ಬಹುಮುಖ ಪ್ರತಿಭೆ ಭಾವನ ಅವರು ಕನ್ನಡ ಸಿನಿಮಾ ರಸಿಕರಿಗೆ ಚಿರಪರಿಚಿತರು. ಚಂದ್ರಮುಖಿ ಪ್ರಾಣಸಖಿ ಎನ್ನುವ ಸಿನಿಮಾ ಮೂಲಕ ಹೆಚ್ಚು ಹೆಸರು ಪಡೆದ ಭಾವನ ಅವರು ಕಳೆದ ಎರಡು ದಶಕಗಳಿಂದ ಕನ್ನಡ ಚಲನಚಿತ್ರ ರಂಗದಲ್ಲಿ ಸಕ್ರಿಯ ರಾಗಿದ್ದಾರೆ. ಇತ್ತೀಚಿನ ದಿನಗಳಲ್ಲಿ ಧಾರಾವಾಹಿಗಳಲ್ಲೂ ಕೂಡ ನಟಿಸುತ್ತಿದ್ದಾರೆ ಮತ್ತು ಇವರೊಬ್ಬ ಅದ್ಭುತ ಭರತನಾಟ್ಯ ಕಲಾವಿದೆ ಕೂಡ.
ಜೊತೆಗೆ ರಾಜಕೀಯದಲ್ಲಿ ಕೂಡ ಪ್ರಭಾವ ಬೀರುತ್ತಿರುವ ವ್ಯಕ್ತಿ. ಹೀಗೆ ಇಷ್ಟೆಲ್ಲ ಬಿಜಿ ಇರುವ ಅವರಿಗೆ ಯಾವಾಗಲೂ ಮದುವೆ ಕುರಿತು ವಿಚಾರಗಳು ಎದುರಾಗುತ್ತದೆ. ಈ ಬಗ್ಗೆ ಮೊದಲ ಬಾರಿಗೆ ಮನ ಬಿಚ್ಚಿ ಅವರು ಮಾತನಾಡಿದ್ದು ಆ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ ಪಬ್ಲಿಕ್ ಮ್ಯೂಸಿಕ್ ಎನ್ನುವ ಯೂಟ್ಯೂಬ್ ಚಾನೆಲ್ ಭಾವನ ಅವರ ಸಂದರ್ಶನ ನಡೆಸಿತ್ತು.
ಅದರಲ್ಲಿ ನೀವು ಒಬ್ಬ ಮಹಿಳೆಯಾಗಿ ಆದರ್ಶ ಮಹಿಳೆ ಬಹಳ ಗಟ್ಟಿಯಾಗಿದ್ದೀರಾ ಇಂಡಿಪೆಂಡೆಂಟ್ ವುಮೆನ್ ಇದೆಲ್ಲವೂ ಸರಿ ಆದರೆ ಇನ್ನು ಸಹ ನಿಮ್ಮ ಮದುವೆ ಬಗ್ಗೆ ಪ್ರಶ್ನೆ ಇದೆ ಅದರ ಬಗ್ಗೆ ನೀವೇನು ಹೇಳುತ್ತೀರಾ ಎಂದು ಹೇಳಿದಾಗ ಹೌದು ಖಂಡಿತ ಇದೆಲ್ಲಾ ನಿಜ. ನಾನು ತುಂಬಾ ಸ್ಟ್ರಾಂಗ್ ನಾನು ಒಬ್ಬಳೇ ಕೂಡ ಇರಬಲ್ಲೆ ಆದರೆ ಮದುವೆ ವಿಚಾರವಾಗಿ ನನಗೂ ಆಸೆ ಇದೆ ನಾನು ಎಂದಿಗೂ ಕೂಡ ಮದುವೆ ಸಂಸಾರ ಕುಟುಂಬ ಇವುಗಳಿಂದ ದೂರ ಹೋಗಬೇಕು ಎಂದು ಬಯಸಿ ದೂರ ಇಟ್ಟವಳಲ್ಲ.
ನನಗೂ ಸಹ ಇದನ್ನ ಫಾರ್ಮ್ ಮಾಡಿಕೊಳ್ಳಲು ಒಂದೊಳ್ಳೆ ಸಂಗಾತಿ ಸಿಗಬೇಕು ಆ ರೀತಿ ಗುಣ ಇರುವವರು ಇನ್ನೂ ಸಹ ನನಗೆ ಕಂಡಿಲ್ಲ ಅಷ್ಟೇ, ಮುಂದೆ ನೋಡೋಣ ಎಂದು ತುಂಬಾ ಸರಳವಾಗಿ ಇದಕ್ಕೆ ಉತ್ತರ ಕೊಟ್ಟಿದ್ದಾರೆ. ಭಾವನ ಅವರು ಮದುವೆ ಆಗುವ ವ್ಯಕ್ತಿಗೆ ಭಾವನ ಅವರ ಭಾವನೆಗಳ ಸಂಘರ್ಷಗಳನ್ನು ತಡೆದುಕೊಳ್ಳುವ ಶಕ್ತಿ ಇರಬೇಕಂತೆ. ಇವರನ್ನು ಹ್ಯಾಂಡಲ್ ಮಾಡುವಂತಹ ಗುಣವೊಂದು ಇದ್ದರೆ ಸಾಕು ಎಂದು ಹೇಳಿದ್ದಾರೆ.
ಮುಂದುವರೆದು ಅವರ ಕರಿಯರ್ ಬಗ್ಗೆ ಕೂಡ ಈ ಸಂದರ್ಶನದಲ್ಲಿ ಹಲವು ಪ್ರಶ್ನೆಗಳನ್ನು ಕೇಳಲಾಗಿದೆ. ಭಾವನಾ ಅವರ ಇಷ್ಟು ವರ್ಷದ ಜರ್ನಿಯನ್ನು ಹಿಂದೆ ತಿರುಗಿ ನೋಡಿದರೆ ಏನು ಅನಿಸುತ್ತದೆ ಎಂದು ಕೇಳಲಾದ ಪ್ರಶ್ನೆಗೆ ಸಾಕಷ್ಟು ಖುಷಿ ಇದೆ. ಅಂದಿನಿಂದ ಅನೇಕರ ಜೊತೆ ಕೆಲಸ ಮಾಡಿದ ಅನುಭವ ಇದೆ ಆದರೆ ಒಂದೊಂದು ಸಮಯ ಅವಕಾಶಕ್ಕಾಗಿ ವರ್ಷಗಟ್ಟಲೆ ಕಾದಿದ್ದೇನೆ.
ಅದು ಸಹ ನೆನಪಿಗೆ ಬರುತ್ತದೆ ಎಂದು ಅವರ ಆ ದಿನಗಳನ್ನು ನೆನಸಿಕೊಂಡಿದ್ದಾರೆ. ಮತ್ತು ರಾಜಕೀಯವಾಗಿ ಕೂಡ ಇತ್ತೀಚೆಗೆ ಗುರುತಿಸಿಕೊಳ್ಳುತ್ತಿರುವುದರಿಂದ ಅವರ ಮೊದಲ ಆದ್ಯತೆ ಯಾವುದು ಎಂದು ಸಹ ಪ್ರಶ್ನೆ ಕೇಳಲಾಗಿದೆ. ಅದಕ್ಕೆ ಭಾವನ ಅವರು ನಾನು ಏನೇ ಮಾಡಿದರೂ ಕಲಾವಿದೆಯಾಗಿ ನನ್ನನ್ನು ನಾನು ತೊಡಗಿಸಿಕೊಂಡಾಗಲೇ ನಾನು ಪರಿಪೂರ್ಣವಾಗುವುದು.
ನನಗೆ ಈಗಲೂ ಸಹ ನೃತ್ಯ ಮಾಡಲು ಸ್ಟೇಜ್ ಪರ್ಫಾರ್ಮೆನ್ಸ್ ಗೆ ಅವಕಾಶ ಸಿಕ್ಕರೆ ತಪ್ಪಿಸಿಕೊಳ್ಳುವುದಿಲ್ಲ. ಜೊತೆಗೆ ನಾನು ಏನು ಮಾಡಿದರು ಕೂಡ ಬಣ್ಣ ಹಚ್ಚುವುದನ್ನು ಮಾತ್ರ ನಿಲ್ಲಿಸಲಾರೆ ಎಂದು ನೇರವಾಗಿ ಹೇಳಿದ್ದಾರೆ. ಭಾವನಾ ಅವರು ಈ ಸಂದರ್ಶನದಲ್ಲಿ ಹಲವು ವಿಷಯಗಳ ಕುರಿತು ಮಾತನಾಡಿದ್ದು ಅವರ ವೈಯಕ್ತಿಕ ಜೀವನದ ಬಗ್ಗೆ ಕೂಡ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಇವುಗಳನ್ನೆಲ್ಲ ಕೇಳಲು ವಿಡಿಯೋವನ್ನು ಪೂರ್ತಿಯಾಗಿ ನೋಡಿ.