ನಿಮ್ಮೆಲ್ಲರಿಗೂ ತಿಳಿದಿರುವಂತೆ ಡಾ. ವಿಷ್ಣುವರ್ಧನ್ ಅವರ ಅಳಿಯ ಅನಿರುಧ್ ಅವರು ಜೀ ಕನ್ನಡ ವಾಹಿನಿಯಲ್ಲಿ ಮೂಡಿ ಬರುತ್ತಿದ್ದಂತಹ ಜೊತೆ ಜೊತೆಯಲಿ ಎಂಬ ಧಾರಾವಾಹಿಯಲ್ಲಿ ನಾಯಕ ನಟನಾಗಿ ಕಾಣಿಸಿಕೊಂಡಿದ್ದರು. ಈ ಧಾರಾವಾಹಿಯಲ್ಲಿ ಆರ್ಯವರ್ಧನ್ ಎಂಬ ಹೆಸರಿನಿಂದ ಗುರುತಿಸಲ್ಪಟ್ಟಿದ್ದರು ಈಗಾಗಲೇ ಜೊತೆ ಜೊತೆಯಲಿ ಧಾರವಾಹಿ ಪ್ರಾರಂಭವಾಗಿ ನಾಲ್ಕು ವರ್ಷಗಳ ಕಳೆದು ಹೋಗಿದೆ. ನಾಲ್ಕು ವರ್ಷದಿಂದಲೂ ಕೂಡ ಉತ್ತಮವಾದಂತಹ ಪ್ರದರ್ಶನವನ್ನೇ ಕಂಡುಬಂದಿತು ಅಷ್ಟೇ ಅಲ್ಲದೆ ಸೀರಿಯಲ್ ಅಂದರೆ ಹೀಗಿರಬೇಕು ಎಂದು ತೋರಿಸಿಕೊಟ್ಟಿತ್ತು. ಮೇಕಿಂಗ್ ಆಗಿರಬಹುದು ವಿಸುವಲ್ ಎಫೆಕ್ಟ್ ಆಗಿರಬಹುದು ಅದ್ದೂರಿ ತನ ಆಗಿರಬಹುದು. ಎಲ್ಲವೂ ಕೂಡ ಜೊತೆ ಜೊತೆಯಲಿ ಧಾರಾವಾಹಿ ಬಂದ ನಂತರವಷ್ಟೇ ನಮ್ಮ ಕನ್ನಡ ಕಿರುತೆರೆಗೆ ಬಂದಿದ್ದು ಅಂತ ಹೇಳಿದರು ಕೂಡ ತಪ್ಪಾಗಲಾರದು.
ತೆಲುಗು ತಮಿಳು ಮಲಯಾಳಂ ಹಿಂದಿ ಭಾಷೆಗಳಿಗೆ ಹೋಲಿಕೆ ಮಾಡಿದರೆ ಕನ್ನಡ ಭಾಷೆಯಲ್ಲಿ ಮೇಕಿಂಗ್ ಕಡಿಮೆ ಮಟ್ಟದಲ್ಲಿ ಇತ್ತು ಅದ್ದೂರಿ ತನದಲ್ಲೂ ಅಷ್ಟೇ ಕಳಪೆಯನ್ನು ತೋರಿಸುತ್ತಿತ್ತು. ಆದರೆ ಜೊತೆ ಜೊತೆಯಲಿ ಧಾರಾವಾಹಿ ಮಾತ್ರ ಇವೆಲ್ಲವನ್ನು ಸುಳ್ಳು ಮಾಡಿ ಬೇರೆ ಭಾಷೆಗಳಿಗಿಂತಲೂ ಕೂಡ ಅದ್ದೂರಿಯಾಗಿ ಮೇಕಿಂಗ್ ಮಾಡಿತು. ಈ ಧಾರಾವಾಹಿ ಬಂದ ನಂತರ ಇತರೆ ಧಾರವಾಹಿಗಳು ಕೂಡ ಇದನ್ನೇ ಅನುಸರಿಸಿಕೊಂಡು ಹೋಗುತ್ತಿತ್ತು. ಇನ್ನು ಟಿ.ಆರ್.ಪಿ ಲೋಕಕ್ಕೆ ಬಂದರು ಯಾವಾಗಲೂ ಕೂಡ ಜೊತೆ ಜೊತೆಯಲಿ ಧಾರಾವಾಹಿ ಪ್ರಥಮ ಸ್ಥಾನವನ್ನು ಪಡೆದುಕೊಂಡಿತ್ತು. ಒಟ್ಟಾರೆಯಾಗಿ ಹೇಳುವುದಾದರೆ ಜೊತೆ ಜೊತೆಯಲಿ ಧಾರಾವಾಹಿಯಿಂದ ಅನಿರುಧ್ ಅವರಿಗೆ ಒಂದು ಗೌರವ ಸ್ಥಾನಮಾನ ಎಲ್ಲವೂ ಕೂಡ ದೊರೆಯುತ್ತದೆ.
ಇದಕ್ಕಿಂತ ಮೊದಲು ಅನಿರುದ್ಧ ಅವರು ಬೆಳ್ಳಿತೆರೆಯಲ್ಲಿ ಹಲವಾರು ಸಿನಿಮಾದಲ್ಲಿ ನಾಯಕ ನಟನಾಗಿ ಅಭಿನಯಿಸಿದ್ದಾರೆ. ಆದರೆ ಯಾವ ಸಿನಿಮಾ ಕೂಡ ಇವರ ಕೈಹಿಡಿಯಲಿಲ್ಲ ಸಾಲು ಸಾಲು ಸಿನಿಮಾಗಳು ಸೋತ ನಂತರ ಅನಿರುಧ್ ಅವರು ಚಿತ್ರರಂಗವೇ ಬೇಡ ಅಂತ ಒಂದಷ್ಟು ದಿನ ಮನೆಯಲ್ಲೇ ಕುಳಿತುಬಿಟ್ಟಿದ್ದರು. ಅಷ್ಟೇ ಅಲ್ಲದೆ ತಮ್ಮ ವೈಯಕ್ತಿಕ ವ್ಯವಹಾರದ ಗಮನವನ್ನು ನೀಡುತ್ತಾರೆ ಆ ಸಮಯದಲ್ಲಿ ಇವರಿಗೆ ಬದುಕನ್ನು ಕಲ್ಪಿಸಿಕೊಟ್ಟದ್ದು ಕಿರುತರೆ. ಹೌದು ಜೊತೆ ಜೊತೆಯಲಿ ಧಾರಾವಾಹಿ ತಂಡದ ಮುಖಾಂತರ ಇವರ ಲೈಫ್ ಗೆ ಒಂದು ಟರ್ನಿಂಗ್ ಪಾಯಿಂಟ್ ಎಂಬುದು ದೊರೆಯುತ್ತದೆ. ಅನಿರುಧ್ ಅವರಿಗೆ ಅವಕಾಶಗಳು ಇಲ್ಲದೆ ಇದ್ದಾಗ ಅವಕಾಶ ಕಲ್ಪಿಸಿಕೊಟ್ಟಿದ್ದು ಜೊತೆ ಜೊತೆಯಲಿ ತಂಡ ಈ ಒಂದು ಧಾರವಾಹಿ ಮೂಲಕ ಮತ್ತೆ ಕಿರುತೆರೆಗೆ ಕಮ್ ಬ್ಯಾಕ್ ಮಾಡುತ್ತಾರೆ. ಉತ್ತಮ ಹೆಸರು ಯಶಸ್ಸು ಇವರ ಅಭಿನಯಕ್ಕೆ ತಕ್ಕಂತಹ ಸಂಭವನೆ ಎಲ್ಲವೂ ಕೂಡ ದೊರೆಯುತ್ತದೆ ಒಟ್ಟಾರೆಯಾಗಿ ಹೇಳುವುದಾದರೆ ಅನಿರುಧ್ ಅವರ ಕಿರುತೆರೆ ಜರ್ನಿ ಬಹಳ ಚೆನ್ನಾಗಿರುತ್ತದೆ.
ಆದರೆ ಇದೀಗ ಅನಿರುದ್ಧವರನ್ನು ಬ್ಯಾನ್ ಮಾಡಲಾಗಿದೆ ಎಂಬ ಸಂಗತಿ ಎಂದು ಹೊರ ಬಿದ್ದಿದೆ ಹೌದು ಇದಕ್ಕೆ ಕಾರಣವಾದರೂ ಏನು ಎಂಬುದನ್ನು ನೋಡುವುದಾದರೆ. ಅನಿರುಧ್ ಅವರು ಶೂಟಿಂಗ್ ಸ್ಪಾಟ್ ಗೆ ತಡವಾಗಿ ಬರುತ್ತಿದ್ದರು ಅಷ್ಟೇ ಅಲ್ಲದೆ ಆಗಾಗ ಟೆಕ್ನಿಕಲ್ ಟೀಂ ನೋಟ್ಟಿಗೆ ವಾದ ವಿವಾದ ಮಾಡುತ್ತಿದ್ದರು. 2 ರಿಂದ 3 ಬಾರಿ ಶೂಟಿಂಗ್ ಅನ್ನು ಅರ್ಧಕ್ಕೆ ನಿಲ್ಲಿಸಿ ಕೋಪ ಮಾಡಿಕೊಂಡು ಮನೆಗೆ ಹೊರಟು ಹೋಗಿದ್ದರು. ಆ ಸಮಯದಲ್ಲಿ ನಿರ್ಮಾಪಕ ನಿರ್ದೇಶಕರೆಲ್ಲರೂ ಕೂಡ ಅನಿರುಧ್ ಅವರನ್ನು ಸಮಾಧಾನ ಪಡಿಸಿ ಮತ್ತೆ ಧಾರಾವಾಹಿ ತಂಡಕ್ಕೆ ಕರೆತಂದಿದ್ದರು. ಆದರೆ ಈ ಬಾರಿ ಮಾತ್ರ ಅನಿರುದ್ಧ ಅವರು ಅತೀವವಾಗಿ ವರ್ತನೆ ಮಾಡಿದ್ದಾರೆ ಅಷ್ಟೇ ಅಲ್ಲದೆ ನಿರ್ದೇಶಕರನ್ನು ನೀನೊಬ್ಬ ಮೂರ್ಖ ಎಂದು ನಿಂದಿಸಿ ಹೋಗಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿದೆ.
ಇದರಿಂದ ಕೋಪಗೊಂಡಂತಹ ನಿರ್ದೇಶಕ ಕಿರುತೆರೆ ವಾಣಿಜ್ಯ ಮಂಡಳಿಗೆ ದೂರ ದಾಖಲಿಸಿದ್ದಾರೆ ಈ ದೂರಿನ ಪ್ರಕಾರ ಅನಿರುಧ್ ಅವರನ್ನು ಎರಡು ವರ್ಷಗಳ ಕಾಲ ಕಿರುತೆರೆಯಿಂದ ಬ್ಯಾನ್ ಮಾಡಲಾಗಿದೆ. ಇನ್ನು ಎರಡು ವರ್ಷಗಳ ಕಾಲ ಅನಿರುಧ್ ಅವರು ಕಿರುತೆರೆಯಲ್ಲಿ ಪ್ರಾರಂಭವಾಗುವಂತಹ ಯಾವುದೇ ಧಾರಾವಾಹಿ ಆಗಿರಬಹುದು, ರಿಯಾಲಿಟಿ ಶೋ ಆಗಿರಬಹುದು ಅಥವಾ ಇನ್ನಿತರ ಯಾವುದೇ ಸಮಾರಂಭದಲ್ಲಿಯೂ ಕೂಡ ಪಾಲ್ಗೊಳ್ಳುವಂತೆ ಇಲ್ಲ ಎಂದು ಆದೇಶವನ್ನು ಹೊರಡಿಸಿದ್ದಾರೆ. ಈ ವಿಚಾರ ಹೊರ ಬರುತ್ತಿದ್ದ ಹಾಗೆ ಅನಿರುದ್ಧ ಅಭಿಮಾನಿಗಳಿಗೆ ಒಂದು ರೀತಿಯಲ್ಲಿ ಅ.ಘಾ.ತ.ವೇ ಎದುರಾಗಿದೆ ಅಷ್ಟೇ ಅಲ್ಲದೆ ಅಚ್ಚರಿಗು ಕೂಡ ಒಳಪಟ್ಟಿದ್ದಾರೆ.
ಏಕೆಂದರೆ ವಿಷ್ಣುವರ್ಧನ್ ಅಳಿಯ ಅಂದರೆ ಅವರಿಗೆ ಇದ್ದಂತಹ ಸಹನೀಯ ಗುಣ, ಸರಳತೆ, ಇವೆಲ್ಲವನ್ನು ಕೂಡ ಅನಿರುಧ್ ಅವರು ಮೈಗೂಡಿಸಿಕೊಂಡಿದ್ದರು ಅಂತ ತಿಳಿದುಕೊಂಡಿದ್ದರು. ಆದರೆ ಇದ್ದಕ್ಕಿದ್ದ ಹಾಗೆ ಅನಿರುಧ್ ಅವರು ಈ ರೀತಿ ವರ್ತನೆಯಿಂದಾಗಿ ಕೆಟ್ಟ ಹೆಸರನ್ನು ಪಡೆದುಕೊಂಡಿದ್ದಾರೆ. ಅಷ್ಟೇ ಅಲ್ಲದೆ ವಿಷ್ಣುವರ್ಧನ್ ಅವರ ಗೌರವಕ್ಕೂ ಕೂಡ ಚ್ಯೂತಿ ಬರುವಂತಹ ಕೆಲಸವನ್ನು ಮಾಡಿಕೊಂಡಿದ್ದಾರೆ ಎಂಬುದು ಕೆಲವು ನೆಟ್ಟಿಗರ ಅಭಿಪ್ರಾಯವಾಗಿದೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ