Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

ಸೀರೆಲೇ ಹುಡುಗಿರ ನೋಡಲೆಬಾರದು ನಿಲ್ಲಲ್ಲ ಟೆಂಪರೇಚರ್ ಹಾಡಿಗೆ ಹೆಜ್ಜೆ ಹಾಕಿದ ಅನುಶ್ರೀ, ಈ ಕ್ಯೂಟ್ ವಿಡಿಯೋ ನೋಡಿ ಎಷ್ಟು ಚಂದ ಇದೆ.

Posted on August 20, 2022 By Kannada Trend News No Comments on ಸೀರೆಲೇ ಹುಡುಗಿರ ನೋಡಲೆಬಾರದು ನಿಲ್ಲಲ್ಲ ಟೆಂಪರೇಚರ್ ಹಾಡಿಗೆ ಹೆಜ್ಜೆ ಹಾಕಿದ ಅನುಶ್ರೀ, ಈ ಕ್ಯೂಟ್ ವಿಡಿಯೋ ನೋಡಿ ಎಷ್ಟು ಚಂದ ಇದೆ.

ಆಂಕರ್ ಅನುಶ್ರೀ ಯಾವುದೇ ಕಾರ್ಯಕ್ರಮ ಇರಲಿ ಅಥವಾ ರಿಯಾಲಿಟಿ ಶೋ ಇರಲಿ, ಸಿನಿಮಾಗೆ ಸಂಬಂಧಪಟ್ಟಂತಹ ಸಮಾರಂಭಗಳು ಇರಲಿ ಎಲ್ಲದರಲ್ಲೂ ಕೂಡ ಅನುಶ್ರೀ ಅವರ ಆಂಕರಿಂಗ್ ಇದ್ದೆ ಇರುತ್ತದೆ, ಆಂಕರಿಂಗ್ ಮಾಡುವುದರಲ್ಲಿ ಇವರನ್ನು ಮೀರಿಸಿದವರು ಮತ್ಯಾರು ಇಲ್ಲ ಅಂತಾನೇ ಹೇಳಬಹುದು ಸದ್ಯಕ್ಕೆ ಕಿರುತೆರೆಯಲ್ಲಿ ನಂಬರ್ ಒನ್ ಪಟ್ಟವನ್ನು ಗಿಟ್ಟಿಸಿಕೊಂಡಿದ್ದಾರೆ. ಜೀ ಕನ್ನಡ ವಾಹಿನಿಯಲ್ಲಿ ಮೂಡಿಬರುವಂತಹ ಪ್ರತಿಯೊಂದು ಕಾರ್ಯಕ್ರಮವನ್ನು ಕೂಡ ಇವರೇ ನಡೆಸಿಕೊಡುತ್ತಾರೆ. ಡಾನ್ಸ್ ಕರ್ನಾಟಕ ಡಾನ್ಸ್ ಕಾರ್ಯಕ್ರಮ, ಸರಿಗಮಪ ಕಾರ್ಯಕ್ರಮ ಇನ್ನು ಇತರೆ ಕಾರ್ಯಕ್ರಮಗಳಲ್ಲಿ ಅನುಶ್ರೀ ಅವರು ಇದ್ದೇ ಇರುತ್ತಾರೆ. ಕೇವಲ ಕಿರುತೆರೆ ಮಾತ್ರವಲ್ಲದೆ ಬೆಳ್ಳಿತೆರೆಯ ಹಲವಾರು ಸಿನಿಮ ಕಾರ್ಯಕ್ರಮಗಳನ್ನು ಕೂಡ ನಡೆಸಿಕೊಂಡು ಹೋಗುತ್ತಾರೆ. ಒಟ್ಟಾರೆಯಾಗಿ ಹೇಳುವುದಾದರೆ ಅನುಶ್ರೀ ಅವರ ಮಾತು ಅವರ ಆಂಕರಿಂಗ್ ಅಂದರೆ ಅಲ್ಲಿ ಜನ ಸಮೂಹವೇ ನೆರೆದಿರುತ್ತದೆ.

ತನ್ನ ಚಟಪಟ ಮಾತಿನ ಮುಖಾಂತರವೇ ಎಲ್ಲರ ಗಮನವನ್ನು ಸೆಳೆಯುತ್ತಾರೆ ಮೂಲತಃ ಮಂಗಳೂರಿನವರಾದರು ಕೂಡ ಸ್ಪಷ್ಟ ಕನ್ನಡ ಮಾತನಾಡುತ್ತಾರೆ ಈ ಕಾರಣಕ್ಕಾಗಿ ಅನುಶ್ರೀ ಅವರಿಗೆ ಎಲ್ಲದ ಬೇಡಿಕೆ. ಇನ್ನು ಇವರ ಸಂಭಾವನೆಯೂ ಕೂಡ ಕಡಿಮೆ ಏನಲ್ಲ ಒಂದು ಕಾರ್ಯಕ್ರಮ ನಡೆಸಿಕೊಡುವುದಕ್ಕೆ ಒಂದರಿಂದ ಮೂರು ಲಕ್ಷ ರೂಪಾಯಿ ಸಂಬಳವನ್ನು ತೆಗೆದುಕೊಳ್ಳುತ್ತಾರೆ. ದುಬಾರಿ ಸಂಭಾವನೆ ಪಡೆಯುವ ಆಂಕರಿಂಗ್ ಪೈಕಿ ಅನುಶ್ರೀ ಅವರು ಮೊದಲಿಗೆ ಹೇಳಬಹುದು. ಇನ್ನು ಅನುಶ್ರೀ ಅವರು ಯಾವಾಗಲೂ ಕೂಡ ಲವಲವಿಕೆಯಿಂದ ಸೆಟ್ ನಲ್ಲಿ ಇರುವಂತಹ ಪ್ರತಿಯೊಬ್ಬರನ್ನು ಕೂಡ ಮಾತನಾಡಿಸುವುದನ್ನು ನೀವು ಸಾಮಾಜಿಕ ಜಾಲತಾಣ ಖಾತೆಯಲ್ಲಿ ನೋಡಬಹುದು ಇದರ ಜೊತೆಗೆ ಎಲ್ಲಾ ಸ್ಪರ್ಧಿಗಳ ಜೊತೆ ಲವ್ಲಿಯಾಗಿ ಇರುತ್ತಾರೆ.

ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಕಾರ್ಯಕ್ರಮದ ಬಿಡುವಿನ ಸಮಯದಲ್ಲಿ ಸ್ಪರ್ಧಿಗಳ ಜೊತೆ ಹೆಜ್ಜೆಯನ್ನು ಹಾಕುತ್ತಾರೆ ಸದ್ಯಕ್ಕೆ ಅನುಶ್ರೀ ಅವರು ಕಾಮಿಡಿ ನಟ ಆದಂತಹ ಸೂರಜ್ ಹಾಗೂ ಇನ್ನಿತರ ಕಲಾವಿದರೊಂದಿಗೆ ಕಿಚ್ಚ ಸುದೀಪ್ ಅಭಿನಯ ಹಾಗೂ ರಚಿತರಾಮ್ ಅಭಿನಯದ ರನ್ನ ಸಿನಿಮಾದ ಸೀರೆಲಿ ಹುಡುಗಿರ ನೋಡಲೆಬಾರದು ಎಂಬ ಹಾಡೊಂದಕ್ಕೆ ಹೆಜ್ಜೆಯನ್ನು ಹಾಕಿದ್ದಾರೆ. ಈ ಡ್ಯಾನ್ಸ್ ಬಹಳ ಮನ ಮೋಹಕವಾಗಿದ್ದು ನೋಡುಗರ ಕಣ್ಮನವನ್ನು ಸೆಳೆಯುತ್ತಿದೆ ಅನುಶ್ರೀ ಅವರು ಆಂಕರಿಂಗ್ ನಲ್ಲಿ ಮಾತ್ರ ಮೊದಲಿಗರು ಅಲ್ಲ ಡ್ಯಾನ್ಸ್ ಮಾಡುವುದರಲ್ಲೂ ಕೂಡ ತುಂಬಾನೇ ಪ್ರಾವಿನ್ಯತೆಯನ್ನು ಪಡೆದುಕೊಂಡಿದ್ದಾರೆ ಎಂಬುದು ಈ ಡ್ಯಾನ್ಸ್ ನೋಡಿದರೆ ತಿಳಿಯುತ್ತದೆ.

ಬಿಗ್ ಬಾಸ್ ಸೀಸನ್ ಒಂದರಲ್ಲಿ ಕೂಡ ಅನುಶ್ರೀ ಅವರು ಸ್ಪರ್ಧಿಸಿರುತ್ತಾರೆ ಈ ಒಂದು ಕಾರ್ಯಕ್ರಮದ ನಂತರ ಇವರಿಗೆ ಹೆಚ್ಚು ಹೆಸರು ಮತ್ತು ಖ್ಯಾತಿ ದೊರೆಯುತ್ತದೆ. ತದನಂತರ ಕಸ್ತೂರಿ ವಾಹಿನಿಯಲ್ಲಿ ಮೂಡಿ ಬರುವಂತಹ ಬಂಗಾರದ ಬೇಟೆ ಎಂಬ ಕಾರ್ಯಕ್ರಮದಲ್ಲಿಯೂ ಕೂಡ ಪಾಲ್ಗೊಳ್ಳುತ್ತಾರೆ ಇಲ್ಲಿಂದ ಇವರ ಕಿರಿಯರ್ ಪ್ರಾರಂಭವಾಗುತ್ತದೆ ಅಂತಾನೇ ಹೇಳಬಹುದು. ಒಂದು ಕಾಲದಲ್ಲಿ ಅವಕಾಶಗಳು ಇಲ್ಲದೆ ಜೀವನ ಸಾಗಿಸಲು ತುಂಬಾನೇ ಪರಿತಪಿಸುತ್ತಿದ್ದರು ಆದರೆ ಇದೀಗ ತಮ್ಮ ಸ್ವಂತ ಪ್ರತಿಭೆ ಹಾಗೂ ಪರಿಶ್ರಮದಿಂದ ಕಿರುತೆರೆಯಲ್ಲಿ ಒಳ್ಳೆಯ ಸ್ಥಾನಮಾನವನ್ನು ಗುಟ್ಟಿಸಿಕೊಂಡು ಹಣವನ್ನು ಸಂಪಾದನೆ ಮಾಡುತ್ತಿದ್ದಾರೆ ಇದರ ಜೊತೆಗೆ ಮನರಂಜನೆಯನ್ನು ನೀಡುತ್ತಿದ್ದಾರೆ. ಸದ್ಯಕ್ಕೆ ಅನುಶ್ರೀ ಅವರು ಮಾಡಿದಂತಹ ಈ ಒಂದು ಡ್ಯಾನ್ಸ್ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು ನೆಟ್ಟಿಗರು ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತಿದ್ದಾರೆ. ಈ ವಿಡಿಯೋ ನೋಡಿ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ. ಧನ್ಯವಾದಗಳು ಸ್ನೇಹಿತರೆ ಈ ಲೇಖನಕ್ಕೆ ಲೈಕ್ ಕೊಟ್ಟು ಶೇರ್ ಮಾಡಿ

https://youtu.be/iPQJlvE9EWY

Entertainment Tags:Anchor Anushree, Anushree
WhatsApp Group Join Now
Telegram Group Join Now

Post navigation

Previous Post: ವಿಷ್ಣುವರ್ಧನ್ ಅಳಿಯ ಅನಿರುಧ್ ಗೆ ಇದೆಂಥ ಪರಿಸ್ಥಿತಿ ಬಂತು.! ಕಿರುತೆರೆಯಿಂದ ಎರಡು ವರ್ಷ ಬ್ಯಾನ್, ಅನಿರುಧ್ ಮಾಡಿದ ತಪ್ಪಾದರೂ ಏನು ಗೊತ್ತಾ.?
Next Post: ದರ್ಶನ್ ಅವರ 56ನೇ ಸಿನಿಮಾಗೆ ಮಾಲಾಶ್ರೀ ಮಗಳನ್ನು ಕೈ ಬಿಟ್ಟು ಅನುಷ್ಕಾ ಶೆಟ್ಟಿಯನ್ನು ಹೀರೋಯಿನ್ ಆಗಿ ಹಾಕಿಕೊಳ್ತಾರ.?

Leave a Reply Cancel reply

Your email address will not be published. Required fields are marked *

Copyright © 2025 Kannada Trend News.


Developed By Top Digital Marketing & Website Development company in Mysore