ಸಿನಿಮಾ ಬಿಟ್ಟು ಸೀರಿಯಲ್ ಗೆ ಬಂದ ಕಾರಣವನ್ನು ಬೇಸರಿಂದ ಹೇಳಿಕೊಂಡ ಗುರುದತ್ ಹಳ್ಳಿ ರಂಬೆ ಬೆಳ್ಳಿ ಬೊಂಬೆ ಸಿನಿಮಾದ ಹ್ಯಾಂಡ್ಸಮ್ ಹೀರೋ ಬೆಳ್ಳಿ ಕಾಲುಂಗುರ ಸಿನಿಮಾದ ವಿಲನ್ ಜೀವನ ಚೈತ್ರ ಸಿನಿಮಾದಲ್ಲಿ ಡಾಕ್ಟರ್ ರಾಜಕುಮಾರ್ ಅವರಿಗೆ ಮಗನಾಗಿ ಅಭಿನಯಿಸುವ ಅವಕಾಶ ಪಡೆದುಕೊಂಡು, ಸಂಯುಕ್ತ ಚಿತ್ರದಲ್ಲಿ ಶಿವಣ್ಣನಿಗೆ ಸ್ನೇಹಿತರಾಗಿದ್ದ ಗುರುದತ್ (Gueudath) ಅವರು ನಿಜ ಜೀವನದಲ್ಲಿ ಸಹ ಶಿವಣ್ಣನಿಗೆ ಆಪ್ತ ಸ್ನೇಹಿತ.
ಗುರುದತ್ ಅವರು ಆ ಸಮಕಾಲೀನ ಹೀರೋಗಳಷ್ಟೇ ಚಾರ್ಮ್ ಹೊಂದಿದ್ದರೂ, ಟ್ಯಾಲೆಂಟ್ ಇದ್ದರೂ ಸಹ ಹೀರೊ ಆಗಿ ಅಭಿನಯಿಸುವ ಅವಕಾಶಗಳಿಂದ ವಂಚಿತರಾದರು ಎಂದು ಹೇಳಬಹುದು. ಕೇವಲ ಕೆಲವ ಸಿನಿಮಾಗಳಷ್ಟೇ ಅಭಿನಯಿಸಿ ಮಿಂಚಿ ಕಣ್ಮರೆ ಆದಂತಹ ಈ ನಟ ಇತ್ತೀಚೆಗೆ ಪೋಷಕ ಪಾತ್ರಗಳಲ್ಲಿ ಬೆರಳಣಿಕೆಯಷ್ಟು ಸಿನಿಮಾಗಳಲ್ಲಿ ಅಷ್ಟೇ ಕಾಣಿಸಿಕೊಂಡಿದ್ದಾರೆ. ಕಿರುತೆರೆ ಕಡೆ ಮುಖ ಮಾಡಿರುವ ಇವರು ಈಗ ಕಲರ್ಸ್ ಕನ್ನಡ (Colors Kannada) ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ರಾಮಾಚಾರಿ (Ramachari) ಎನ್ನುವ ಸೀರಿಯಲ್ ಅಲ್ಲಿ ಮುಖ್ಯವಾದ ಪಾತ್ರವೊಂದನ್ನು ನಿಭಾಯಿಸುತ್ತಿದ್ದಾರೆ.
ಗುರುದತ್ ಅವರು ಕನ್ನಡ ಚಿತ್ರರಂಗದ ಹೆಮ್ಮೆಯ ಹಾಡು ಮತ್ತು ಸಂಭಾಷಣೆ ಬರಹಗಾರ ಚಿ.ಉದಯಶಂಕರ್ (Chi. Udayashankar)ಅವರ ಪುತ್ರ. ಚಿ.ಉದಯಶಂಕರ್ ಅವರು ಕಿರುತೆರೆಯ ಗೋಧೂಳಿ ಅಂತಹ ಸೂಪರ್ ಹಿಟ್ ಸೀರಿಯಲ್ ಗಳ ನಿರ್ಮಾಣಕಾರರು ಹೌದು. ತಮ್ಮದೇ ಪ್ರೊಡಕ್ಷನ್ ಹೌಸ್ ಅಲ್ಲಿ ಅನೇಕ ಧಾರಾವಾಹಿಗಳನ್ನು ನಿರ್ಮಿಸಿರುವ ಗುರುದತ್ ಅವರು ಈಗ ಅವಕಾಶಗಳು ಇಲ್ಲದೆ ಧಾರಾವಾಹಿಯಲ್ಲಿ ಅಭಿನಯಿಸುವ ಪರಿಸ್ಥಿತಿಗೆ ಬಂದಿದ್ದಾರೆ.
ಇದರ ಬಗ್ಗೆ ಸ್ವತಃ ಅವರೇ ಹೇಳಿಕೊಂಡಿದ್ದಾರೆ. ಇತ್ತೀಚಿಗೆ ಸಂದರ್ಶನ ಒಂದರಲ್ಲಿ ಮಾತನಾಡಿದ ಗುರುದತ್ ಅವರು ನಿರೂಪಕರು ಕೇಳಿದ ಈ ಪ್ರಶ್ನೆಗೆ ಉತ್ತರಿಸಿದ್ದಾರೆ. ಯಾಕೆ ನೀವು ಸತತವಾಗಿ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಿಲ್ಲ ಎನ್ನುವ ಪ್ರಶ್ನೆಗೆ ನೇರವಾಗಿ ಸತ್ಯವನ್ನೇ ನುಡಿದಿದ್ದಾರೆ. ಗುರುದತ್ ಅವರು ನಿಜವಾಗಿಯೂ ನನಗೆ ಅವಕಾಶಗಳಿಲ್ಲ ಆದರೆ ಈ ಬಗ್ಗೆ ನಾನು ಬೇಸರ ಪಟ್ಟುಕೊಳ್ಳುವುದಿಲ್ಲ ಖುಷಿಯಿಂದ ಇದ್ದೇನೆ,
ಯಾಕೆಂದರೆ ನಾನು ಇಲ್ಲ ಅಂದರು ನನ್ನ ಶ್ರಮಕ್ಕೆ ಹತ್ತು ಆಪ್ಷನ್ ಗಳು ಈಗ ನಮ್ಮ ಚಿತ್ರರಂಗದಲ್ಲಿ ಇದೆ.
ಈಗ ಸಿನಿಮಾ ರಂಗಕ್ಕೆ ಬರುವವರು ಎಲ್ಲಾ ರೀತಿಯಲ್ಲೂ ಕೂಡ ಪ್ರಿಪೇರ್ ಆಗಿ ಟ್ರೈನ್ ಆಗಿ ಬರುತ್ತಿದ್ದಾರೆ. ಕ್ಯಾರೆಕ್ಟರ್ ಆರ್ಟಿಸ್ಟ್ ಸಹ ಪರ್ಫೆಕ್ಟ್ ಆಗಿ ತಯಾರಾಗಿರುತ್ತಾರೆ. ಹಿಂದೆಲ್ಲಾ ಅಕ್ಕಪಕ್ಕದ ಇಂಡಸ್ಟ್ರಿ ನೋಡಿ ಇದಕ್ಕೆ ಉದಾಹರಣೆ ಕೊಡುತ್ತಿದ್ದ ನಾವು ಈಗ ನಮ್ಮ ಇಂಡಸ್ಟ್ರಿ ಸಮೃದ್ಧವಾಗಿದೆ ಎಂದು ಖುಷಿ ಪಡಬೇಕು. ನನಗೆ ಅವಕಾಶ ಇಲ್ಲ ಎಂದರೆ ಖಂಡಿತ ನನ್ನಲ್ಲೇ ಏನು ಕೊರತೆ ಇರಬೇಕು ಅದನ್ನು ಒಪ್ಪಿಕೊಂಡು ಸಮಾಧಾನ ಪಟ್ಟುಕೊಳ್ಳಬೇಕು ಅಷ್ಟೇ ಎಂದು ಹೇಳಿದ್ದಾರೆ.
ನನಗೆ ಇರುವುದರಲ್ಲಿ ತುಂಬಾ ಖುಷಿ ಹಾಗೂ ಸಮಾಧಾನ ಇದೆ ಎಲ್ಲೇ ಹೋದರು ನನ್ನ ಹೆಸರು ಗೊತ್ತಿಲ್ಲದೇ ಇದ್ದರೂ ಚಿ.ಉದಯಶಂಕರ್ ಮಗ ಎಂದು ಗುರುತಿಸುತ್ತಾರೆ. ನನ್ನ ತಂದೆ ನನಗೆ ಸಾಕಷ್ಟು ಕೊಟ್ಟು ಹೋಗಿದ್ದಾರೆ, ನನಗೆ ಅವರ ಮಗನಾಗಿ ಇರುವುದಕ್ಕೆ ಅರ್ಹತೆ ಇದೆಯೋ ಇಲ್ಲವೋ ಗೊತ್ತಿಲ್ಲ ಆದರೆ ಅವರನ್ನು ತಂದೆಯಾಗಿ ಪಡೆದಿರುವುದಕ್ಕೆ ನಾನು ಧನ್ಯ. ಈಗಲಾದರೂ ಯಾವುದೋ ರೀತಿಯಲ್ಲಿ ತೆರೆ ಮೇಲೆ ನಾನು ಕಾಣಿಸಿಕೊಳ್ಳುತ್ತಿದ್ದೇನೆ ಅಷ್ಟೇ ಸಮಾಧಾನ.
ಅದರಲ್ಲೂ ಸೀರಿಯಲ್ ಗೆ ಬಂದ ಮೇಲೆ ತುಂಬಾ ಕಲಿತಿದ್ದೇನೆ, ಇತ್ತೀಚಿಗೆ ವೇದ ಸಿನಿಮಾದಲ್ಲಿ ಒಂದೆರಡು ಸೀನ್ ಗಳಲ್ಲಿ ಕಾಣಿಸಿಕೊಂಡಿದ್ದೆ. ಶಿವಣ್ಣನ ನನ್ನನ್ನು ಗುರುತಿಸಿ, ಎಷ್ಟು ಚೆನ್ನಾಗಿ ಆಕ್ಟಿಂಗ್ ಮಾಡೋದು ಕಲಿತುಬಿಟ್ಟಿದ್ದೀಯ ಎಂದು ಪ್ರಶಂಸೆ ಮಾಡಿದರು, ಇದೆಲ್ಲಾ ಒಪ್ಪಿಕೊಳ್ಳಬೇಕು ಎಂದು ಮುಕ್ತವಾಗಿ ಮಾತನಾಡಿದ್ದಾರೆ. ಅವರ ಈ ಮಾತುಗಳನ್ನು ಕೇಳಲು ವಿಡಿಯೋವನ್ನು ಪೂರ್ತಿಯಾಗಿ ನೋಡಿ.