ಆರೋಗ್ಯವಾಗಿ ಇರಬೇಕು ಎಂದರೆ ಏನು ತಿನ್ನಬೇಕು ಏನು ಮಾಡಬೇಕು ಎನ್ನುವ ಪ್ರಶ್ನೆ ಇಂದಿನ ದಿನದಲ್ಲಿ ಗೂಗಲ್ ನಲ್ಲಿ ಅತಿ ಹೆಚ್ಚು ಹುಡುಕುವ ವಿಷಯ ಹಾಗೂ ಕೇಳುವಂತಹ ಪ್ರಶ್ನೆಯಾಗಿದೆ. ಏಕೆ ಎಂದರೆ ವ್ಯಸ್ತ ಜೀವನಶೈಲಿ ಇಂದಾಗಿ ನಮ್ಮ ಆರೋಗ್ಯವನ್ನು ನಾವು ಸಂಪೂರ್ಣವಾಗಿ ಕಡೆಗಣಿಸುತ್ತಿದ್ದೇವೆ.
ಒಂದು ದಿನ ಹಾಸಿಗೆ ಹಿಡಿದ ಮೇಲೆ ನಮಗೆ ಆರೋಗ್ಯದ ಮಹತ್ವ ತಿಳಿದು ಬರುತ್ತದೆ. ಯಾವುದು ತುಂಬಾ ರುಚಿಯಾಗಿ ಇರುತ್ತದೆಯೋ ಅದು ಆರೋಗ್ಯಕ್ಕೆ ಒಳ್ಳೆಯದಲ್ಲ ಎಂದು ನಮ್ಮ ಹಿಂದಿನ ವರು ಹೇಳಿದ್ದಾರೆ. ಅದೇ ರೀತಿಯಾಗಿ ಪ್ರತಿಯೊಂದು ತರಕಾರಿಯಲ್ಲಿ ಯೂ ಅದರದ್ದೇ ಆಗಿರುವಂತಹ ಕೆಲವೊಂದಷ್ಟು ಆರೋಗ್ಯಕರ ಗುಣಗಳು ಇರುತ್ತದೆ ಹಾಗೂ ಕೆಲವೊಂದಷ್ಟು ಆ.ಘಾತ.ಕಾರಿ ಗುಣಗಳು ಕೂಡ ಇರುತ್ತದೆ.
ಹಚ್ಚ ಹಸಿರಾಗಿರುವಂತಹ ತರಕಾರಿಯ ಸೇವನೆಯು ನಮ್ಮ ದೇಹದ ಆರೋಗ್ಯಕ್ಕೆ ಮಾತ್ರವಲ್ಲದೆ ಮನಸ್ಸಿನ ಆರೋಗ್ಯಕ್ಕೂ ಕೂಡ ಗಾಢವಾದ ಪರಿಣಾಮವನ್ನು ಬೀರುತ್ತದೆ ಎಂದು ಆಗಿನ ಕಾಲದಿಂದಲೂ ಹೇಳಿ ಕೊಂಡು ಬಂದಿದ್ದಾರೆ. ಯಾಕೆ ಎಂದರೆ ತರಕಾರಿಗಳ ಸೇವನೆಯಿಂದಾಗಿ ಮನಸ್ಸು ಶಾಂತಿಯಾಗಿ ಇರುತ್ತದೆ ಎಂದು ಕೆಲವರ ಅಧ್ಯಯನ ತಿಳಿಸುತ್ತದೆ.
ಇದರ ಬಗ್ಗೆ ವಾದ ಪ್ರತಿವಾದಗಳು ಏನೇ ಇರಲಿ ತರಕಾರಿಗಳು ನಮ್ಮ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎಂದು ಶೇಕಡ ನೂರಕ್ಕೆ ನೂರರಷ್ಟು ಸತ್ಯ. ಅಂತಹ ತರಕಾರಿಗಳಲ್ಲಿ ಬೆಂಡೆಕಾಯಿ ನಿಜಕ್ಕೂ ಒಂದು ಅದ್ಭುತವಾದ ತರಕಾರಿಗಳಲ್ಲಿ ಒಂದಾಗಿದೆ ಎಂದೇ ಹೇಳ ಬಹುದು. ಇದರಲ್ಲಿರುವಂತಹ ಪೌಷ್ಟಿಕಾಂಶ ಮತ್ತು ನಮ್ಮ ದೇಹಕ್ಕೆ ಸಿಗುವಂತಹ ನ್ಯೂಟ್ರಿಷಿಯನ್ ಬೇರೆ ಯಾವುದೇ ತರಕಾರಿಯಲ್ಲಿ ಇಲ್ಲ ಎಂದೇ ಹೇಳಬಹುದು.
ಅದು ಆರೋಗ್ಯಕ್ಕೆ ಸಂಬಂಧಿಸಿದ ಸಂಜೀವಿನಿ ಎಂದು ಕೂಡ ಕರೆಯುತ್ತಾರೆ. ಹಾಗಾದರೆ ಈ ದಿನ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿದಂತೆ ಬೆಂಡೆ ಕಾಯಿಯನ್ನು ಸೇವನೆ ಮಾಡುವುದರಿಂದ ಯಾವುದೇ ರೀತಿಯ ಪ್ರಯೋಜನವನ್ನು ಪಡೆಯಬಹುದು ಹಾಗೂ ಯಾವುದೆಲ್ಲ ತೊಂದರೆ ಗಳನ್ನು ತಂದುಕೊಳ್ಳಬಹುದು ಎನ್ನುವಂತಹ ಸಂಪೂರ್ಣವಾದ ಮಾಹಿತಿ ಬಗ್ಗೆ ತಿಳಿಯೋಣ.
* ಬೆಂಡೆಕಾಯಿಯಲ್ಲಿ ಇರುವಂತಹ ತುಂಬಾ ಕಡಿಮೆ ಕ್ಯಾಲರಿ ಅಂದರೆ ತೂಕ ಇಳಿಸಲು ಬೆಂಡೆಕಾಯಿಯಲ್ಲಿ ಅತಿ ಕಡಿಮೆ ಕ್ಯಾಲರಿ ಇರುತ್ತದೆ. ತೂಕ ಇಳಿಸಲು ಇದು ಒಂದು ಅತ್ಯುತ್ತಮವಾದಂತಹ ಆಹಾರ ಕೂಡ. ಇದು ತುಂಬಾ ಕಡಿಮೆ ಕ್ಯಾಲರಿ ನೀಡುತ್ತದೆ ಅಷ್ಟೇ ಅಲ್ಲದೆ ಬೆಂಡೆಕಾಯಿಯಲ್ಲಿ ಉನ್ನತ ಮಟ್ಟದ ನಾರಿನ ಅಂಶ ಇದ್ದು ಹೊಟ್ಟೆಯು ದೀರ್ಘಕಾಲ ದವರೆಗೆ ತುಂಬಿರುವಂತೆ ಮಾಡುತ್ತದೆ.
* ಊಟ ಆದ ನಂತರ ಸಕ್ಕರೆ ಮಟ್ಟ ಏರಿಕೆ ಆಗುವುದನ್ನು ಇದು ತಡೆಯುತ್ತದೆ ಮತ್ತು ರಕ್ತದಲ್ಲಿ ಸಕ್ಕರೆ ಮಟ್ಟವನ್ನು ಸ್ಥಿರಗೊಳಿಸುತ್ತದೆ.
* ನಾರಿನಾಂಶ ರಕ್ತದಲ್ಲಿ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುವಲ್ಲಿ ಮುಖ್ಯ ಪಾತ್ರವನ್ನು ವಹಿಸುತ್ತದೆ. ಇದೇ ಕಾರಣದಿಂದಾಗಿ ಸಕ್ಕರೆ ಕಾಯಿಲೆ ಇರುವವರು ಬೆಂಡೆಕಾಯಿಯನ್ನು ತಪ್ಪದೆ ತಿನ್ನುತ್ತಾರೆ ಮತ್ತು ತಪ್ಪದೆ ತಿನ್ನಲೇಬೇಕು ಕೂಡ.
* ಬೆಂಡೆಕಾಯಿಯಲ್ಲಿ ಇರುವಂತಹ ನಾರಿನಂಶ ಜೀರ್ಣಕ್ರಿಯೆಗೆ ಸಹ ಕಾರಿಯಾಗುತ್ತದೆ ಮತ್ತು ಇದು ಕರುಳಿನ ಕ್ರಿಯೆಯನ್ನು ನಿಯಂತ್ರಿಸುತ್ತದೆ. ಪೆಕ್ಟಿನ್ ಕರುಳಿನಲ್ಲಿ ಊದಿಕೊಂಡಂತೆ ಕರುಳಿನಲ್ಲಿ ಇರುವಂತಹ ಕಲ್ಮಶ ವನ್ನು ಸುಲಭವಾಗಿ ಬೆಂಡೆಕಾಯಿ ಹೊರ ತರುವಂತಹ ಕೆಲಸವನ್ನು ಮಾಡುತ್ತದೆ.
* ಮಲಬದ್ಧತೆ ಸಮಸ್ಯೆಯಿಂದ ಬಳಲುತ್ತಿರುವವರು ನಿಯಮಿತವಾಗಿ ಬೆಂಡೆಕಾಯಿಯನ್ನು ತಿಂದರೆ ನಿಮ್ಮ ಮಲಬದ್ಧತೆಯ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು.
* ಯಾರು ಗರ್ಭಧರಿಸಬೇಕು ಎಂದು ಪ್ರಯತ್ನಿಸುತ್ತಿರುತ್ತಾರೋ ಅಂಥವರಿಗೆ ಬೆಂಡೆಕಾಯಿ ತುಂಬಾ ಒಳ್ಳೆಯ ಆಹಾರವಾಗಿದೆ. ಇದರಲ್ಲಿರುವ ಫಾಲಿಕ್ ಆಮ್ಲ ಗರ್ಭದರಿಸಲು ನೆರವಾಗುತ್ತದೆ. ಮಾತ್ರವಲ್ಲದೆ ಇದು ಭ್ರೂಣ ಬೆಳವಣಿಗೆಯಲ್ಲಿಯೂ ಕೂಡ ಪ್ರಮುಖವಾದ ಪಾತ್ರವಹಿಸುತ್ತದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.