ಹಳೆಯ ಬಟ್ಟೆಯನ್ನು ಮನೆಯಲ್ಲಿರುವಂತಹ ಮಹಿಳೆಯರು ಹಲವಾರು ಕೆಲಸ ಕಾರ್ಯಗಳಿಗೆ ಮತ್ತೆ ಪುನರ್ ಬಳಕೆ ಮಾಡಿಕೊಳ್ಳುತ್ತಾರೆ. ಅದೇ ರೀತಿಯಾಗಿ ಈ ದಿನ ಹಳೆಯ ಬಟ್ಟೆಯನ್ನು ಹೇಗೆ ಮತ್ತೆ ಪುನರ್ ಬಳಕೆ ಮಾಡಿಕೊಳ್ಳಬಹುದು. ಹಾಗೂ ಈ ಬಟ್ಟೆ ಯಾವ ಅತ್ಯುತ್ತಮವಾದಂತಹ ಕೆಲಸಕ್ಕೆ ಬರುತ್ತದೆ ಎನ್ನುವಂತಹ ಮಾಹಿತಿಯನ್ನು ಈ ದಿನ ತಿಳಿಯೋಣ.
ಹಳೆಯ ಬಟ್ಟೆ ಎಂದ ಮಾತ್ರಕ್ಕೆ ಎಲ್ಲಾ ಬಟ್ಟೆಗಳು ಕೂಡ ಪುನರ್ ಬಳಕೆ ಮಾಡುವುದಕ್ಕೆ ಸಾಧ್ಯವಾಗುವುದಿಲ್ಲ. ಹೌದು ಕಾಟನ್ ಬಟ್ಟೆ ಅಂದರೆ ನೀರನ್ನು ಹೀರಿಕೊಳ್ಳುವಂತಹ ಅಂಶ ಇರುವಂತಹ ಬಟ್ಟೆಗಳನ್ನು ಮಾತ್ರ ನಾವು ಪುನರ್ ಬಳಕೆ ಮಾಡಿಕೊಂಡು ಅದನ್ನು ಬಹಳ ಪ್ರಮುಖವಾ ದಂತಹ ಕೆಲಸ ಕಾರ್ಯಗಳಿಗೆ ಉಪಯೋಗಿಸಬಹುದು.
ಅದರಲ್ಲೂ ಸಾಮಾನ್ಯವಾಗಿ ಪ್ರತಿಯೊಬ್ಬರೂ ಕೂಡ ಕಾಟನ್ ಬಟ್ಟೆಗಳನ್ನು ಅಡುಗೆ ಮನೆಯಲ್ಲಿ ಕೆಲಸ ಕಾರ್ಯ ಮಾಡುವಂತಹ ಸಂದರ್ಭದಲ್ಲಿ ಬಿಸಿ ಪಾತ್ರೆಗಳನ್ನು ಹಿಡಿಯುವಂತಹ ಸಂದರ್ಭದಲ್ಲಿ ಈ ಬಟ್ಟೆಗಳನ್ನು ಉಪಯೋಗಿಸುತ್ತಾರೆ ಹಾಗೂ ಅಡುಗೆ ಮನೆಯಲ್ಲಿ ಶೆಲ್ಫ್ ಕ್ಲೀನ್ ಮಾಡುವುದಕ್ಕೆ ಧೂಳು ಒರೆಸುವುದಕ್ಕೆ ಹೀಗೆ ಹಲವಾರು ಕೆಲಸಗಳಿಗೆ ಇಂತಹ ಬಟ್ಟೆಗಳನ್ನು ಉಪಯೋಗಿಸುತ್ತಾರೆ.
ಈ ಸುದ್ದಿ ಓದಿ:- ಹಿಡಿ ಅಕ್ಕಿಯಿಂದ ಹೀಗೆ ಮಾಡಿ ರಾತ್ರೋ ರಾತ್ರಿ ನಿಮ್ಮ ಅದೃಷ್ಟವೇ ಬದಲಾಗುತ್ತೆ.!
ಆದರೆ ಇದೇ ರೀತಿಯಾಗಿ ಮನೆಯಲ್ಲಿ ಮಾಪ್ ಅನ್ನು ಸಹ ನಾವು ಈ ಒಂದು ಕಾಟನ್ ಬಟ್ಟೆಯನ್ನು ಉಪಯೋಗಿಸಿ ತಯಾರಿಸಬಹುದು ಇನ್ನು ಮುಂದೆ ಯಾರೂ ಕೂಡ ಮಾಪ್ ಅನ್ನು ಅಂಗಡಿಗಳಿಂದ ತಂದು ಉಪಯೋಗಿ ಸುವ ಅವಶ್ಯಕತೆ ಬರುವುದಿಲ್ಲ. ಹಾಗಾದರೆ ಈ ದಿನ ಮನೆಯಲ್ಲಿರು ವಂತಹ ಕಾಟನ್ ಬಟ್ಟೆಗಳನ್ನು ಅಂದರೆ ಹಳೆಯ ಬಟ್ಟೆಗಳನ್ನು ಉಪಯೋಗಿಸಿ ಹೇಗೆ ಸುಲಭವಾಗಿ ಕಡಿಮೆ ಸಮಯದಲ್ಲಿ ಯಾವುದೇ ಖರ್ಚು ಇಲ್ಲದೆ ಮಾಪ್ ತಯಾರಿಸಬಹುದು ಎಂದು ಈ ಕೆಳಗೆ ತಿಳಿಯೋಣ.
ಮೊದಲು ಮಾಪ್ ಉಪಯೋಗಿಸಿದ್ದರೆ ಅದರ ಒಂದು ಸ್ಟಿಕ್ ಅನ್ನು ಇಟ್ಟುಕೊಳ್ಳಬೇಕು ಅದರಲ್ಲಿ ಯಾವ ಒಂದು ವಿಧಾನ ದಲ್ಲಿ ಅದಕ್ಕೆ ದಾರಗಳನ್ನು ಹಾಕಿರುತ್ತಾರೋ ಅದೇ ರೀತಿಯಾಗಿ ನಾವು ಕಾಟನ್ ಬಟ್ಟೆಗಳನ್ನು ಸಣ್ಣ ಸಣ್ಣದಾಗಿ ಕತ್ತರಿಸಿ ಇಟ್ಟುಕೊಳ್ಳಬೇಕು ಆನಂತರ ಅದನ್ನು ಒಂದಕ್ಕೆ ಒಂದು ಸೇರಿಸಿ ಕೈಯಿಂದ ಹೊಲೆದುಕೊಳ್ಳ ಬಹುದು ಅಥವಾ ಮಿಷಿನ್ ಸಹಾಯದಿಂದ ಅದನ್ನು ಹೊಲೆದುಕೊಂಡು ಅದನ್ನು ಮೊದಲಿನ ಸ್ಥಿತಿಗೆ ಅಂದರೆ ಮಾಪ್ ಗೆ ಹಾಕಿ ಫಿಕ್ಸ್ ಮಾಡಿಕೊಳ್ಳಬೇಕು.
ಈ ರೀತಿ ಮಾಡಿಕೊಂಡರೆ ನೀವೇ ಸುಲಭವಾಗಿ ಮನೆಯಲ್ಲಿ ಮಾಪ್ ತಯಾರಿಸಿದಂತಾಗುತ್ತದೆ ಹಾಗೂ ಹಳೆಯದಾಗಿರುವಂತಹ ಬಟ್ಟೆಗಳನ್ನು ಬಹಳ ಸುಲಭವಾಗಿ ಇಂತಹ ಕೆಲಸಗಳಿಗೆ ಹಾಗೂ ನಿಮಗೆ ಅನುಕೂಲ ವಾಗುವಂತಹ ಕೆಲಸಗಳಿಗೆ ತಯಾರಿಸಿಕೊಂಡಂತೆ ಆಗುತ್ತದೆ. ಈ ಒಂದು ವಿಧಾನ ಬಹಳ ಸುಲಭವಾಗಿದ್ದು ಯಾವುದೇ ಮೆಷಿನ್ ಸಹಾಯ ಇಲ್ಲದೆಯೂ ಸಹ ನೀವು ಈ ವಿಧಾನ ಅನುಸರಿಸಬಹುದು.
ಈ ಸುದ್ದಿ ಓದಿ:- ಈ ಸೀಕ್ರೆಟ್ ಗೊತ್ತಾದ್ರೆ ಗ್ಯಾಸ್ ಬೇಗ ಖಾಲಿ ಆಗಲ್ಲ 100% ಗ್ಯಾರಂಟಿ.!
ಯಾವುದೇ ರೀತಿಯ ಹೆಚ್ಚಿನ ಶ್ರಮ ವಹಿಸುವ ಅಗತ್ಯ ಇರುವುದಿಲ್ಲ ಮಾಪ್ ಸ್ಟಿಕ್ ಹಾಗೂ ಕಾಟನ್ ಬಟ್ಟೆ ಸೂಜಿ ದಾರ ಇದ್ದರೆ ಸಾಕು ನೀವೇ ನಿಮ್ಮ ಮನೆಯಲ್ಲಿ ಮಾಪ್ ತಯಾರಿಸಬಹುದು. ಈ ರೀತಿ ತಯಾರಿಸಿ ದಂತಹ ಮಾಪ್ ಅನ್ನು ನೀವು ಮನೆ ಒರೆಸುವುದಕ್ಕೆ ಉಪಯೋಗಿಸ ಬಹುದಾಗಿದೆ. ಕೆಲವೊಂದಷ್ಟು ಜನ ಕೆಳಗೆ ಬಗ್ಗಿ ಮನೆಯನ್ನು ಒರೆಸುವುದಕ್ಕೆ ಸಾಧ್ಯವಾಗುವುದಿಲ್ಲ.
ಅಂಥವರಿಗಂತೂ ಈ ಒಂದು ಮಾಪ್ ಅತ್ಯುತ್ತಮವಾದಂತಹ ವಸ್ತು ಎಂದೇ ಹೇಳಬಹುದು. ಇದರ ಸಹಾಯದಿಂದ ಅವರು ಮನೆಯನ್ನು ಸುಲಭವಾಗಿ ಯಾವುದೇ ರೀತಿಯ ಕಷ್ಟ ಪಡದೆ ಸ್ವಚ್ಛ ಮಾಡಬಹುದು ಅದರಲ್ಲೂ ಈ ದಿನ ನಾವು ಹೇಳಿದ ಈ ಒಂದು ವಿಧಾನವನ್ನು ಅನುಸರಿಸುವುದರಿಂದ ನೀವೇ ನಿಮ್ಮ ಮನೆಯಲ್ಲಿ ಮಾಪ್ ತಯಾರಿಸಿದಂತೆಯೂ ಕೂಡ ಆಗುತ್ತದೆ.