
ಪ್ರಗತಿ ಅವರು ಸದ್ಯಕ್ಕೆ ತೆಲುಗು ಸಿನಿಮಾ ರಂಗದ ಬಹು ಬೇಡಿಕೆಯ ಕ್ಯಾರೆಕ್ಟರ್ ಆರ್ಟಿಸ್ಟ್ ಆಗಿದ್ದಾರೆ, ನಾಯಕಿ ಆಗಿ ತಮ್ಮ ವೃತ್ತಿಯನ್ನು ಆರಂಭಿಸಿದ ಇವರು ಸದ್ಯಕ್ಕೆ ಈಗ ಪೋಷಕ ನಟಿಯಾಗಿ ನೆಲೆ ಕಂಡುಕೊಂಡಿದ್ದಾರೆ. 1994ರಲ್ಲಿ ಹೀರೋಯಿನ್ ಆಗಿ ಎಂಟ್ರಿ ಆಗಿದ್ದ ಇವರು ತಮಿಳು ಮತ್ತು ಮಲಯಾಳಂ ಭಾಷೆಯಲ್ಲೂ ಕೂಡ ಅಭಿನಯಿಸಿದ್ದರು ಇದಾದ ಬಳಿಕ ಮದುವೆ ಆಗಿ ವೈಯಕ್ತಿಕ ಜೀವನದ ಕಡೆ ಗಮನ ಹರಿಸಿದ್ದರು.
ಅನೇಕ ವರ್ಷಗಳ ನಂತರ ಮಹೇಶ್ ಬಾಬು ಅವರ ಬಾಬಿ ಸಿನಿಮಾದಲ್ಲಿ ಕಂಬ್ಯಾಕ್ ಮಾಡಿದರು. ಈಗ ಅವರು ತಮ್ಮ ಕೆರಿಯರ್ ಜೊತೆ ಸೋಶಿಯಲ್ ಮೀಡಿಯಾದಲ್ಲೂ ಬಹಳ ಆಕ್ಟಿವ್ ಆಗಿದ್ದಾರೆ. ಅಲ್ಲಿ ಆಗಾಗ ಅವರ ವರ್ಕೌಟ್ ಆಕ್ಟಿವಿಟೀಸ್ ಬಗ್ಗೆ ಪೋಸ್ಟ್ ಮಾಡುತ್ತಾ ಮತ್ತು ಕೆಲವು ಹಾಡಿಗಳಿಗೆ ರೀಲ್ಸ್ ಮಾಡುತ್ತಾ ಫಾಲೋವರ್ಸ್ ಗೆ ರಂಜಿಸುತ್ತಾರೆ.
ಈ ಮಧ್ಯೆ ಅವರು ಸಂದರ್ಶನ ಒಂದರಲ್ಲಿ ಮಾತನಾಡಿದ್ದು ತಮ್ಮ ವಿವಾಹ ಜೀವನದ ಕುರಿತು ಮತ್ತು ವೈಯಕ್ತಿಕ ಜೀವನದ ಕೆಲವು ಘಟನೆಗಳನ್ನು ನೆನೆದು ಮಾತನಾಡಿದ್ದಾರೆ. ಪ್ರಗತಿ ಅವರಿಗೆ ಬಾಲ್ಯದಲ್ಲಿ ಪೊಲೀಸ್ ಆಗುವ ಆಸೆ ಇತ್ತಂತೆ. ಆದರೆ ಓದಿನಲ್ಲಿ ಬಹಳ ಹಿಂದೆ ಇದ್ದ ಕಾರಣ ಅದು ಎಟುಕದ ಕನಸು ಎನ್ನುವುದನ್ನು ಅರಿತು ನಂತರ ಸಿನಿಮಾ ರಂಗದ ಕಡೆ ಮುಖ ಮಾಡಿದರಂತೆ.
ಅವರೇ ಹೇಳಿಕೊಂಡಂತೆ ಈಗ ಅವರು ಅಭಿನಯದಲ್ಲಿ ಆಸಕ್ತಿಯಿಂದ ನಡೆಸುತ್ತಿದ್ದಾರಂತೆ ಮತ್ತು ತುಂಬಾ ಎಫರ್ಟ್ ಹಾಕುತ್ತಿದ್ದರಂತೆ. ಆದರೆ ಇದನ್ನೇ ತಮ್ಮ ಆರಂಭದ ದಿನಗಳಲ್ಲಿ ಮಾಡುತ್ತಿದ್ದರೆ ಚೆನ್ನಾಗಿರುತ್ತಿತ್ತು, ಇನ್ನು ಹೆಚ್ಚು ಹೆಸರು ಮಾಡುತ್ತಿದ್ದೆ ಎಂದು ಪಶ್ಚತ್ತಾಪ ಪಟ್ಟು ಕೊಂಡಿದ್ದಾರೆ ಮತ್ತು ಮದುವೆ ವಿಷಯದಲ್ಲಿ ಕೂಡ ನಾನು ತಪ್ಪು ಮಾಡಿಬಿಟ್ಟೆ.
ಬಹಳ ಚಿಕ್ಕವಯಸ್ಸಿಗೆ ಅಂದರೆ 20ನೇ ವಯಸ್ಸಿಗೆ ಮದುವೆ ಆದೆ ಆಗ ನನಗೆ ತುಂಬಾ ಇಗೋ ಇತ್ತು ಏನು ಬೇಕಾದರೂ ಮಾಡುತ್ತೇನೆ ಎನ್ನುವ ಆಟಿಟ್ಯೂಡ್ ಇತ್ತು. ಆದರೆ ಆ ನಡವಳಿಕೆಯೇ ನನ್ನ ಇಂದಿನ ಪರಿಸ್ಥಿತಿಗೆ ಕಾರಣ ಅದರಿಂದ ನಾನು ಬಹಳ ಕಷ್ಟವನ್ನು ಅನುಭವಿಸ ಬಿಟ್ಟೆ ಅಂದಿದ್ದಾರೆ. ಈಗ ಸದ್ಯಕ್ಕೆ ಪತಿಯಿಂದ ದೂರವಾಗಿ ಹಲವು ವರ್ಷಗಳಿಂದ ಮಗಳೊಂದಿಗೆ ಜೀವನ ನಡೆಸುತ್ತಿದ್ದಾರೆ.
ಸಿಂಗಲ್ ಮದರ್ ಆಗಿರುವ ಇವರಿಗೆ ಮತ್ತೊಂದು ಮದುವೆ ಕುರಿತಾಗಿ ಕೂಡ ಈ ಸಂದರ್ಶನದಲ್ಲಿ ಪ್ರಶ್ನೆ ಕೇಳಲಾಗಿದೆ. ಅದಕ್ಕಾಗಿ ಅವರು ತುಂಬಾ ಪ್ರಾಮಾಣಿಕವಾಗಿ ಉತ್ತರ ನೀಡಿದ್ದಾರೆ. ನನಗೂ ಕೂಡ ಸಂಗಾತಿ ಬೇಕು ಎಂದು ಅನಿಸುತ್ತದೆ ಆದರೆ ಅವರು ತುಂಬಾ ಮೆಚರ್ಡ್ ಮೈಂಡೆಡ್ ಆಗಿರಬೇಕು.
ಮೊದಲೆಲ್ಲಾ ಆಗಿದ್ದರೆ ನಾನು ಅಡ್ಜಸ್ಟ್ ಮಾಡಿಕೊಂಡು ಇರುತ್ತಿದ್ದೆ ಆದರೆ ಈಗ ನಾನು ಆ ರೀತಿ ಅಡ್ಜಸ್ಟ್ ಆಗಿ ಬೇರೆಯವರಿಗೆ ಹೊಂದಿಕೊಂಡು ಬದುಕುವುದು ಕೂಡ ಬಹಳ ಕಷ್ಟ ಎಂದಿದ್ದಾರೆ. ಹಾಗಾದರೆ ಪ್ರಗತಿ ಮರು ಮದುವೆಯಾಗುವುದಿಲ್ಲ ಎನ್ನುವುದನ್ನು ಸ್ಪಷ್ಟಪಡಿಸಿದ್ದಾರಾ ಎನ್ನುವ ಅನುಮಾನಗಳು ಕಾಡುತ್ತಿವೆ. ಈಗಾಗಲೇ ಸಿನಿಮಾ ರಂಗದಲ್ಲಿರುವ ಹಲವು ಸೆಲೆಬ್ರೆಟಿಗಳೆಲ್ಲಾ ಎರಡನೇ ಮದುವೆ ಆಗಿದ್ದಾರೆ ಅದರಲ್ಲಿ ಹಲವರು ಎರಡನೇ ಮದುವೆಯಲ್ಲಿ ಬಹಳ ಸಂತೋಷದಿಂದ ಜೀವನ ನಡೆಸುತ್ತಿದ್ದಾರೆ.
ಪ್ರಗತಿ ಅವರು ಈ ನಿರ್ಧಾರ ತೆಗೆದುಕೊಂಡರೆ ಅವರನ್ನು ಮದುವೆಯಾಗಲು ಸಾಕಷ್ಟು ಜನ ಸಾಲು ನಿಲ್ಲುತ್ತಾರೆಂದರೆ ಅದು ಕೂಡ ಸುಳ್ಳಲ್ಲ. ಆದರೆ ನಟಿ ಈಗ ತಮ್ಮ ಅಭಿನಯದ ಬಗ್ಗೆ ಮಾತ್ರ ಗಮನ ಕೊಡುತ್ತಿದ್ದು ಹಾಗೆ ಬದುಕು ಕಳೆಯುವ ನಿರ್ಧಾರ ಮಾಡಿರುವಂತೆ ಕಾಣುತ್ತಿದೆ. ಅವರ ನಿರ್ಧಾರ ಏನೇ ಇದ್ದರೂ ಅವರ ಇಚ್ಛೆ ಅಂತ ಬದುಕೇ ಅವರದ್ದಾಗಲಿ ಎಂದು ಹರಿಸೋಣ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು.? ತಪ್ಪದೆ ಕಾಮೆಂಟ್ ಮಾಡಿ.