ನಟ ಕಿಶೋರ್ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ ತಮ್ಮ ವಿಭಿನ್ನವಾದ ನಟನೆಯಿಂದಲೇ ಎಲ್ಲರನ್ನು ಕೂಡ ತಮ್ಮತ ಗಮನ ಸೆಳೆದಿದ್ದಾರೆ ಹುಲಿ ಎಂಬ ಸಿನಿಮಾದಲ್ಲಿ ಖಡಕ್ ಪೊಲೀಸ್ ಪಾತ್ರವನ್ನು ನಿರ್ವಹಿಸುವುದರ ಮೂಲಕ ಸಿನಿಮಾರಂಗದಲ್ಲಿ ತಮ್ಮದೇ ಆದಂತಹ ಚಾಪನ್ನು ಮೂಡಿಸಿದವರು. ನಾಯಕ ನಟರಾಗಿ ಹೆಚ್ಚಾಗಿ ಗುರುತಿಸಿಕೊಳ್ಳದೆ ಇದ್ದರೂ ಕೂಡ ಖಳನಾಯಕರ ಪಟ್ಟಿಯಲ್ಲಿ ಇವರೇ ಅಗ್ರಸ್ಥಾನವನ್ನು ಪಡೆಯುತ್ತಾರೆ ಅಂತ ಹೇಳಿದರು ಕೂಡ ತಪ್ಪಾಗಲಾರದು. ಕನ್ನಡದಲ್ಲಿ ಸಾಕಷ್ಟು ಖಳನಾಯಕರ ಹಾಗೂ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ. ಇತ್ತೀಚಿಗಷ್ಟೇ ತೆರೆಕಂಡಂತಹ ರಿಷಬ್ ಶೆಟ್ಟಿ ಅಭಿನಯದ ಕಾಂತರಾ ಸಿನಿಮಾದಲ್ಲಿಯೂ ಕೂಡ ಪೊಲೀಸ್ ಅಧಿಕಾರಿಯಾಗಿ ಗುರುತಿಸಿಕೊಂಡಿದ್ದಾರೆ. ಒಟ್ಟಾರೆಯಾಗಿ ಹೇಳುವುದಾದರೆ ಕನ್ನಡ ತೆಲುಗು ತಮಿಳು ಸೇರಿದಂತೆ ಇಲ್ಲಿಯವರೆಗೂ ನೂರಕ್ಕೂ ಅಧಿಕ ಸಿನಿಮಾದಲ್ಲಿ ನಟನೆ ಮಾಡಿದ್ದಾರೆ.
ನಿಜ ಹೇಳಬೇಕೆಂದರೆ ಬಹು ಬೇಡಿಕೆಯ ನಟ ಅಂತಾನೆ ಹೇಳಬಹುದು ಇಷ್ಟೆಲ್ಲ ಸಿನಿಮಾ ಆಫರ್ ಇದ್ದರೂ ಕೂಡ ನಟ ಕಿಶೋರ್ ಅವರು ಕೇವಲ ಚಿತ್ರರಂಗವನ್ನು ಮಾತ್ರ ಅವಲಂಬಿಸದೆ ಕೃಷಿಯಲ್ಲಿ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದಾರೆ. ಹೌದು ಸಿಟಿ ಜೀವನ ಬೇಡ ಅಲ್ಲಿನ ಜಂಜಾಟವು ಬೇಡ ಅಂತ ಬೆಂಗಳೂರಿನ ಸಮೀಪದಲ್ಲಿ ಇರುವಂತಹ ಹಳ್ಳಿಯೊಂದರಲ್ಲಿ ಹೆಂಡತಿ ಮಕ್ಕಳ ಸಮೇತ ವಾಸವಾಗಿದ್ದಾರೆ. ವಿಶೇಷ ಏನೆಂದರೆ ತಮ್ಮ ದಿನದ ಭಾಗಶಹ ಕಾಲವನ್ನು ಕೃಷಿ ಮಾಡುವುದರಲ್ಲಿ ಕಳೆಯುತ್ತಾರೆ. ಹೌದು ಹಾಗೊಂದು ಹೀಗೊಂದು ಸಿನಿಮಾ ಆಫರ್ ಬಂದರೆ ಅಲ್ಲಿ ನಟನೆ ಮಾಡುತ್ತಾರೆ ಅದನ್ನು ಹೊರತು ಪಡಿಸಿದರೆ ಸಂಪೂರ್ಣವಾಗಿ ನಗರ ಜೀವನದಿಂದ ದೂರ ಉಳಿದು ಕೃಷಿಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.
ಇನ್ನು ಕಿಶೋರ್ ಅವರ ಧರ್ಮಪತ್ನಿ ವಿಶಾಲಕ್ಷಿ ಪದ್ಮನಾಭ ಕೂಡ ತಮ್ಮ ಗಂಡನಿಗೆ ಸಾತ್ ಕೊಟ್ಟಿದ್ದಾರೆ ವಿಶಾಲಕ್ಷಿಯವರು ಚಾರ್ಟೆಡ್ ಅಕೌಂಟೆಡ್ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ತಿಂಗಳಿಗೆ ಎರಡರಿಂದ ನಾಲ್ಕು ಲಕ್ಷ ಸಂಬಳವನ್ನು ಪಡೆಯುತ್ತಿದ್ದರು ಆದರೂ ಕೂಡ ಆ ಕೆಲಸವನ್ನು ಬಿಟ್ಟು ತಮ್ಮ ಪತಿಯೊಂದಿಗೆ ಕೃಷಿ ಜೀವನವನ್ನು ನಡೆಸುತ್ತಿದ್ದರೆ. ಇತ್ತೀಚಿನ ದಿನದಲ್ಲಿ ಓದು ಬರಹ ತಿಳಿಯದಿದ್ದವರು ಕೂಡ ಕೃಷಿ ಕೆಲಸ ಮಾಡುವುದಕ್ಕೆ ಹಿಂದೆಟು ಹಾಕಿ ನಗರ ಪ್ರದೇಶದಲ್ಲಿ ಖಾಸಗಿ ಕಂಪನಿಯಲ್ಲಿ ಸಣ್ಣಪುಟ್ಟ ಕೆಲಸ ಸಿಕ್ಕರು ಸಾಕು ಅಲ್ಲಿ ಜೀವನ ಕಟ್ಟಿಕೊಳ್ಳಬೇಕು ಜೀವನ ನಡೆಸಬೇಕು ಐಷಾರಾಮಿ ಬದುಕನ್ನು ನಾವು ನೋಡಬೇಕು ಅಂತ ಅಂದುಕೊಳ್ಳುತ್ತಾರೆ.
ಆದರೆ ನಟ ಕಿಶೋರ್ ಹಾಗೂ ಅವರ ಧರ್ಮಪತ್ನಿ ಮಾತ್ರ ತಮ್ಮ ಐಷಾರಾಮಿ ಹಾಗೂ ವೈಭೋಗದ ಜೀವನವನ್ನು ತ್ಯಜಿಸಿ ಸಾಮಾನ್ಯ ಜನರಂತೆ ಕೃಷಿ ಕೆಲಸದಲ್ಲಿ ನಿರತರಾಗಿದ್ದಾರೆ. ನಿಜಕ್ಕೂ ಇಂದಿನ ಯುವ ಪೀಳಿಗೆಗೆ ಈ ದಂಪತಿಗಳು ಸ್ಪೂರ್ತಿ ಅಂತಾನೇ ಹೇಳಬಹುದು. ಸದ್ಯಕ್ಕೆ ಕಿಶೋರ್ ಹಾಗೂ ಅವರ ಧರ್ಮಪತ್ನಿ ಹಾಗೂ ಮಕ್ಕಳು ಎಲ್ಲರೂ ಕೂಡ ಬೆಂಗಳೂರಿನಿಂದ ಕೇವಲ 30 ಕಿ.ಮೀ. ದೂರವಿರುವ ಕೇವಲ 14 ಕುಟುಂಬಗಳು ವಾಸವಿರುವ ಬನ್ನೇರುಘಟ್ಟಕ್ಕೆ ಹೊಂದಿಕೊಂಡಂತೆ ಇರುವ ಕರಿಯಪ್ಪನ ದೊಡ್ಡಿ ಗ್ರಾಮದಲ್ಲಿ 1.5 ಎಕರೆ ಭೂಮಿಯನ್ನು ಖರೀದಿಸಿ ಅಲ್ಲಿಯೇ ಮನೆ ಕಟ್ಟಿ ತಮ್ಮ ಕುಟುಂಬಕ್ಕಾಗಿ ಆಹಾರ ಬೆಳೆಸಲು ಸಣ್ಣ ತೋಟ ಒಂದನ್ನು ಮಾಡಿದ್ದಾರೆ.
ವಿಶೇಷ ಏನೆಂದರೆ ಈ ಪುಟ್ಟ ಗ್ರಾಮದಲ್ಲಿ ಇರುವಂತಹ ಕುಟುಂಬದವರಿಗೆ ವೈಜ್ಞಾನಿಕ ಕೃಷಿಯ ಬಗ್ಗೆ ತಿಳುವಳಿಕೆ ಇಲ್ಲ ಈ ಒಂದು ವೈಜ್ಞಾನಿಕ ಕೃಷಿಯ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ವಹಿಸಿಕೊಂಡಿರುವ ಕಿಶೋರ್ ರವರು ತಮ್ಮ ಜಮೀನಿನಲ್ಲಿ ವೈಜ್ಞಾನಿಕ ಕೃಷಿಯನ್ನು ಅಳವಡಿಕೆ ಮಾಡಿಕೊಂಡಿದ್ದು ಇದರ ಉಪಯೋಗವನ್ನು ಇನ್ನಿತರ ಕೃಷಿಕರಿಗೂ ಕೂಡ ತಿಳಿಸಿದ್ದಾರೆ. ಇನ್ನು ತಮ್ಮ ಜಮೀನಿಗೆ ತಂದಂತಹ ಯಂತ್ರೋಪಕರಣವನ್ನು ಈ ಹಳ್ಳಿಯಲ್ಲಿ ಇರುವಂತಹ ಬಡ ಸಾಮಾನ್ಯ ಜನರಿಗೂ ಬಳಕೆ ಮಾಡುವಂತಹ ಅವಕಾಶವನ್ನು ಕಲ್ಪಿಸಿ ಕೊಟ್ಟಿದ್ದಾರೆ. ನಿಜಕ್ಕೂ ಈತ ಒಬ್ಬ ಮಾದರಿ ರೈತ ಅಂತಾನೇ ಹೇಳಬಹುದು ಈ ಕಾರಣದಿಂದಲೇ ಕಿಶೋರ್ ಅವರಿಗೆ ಅಪಾರ ಸಂಖ್ಯೆಯ ಅಭಿಮಾನಿ ಬಳಗವಿದೆ. ನಟನೆಗೂ ಸೈ ಕೃಷಿಗೂ ಸೈ ಎಂಬುದನ್ನು ಎತ್ತಿ ತೋರಿಸಿದ್ದಾರೆ ಕಿಶೋರ್ ಹಾಗೂ ಅವರ ಧರ್ಮಪತ್ನಿ ಹಾಗೂ ಅವರ ಕುಟುಂಬದವರ ಇನ್ನಷ್ಟು ಹಿನ್ನೆಲೆಯನ್ನು ತಿಳಿಯಲು ಈ ಕೆಳಗಿನ ವಿಡಿಯೋ ನೋಡಿ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ.