ ಇಲ್ಲದೆ ಇದ್ದರೂ ಕೂಡ ಬಂಗಾರದಂತೆ ಹೊಳೆದ ಬಾಲೆ ಇವರು.

ಇದೀಗ ಇವರ ಟ್ಯಾಲೆಂಟಿಗೆ ತಕ್ಕ ಹಾಗೆ ಆಫರ್ ಗಳು ಬರುತ್ತಿದ್ದು ,ಸದ್ಯಕ್ಕೆ ಕನ್ನಡ ಚಿತ್ರರಂಗದ ಬಿಝಿಯೇಸ್ಟ್ ನಟಿ ಆಗುತ್ತಿದ್ದಾರೆ. ಕನ್ನಡದಲ್ಲಿ ಈಗಾಗಲೇ ಅನೇಕ ಅಭಿಮಾನಿಗಳನ್ನು ಗಳಿಸಿದ್ದಾರೆ ಸಪ್ತಮಿ ಗೌಡ ಅವರು.ಗಾಂಧಿನಗರದ ಮಾಹಿತಿಗಳ ಪ್ರಕಾರ ಕಾಂತಾರ ಸಿನಿಮಾ ಆದ ಬಳಿಕ ಲೀಲಾ ನಟಿಸುತ್ತಿರುವ ಮತ್ತೊಂದು ಕನ್ನಡ ಸಿನಿಮಾ ಕಾಳಿ ಆಗಿದ್ದು, ಈ ಸಿನಿಮಾದಲ್ಲಿ ಯಂಗ್ ರೆಬಲ್ ಸ್ಟಾರ್ ಅವರಿಗೆ ನಾಯಕಿ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ ಎನ್ನುವ ಮಾಹಿತಿಗಳು ಹರಿದಾಡುತ್ತಿವೆ.

ಪೈಲ್ವಾನ್ ಇನ್ನು ಮುಂತಾದ ಸಿನಿಮಾಗಳನ್ನು ನಿರ್ದೇಶಿಸಿರುವ ಕೃಷ್ಣ ಅವರು ಈ ಸಿನಿಮಾದ ನಿರ್ದೇಶಕರಾಗಿದ್ದು ಸಿನಿಮಾಗೆ ಅಭಿಷೇಕ್ ಅಂಬರೀಶ್ ಅವರು ನಾಯಕ ಎನ್ನುವುದನ್ನು ಈಗಾಗಲೇ ಮಾಧ್ಯಮದ ಮುಂದೆ ಹೇಳಿಕೊಂಡಿದ್ದಾರೆ. ಆದರೆ ಎಲ್ಲೂ ಕೂಡ ಈ ಸಿನಿಮಾ ಗೆ ಸಪ್ತಮಿ ಗೌಡ ಅವರು ನಾಯಕಿ ಎನ್ನುವ ವಿಷಯವನ್ನು ಬಿಟ್ಟು ಕೊಟ್ಟಿಲ್ಲ.

ಸಪ್ತಮಿ ಗೌಡ ಅವರು ಕೂಡ ಅಭಿಷೇಕ್ ಅಂಬರೀಶ್ ಅವರಿಗೆ ನಾಯಕಿ ಆಗುತ್ತಿರುವ ವಿಷಯವನ್ನು ಎಲ್ಲೂ ಹೇಳದಿದ್ದರೂ ಕೂಡ ಈಗಾಗಲೇ ತಂಡ ಅವರನ್ನು ಭೇಟಿ ಆಗಿದೆ ಕಥೆಯನ್ನು ಹೇಳಲಾಗಿದೆ ಇದರಲ್ಲಿ ನಾಯಕಿ ಪಾತ್ರಕ್ಕೂ ಬಹಳ ಮಹತ್ವ ಇರುವ ಕಾರಣ ಅವರು ಸಹ ಇದಕ್ಕೆ ಸಮ್ಮತಿಸಿದ್ದಾರೆ ಎನ್ನುವ ಮಾಹಿತಿಗಳು ಕೇಳಿ ಬರುತ್ತಿವೆ.

ಕಾಳಿ ಎನ್ನುವುದು ಕಾವೇರಿ ಹೋರಾಟದ ಸಮಯದಲ್ಲಿ ನಡೆದ ಒಂದು ನೈಜ ಕಥೆ ಆಗಿದ್ದು ಆ ಕಥೆ ಎಳೆಯನ್ನು ಇಟ್ಟುಕೊಂಡು ಸಿನಿಮಾ ತಯಾರಿಸಲಾಗಿದೆಯಂತೆ. ಯಂಗ್ ರೆಬಲ್ ಸ್ಟಾರ್ ಅವರು ಬ್ಯಾಡ್ ಮ್ಯಾನರ್ಸ್ ಸಿನಿಮಾ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದು ಈ ಸಿನಿಮಾ ಮುಗಿದ ಬಳಿಕ ಕಾಳಿ ಸಿನಿಮಾದ ಪ್ರಾಜೆಕ್ಟ್ ಕೈಗೆತ್ತಿಕೊಳ್ಳಲಿದ್ದಾರಂತೆ.

ಸದ್ಯಕ್ಕೆ ಸಿನಿ ರಚಿಕರು ಮಾತ್ರ ಮತ್ತೆ ಸಪ್ತಮಿ ಗೌಡ ಅವರನ್ನು ಹೊಸ ಅವತಾರದಲ್ಲಿ ತೆರೆ ಮೇಲೆ ಕಾಣಲು ಕಾಯುತ್ತಿದ್ದಾರೆ ಮತ್ತು ಕಾಳಿ ಸಿನಿಮಾದ ಬಗ್ಗೆ ಕೂಡ ಈಗಾಗಲೇ ಕನ್ನಡದಲ್ಲಿ ಬಹಳಷ್ಟು ನಿರೀಕ್ಷೆ ಉಂಟಾಗಿದ್ದು ಈ ಸಿನಿಮಾ ಕೂಡ ಸದ್ದು ಮಾಡುವ ಎಲ್ಲಾ ಲಕ್ಷಣಗಳು ಈಗಾಗಲೇ ಕಾಣುತ್ತಿವೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು.? ತಪ್ಪದೆ ಕಾಮೆಂಟ್ ಮಾಡಿ.

Leave a Comment

WhatsApp Group Join Now
Telegram Group Join Now