ಅನುಪಮಾ ಗೌಡ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ ಕಲರ್ಸ್ ಕನ್ನಡ ವಾಹಿನಿಯಲ್ಲಿ ಮೂಡಿ ಬರುತ್ತಿದ್ದಂತಹ ಅಕ್ಕ ಎಂಬ ಧಾರಾವಾಹಿಯಲ್ಲಿ ನಾಯಕ ನಟಿಯಾಗುವ ಮೂಲಕ ಹೆಚ್ಚು ಪ್ರಸಿದ್ಧಿಯನ್ನು ಪಡೆದರು ಇದಕ್ಕೂ ಮೊದಲು ಸಾಕಷ್ಟು ಧಾರವಾಹಿಯಲ್ಲಿ ಸಹಕಲವಿದೆಯಾಗಿ ನಟನೆ ಮಾಡಿದ್ದಾರೆ. ಆದರೆ ಇವರಿಗೆ ಹೆಚ್ಚು ಹೆಸರು ಕೀರ್ತಿ ತಂದುಕೊಟ್ಟ ಧಾರವಾಹಿ ಅಂದರೆ ಅದು ಕಲರ್ಸ್ ಕನ್ನಡ ವಾಹಿನಿಯ ಅಕ್ಕ ಧಾರಾವಾಹಿ ಅಂತಾನೆ ಹೇಳಬಹುದು. ಈ ಧಾರಾವಾಹಿ ಸುಗಮವಾಗಿ ಸಾಗುತ್ತಾ ಬಂತು ಆದರೆ ಕೆಲವು ವರ್ಷಗಳ ನಂತರ ಈ ಧಾರಾವಾಹಿಯನ್ನು ಅರ್ಧಕ್ಕೆ ಸ್ಥಗಿತ ಮಾಡಬೇಕಾದ ಅನಿವಾರ್ಯ ಎದುರಾಗುತ್ತದೆ.
ತದನಂತರ ಇವರು ಬಿಗ್ ಬಾಸ್ ವೇದಿಕೆಯಲ್ಲಿ ಅವಕಾಶವನ್ನು ಗಿಟ್ಟಿಸಿಕೊಳ್ಳುತ್ತಾರೆ ಹೌದು ಬಿಗ್ ಬಾಸ್ ಸೀಸನ್ 5 ರಲ್ಲಿ ಸ್ಪರ್ಧಿಯಾಗಿ ಆಯ್ಕೆಯಾಗುತ್ತಾರೆ. ಬಿಗ್ ಬಾಸ್ ಮನೆಗೆ ಬಂದ ನಂತರವಷ್ಟೇ ಅನುಪಮಾ ಗೌಡ ಅವರ ಬದುಕಿನಲ್ಲಿ ಏನೆಲ್ಲಾ ಕಹಿ ಘಟನೆಗಳು ನಡೆಯಿತು ಎಂಬುದು ಜನರಿಗೆ ಅರಿವಾಗುತ್ತದೆ. ಹೌದು ತಮ್ಮ ವೈಯಕ್ತಿಕ ವಿಚಾರದ ಬಗ್ಗೆ ಬಿಗ್ ಬಾಸ್ ಮನೆಯಲ್ಲಿ ಮುಕ್ತವಾಗಿ ಹೇಳಿಕೊಳ್ಳುತ್ತಾರೆ. ತಾವು ಜೀವನದಲ್ಲಿ ಮುಂದೆ ಬರುವುದಕ್ಕೆ ಏನೆಲ್ಲ ಕಷ್ಟವನ್ನು ಅನುಭವಿಸಿದರು ಹಾಗೂ ಇವರಿಗೆ ಧಾರಾವಾಹಿಯಲ್ಲಿ ಮತ್ತು ಸಿನಿಮಾದಲ್ಲಿ ಅವಕಾಶ ಕಲ್ಪಿಸಿ ಕೊಡುವುದಕ್ಕೆ ಕೊಡುತ್ತೇವೆ ಅಂತ ಹೇಳಿ ಎಷ್ಟು ಜನ ಇವರನ್ನು ಕೆಟ್ಟದಾಗಿ ನಡೆಸಿಕೊಂಡು ಎಂಬ ವಿಚಾರವನ್ನು ಹೊರ ಹಾಕುತ್ತಾರೆ.
ಅನುಪಮಾ ಗೌಡ ಅವರು ಅವಕಾಶವಿಲ್ಲದೆ ಗಾರ್ಮೆಂಟ್ಸ್ ನಲ್ಲಿಯೂ ಕೂಡ ಕೆಲಸ ಮಾಡುತ್ತಾರೆ, ತಿಂಗಳಿಗೆ ಕೇವಲ ಆರು ಸಾವಿರ ರೂಪಾಯಿ ವೇತನಕ್ಕಾಗಿ ಕೆಲಸ ಮಾಡಿದಂತಹ ಉದಾಹರಣೆಗಳು ಇದೆಯಂತೆ. ನಿಮ್ಮೆಲ್ಲರಿಗೂ ಎಂದು ಅನುಪಮಾ ಗೌಡ ಅವರು ಬಹಳ ವಿಜೃಂಭಣೆಯಿಂದ ಕಾಣಬಹುದು ಪಟಪಟನೆ ಇಂಗ್ಲಿಷ್ನಲ್ಲಿ ಕೂಡ ಮಾತನಾಡುವುದನ್ನು ನೋಡಬಹುದು. ಯಾವುದೇ ಸ್ಟೇಜ್ ಇರಲಿ ಧಾರಾವಾಹಿ ಮುನ್ನುಗ್ಗಿ ಮಾತನಾಡುತ್ತಾರೆ ಆದರೆ ನಿಜಕ್ಕೂ ಅನುಪಮಾ ಗೌಡ ಅವರು ಓದಿದ್ದು ಎಷ್ಟನೇ ಕ್ಲಾಸ್ ಅಂತ ಕೇಳಿದರೆ ಆಶ್ಚರ್ಯ ಎಲಿಸಬಹುದು. ಕೇವಲ 6ನೇ ತರಗತಿ ಓದಿದಂತಹ ಅನುಪಮ ಗೌಡ ಅವರು ನಿರಳ್ಗರವಾಗಿ ಇಂಗ್ಲಿಷ್ ಅನ್ನು ಪಟಪಟನೆ ಮಾತನಾಡುತ್ತಾರೆ ನಿಜಕ್ಕೂ ಇವರ ಟ್ಯಾಲೆಂಟ್ ಅನ್ನು ನಾವು ಮೆಚ್ಚಲೇಬೇಕು.
ಇನ್ನು ವೈಯಕ್ತಿಕ ವಿಚಾರಕ್ಕೆ ಬರುವುದಾದರೆ ತಂದೆ ತಾಯಿ ಇಬ್ಬರು ಒಳ್ಳೆಯ ಕೆಲಸದಲ್ಲಿದ್ದರೆ ಅಥವಾ ಹೊಂದಾಣಿಕೆ ಇದ್ದರೆ ಅಂತಹ ಮನೆಯಲ್ಲಿ ಹುಟ್ಟಿದಂತಹ ಮಕ್ಕಳಿಗೆ ಅಷ್ಟೇನೂ ಕಷ್ಟ ಎನಿಸುವುದಿಲ್ಲ. ಆದರೆ ಅನುಪಮಾ ಗೌಡ ಅವರ ತಂದೆ ಕುಡಿತದ ಚಟಕ್ಕೆ ದಾಸರಾಗಿರುತ್ತಾರೆ. ಇನ್ನು ತಾಯಿ ಗಾರ್ಮೆಂಟ್ಸ್ ನಲ್ಲಿ ಕೆಲಸ ಮಾಡುವುದರ ಮೂಲಕ ಕುಟುಂಬವನ್ನು ಮುನ್ನಡೆಸಿಕೊಂಡು ಹೋಗುತ್ತಾರೆ ಒಂದು ಹಂತದವರೆಗೂ ಸುಗಮವಾಗಿ ಇದ್ದಂತಹ ಸುಖ ಸಂಸಾರದಲ್ಲಿ ಇದ್ದಕ್ಕಿದ್ದ ಹಾಗೆ ಬಿರುಗಾಳಿ ಎತ್ತುತ್ತದೆ.
ಹೌದು ತಾಯಿಯ ಆರೋಗ್ಯದಲ್ಲಿ ಏರುಪೇರು ಕಂಡುಬರುತ್ತದೆ ತಂದೆಯು ಕೂಡ ಕುಡಿತದ ಚಟ್ಟಕ್ಕೆ ದಾಸರಾಗಿರುತ್ತಾರೆ ಇದರಿಂದ ಸಾಂಸಾರಿಕ ಜೀವನದಲ್ಲಿ ಹಾರ್ದಿಕ ಪರಿಸ್ಥಿತಿ ಎದುರಾಗುತ್ತದೆ. ಆ ಸಮಯದಲ್ಲಿ ಅನುಪಮ ಗೌಡ ಅವರು ತಾವೇ ಕುಟುಂಬವನ್ನು ಮುನ್ನಡೆಸಿಕೊಂಡು ಹೋಗುವಂತಹ ಪ್ರಮೇಯ ಎದುರಾಗುತ್ತದೆ. ಈ ಸಮಯದಲ್ಲಿ ಗಾರ್ಮೆಂಟ್ ನಲ್ಲಿ ಕೆಲಸಕ್ಕೆ ಸೇರಿಕೊಳ್ಳುತ್ತಾರೆ ಆದರೆ ಗಾರ್ಮೆಂಟ್ಸ್ ನಲ್ಲಿಯೂ ಕೂಡ ಇವರಿಗೆ ಲೈಂ.ಗಿ.ಕ ಕಿ.ರು.ಕು.ಳ ನೀಡುತ್ತಾರೆ. ಆ ಸಮಯದಲ್ಲಿ ದಿಕ್ಕು ತೋಚದೆ ಆ ಕೆಲಸವನ್ನು ಬಿಟ್ಟು ಹೊರಬರಬೇಕಾಗುತ್ತದೆ ತದನಂತರ ಇವರಿಗೆ ನಟನೆಯಲ್ಲಿ ಹೆಚ್ಚು ಆಸಕ್ತಿ ಇದ್ದ ಕಾರಣ ಆಡಿಶನ್ ಗಳಲ್ಲಿ ಭಾಗವಹಿಸಲು ಪ್ರಾರಂಭಿಸುತ್ತಾರೆ.
ಕಲೆಗೆ ತಕ್ಕ ಬೆಲೆ ಸಿಗುತ್ತದೆ ಎಂಬ ಮಾತು ನಟಿ ಅನುಪಮಾ ಗೌಡ ಅವರ ಬದುಕಿನಲ್ಲಿ ನಿಜವಾಗುತ್ತದೆ ಮೊದಲು ಸೀರಿಯಲ್ ನಲ್ಲಿ ಅವಕಾಶ ಗಿಟ್ಟಿಸಿಕೊಳ್ಳುತ್ತಾರೆ. ತದನಂತರ ಸಿನಿಮಾದಲ್ಲಿ ಅವಕಾಶವನ್ನು ಪಡೆದುಕೊಂಡು ಇಲ್ಲಿಯ ವರೆಗೂ ಕೂಡ ಕನ್ನಡದಲ್ಲಿ ಸುಮಾರು ಐದರಿಂದ ಆರು ಸಿನಿಮಾದಲ್ಲಿ ನಟಿಸಿದ್ದಾರೆ. ನಟಿ ಅನುಪಮ ಗೌಡ ಅವರ ಜೀವನ ಚರಿತ್ರೆ ಈ ಕೆಳಗಿನ ವಿಡಿಯೋದಲ್ಲಿ ಈ ವಿಡಿಯೋ ನೋಡಿ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ.