ಅನುಶ್ರೀ ಸದ್ಯಕ್ಕೆ ಕಿರುತೆರೆ ಲೋಕದಲ್ಲಿ ನಂಬರ್ ಒನ್ ಆಂಕರ್ ಎನ್ನುವ ಪಟ್ಟಕ್ಕೆ ಏರಿರುವ ಕನ್ನಡದ ಜನಪ್ರಿಯ ನಿರೂಪಕಿ ಅರಳು ಉರಿದ ಹಾಗೆ ಕನ್ನಡ ಮಾತನಾಡುವ ಮಾತಿನ ಮಲ್ಲಿ. ಮಾತು ಮಾತಿನ ನಡುವೆ ಪಂಚ್ ಡೈಲಾಗ್ ಹೇಳಿ ಎಲ್ಲರನ್ನೂ ನಗಿಸುವ ಜಾಣೆ ಎಂತಹ ಕಾರ್ಯಕ್ರಮ ಆದರು ಕೊನೆವರೆಗೂ ಲವಲವಿಕೆಯಿಂದ ಇದ್ದು ಕಾರ್ಯಕ್ರಮ ಗೆಲ್ಲಿಸುವ ಗಟ್ಟಿಗಿತ್ತಿ. ಹುಟ್ಟಿದ್ದು ಮಂಗಳೂರಿನಲ್ಲಿ ಓದಿದ್ದು ಕಡಿಮೆ. ಚಿಕ್ಕ ವಯಸ್ಸಿನಲ್ಲಿ ತಂದೆಯಿಂದ ದೂರವಾದ ಕುಟುಂಬವಾದ ಕಾರಣ ತಮ್ಮ ಅಭಿಜಿತ್ ಹಾಗೂ ತಾಯಿ ಶಶಿಕಲಾ ಅವರ ಜವಾಬ್ದಾರಿ ಅನುಶ್ರೀ ಅವರ ಹೆಗಲಿಗೇರಿತ್ತು.
ಹೀಗಾಗಿ ಅತಿ ಬೇಗನೆ ಇವರು ಉದ್ಯೋಗದ ಕಡೆ ಮುಖ ಮಾಡಬೇಕಾಯಿತು. ಬಾಲ್ಯದಿಂದಲೂ ನಿರೂಪಕ್ಕೆ ಆಗುವ ಕನಸು ಕಾಡುತ್ತಿತ್ತು, ಹೀಗಾಗಿ ಸಣ್ಣಪುಟ್ಟ ಕೆಲಸ ಮಾಡುತ್ತಲೇ ಮಂಗಳೂರಿನ ಖಾಸಗಿ ವಾಹಿನಿಯಲ್ಲಿ ಚಿಕ್ಕದೊಂದು ಕಾರ್ಯಕ್ರಮಕ್ಕೆ ನಿರೂಪಕ್ಕೆ ಆಗಿ ಸೇರಿಕೊಂಡರು. ನಂತರ ಬೆಂಗಳೂರಿನತ್ತ ಬಂದ ಇವರಿಗೆ ತಮ್ಮ ಅದೃಷ್ಟದ ಬಾಗಿಲು ಅಲ್ಲಿಂದ ತೆರೆದುಕೊಂಡಿತ್ತು. ಈ ಟಿವಿಯಲ್ಲಿ ಪ್ರಸಾರವಾದ ಡಿಮ್ಯಾಂಡಪ್ಪ ಡಿಮ್ಯಾಂಡು ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿಕೊಟ್ಟ ಬಳಿಕ ಕನ್ನಡದ ಬಹುತೇಕ ಚಾನೆಲ್ಗಳು ಇವರನ್ನು ನಿರೂಪಕ್ಕೆ ಹಾಕಿ ಆಹ್ವಾನಿಸಿದವು.
ಅದರಲ್ಲೂ ಜೀ ಕನ್ನಡ ವಾಹಿನಿಯ ಸರಿಗಮಪ ಸರಣಿಗಳು ಅನುಶ್ರೀ ಅವರ ಯಶಸ್ಸಿಗೆ ಹಿಡಿದ ಕೈಗನ್ನಡಿ. ಇದುವರೆಗೆ ನಡೆದಿರುವ ಅಷ್ಟೂ ಸೀಸನ್ ಗಳನ್ನೂ ಕೂಡ ನಡೆಸಿಕೊಟ್ಟಿರುವ ಇವರು ಡಿಕೆಡಿ ಡ್ಯಾನ್ಸಿಂಗ್ ಶೋ ಮತ್ತು ಇದರ ಜೊತೆ ಜೀ ಕನ್ನಡದ ಉಳಿದ ಕಾರ್ಯಕ್ರಮಗಳನ್ನು ಕೂಡ ಹೋಸ್ಟ್ ಮಾಡಿದ್ದಾರೆ. ಅಲ್ಲದೆ ಖಾಸಗಿಯಾಗಿ ಕೆಲವು ಕಾರ್ಯಕ್ರಮಗಳು ರಾಜಕೀಯ ಕಾರ್ಯಕ್ರಮಗಳಲ್ಲೂ ಕೂಡ ಪಾಲ್ಗೊಳ್ಳುವ ಇವರು ಇಡೀ ಕರ್ನಾಟಕಕ್ಕೆ ಮನೆ ಮಗಳಂತೆ ಹತ್ತಿರವಾಗಿ ಬಿಟ್ಟಿದ್ದಾರೆ. ಇಂದು ಕಿರುತೆರೆ ಪ್ರತಿ ಪ್ರೇಕ್ಷಕರಿಗೂ ಕೂಡ ಅನುಶ್ರೀ ಒಬ್ಬ ಅಕ್ಕಳಾಗಿ, ಸ್ನೇಹಿತೆಯಾಗಿ ತಮ್ಮ ಎದುರು ಮನೆ ಹುಡುಗಿಯಂತೆ ಕಾಣುತ್ತಾರೆ.
ಸಿನಿಮಾಗಳಲ್ಲೂ ಕೂಡ ಅದೃಷ್ಟ ಪರೀಕ್ಷೆ ಮಾಡಿಕೊಂಡ ಇವರಿಗೆ ಬೆಳ್ಳಿತೆರೆ ಅಷ್ಟೊಂದು ಕೈ ಹಿಡಿಯಲಿಲ್ಲ. ಕೆಲವೊಂದು ಸಿನಿಮಾಗಳಲ್ಲಿ ಹಾಡುಗಳಿಗೆ ಹೆಜ್ಜೆ ಹಾಕಿ, ಕೆಲವೊಂದು ಸಿನಿಮಾಗಳಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿರುವ ಇವರು ಕಿರುತೆರೆಯಲ್ಲಿ ಮಿಂಚುತ್ತಿರುವ ಪ್ರತಿಭೆ. ಬಿಗ್ ಬಾಸ್ ಕಾರ್ಯಕ್ರಮದಲ್ಲೂ ಕೂಡ ಭಾಗವಹಿಸಿದ ಅನುಶ್ರೀ ಅವರು ಕನ್ನಡದ ಬಿಗ್ ಬಾಸ್ ಮೊದಲ ಆವೃತ್ತಿಯಲ್ಲಿಯೇ ಕಂಟೆಸ್ಟೆಂಟ್ ಆಗಿದ್ದರು. ಅಲ್ಲಿಂದಲೇ ಜನರು ಇವರ ವ್ಯಕ್ತಿತ್ವವನ್ನು ಇಷ್ಟಪಡಲು ಶುರು ಮಾಡಿದ್ದರು ಇಲ್ಲಿಯವರೆಗೆ ಸಾಲು ಸಾಲು ಗೆಲುವುಗಳನ್ನು ಕಂಡಿರುವ ಅನುಶ್ರೀ ಅವರು ಬದುಕಿನಲ್ಲಿ ಅಷ್ಟೇ ಕಷ್ಟದ ದಿನಗಳನ್ನು ಕೂಡ ಕಂಡಿದ್ದಾರೆ.
ಇಷ್ಟೆಲ್ಲ ಬ್ಯುಸಿ ಷೆಡ್ಯೂಲ್ ನಡುವೆ ತಮ್ಮದೇ ಆದ ಒಂದು ಖಾಸಗಿ ಯುಟ್ಯೂಬ್ ಚಾನೆಲ್ ಕೂಡ ಹೊಂದಿರುವ ಅವರು ಆಂಕರ್ ಅನುಶ್ರೀ ಎನ್ನುವ ಯೂಟ್ಯೂಬ್ ಚಾನೆಲ್ ಇಂದ ಕನ್ನಡದಲ್ಲಿ ಹೊಸ ರೀತಿಯ ಕಾರ್ಯಕ್ರಮಗಳನ್ನು ನೀಡುತ್ತಿದ್ದಾರೆ. ಇಷ್ಟೆಲ್ಲಾ ಸಾಧನೆ ಮಾಡಿದ ಮೇಲೆ ಅನುಶ್ರೀ ಅವರ ವೈಯಕ್ತಿಕ ಬದುಕಿನ ಬಗ್ಗೆ ಕೇಳುವುದಾದರೆ ಅವರು ಎಲ್ಲೇ ಹೋದರು ಅವರ ಮದುವೆಯ ಬಗ್ಗೆ ಎಲ್ಲರೂ ಪ್ರಶ್ನೆ ಮಾಡುತ್ತಾರೆ. ಹೀಗೆ ಇತ್ತೀಚೆಗೆ ಪಬ್ಲಿಕ್ ಟಿವಿ ಸಂದರ್ಶನದಲ್ಲಿ ಕೂಡ ಅದರ ಬಗ್ಗೆ ಪ್ರಶ್ನಿಸಲಾಗಿತ್ತು ಅದಕ್ಕೆ ಉತ್ತರ ನೀಡಿದ ಅನುಶ್ರೀ ಅವರು ಇನ್ನು ಬದುಕಿನಲ್ಲಿ ನೋಡುವುದು ಬಹಳಷ್ಟು ಇದೆ.
ಸಾಕಷ್ಟು ಪ್ರದೇಶಗಳಿಗೆ ನಾನು ಹೋಗಿಲ್ಲ ಇನ್ನೂ ನೂರಾರು ಊರುಗಳನ್ನು ಸುತ್ತಬೇಕಾಗಿದೆ ಹಾಗಾಗಿ ಇನ್ನೂ ಹತ್ತು ವರ್ಷಗಳವರೆಗೆ ಇದೇ ರೀತಿ ಇರುತ್ತೇನೆ ಎಂದು ಹೇಳಲು ಕೂಡ ಸಾಧ್ಯವಿಲ್ಲ. ಕಂಕಣ ಭಾಗ್ಯ ಕೂಡಿ ಬಂದಾಗ ಅದು ನಡೆದೇ ನಡೆಯುತ್ತದೆ ಆದರೆ ನಾನು ಮದುವೆ ಆಗುವ ಹುಡುಗ ಬೆಳ್ಳಗೆ ಇರಬಾರದು ಅವನಿಗೆ ಡ್ರೆಸ್ ಸೆನ್ಸ್ ಕೂಡ ಇರಬಾರದು ನಾನು ಹೇಳಿದ್ದಕ್ಕೆಲ್ಲ ಹೂ ಎನ್ನುವ ಹುಡುಗ ನನಗೆ ಬೇಡ, ನನ್ನನ್ನು ವಿರೋಧ ಮಾಡುವ ಹುಡುಗ ಬೇಕು ಆದರೆ ಅವನಿಗೆ ಹಾಡು ಕುಣಿತ ಬರಬೇಕು ಎಂದಿದ್ದಾರೆ.