ಸಾಮಾಜಿಕ ಜಾಲತಾಣ ಉಪಯೋಗಿಸುವ ಎಲ್ಲರಿಗೂ ಸಹ ಅಹೋರಾತ್ರ ಅವರ ಹೆಸರು ತಿಳಿದೇ ಇದೆ. ಒಬ್ಬ ಸಾಮಾಜಿಕ ಹೋರಾಟಗಾರನಾಗಿ ವೃಕ್ಷ ರಕ್ಷಕನಾಗಿ ಹೆಣ್ಣು ಮಕ್ಕಳ ಪರ ನಿಲ್ಲುವ ಮಹಿಳಾ ವಾದಿಯಾಗಿ ಇವರು ಹೆಚ್ಚು ಗುರುತಿಸಿಕೊಂಡಿದ್ದಾರೆ. ಅದರಲ್ಲೂ ಸುದೀಪ್ ಅವರು ರಮ್ಮಿ ಆಟದ ಜಾಹೀರಾತಿನಲ್ಲಿ ಕಾಣಿಸಿಕೊಂಡ ದಿನದಿಂದ ಅವರ ವಿರುದ್ಧವಾಗಿ ಮಾತನಾಡುವ ಮೂಲಕ ಇನ್ನು ಹೆಚ್ಚು ಪ್ರಚಲಿತರಾಗಿದ್ದಾರೆ. ಇದೀಗ ಸುದೀಪ್ ಬಳಿಕ ದರ್ಶನ್ ಮತ್ತು ದರ್ಶನ್ ಅಭಿಮಾನಿಗಳ ವಿರುದ್ಧ ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಆ.ಕ್ರೋ.ಶ.ವನ್ನು ಹೊರ ಹಾಕುತ್ತಿದ್ದಾರೆ.
ಹೆಣ್ಣು ನಿಂದಕರು ರೌಡಿಗಳು ಪೊರ್ಕಿಗಳು ಎಂದೆಲ್ಲಾ ದರ್ಶನ್ ಮತ್ತು ಅವರ ಅಭಿಮಾನಿಗಳನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ. ದರ್ಶನ್ ಅಭಿಮಾನಿಗಳು ಸಹ ಅಹೋರಾತ್ರ ಅವರಿಗೆ ಕಮೆಂಟ್ ಗಳಲ್ಲಿ ಟಕ್ಕರ್ ನೀಡುತ್ತಿದ್ದು ಇಬ್ಬರ ಸೋಶಿಯಲ್ ಮೀಡಿಯಾ ವಾರ್ ಪ್ರತಿದಿನವೂ ಸಾಗುತ್ತಲೇ ಇದೆ. ದರ್ಶನ್ ಅವರು ತಮ್ಮ ಕ್ರಾಂತಿ ಸಿನಿಮಾ ಪ್ರಚಾರ ಮಾಡುವ ವೇಳೆ ಮಾತಿನ ಬರದಲ್ಲಿ ಒಮ್ಮೆ ಅದೃಷ್ಟ ದೇವತೆಯ ಬಗ್ಗೆ ಅಶ್ಲೀಲವಾಗಿ ಮಾತನಾಡಿದರು ಅಂದು ಅವರು ಆಡಿದ ಆ ಮಾತುಗಳನ್ನು ಸಾಕಷ್ಟು ಜನ ವಿರೋಧಿಸಿದ್ದರು.
ಆದರೆ ಅಹೋರಾತ್ರ ಅವರು ಅದನ್ನು ಗಂಭೀರವಾಗಿ ತೆಗೆದುಕೊಂಡು ಸೋಶಿಯಲ್ ಮೀಡಿಯಾದಲ್ಲಿ ದರ್ಶನ್ ಅವರನ್ನು ಏಕವಚನವಾಗಿ ಬೈದಿದ್ದರು. ಅದಾದ ನಂತರ ದರ್ಶನ್ ಅಭಿಮಾನಿಗಳು ಅವರನ್ನು ಖಂಡಿಸಿದ ಕಾರಣ ತಪ್ಪೊಪ್ಪಿಕೊಳ್ಳದೆ ಅಭಿಮಾನಿಗಳನ್ನು ಛೂ ಬಿಡುತ್ತಾರೆ ಎಂದು ಇನ್ನು ಅವರ ಕೋಪ ಜಾಸ್ತಿ ಆಗಿತ್ತು. ಈ ವಿಷಯದಿಂದ ಶುರುವಾದ ಇದು ಈಗಲೂ ಸಹ ಕ್ರಾಂತಿ ಸಿನಿಮಾದ ವಿಷಯದ ತನಕ ಮುಟ್ಟಿದೆ. ಪ್ರತಿದಿನವೂ ಒಂದಲ್ಲ ಒಂದು ವಿಷಯವನ್ನು ಕೆಣಕಿ ದರ್ಶನ್ ಕೆ ಡಿ ಬಾಸ್, ಹೇಡಿ ಬಾಸ್ ಎಂದೆಲ್ಲಾ ಬರಹಗಳನ್ನು ಬರೆಯುತ್ತಲೇ ಇದ್ದಾರೆ.
ಆದರೆ ಶಿವರಾಜಕುಮಾರ್ ಅವರ 125ನೇ ಚಿತ್ರವಾಗಿರುವ ವೇದ ಚಿತ್ರವನ್ನು ನೋಡಿ ಅಹೋರಾತ್ರ ಅವರು ಹೊಗಳುತ್ತಿದ್ದಾರೆ. ವೇದ ಚಿತ್ರವನ್ನು ಕ್ರಾಂತಿ ಸಿನಿಮಾಗೆ ಹೋಲಿಕೆ ಮಾಡಿ ಮಾತನಾಡಿದ್ದಾರೆ. ಅಪರೂಪಕ್ಕೆ ವೇದ ಸಿನಿಮಾವನ್ನು ನೋಡಿದೆ, ಸಿನಿಮಾ ನೋಡಿದ ಮೇಲೆ ಕಣ್ಣಿನಲ್ಲಿ ನೀರು ತುಂಬಿ ಬಂತು. ಈ ಕಣ್ಣೀರು ಯಾಕಾಗಿ ಬಂತು ಎಂದು ನನಗೆ ತಿಳಿಯುತ್ತಿಲ್ಲ. ಪ್ರತಿ ಮನೆಮನೆಯ ರಸ್ತೆ ರಸ್ತೆಯ ಕಥೆ ವೇದ ಆಗಿದೆ. ಸಿನಿಮಾದಲ್ಲಿ ಹೀರೋ ಶಿವರಾಜ್ ಕುಮಾರ್ ಅವರಲ್ಲ ಹೀರೋಯಿನ್ ಅವರೇ ಸಿನಿಮಾದ ಹೀರೋ.
ಆ ಕಲಾವಿದೆ ಬೆಂಕಿಯಂತೆ ಅಭಿನಯಿಸಿದ್ದಾರೆ ಇಂತಹ ಅದ್ಭುತ ಚಿತ್ರ ಮಾಡಿದ್ದಕ್ಕಾಗಿ ಇಡೀ ಚಿತ್ರತಂಡಕ್ಕೆ ಧನ್ಯವಾದಗಳು. ನೋಡಿದರೆ ಇಂಥಹ ಸಿನಿಮಾವನ್ನು ನೋಡಬೇಕು, ಮಾಡಿದರೆ ಇಂತಹ ಸಿನಿಮಾವನ್ನು ಮಾಡಬೇಕು. ಪ್ರಸ್ತುತ ಸಮಾಜದಲ್ಲಿ ನಡೆಯುತ್ತಿರುವ ವಿಷಯಗಳ ಕುರಿತ ಸಿನಿಮಾ ಇದಾಗಿದೆ ಮನೆ ಮಂದಿಯೆಲ್ಲಾ ಮಕ್ಕಳ ಜೊತೆ ಸೇರಿ ನೋಡಬಹುದಾದ ಸಿನಿಮಾ ಇದಾಗಿದೆ ಎಂದು ಹೊಗಳಿರುವ ಇವರು ಕ್ರಾಂತಿ ಸಿನಿಮಾವನ್ನು ಶಾಲಾ ಮಕ್ಕಳ ಹೆಸರು ಹೇಳಿಕೊಂಡು ಮಾಡುತ್ತಿದ್ದಾರೆ.
ಕ್ರಾಂತಿ ಸಿನಿಮಾದಲ್ಲಿ ಪುಷ್ಪವತಿ ಎನ್ನುವ ಹಾಡನ್ನು ವಿಕೃತ ಮಾಡಿದ್ದಾರೆ. ಮೈನೆರೆದ ಹೆಣ್ಣು ಮಗಳಿಗೆ ಪುಷ್ಪವತಿ ಎಂದು ಕರೆಯುತ್ತಾರೆ ಆಕೆಯನ್ನು ಬಹಳ ಕೆಟ್ಟದಾಗಿ ತೋರಿಸಿ ಹಾಡಿಗೆ ಅಷ್ಟೇ ಕೆಟ್ಟದಾಗಿ ಲಿರಿಕ್ಸ್ ಕೂಡ ಬರೆದಿದ್ದಾರೆ. ಅಕ್ಕನ ಗಂಡನನ್ನು ಬಯಸುವ ಹೆಣ್ಣಿನ ರೀತಿ ಪುಷ್ಪತ್ತಿಯನ್ನು ತೋರಿಸಿದ್ದಾರೆ. ಅದಕ್ಕಾಗಿ ಯೋಗರಾಜ್ ಭಟ್, ದರ್ಶನ್ ಎಲ್ಲರಿಗೂ ನನ್ನ ಧಿಕ್ಕಾರ ಎಂದು ಕ್ರಾಂತಿ ಸಿನಿಮಾದ ವಿರುದ್ಧ ಅಹೋರಾತ್ರ ಆರೋಪ ಮಾಡಿ ಮಾತನಾಡಿದ್ದಾರೆ. ಮಕ್ಕಳ ಹೆಸರು ಕೇಳಿಕೊಂಡು ದರ್ಶನ್ ಅವರು ಜನರನ್ನು ವಶೀಕರಣ ಮಾಡುತ್ತಿದ್ದಾರೆ ಆದರೆ ಸಿನಿಮಾದಲ್ಲಿ ನಿಜವಾದ ಕಥೆ ಬೇರೆ ರೀತಿಯೇ ತೋರುತ್ತಿದೆ ಎಂದೆಲ್ಲಾ ಬರೆಯುತ್ತಿದ್ದಾರೆ. ಇದೆಲ್ಲ ಮುಂದೆ ಎಲ್ಲಿಗೆ ಹೋಗಿ ಮುಟ್ಟುತ್ತದೆ ಎಂದು ಕಾದು ನೋಡಬೇಕಾಗಿದೆ.