ನಟಿ ಅನುಪಮಾ ಗೌಡ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ ಕಲರ್ಸ್ ಕನ್ನಡ ವಾಹಿನಿಯಲ್ಲಿ ಮೂಡಿಬಂದಂತಹ ಅಕ್ಕ ಎಂಬ ಧಾರಾವಾಹಿಯಲ್ಲಿ ನಾಯಕ ನಟಿಯಾಗಿ ಅಭಿನಯ ಮಾಡುವುದರ ಮೂಲಕ ಎಲ್ಲರೂ ಕಣ್ಮನವನ್ನು ಸೆಳೆದಿದ್ದರು. ಇದಕ್ಕೂ ಮುಂಚೆ ಚಿ.ಸೌ ಸಾವಿತ್ರಿ ಎಂಬ ಧಾರಾವಾಹಿಯನ್ನು ಕೂಡ ನಟನೆ ಮಾಡಿದರು ತದನಂತರ ಇವರು ನಗಾರಿ, ತ್ರಯಂಬಕ, ಆ ಕರಣ ರಾತ್ರಿ ಹೀಗೆ ಕನ್ನಡದ ಬಹುತೇಕ ಸಿನಿಮಾದಲ್ಲಿ ನಟನೆ ಮಾಡಿದ್ದಾರೆ. ಇದರ ಜೊತೆಗೆ ಕಿರುತೆರೆಯಲ್ಲೂ ಕೂಡ ತಮ್ಮದೇ ಆದಂತಹ ಚಾಪನ್ನು ಮೂಡಿಸಿದ್ದಾರೆ 2017ರಲ್ಲಿಯೂ ಕೂಡ ಬಿಗ್ ಬಾಸ್ ಸೀಸನ್ 5ರಲ್ಲಿ ಪ್ರತಿಸ್ಪರ್ಧಿಯಾಗಿ ಪಾಲ್ಗೊಂಡಿದ್ದರು ಬಿಗ್ ಬಾಸ್ ಮನೆಯಲ್ಲಿ ಸುಮಾರು 98 ದಿನಗಳ ಕಾಲ ಇರುವ ಮೂಲಕ ಶತಕವನ್ನು ಪೂರೈಸಿದ ಕೀರ್ತಿ ಇವರಿಗೆ ಲಭಿಸಿದೆ.
ಬಿಗ್ ಬಾಸ್ ಮನೆಯಿಂದ ಹೊರ ಬಂದ ನಂತರ ನಿರೂಪಕಿಯಾಗಿ ಅನುಪಮ ಗೌಡ ಅವರು ಕಾಣಿಸಿಕೊಂಡರು ಹೌದು ಕಲರ್ ಸೂಪರ್ ವಾಹಿನಿಯಲ್ಲಿ ಮೂಡಿ ಬರುತ್ತಿದ್ದಂತಹ ಕನ್ನಡ ಕೋಗಿಲೆ ಎಂಬ ಮ್ಯೂಸಿಕಲ್ ಕಾರ್ಯಕ್ರಮದಲ್ಲಿ ನಿರೂಪಕಿಯಾಗಿ ಕೆಲಸವನ್ನು ಪ್ರಾರಂಭ ಮಾಡಿದರು. ಇದಾದ ನಂತರ ಮಜಾ ಭಾರತ ಕಾರ್ಯಕ್ರಮದಲ್ಲಿಯೂ ಕೂಡ ನಿರೂಪಕಿಯಾಗಿ ಕಾಣಿಸಿಕೊಂಡರು ತದನಂತರ ಅನುಬಂಧ ಅವಾರ್ಡ್ಸ್ ರಾಜ ರಾಣಿ ನನ್ನಮ್ಮ ಸೂಪರ್ ಸ್ಟಾರ್ ಹೀಗೆ ಕನ್ನಡದ ಬಹುತೇಕ ಕಾರ್ಯಕ್ರಮಗಳನ್ನು ನಡೆಸಿಕೊಂಡು ಹೋಗುತ್ತಾರೆ. ಸದ್ಯಕ್ಕೆ ಅನುಪಮಾ ಗೌಡ ಅವರು ಬಿಗ್ ಬಾಸ್ ಸೀಸನ್ 9ರಲ್ಲಿಯೂ ಕೂಡ ಸ್ಪರ್ಧಿಯಾಗಿ ಮತ್ತೊಮ್ಮೆ ಬಿಗ್ ಬಾಸ್ ಕಾರ್ಯಕ್ರಮಕ್ಕೆ ರೀ ಎಂಟ್ರಿ ಪಡೆದಿದ್ದಾರೆ.
ಕಳೆದ ಬಾರಿ 98 ದಿನಗಳ ಕಾಲ ಇದ್ದ ಅನುಪಮ ಗೌಡ ಅವರು ಈ ಬಾರಿಯಾದರೂ ಬಿಗ್ ಬಾಸ್ ಕಾರ್ಯಕ್ರಮವನ್ನು ಗೆಲ್ಲುತ್ತಾರೆ ಅಥವಾ ಇಲ್ಲವಾ ಎಂಬುದನ್ನು ಕಾದು ನೋಡಬೇಕಿದೆ. ಇವೆಲ್ಲ ಒಂದು ಕಡೆಯಾದರೆ ಮತ್ತೊಂದು ಕಡೆ ಮೊಟ್ಟಮೊದಲ ಬಾರಿಗೆ ಅನುಪಮ ಗೌಡ ಅವರು ತಮ್ಮ ವೈಯಕ್ತಿಕ ಜೀವನದ ಬಗ್ಗೆ ಮಾತನಾಡಿದ್ದಾರೆ. ಹೌದು ನಿಮ್ಮೆಲ್ಲರಿಗೂ ತಿಳಿದಿರುವಂತೆ ಅವರು ಬಿಗ್ ಬಾಸ್ ಸೀಸನ್ 5ರಲ್ಲಿ ಬಂದಿದ್ದಾಗ ತಮ್ಮ ಜೀವನದಲ್ಲಿ ನಡೆದಂತಹ ಕಹಿ ಘಟನೆಯ ಬಗ್ಗೆ ಹೇಳಿಕೊಂಡಿದ್ದರು. ನಟ ಜಗನ್ ಅವರನ್ನು ಅನುಪಮ ಗೌಡ ಅವರ ಪ್ರೀತಿಸುತ್ತಿದ್ದರು ಇಬ್ಬರೂ ಕೂಡ ಒಬ್ಬರನ್ನು ಒಬ್ಬರು ಮದುವೆಯಾಗಬೇಕು ಎಂಬ ತೀರ್ಮಾನಕ್ಕೂ ಬಂದಿದ್ದರು.
ನಿಶ್ಚಿತಾರ್ಥದ ಹಂತಕ್ಕೆ ಬಂದಿದ್ದಂತಹ ಈ ಮದುವೆ ಕೆಲವು ಕಾರಣಾಂತರಗಳಿಂದ ಅರ್ಧಕ್ಕೆ ಮುರಿದುಬಿತ್ತು ಈಗಲೂ ಕೂಡ ನಟಿ ಅನುಪಮಾ ಅವರು ಜಗನ್ ಅವರ ನೆನಪಿನಲ್ಲಿಯೇ ಇದ್ದಾರೆ. ಈ ಕಾರಣಕ್ಕಾಗಿ ಅವರು ಯಾರನ್ನು ಮದುವೆಯಾಗಿಲ್ಲ ಮತ್ತು ಪ್ರೀತಿಸುವ ಮನಸ್ಸು ಕೂಡ ಮಾಡಿಲ್ಲ ಆದರೆ ಜಗನ್ ಅವರು ಮಾತ್ರ ಮತ್ತೋರ್ವ ಯುವತಿಯನ್ನು ಪ್ರೀತಿಸಿ ಮದುವೆಯಾಗಿ ಈಗಾಗಲೇ ಮೂರು ವರ್ಷಗಳ ಕಳೆದು ಹೋಗಿದೆ. ಸದ್ಯಕ್ಕೆ ಅನುಪಮ ಗೌಡ ಅವರು ಮದುವೆಯಿಂದ ದೂರ ಇದ್ದು ತಮ್ಮ ಜೀವನದಲ್ಲಿ ಮಹ ತ್ವದ ನಿರ್ಧಾರ ಒಂದನ್ನು ಕೈಗೊಂಡಿದ್ದಾರೆ.
ಈ ವಿಚಾರದ ಬಗ್ಗೆ ಬಿಗ್ ಬಾಸ್ ಮನೆಯಲ್ಲಿ ಇದ್ದಂತಹ ಅರುಣ್ ಸಾಗರ್ ಅವರ ಜೊತೆ ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ಅಷ್ಟಕ್ಕೂ ಅನುಪಮ ಗೌಡ ಅವರು ಬಿಗ್ ಬಾಸ್ ನಲ್ಲಿ ಹೇಳಿಕೊಂಡಿದ್ದಾದರೂ ಏನು ಎಂಬುದನ್ನು ನೋಡುವುದಾದರೆ ತಮಗೆ ತಮ್ಮದೇ ಮಕ್ಕಳಿಗಿಂತ ಅನಾಥ ಮಗುವೊಂದನ್ನು ದತ್ತು ತೆಗೆದುಕೊಂಡು ಸಾಕುವ ಯೋಚನೆಯಿದೆ ಎಂದಿದ್ದಾರೆ. ಮೊದಲು ಮಗುವನ್ನು ದತ್ತು ತೆಗೆದುಕೊಳ್ಳುತ್ತೇನೆ. ಬಳಿಕವೇ ನನ್ನದೇ ಮಗು ಮಾಡಿಕೊಳ್ಳುತ್ತೇನೆ ಎನ್ನುವುದನ್ನು ಹೇಳಿಕೊಂಡಿದ್ದಾರೆ. ಅಲ್ಲೇ ಇದ್ದ ಅರುಣ್ ಸಾಗರ್, ನಿನ್ನದು ನಿಜವಾಗಿಯೂ ದೊಡ್ಡ ಮನಸ್ಸು ಎಂದು ಹೊಗಳಿದ್ದು, ಆದರೆ ಸದ್ಯಕ್ಕೆ ನನಗೆ ನಮ್ಮ ಸಾಕು ನಾಯಿಯೇ ಮಗು ಎಂದಿದ್ದಾರೆ ಅನುಪಮಾ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು.? ತಪ್ಪದೆ ಕಾಮೆಂಟ್ ಮಾಡಿ