Sunday, April 20, 2025
WhatsApp Group Join Now
Telegram Group Join Now
WhatsApp Group Join Now
Telegram Group Join Now
HomeEntertainmentಸಂತಸದ ಸುದ್ದಿ ಹಂಚಿಕೊಂಡ ನಟಿ ಅನುಪಮಾ ಗೌಡ, ಕೊನೆಗೂ ತಮ್ಮ ಬದುಕಿಗೆ ಬಂದ ಹೊಸ ಅತಿಥಿ.

ಸಂತಸದ ಸುದ್ದಿ ಹಂಚಿಕೊಂಡ ನಟಿ ಅನುಪಮಾ ಗೌಡ, ಕೊನೆಗೂ ತಮ್ಮ ಬದುಕಿಗೆ ಬಂದ ಹೊಸ ಅತಿಥಿ.

ನಟಿ ಅನುಪಮಾ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ ಕಲರ್ಸ್ ಕನ್ನಡ ವಾಹಿನಿಯಲ್ಲಿ ಮೂಡಿ ಬರುತ್ತಿದ್ದಂತಹ ಅಕ್ಕ ಎಂಬ ಧಾರಾವಾಹಿಯಲ್ಲಿ ನಟಿಸಿ ಜನ ಮನ್ನಣೆಯನ್ನು ಗಳಿಸಿಕೊಂಡವರು. ಈ ಧಾರಾವಾಹಿಯ ನಂತರ ಇವರು ಬಿಗ್ ಬಾಸ್ ಸೀಸನ್ 5ರಲ್ಲಿ ಭಾಗವಹಿಸುತ್ತಾರೆ ಸುಮಾರು 100 ದಿನಗಳ ಕಾಲ ಬಿಗ್ ಬಾಸ್ ಮನೆಯಲ್ಲಿ ಉಳಿದುಕೊಳ್ಳುತ್ತಾರೆ. ಬಿಗ್ ಬಾಸ್ ಮನೆಯಿಂದ ಬಂದ ಮೇಲೆ ಇವರ ಅದೃಷ್ಟವೇ ಬದಲಾಯಿತು ಅಂತ ಹೇಳಬಹುದು ಕನ್ನಡ ಕೋಗಿಲೆ ಎಂಬ ಕಾರ್ಯಕ್ರಮ ಒಂದರಲ್ಲಿ ಮೊದಲ ಬಾರಿಗೆ ಆಂಕರಿಂಗ್ ವೃತ್ತಿಯನ್ನು ಆರಂಭಿಸಿದರು. ತದನಂತರ ಮಜಾ ಭಾರತ ಎಂಬ ಕಾಮಿಡಿ ಕಿಲಾಡಿ ಶೋಗಳನ್ನು ಕೂಡ ಆಂಕರಿಂಗ್ ಮಾಡುತ್ತಾರೆ ಇದಾದ ಬಳಿಕ ಕಲರ್ಸ್ ಕನ್ನಡ ವಾಹಿನಿಯಲ್ಲಿ ಮೂಡಿ ಬರುತ್ತಿರುವಂತಹ ರಾಜ ರಾಣಿ ಕಾರ್ಯಕ್ರಮವನ್ನು ಕೂಡ ನಡೆಸಿಕೊಟ್ಟರು.

ಹೀಗೆ ಕನ್ನಡದಲ್ಲಿ ಖ್ಯಾತ ಟಾಪ್ ಆಂಕರ್ ಆದಂತಹ ಅನುಶ್ರೀ ಅವರನ್ನು ಬಿಟ್ಟರೆ ಎರಡನೇ ಸ್ಥಾನವನ್ನು ಪಡೆಯುವಂತಹ ಆಂಕರ್ ಅಂದರೆ ಅದು ಅನುಪಮ ಗೌಡ ಅಂತಾನೆ ಹೇಳಬಹುದು. ಆದರೆ ಅನುಪಮ ಗೌಡ ಅವರ ಜೀವನ ಹೇಳುವಷ್ಟು ಸುಖಕರವಾಗಿ ಇರಲಿಲ್ಲ ಗಾರ್ಮೆಂಟ್ ಒಂದರಲ್ಲಿ ಕೂಲಿ ಕೆಲಸಕ್ಕೆ ಹೋಗುತ್ತಿದ್ದಂತಹ ಇವರ ಬದುಕು ಇಷ್ಟು ಎತ್ತರದ ಸ್ಥಾನಕ್ಕೆ ಬೆಳೆದಿದೆ ಅಂದರೆ ಇವರು ಬದುಕಿನಲ್ಲಿ ಏನೆಲ್ಲಾ ಕಷ್ಟ ಪಟ್ಟಿದ್ದಾರೆ ಎಂಬುದು ಇವರಿಗೆ ಮಾತ್ರ ಗೊತ್ತು. ಒಂದು ಕಡೆ ಪ್ರೀತಿಸಿ ನಿಶ್ಚಿತಾರ್ಥ ಮಾಡಿಕೊಂಡಂತಹ ಜಗನ್ ಅವರು ಕೂಡ ಅರ್ಧದಲ್ಲಿಯೇ ಕೈ ಬಿಟ್ಟರು ಮದುವೆ ಅರ್ಧಕ್ಕೆ ನಿಂತು ಹೋಯಿತು. ಮತ್ತೊಂದು ಕಡೆ ಧಾರಾವಾಹಿಯಲ್ಲು ಕೂಡ ಅವಕಾಶಗಳು ತಪ್ಪು ಹೋದವು ಈ ಸಮಯದಲ್ಲಿ ಬಹಳ ಖಿನ್ನತೆಗೆ ಒಳಗಾದಂತಹ ಅನುಪಮ ಗೌಡ ಅವರು ಎಲ್ಲದರಿಂದಲೂ ದೂರ ಇದ್ದರು.

ಆದರೆ ಬದುಕು ಎಂಬುವುದು ಕೇವಲ ಇದು ಇಷ್ಟಕ್ಕೆ ಮುಗಿಯುವುದಿಲ್ಲ ಎಂಬ ಆತ್ಮವಿಶ್ವಾಸವನ್ನು ಮೈಗೂಡಿಸಿಕೊಂಡಂತಹ ಅನುಪಮಾ ಗೌಡ ಅವರು ತಮ್ಮ ಎಲ್ಲಾ ನೋವನ್ನು ಕೂಡ ಬದಿಗಿಟ್ಟು ಹೊಸ ಜೀವನವನ್ನು ಆರಂಭಿಸಲು ಮುನ್ನುಗ್ಗುತ್ತಾರೆ. ತದ ನಂತರ ಬೆಳ್ಳಿತೆರೆಯಲ್ಲಿ ಆ ಕರಳ ರಾತ್ರಿ ಎಂಬ ಸಿನಿಮಾದಲ್ಲಿ ನಟಿಸುತ್ತಾರೆ ಕೇವಲ ಇದು ಮಾತ್ರವಲ್ಲದೆ ಇನ್ನು ಹಲವಾರು ಸಿನಿಮಾದಲ್ಲಿ ಬಣ್ಣ ಹಚ್ಚುತ್ತಾರೆ ಯಶಸ್ಸು ಎಂಬುದು ಇವರ ಬೆನ್ನ ಹಿಂದೆಯೇ ಬರತೊಡಗುತ್ತದೆ. ಜೀವನದಲ್ಲಿ ಸಾಕಷ್ಟು ನೊಂದು ಬಿಂದು ಹೋಗಿದಂತಹ ಅನುಪಮಾ ಅವರಿಗೆ ಒಂದು ಭರವಸೆ ಎಂಬುವುದು ಬರುತ್ತದೆ. ಸದ್ಯಕ್ಕೆ ಯಾವುದೇ ರಿಯಾಲಿಟಿ ಶೋನಲ್ಲಿ ಭಾಗವಹಿಸದೆ ಇದ್ದರೂ ಕೂಡ ತಮ್ಮದೇ ಆದಂತಹ ಯೂಟ್ಯೂಬ್ ಚಾನೆಲ್ ಒಂದನ್ನು ತೆರೆದುಕೊಂಡಿದ್ದಾರೆ ಇದರ ಮೂಲಕ ಹಣವನ್ನು ಸಂಪಾದನೆ ಮಾಡುತ್ತಿದ್ದಾರೆ.

ಅನುಪಮ ಗೌಡ ಅವರಿಗೆ ಸ್ನೇಹಿತರ ಜೊತೆ ಹೆಚ್ಚು ಕಾಲ ಕಳೆಯುವುದು ಜಾಲಿ ರೈಡ್ ಹೋಗುವುದು ಟ್ರಿಪ್ ಮಾಡುವುದು ಎಂದರೆ ಬಹಳನೇ ಇಷ್ಟ. ಈ ಕಾರಣಕ್ಕಾಗಿ ತಿಂಗಳಿಗೆ ಒಂದು ಬಾರಿಯಾದರೂ ಕೂಡ ಯಾವುದಾದರೂ ವಿಶೇಷ ಪ್ರದೇಶಕ್ಕೆ ಸ್ನೇಹಿತರೊಟ್ಟಿಗೆ ಭೇಟಿ ನೀಡುತ್ತಾರೆ. ಅನುಪಮಾ ಗೌಡ ಅವರಿಗೆ ಟ್ರಾವೆಲಿಂಗ್ ಅಂದ್ರೆ ಕ್ರೇಜ್ ಅವರ ಬಳಿ ಇದ್ದ ಕ್ರೆಟ ಕಾರಿನಲ್ಲಿ ಸಾಕಷ್ಟು ಪ್ರಯಾಣ ಮಾಡಿದ್ದಾರೆ ಕಳೆದ ನಾಲ್ಕು ವರ್ಷಗಳಿಂದ ಅವರ ಬಳಿ ಇದ್ದ ಈ ಕಾರಿನಲ್ಲಿ ಹಲವು ಸ್ಥಳಗಳಿಗೆ ಭೇಟಿ ನೀಡಿದ್ದಾರೆ. ಆದರೆ ಗೆಳೆಯನಂತಿದ್ದ ತನ್ನ ಕಾರಿಗೆ ಇದೀಗ ಗುಡ್ ಬಾಯ್ ಹೇಳಿದ್ದಾರೆ ಅನುಪಮಾ ಹೌದು ಅನುಪಮಾ ಗೌಡ ಅವರ ಮನೆಗೆ ಹೊಸ ಅತಿಥಿಯ ಆಗಮನವಾಗಿದೆ. ತಮ್ಮ ಬಳಿ ಇದ್ದ ಕಾರನ್ನು ಮಾರಿ ಹೊಸ ಕಾರ್ ಖರೀದಿಸಿದ್ದಾರೆ ಕೆಂಪು ಕಪ್ಪು ಬಣ್ಣದ ಮಹೇಂದ್ರ ತಾರ್ ಕಾರನ್ನು ಅನುಪಮಾ ಗೌಡ ಖರೀದಿಸಿದ್ದು.

ಹಳೆಯ ಕಾರಿಗೆ ಗುಡ್ ಬಾಯ್ ಹೇಳಿ ಹೊಸ ಕಾರಿನೊಂದಿಗೆ ಇನ್ನು ತನ್ನ ಪ್ರಯಾಣ ಆರಂಭ ಅಂತ ಸಣ್ಣ ವಿಡಿಯೋ ಒಂದನ್ನ ಮಾಡಿ ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ. ಈ ಕಾರಿನ ಬೆಲೆ ಸುಮಾರು 17 ಲಕ್ಷಕ್ಕೂ ಅಧಿಕ ತಮ್ಮ ಸ್ವಂತ ದುಡಿಮೆಯಿಂದ ಹಂತ ಹಂತವಾಗಿ ಮೇಲೆ ಬರುತ್ತಿರುವ ಅನುಪಮಾ ಗೌಡ ಅವರ ಬಗ್ಗೆ ಸಾಕಷ್ಟು ಜನರಿಗೆ ಅಭಿಮಾನವಿದೆ. ನಟಿಯಾಗಿ ನಿರೂಪಕರಾಗಿ ಹಾಗೂ ಜಾಹೀರಾತಿನಲ್ಲಿಯೂ ಕೂಡ ಕಾಣಿಸಿಕೊಳ್ಳುವ ನಟಿ ಅನುಪಮಾ ಗೌಡ ಕರ್ನಾಟಕದ ಪ್ರಖ್ಯಾತ ಫೇಸ್‌ಗಳಲ್ಲಿ ಒಬ್ಬರು. ಸದ್ಯಕ್ಕೆ ಹೊಸ ಅತಿಥಿಯನ್ನು ಮನೆಗೆ ಬರ ಮಾಡಿಕೊಂಡ ಖುಷಿಯಲ್ಲಿ ನಟಿ ಅನುಪಮಾ ಗೌಡ ಅವರು ಇದ್ದಾರೆ. ಇನ್ಸ್ಟಾಗ್ರಾಮ್ ನಲ್ಲಿ ಈ ಕಾರಿನ ಫೋಟೋ ಮತ್ತು ವಿಡಿಯೋಗಳನ್ನು ಹಂಚಿಕೊಂಡಿದ್ದಾರೆ ಅನುಪಮಾ ಅವರು ಹೊಸ ಕಾರನ್ನು ಖರೀದಿ ಮಾಡಿದಕ್ಕಾಗಿ ಅಭಿಮಾನಿಗಳು ಶುಭಾಶಯಗಳು ಸಲ್ಲಿಸಿದ್ದಾರೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ.