ನೆನ್ನೆಗೆ ನಮ್ಮ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕು 75 ವರ್ಷಗಳಾಗಿದೆ ಈ ಒಂದು ಅಮೃತ ಮಹೋತ್ಸವವನ್ನು ಬಹಳ ಅದ್ದೂರಿಯಾಗಿ ಆಚರಣೆ ಮಾಡಬೇಕು ಎಂಬ ಕಾರಣದಿಂದಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಪ್ರತಿ ಮನೆಯಲ್ಲೂ ಕೂಡ ತ್ರಿವರ್ಣ ಧ್ವಜವನ್ನು ಆರಿಸಬೇಕು ಎಂದು ಮನವಿಯನ್ನು ಮಾಡಿಕೊಂಡಿದ್ದರು. ಅಷ್ಟೇ ಅಲ್ಲದೆ ತಮ್ಮ ಸಾಮಾಜಿಕ ಜಾಲತಾಣ ಖಾತೆಗೆ ರಾಷ್ಟ್ರ ಧ್ವಜದ ಡಿಪಿಯನ್ನು ಹಾಕಿಕೊಳ್ಳಿ ಎಂದು ಮನವಿ ಮಾಡಿಕೊಂಡಿದ್ದರು. ಪ್ರತಿ ಮನೆಯಲ್ಲೂ ಕೂಡ ರಾಷ್ಟ್ರ ಧ್ವಜವನ್ನು ಹಾರಿಸಿ ಎಲ್ಲರೂ ಕೂಡ ಈ ಒಂದು 75ನೇ ವರ್ಷದ ಅಮೃತ ಮಹೋತ್ಸವವನ್ನು ಬಹಳ ಅದ್ದೂರಿಯಾಗಿ ಆಚರಿಸಿದರು ನಿಜಕ್ಕೂ ಇದು ಒಂದು ಸಂತಸದ ವಿಚಾರವೇ. ಈ ಒಂದು ಅಮೃತ ಮಹೋತ್ಸವಕ್ಕಾಗಿ ನವರಸ ನಾಯಕ ಜಗ್ಗೇಶ್ ಅವರು ಸ್ವತಃ ಒಂದು ಹಾಡನ್ನು ಸಿದ್ಧಪಡಿಸಿದ್ದಾರೆ.
ಈ ಹಾಡನ್ನು ಕೇವಲ 13 ದಿನದಲ್ಲಿ ಸಂಯೋಜನೆ ಮಾಡಲಾಗಿದೆ ಹೌದು ಹಾಡನ್ನು ಬರೆದು ಅದಕ್ಕೆ ಚಿತ್ರೀಕರಣವೂ ಕೂಡ ನಡೆದಿದೆ ಈ ಒಂದು ಹಾಡಿನಲ್ಲಿ ಸ್ಯಾಂಡಲ್ವುಡ್ ನ ಎಲ್ಲಾ ತಾರಾ ಬಳಗದವರೂ ಕೂಡ ಪಾಲ್ಗೊಂಡಿದ್ದಾರೆ. ಅಷ್ಟೇ ಅಲ್ಲದೆ ಸಮಾಜ ಸೇವಕರಾದಂತಹ ಸಾಲು ಮರದ ತಿಮ್ಮಕ್ಕ ಹಾಗೂ ಕ್ರಿಕೆಟ್ ಈಗ ಆದಂತಹ ವೆಂಕಟೇಶ್ ಹೀಗೆ ಹಲವಾರು ಗಣ್ಯದಿ ಗಣ್ಯಾದಿಗಳು ಈ ಒಂದು ಹಾಡಿನಲ್ಲಿ ಪಾಲ್ಗೊಂಡಿದ್ದಾರೆ ಮತ್ತು ಅಭಿನಯಿಸಿದ್ದಾರೆ. ಈ ಹಾಡು ಸ್ವಾತಂತ್ರ್ಯ ದಿನಾಚರಣೆಯ ಅಂಗದ ದಿನವಾಗಿಯೇ ಬಿಡುಗಡೆ ಮಾಡಲಾಗಿದೆ ಈ ಹಾಡು ಬಿಡುಗಡೆ ಆದ ನಂತರ ಎಲ್ಲರಿಂದಲೂ ಕೂಡ ಮೆಚ್ಚುಗೆ ಮತ್ತು ಪ್ರಶಂಸೆಯನ್ನು ಪಡೆದುಕೊಂಡಿದೆ.
ದೊಡ್ಡ ತಾರಾ ಬಳಗ ಇರುವಂತಹ ಈ ಹಾಡನ್ನು ನೋಡಿದಂತಹ ಸಿನಿ ರಸಿಕರು ಮೆಚ್ಚಿಕೊಂಡಿದ್ದಾರೆ ಈ ಹಾಡಿನಲ್ಲಿ ಎಲ್ಲಾ ನಟರು ಇದ್ದಾರೆ ಆದರೆ ದರ್ಶನ್ ಮತ್ತು ಯಶ್ ಅವರು ಮಾತ್ರ ಪಾಲ್ಗೊಂಡಿಲ್ಲ. ಯಶ್ ಮತ್ತು ದರ್ಶನವರು ಇಲ್ಲದೆ ಇರುವುದನ್ನು ನೋಡಿದಂತಹ ಅಭಿಮಾನಿಗಳು ನಿರಾಸೆಯಾಗಿದ್ದಾರೆ. ಅಷ್ಟೇ ಅಲ್ಲದೆ ದರ್ಶನ್ ಮತ್ತು ನಟರನ್ನು ಬಿಟ್ಟು ನೀವು ಯಾಕೆ ಚಿತೀಕರಣ ಮಾಡಿದ್ದೀರಿ ಎಂದು ಕೆಲವು ಸೀನಿ ರಸಿಕರು ಜಗ್ಗೇಶ್ ಅವರಿಗೆ ಪ್ರಶ್ನೆಯನ್ನು ಕೇಳಿದ್ದಾರೆ. ಜಗ್ಗೇಶ್ ಅವರು ಈಗಾಗಲೇ ರಾಜ್ಯಸಭಾ ಅಧ್ಯಕ್ಷರಾಗಿ ಆಯ್ಕೆಯಾಗಿರುವಂತಹ ವಿಚಾರ ನಿಮ್ಮೆಲ್ಲರಿಗೂ ತಿಳಿದೇ ಇದೆ. ಈ ಕಾರಣಕ್ಕಾಗಿ ಅವರೇ ಸ್ವತಃ ನಿರ್ಮಾಣ ಮಾಡಿದಂತಹ ಹಾಡೊಂದನ್ನು ಸಂಯೋಜನೆ ಮಾಡಿ ಖ್ಯಾತ ಗಾಯಕ ಆದಂತಹ ವಿಜಯಪ್ರಕಾಶ್ ಅವರಿಂದ ಹಾಡಿಸಿದ್ದಾರೆ.
ಈ ಹಾಡಿನಲ್ಲಿ ಶಿವಣ್ಣ, ಕಿಚ್ಚ ಸುದೀಪ್, ರಮೇಶ್ ಅರವಿಂದ್, ಕ್ರೇಜಿಸ್ಟಾರ್ ರವಿಚಂದ್ರನ್, ಗೋಲ್ಡನ್ ಸ್ಟಾರ್ ಗಣೇಶ್, ಶ್ರೀ ಮುರಳಿ, ವಿಜಯ ರಾಘವೇಂದ್ರ, ರಿಷಬ್ ಶೆಟ್ಟಿ ಹೀಗೆ ಸ್ಯಾಂಡಲ್ ವುಡ್ ನಾ ಸಾಕಷ್ಟು ನಟರು ಭಾಗಿಯಾಗಿದ್ದಾರೆ. ಈ ಹಾಡನ್ನು ಈಗಾಗಲೇ ಬಸವರಾಜು ಬೊಮ್ಮಾಯಿಯವರು ನೋಡಿ ಮೆಚ್ಚಿಕೊಂಡಿದ್ದು ತಮ್ಮ ಸೋಶಿಯಲ್ ಮೀಡಿಯಾದಲ್ಲೂ ಕೂಡ ಅಪ್ಲೋಡ್ ಮಾಡಿದ್ದಾರೆ. ಇನ್ನು ಈ ಹಾಡಿನ ಬಗ್ಗೆ ಮಾತನಾಡಿದಂತಹ ಜಗ್ಗೇಶ್ ಅವರು ನಾವೆಲ್ಲರೂ ಭಾರತಾಂಬೆಯ ಮಕ್ಕಳು ಯಾವುದೇ ರೀತಿಯಾದಂತಹ ಭೇದಭಾವ ಇಲ್ಲದೆ ಈ ಒಂದು ಸ್ವಾತಂತ್ರ ದಿನಾಚರಣೆಯನ್ನು ಆಚರಿಸಬೇಕು ಅಂತ ಹೇಳಿದ್ದಾರೆ. ಅಷ್ಟೇ ಅಲ್ಲದೆ ನನ್ನ ಮನಸ್ಸಿನಲ್ಲಿ ಬಹಳ ದಿನದಿಂದ ಒಂದು ಆಸೆ ಇತ್ತು ವಂದೇ ಮಾತರಂ ಗೀತೆಯನ್ನು ಹಾಡಬೇಕು ಅದು ನಮ್ಮ ಕಲಾವಿದರೇ ಇದಕ್ಕೆ ಭಾಗವಹಿಸಬೇಕು ಅಂತ ಆಸೆ ಇದೀಗ ನೆರವೇರಿದೆ ಅಂತ ಹೇಳಿದ್ದಾರೆ.
ಈ ಹಾಡನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೂ ಕೂಡ ತೋರಿಸುವಂತಹ ವ್ಯವಸ್ಥೆ ಮಾಡುತ್ತೇನೆ ಎಂದು ಹೇಳಿದ್ದಾರೆ. ಸದ್ಯಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿರುವಂತಹ ಈ ಹಾಡು ಎಲ್ಲರ ಮೆಚ್ಚುಗೆಯನ್ನು ಪಡೆದುಕೊಂಡಿದೆ. ಆದರೆ ದರ್ಶನ್ ಮತ್ತು ಯಶ್ ಅವರು ಮಾತ್ರ ಇಲ್ಲದಿರುವುದನ್ನು ನೋಡಿದಂತಹ ಅಭಿಮಾನಿಗಳು ದರ್ಶನ್ ಅವರನ್ನು ಮಾಧ್ಯಮದಿಂದ ಬ್ಯಾನ್ ಮಾಡಿದ್ದಾರೆ. ಇದೀಗ ಯಶ್ ಅವರನ್ನು ಕೂಡ ದರ್ಶನ್ ಅವರೊಟ್ಟಿಗೆ ಸೇರಿಸಿ ಚಿತ್ರರಂಗದಿಂದ ದೂರ ಮಾಡುತ್ತಿದ್ದೀರಾ ಎಂದು ಕಿಡಿ ಕಾರಿದ್ದಾರೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ.