ಓಂ ಪ್ರಕಾಶ್ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ ಹುಚ್ಚ, ಕಲಸಿಪಾಳ್ಯ, ಎಕೆ 47 ಹೀಗೆ ಕನ್ನಡದ ಬಹುತೇಕ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ ಅಷ್ಟೇ ಅಲ್ಲದೆ ಕೆಲವು ಸಿನಿಮಾಗಳಿಗೆ ಬಂಡವಾಳವನ್ನು ಕೂಡ ಹೂಡಿಕೆ ಮಾಡಿದ್ದಾರೆ. ನಿರ್ಮಾಪಕ ನಿರ್ದೇಶಕ ಮಾತ್ರವಲ್ಲದೆ ಅದ್ಭುತ ಹಾಸ್ಯಗಾರ ಕೂಡ ಹೌದು ಹಲವಾರು ಸಿನಿಮಾದಲ್ಲಿ ಹಾಸ್ಯ ಪ್ರಧಾನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ ಹಾಗೂ ಪೋಷಕ ಪಾತ್ರದಲ್ಲಿಯೂ ಕೂಡ ಕಾಣಿಸಿಕೊಂಡಿದ್ದಾರೆ. ಇನ್ನು ಓಂ ಪ್ರಕಾಶ್ ರಾವ್ ಅವರ ತಂದೆ ಎನ್.ಎಸ್. ರಾವ್ ಹೆಸರಾಂತ ಅದ್ಭುತ ಕಲಾವಿದ ಬಹುತೇಕ ಹಳೆಯ ಸಿನಿಮಾ ಎಲ್ಲದರಲ್ಲೂ ಕೂಡ ನಟಿಸಿದ್ದಾರೆ. ತಂದೆಯ ಪ್ರತಿಭೆಯನ್ನೇ ಮಗನು ಕೂಡ ಹೊಂದಿದ್ದಾರೆ ಎಂದು ಹೇಳಿದರು ಕೂಡ ತಪ್ಪಾಗಲಾರದು. ಇನ್ನು ನಿಮ್ಮೆಲ್ಲರಿಗೂ ತಿಳಿದಿರುವಂತೆ ಓಂ ಪ್ರಕಾಶ್ ರಾವ್ ಅವರು ರೇಖಾದಾಸ್ ಎಂಬುವರನ್ನು ಪ್ರೀತಿಸಿ ಮದುವೆಯಾಗುತ್ತಾರೆ ರೇಖಾದಾಸ್ ಮೂಲತಃ ಪಶ್ಚಿಮ ಬಂಗಾಳದವರು.
ರೇಖಾ ದಾಸ್ ಅವರ ತಂದೆ ತಾಯಿ ಇಬ್ಬರು ಕೂಡ ಕೆಲಸವನ್ನು ಅರಸಿ ಬೆಂಗಳೂರಿಗೆ ಬರುತ್ತಾರೆ ನಟನೆಯಲ್ಲಿ ಹೆಚ್ಚಿನ ಆಸಕ್ತಿ ಇದ್ದ ಕಾರಣ ರೇಖಾದಾಸ್ ಅವರು ಸಿನಿಮಾ ಕ್ಷೇತ್ರದತ್ತ ಬಂದು ಕಾಡಿಬೇಡಿ ಅವಕಾಶವನ್ನು ಗಿಟ್ಟಿಸಿಕೊಳ್ಳುತ್ತಾರೆ. ಕನ್ನಡ ಬರದೆ ಇದ್ದರೂ ಕೂಡ ಕನ್ನಡವನ್ನು ಅಚ್ಚುಕಟ್ಟಾಗಿ ಮಾತನಾಡಲು ಕಲಿತುಕೊಂಡು ನಟನೆಯನ್ನು ಪ್ರಾರಂಭ ಮಾಡುತ್ತಾರೆ. ಇಲ್ಲಿಯವರೆಗೂ ರೇಖಾದಾಸ್ ಅವರು ಸುಮಾರು 600ಕ್ಕೂ ಹೆಚ್ಚು ಸಿನಿಮಾ ಹಾಗೂ ಐವತ್ತಕ್ಕೂ ಅಧಿಕ ಧಾರಾವಾಹಿ ಮತ್ತು 400 ಹೆಚ್ಚು ನಾಟಕಗಳಲ್ಲಿ ಭಾಗವಹಿಸಿದ್ದಾರೆ. ರೇಖಾದಾಸ್ ಹಾಗೂ ಓಂ ಪ್ರಕಾಶ್ ರಾವ್ ಇಬ್ಬರೂ ಕೂಡ ಪರಸ್ಪರ ಪ್ರೀತಿಸಿ ಮದುವೆಯಾಗುತ್ತಾರೆ ಆದರೆ ಮದುವೆಯಾದ ನಂತರ ಓಂ ಪ್ರಕಾಶ್ ರಾವ್ ಸಾಕಷ್ಟು ಆರ್ಥಿಕ ನಷ್ಟವನ್ನು ಎದುರಿಸಬೇಕಾಗುತ್ತದೆ.
ಅವಕಾಶಗಳು ಸಿಗದೇ ಸಿನಿಮಾರಂಗದಿಂದ ದೂರ ಉಳಿಯುತ್ತಾರೆ ಈ ಸಮಯದಲ್ಲಿ ರೇಖಾದಾಸ್ ಅವರನ್ನು ಬಿಟ್ಟು ಹೋಗುತ್ತಾರೆ ಇದಾಗಲೇ ರೇಖಾದಾಸ್ ಅವರಿಗೆ ಶ್ರಾವ್ಯ ಎಂಬ ಹೆಣ್ಣು ಮಗಳು ಕೂಡ ಇರುತ್ತಾಳೆ. ರೇಖಾ ದಾಸ್ ಅವರನ್ನು ಓಂ ಪ್ರಕಾಶ್ ರಾವ್ ಕೈಬಿಟ್ಟರು ಕೂಡ ರೇಖದಾಸ್ ತಮ್ಮ ಮಗಳನ್ನು ಕಷ್ಟಪಟ್ಟು ಹೇಗೆ ಸಾಕುತ್ತಾರೆ. ತದನಂತರ ಹುಚ್ಚ ಕಲಾಸಿಪಾಳ್ಯ ಸುಂಟರಗಾಳಿ ಮುಂತಾದ ಸಿನಿಮಾವನ್ನು ನಿರ್ದೇಶನ ಮಾಡಿದ ನಂತರ ಓಂ ಪ್ರಕಾಶ್ ರಾವ್ ಅವರಿಗೆ ಮತ್ತೆ ಹಣ ಆಸ್ತಿ ಸಿರಿ ಸಂಪತ್ತು ಎಲ್ಲವೂ ಕೂಡ ಲಭಿಸುತ್ತದೆ. ತದನಂತರ ಇವರು 2002ನೇ ಇಸ್ವಿಯಲ್ಲಿ ಮತ್ತೊಂದು ಮದುವೆಯಾಗುತ್ತಾರೆ ಆದರೆ ಕೆಲವು ಕಾರಣಾಂತರಗಳಿಂದ ಆಕೆಗೂ ವಿ.ಚ್ಛೇ.ದ.ನ ನೀಡಿ 2009ರಲ್ಲಿ ಮೂರನೇ ಮದುವೆಯಾಗುತ್ತಾರೆ.
ಸದ್ಯಕ್ಕೆ ಓಂ ಪ್ರಕಾಶ್ ರವರು ತಮ್ಮ ಮೂರನೇ ಪತ್ನಿಯ ಜೊತೆ ಇದ್ದಾರೆ, ಆದರೂ ಕೂಡ ರೇಖಾದಾಸ್ ಹಾಗೂ ಓಂ ಪ್ರಕಾಶ್ ರಾವ್ ಅವರ ಮಗಳಾದಂತಹ ಶ್ರಾವ್ಯ ಅವರನ್ನು ಕಂಡರೆ ಇವರಿಗೆ ಬಹಳನೇ ಪ್ರೀತಿ ಹೀಗಾಗಿ ಸಿನಿಮಾರಂಗಕ್ಕೆ ತನ್ನ ಮಗಳನ್ನು ಕರೆದುಕೊಂಡು ಬರಬೇಕು ಖ್ಯಾತ ನಟಿಯನ್ನಾಗಿ ಮಾಡಬೇಕು ಎಂಬ ಆಸೆ ಕನಸನ್ನು ಹೊಂದಿರುತ್ತಾರೆ. ಇದಕ್ಕೆ ಪೂರಕವಾಗುವಂತೆ ಅಜಯ್ ರಾವ್ ಅಭಿನಯದ ರೋಜ್ ಎಂಬ ಸಿನಿಮಾದಲ್ಲಿ ನಾಯಕ ನಟಿಯಾಗಿ ಅಭಿನಯಿಸುತ್ತಾರೆ. ಈ ಸಿನಿಮಾದ ಅದ್ಭುತವಾಗಿ ನಟನೆ ಮಾಡಿದ ಕಾರಣ ಶ್ರಾವ್ಯ ಅವರನ್ನು ಎಲ್ಲರೂ ಕೂಡ ಮೆಚ್ಚಿಕೊಳ್ಳುತ್ತಾರೆ ಈ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಒಳ್ಳೆಯ ಕಲೆಕ್ಷನ್ ಕೂಡ ಮಾಡುತ್ತದೆ. ಈ ಸಿನಿಮಾದ ನಂತರ ಡಾರ್ಲಿಂಗ್ ಕೃಷ್ಣ ಅಭಿನಯದ ಹುಚ್ಚ ಪಾರ್ಟ್ 2 ಸಿನಿಮಾದಲ್ಲಿ ನಾಯಕ ನಟಿಯಾಗಿ ಅಭಿನಯಿಸುತ್ತಾರೆ ಇದು ಕೂಡ ಅದ್ಭುತವಾದಂತಹ ಚಿತ್ರಕಥೆಯನ್ನು ಹೊಂದಿರುತ್ತದೆ.
ಎರಡು ದೊಡ್ಡ ಸಕ್ಸಸ್ ಸಿನಿಮಾ ನೀಡಿದರು ಕೂಡ ಶ್ರಾವ್ಯ ಅವರಿಗೆ ಯಾವುದೇ ಅವಕಾಶಗಳು ದೊರೆಯುವುದಿಲ್ಲ ಬೇರೆ ನಟನ ಜೊತೆ ಅಭಿನಯಿಸುವುದಕ್ಕೆ ಇವರಿಗೆ ಬೇಡಿಕೆ ಎಂಬುದು ದೊರೆಯುವುದಿಲ್ಲ. ಅದ್ಭುತ ಪ್ರತಿಭೆ ಕಲಾವಿದೆ ಆದರೂ ಕೂಡ ಶ್ರಾವ್ಯ ಅವರು ಯಾಕೆ ಚಿತ್ರರಂಗದಲ್ಲಿ ಯಶಸ್ಸನ್ನು ಕಾಣಲಿಲ್ಲ ಎಂಬುದು ಹಲವು ಸಿನಿ ರಸಿಕರ ಪ್ರಶ್ನೆಯಾಗಿತ್ತು. ಓಂ ಪ್ರಕಾಶ್ ರಾವ್ ಅವರನ್ನು ಒಂದು ಬಾರಿ ಸಂದರ್ಶನದಲ್ಲಿ ಕೇಳಿದಾಗ ಅವರು ಕೊಟ್ಟ ಉತ್ತರ ಕೇಳಿ ನಿಜಕ್ಕೂ ಕೂಡ ಎಲ್ಲರೂ ಒಂದು ಕ್ಷಣ ದಂಗಾಗಿ ಹೋದರು. ಹೌದು ನಟ ಓಂ ಪ್ರಕಾಶ್ ರಾವ್ ಅವರು ಹೇಳುವಂತೆ ಓಂ ಪ್ರಕಾಶ್ ರಾವ್ ಅವರಿಗೆ ತಮ್ಮ ಮಗಳನ್ನು ಗ್ಲಾಮರಸ್ ಲುಕ್ ನಲ್ಲಿ ನೋಡಲು ಇಷ್ಟವಿಲ್ಲವಂತೆ ಅಷ್ಟೇ ಅಲ್ಲದೆ ಗ್ಲಾಮರಸ್ ಪಾತ್ರದಲ್ಲಿ ಅಭಿನಯಿಸುವುದಕ್ಕೆ ಅವರು ಒಪ್ಪುವುದಿಲ್ಲವಂತೆ.
ಈ ಕಾರಣಕ್ಕಾಗಿ ಶ್ರಾವ್ಯ ಚಿತ್ರರಂಗದಲ್ಲಿ ಯಶಸ್ಸನ್ನು ಕಂಡಿಲ್ಲ ಹಾಗೂ ಆಕೆಗೆ ಬೇಡಿಕೆಯು ಕೂಡ ಇಲ್ಲ ಎಂಬ ರೋಚಕ ಮಾಹಿತಿಯನ್ನು ಹೊರಹಾಕಿದ್ದಾರೆ. ಈ ವಿಚಾರ ಹೊರ ಬರುತ್ತಿದ್ದ ಹಾಗೆ ನೆಟ್ಟಿಗರು ಹಲವಾರು ರೀತಿಯಾಗಿ ಕಾಮೆಂಟನ್ನು ಹಾಕುತ್ತಿದ್ದಾರೆ ಏಕೆಂದರೆ ಒಬ್ಬ ನಿರ್ಮಾಪಕ ಮತ್ತು ನಿರ್ದೇಶಕ ಆಗಿರುವಂತಹ ಓಂ ಪ್ರಕಾಶ್ ರಾವ್ ಅವರು ಬೇರೆ ಹೆಣ್ಣುಮಕ್ಕಳನ್ನು ಗ್ಲಾಮರಸ್ ಪಾತ್ರದಲ್ಲಿ ತೋರಿಸುತ್ತಾರೆ. ಆದರೆ ತಮ್ಮ ಮನೆಯ ಹೆಣ್ಣು ಮಕ್ಕಳ ವಿಚಾರಕ್ಕೆ ಬಂದರೆ ಈ ರೀತಿ ನಾ ಕಟ್ಟುಪಾಡಿನ ನಿಯಮವನ್ನು ಹಾಕುತ್ತಾರೆ. ಒಬ್ಬರಿಗೆ ಒಂದೊಂದು ರೀತಿಯಾದಂತಹ ನ್ಯಾಯವನ್ನು ಒದಗಿಸುವುದು ಎಷ್ಟು ಸರಿ ಎಂದು ಪ್ರಶ್ನೆಯನ್ನು ಕೇಳಿದ್ದಾರೆ.
ಅಷ್ಟೇ ಅಲ್ಲದೆ ಸಿನಿಮಾ ಎಂಬುದು ಮನರಂಜನ ದೃಷ್ಟಿಯಿಂದ ತೆಗೆಯುವಂತಹದ್ದು ಹಾಗಾಗಿ ಇಲ್ಲಿ ಗ್ಲಾಮರಸ್ ಪಾತ್ರವೂ ಕೂಡ ಕೇವಲ ಒಂದು ಭಾಗವಾಗಿರುತ್ತದೆ. ಇದನ್ನು ಪಾತ್ರದಂತೆ ನೋಡಬೇಕು ಹೊರತು ತಮ್ಮ ಜೀವನಕ್ಕೆ ಅತಿಯಾಗಿ ಅಳವಡಿಸಿಕೊಳ್ಳಬಾರದು ಈ ರೀತಿ ಮಾಡಿದ್ದರಿಂದಲೇ ಶ್ರಾವ್ಯವರಿಗೆ ಇದೀಗ ಯಾವುದೇ ಅವಕಾಶ ಎಂಬುದು ದೊರೆಯದೆ ಮನೆಯಲ್ಲಿ ಕುಳಿತುಕೊಳ್ಳುವಂತಹ ಸಂದರ್ಭ ಎದುರಾಗಿದೆ ಎಂದು ಓಂ ಪ್ರಕಾಶ್ ರಾವ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದರೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೆ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ.