ನಾವೆಲ್ಲ ಅಂದುಕೊಂಡಿರುತ್ತೇವೆ ತೆರೆ ಮೇಲೆ ನಾಯಕ ಅಥವಾ ನಾಯಕಿ ಆಗಿ ಕಾಣಿಸಿಕೊಳ್ಳುವವರು ವೈಯಕ್ತಿಕ ಬದುಕಿನಲ್ಲೂ ಅದೇ ರೀತಿ ಇರುತ್ತಾರೆ ಎಂದು. ಆದರೆ ಅದೊಂದು ವೃತ್ತಿ ಅಷ್ಟೇ, ಬಣ್ಣ ಹಚ್ಚಿ ರಾಜನು ಕೂಡ ಆಗಬಹುದು ಅಧಿಕಾರಿಯೂ ಆಗಬಹುದು ಆದರೆ ಬಣ್ಣ ತೊಳೆದ ಬಳಿಕ ವೈಯಕ್ತಿಕ ಬದುಕಿನಲ್ಲಿ ಏನು ಬದಲಾಗಿ ಇರುವುದಿಲ್ಲ. ನಮ್ಮ ಸಿನಿಮಾ ಇಂಡಸ್ಟ್ರಿಯಲ್ಲೇ ತೆಗೆದುಕೊಂಡರೆ ಹಲವು ದಶಕಗಳಿಂದ ಹಲವಾರು ಸಹ ಕಲಾವಿದರಗಳು ದಶಕಗಳಿಂದ ಪಾತ್ರ ಮಾಡುತ್ತಲೇ ಬಂದಿದ್ದಾರೆ.
ಇಲ್ಲಿ ಬೆರಳಣಿಕೆ ಅಷ್ಟು ಜನ ಮಾತ್ರ ಸೆಟಲ್ ಆಗಿ ನೆಮ್ಮದಿಯ ಜೀವನ ಸಾಗಿಸುತ್ತಿದ್ದಾರೆ. ಹೊರತು ಅದೆಷ್ಟೋ ಸಹ ಕಲಾವಿದರು ಇನ್ನೂ ಒಪ್ಪತ್ತಿನ ಊಟಕ್ಕೂ ಕೂಡ ಕಷ್ಟಪಡುತ್ತಿದ್ದಾರೆ. ಎಷ್ಟೋ ಜನರು ಸ್ವಂತ ಮನೆಗೂ ಇಲ್ಲದೆ ಇನ್ನೂ ಬಾಡಿಗೆ ಮನೆಗಳಲ್ಲಿ ವಾಸಿಸುತ್ತಿದ್ದಾರೆ. ಇದರಲ್ಲಿ ಎಷ್ಟೋ ಜನ ಫೇಮಸ್ ಆದವರು ಸಹ ಇದೆ ಪಾಡಿನಲ್ಲಿ ಇದ್ದಾರೆ ಎನ್ನುವುದೇ ಬಹಳ ಆಶ್ಚರ್ಯ ಎನಿಸುತ್ತದೆ ಇದಕ್ಕೆ ಹಾಸ್ಯ ಕಲಾವಿದೆ ಉಮಾಶ್ರೀ (Comedy actress Umashree) ಅವರು ಕೂಡ ಏನು ಹೊರತೇನಲ್ಲ.
ಉಮಾಶ್ರೀ ಅವರಿಗೆ ಈವರೆಗೆ ಮಾಡಿರುವುದು ಬರೋಬ್ಬರಿ 400 ಚಲನಚಿತ್ರಗಳು. ಅಲ್ಲದೆ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದಾಗ ಕರ್ನಾಟಕದ ಮಕ್ಕಳ ಮತ್ತು ಮಹಿಳಾ ಕಲ್ಯಾಣ ಇಲಾಖೆಯ ಸಚಿವೆ (Women and child welfare minister) ಕೂಡ ಆಗಿದ್ದರು. ಈಕೆ ನಟಿಸಿರುವುದು ಬರಿ ಸೈಡ್ ರೋಲ್ ಅಲ್ಲವೇ ಅಲ್ಲ. ಸಿನಿಮಾಗಳಲ್ಲಿ ತನ್ನದೇ ಆದ ರೀತಿಯಲ್ಲಿ ಹಾಸ್ಯಕ್ಕೆ ಬೆಂಚ್ಮಾರ್ಕ್ ಹಾಕಿ ಹೋಗಿದ್ದಾರೆ. ಅನುಭವ ಸಿನಿಮಾದ ಆ ಪಾತ್ರದಿಂದ ಹಿಡಿದು ಪುಟ್ನಂಜ ಸಿನಿಮಾದ ಪುಟ್ಮಲ್ಲಿ ಪಾತ್ರ, ಸಿಪಾಯಿ ಸಿನಿಮಾದ ಸೌಂದರ್ಯ ಅವರ ತಾಯಿಯ ಪಾತ್ರ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ತಾಯಿಯ ಪಾತ್ರ ಹೀಗೆ ಆಕೆ ಇಂತಹ ವಿಶೇಷ ಪಾತ್ರಗಳಿಗೆ ಜೀವ ತುಂಬಿದವರು.
ಒಂದು ಅರ್ಥದಲ್ಲಿ ನಾಯಕಿಯರಿಗಿಂತ ಹೆಚ್ಚು ಸಿನಿಮಾವನ್ನು ಆಕ್ರಮಿಸಿಕೊಂಡವರು ಎಂದರು ತಪ್ಪಾಗಲಾರದು. ಇತ್ತೀಚಿಗೆ ಸೂಪರ್ ಹಿಟ್ ಆದ ರತ್ನನ್ ಪ್ರಪಂಚ (Rathnan Prapancha) ಸಿನಿಮಾದ ಅಸ್ತಿತ್ವವೇ ಇವರೆನ್ನುವ ರೀತಿ ಆ ಸಿನಿಮಾದಲ್ಲಿ ಇವರ ಅಭಿನಯ ಹಾಗೂ ಪಾತ್ರ ಇತ್ತು. ಜೊತೆಗೆ ಕಿರುತೆರೆ ಧಾರಾವಾಹಿಗಳಲ್ಲೂ ಕೂಡ ಬಣ್ಣ ಹಚ್ಚುತ್ತಿರುವ ಇವರು ಅನೇಕ ಧಾರಾವಾಹಿಗಳಲ್ಲಿ ಅಭಿನಯಿಸಿದ್ದಾರೆ. ಸದ್ಯಕ್ಕೆ ಜೀ ಕನ್ನಡ ವಾಹಿನಿಯ ನಂಬರ್ ವನ್ ಸೀರಿಯಲ್ ಆಗಿರುವ ಪುಟ್ಟಕ್ಕನ ಮಕ್ಕಳು (Puttakkana makkalu) ಸೀರಿಯಲ್ ನ ಮೇನ್ ರೋಡ್ ಅಲ್ಲಿ ನಟಿಸುತ್ತಿದ್ದಾರೆ.
ಇವರು ಇಷ್ಟು ವರ್ಷದಿಂದ ಅಭಿನಯದಲ್ಲಿ ತೊಡಗಿಕೊಂಡರೂ ಕೂಡ ಶ್ರೀಮಂತೆ ಅಲ್ಲವಂತೆ ಇದನ್ನು ಅವರೇ ಇತ್ತೀಚಿನ ಅವರ ಇಂಟರ್ವ್ಯೂ ಅಲ್ಲಿ ಹೇಳಿಕೊಂಡಿದ್ದಾರೆ. ನ್ಯೂಸ್ ಫಸ್ಟ್ ಚಾನೆಲ್ (News 1st channel) ನಡೆಸಿದ ಸಂದರ್ಶನದಲ್ಲಿ ಮಾತನಾಡುತ್ತಿದ್ದ ಇವರು ಆ ವಿಷಯವನ್ನು ಒಪ್ಪಿಕೊಂಡಿದ್ದಾರೆ. ಜೊತೆಗೆ ಈ ಸಂದರ್ಶನದಲ್ಲಿ ಅನೇಕ ವಿಷಯಗಳ ಬಗ್ಗೆ ಚರ್ಚೆ ನಡೆದಿದ್ದು ಸಂದರ್ಶನ ಕಾರರು ನಿಮಗೆ ಸಾಕಷ್ಟು ಕೌಟುಂಬಿಕ ಸಮಸ್ಯೆಗಳು ಆರ್ಥಿಕ ಸಮಸ್ಯೆಗಳು ಕಾಡುತ್ತಿವೆ ಆದರೂ ಪಾತ್ರ ಎನ್ನುವ ವಿಷಯ ಬಂದಾಗ ನಂಬಲು ಅಸಾಧ್ಯ ಎನ್ನುವ ರೀತಿ ಕಣ್ಣಿಗೆ ಕಟ್ಟುವ ಹಾಗೆ ಅಭಿನಯಿಸಿ ಬಿಡುತ್ತೀರಲ್ಲ ಹೇಗೆ ಸಾಧ್ಯ ಎಂದು ಪ್ರಶ್ನಿಸಿದ್ದಾರೆ.
ಅದಕ್ಕೆ ಉಮಾಶ್ರೀ ಅವರು ನಮ್ಮ ಸೆಟ್ಟಿನಲ್ಲಿರುವ ಎಲ್ಲರೂ ಕೂಡ ಇದನ್ನೇ ಹೇಳುತ್ತಿರುತ್ತಾರೆ. ಲೈಟ್ ವರ್ಕ್ ಮತ್ತು ಶೂಟಿಂಗ್ ಗೆ ರೆಡಿ ಮಾಡಿಕೊಳ್ಳುವ ತನಕ ನಾನು ಜಾಲಿಯಾಗೆ ಇರುತ್ತೇನೆ ಒಮ್ಮೆ ಆಕ್ಷನ್ ಎಂದು ಹೇಳಿದ ಮೇಲೆ ಅದು ಹೇಗೆ ಪಾತ್ರ ನನ್ನಲ್ಲಿ ತುಂಬಿಕೊಳ್ಳುತ್ತದೆ ಗೊತ್ತಿಲ್ಲ ಎಲ್ಲವೂ ತಾಯಿ ಸರಸ್ವತಿಯ ಆಶೀರ್ವಾದದಿಂದ ಎಂದು ಹೇಳಿಕೊಂಡಿದ್ದಾರೆ.