ಕಿರುತೆರೆ ಲೋಕದಲ್ಲಿ ಮಹಿಳಾ ಆಂಕರ್ ಗಳ ಸಾಲಿನಲ್ಲಿ ನಂಬರ್ ಒನ್ ಸ್ಥಾನ ಪಡೆದಿರುವ ಅನುಶ್ರೀ ಅವರು ಈಗಾಗಲೇ ಅವರ ನಿರೂಪಣೆಯಿಂದ ಸಾಕಷ್ಟು ಮನಗಳನ್ನು ಗೆದ್ದಿದ್ದಾರೆ. ಇವರ ಮಾತು ನಗು ಪಂಚ್ ಡಾನ್ಸ್ ಕಾಮಿಡಿ ಎಲ್ಲವೂ ಕೂಡ ಜನರಿಗೆ ಬಹಳ ಇಷ್ಟ ಆಗಿದೆ ಹೀಗಾಗಿ ಸದಾ ಲವಲವಿಕೆಯಿಂದ ಎಲ್ಲರನ್ನು ನಗಿಸುತ್ತಾ ಕಾರ್ಯಕ್ರಮ ನಡೆಸಿಕೊಡುವ ಅನುಶ್ರೀ ಅವರು ತಮ್ಮ ನಿರೂಪಣೆಯಿಂದಲೇ ಹೆಚ್ಚು ಹೆಸರುವಾಸಿ. ಕಿರುತೆರೆಯ ರಿಯಾಲಿಟಿ ಶೋ ಗಳನ್ನು ನಡೆಸಿಕೊಡುವುದರ ಜೊತೆಗೆ ಕನ್ನಡ ಸಿನಿಮಾ ಇಂಡಸ್ಟ್ರಿಯ ಹಲವು ಕಾರ್ಯಕ್ರಮಗಳನ್ನು ಕೂಡ ಯಶಸ್ವಿಯಾಗಿ ನಡೆಸಿಕೊಟ್ಟಿರುವ ಖ್ಯಾತಿಗೆ ಅನುಶ್ರೀ ಹೆಸರಾಗಿದ್ದಾರೆ.
ಜೀ ಕನ್ನಡ ವಾಹಿನಿಯಲ್ಲಿ ಇವರಿಗೆ ಪಾಪ್ಯುಲರ್ ಆಂಕರ್ ಎನ್ನುವ ಪ್ರಶಸ್ತಿ ಕೂಡ ಸಂದಿದೆ. ಆದರೆ ಇತ್ತೀಚೆಗೆ ಅನುಶ್ರೀ ಅವರನ್ನು ಹಿಂದಿಕ್ಕಿ ಮತ್ತೊಬ್ಬ ಜೀ ಕನ್ನಡ ವಾಹಿನಿಯ ಮಹಿಳಾ ಆಂಕರ್ ಬಹಳ ಫೇಮಸ್ ಆಗುತ್ತಿದ್ದಾರೆ. ಅವರು ಬೇರೆ ಯಾರು ಅಲ್ಲ ಕಿರುತೆರೆಯ ಪಾಪುಲರ್ ಫೇಸ್ ಶ್ವೇತ ಚಂಗಪ್ಪ ಅವರು. ಶ್ವೇತ ಚೆಂಗಪ್ಪ ಅವರು ಕೊಡಗಿನ ಚೆಲುವೆ. ಮದುವೆ ಆಗಿ ಮಗನಿದ್ದರೂ ಕೂಡ ಯಾವುದೇ ನಟಿಗೂ ಕಡಿಮೆ ಇಲ್ಲದಂತೆ ಬ್ಯೂಟಿ ಮೆಂಟಲ್ ಮಾಡಿರುವ ಶ್ವೇತ ಚಂಗಪ್ಪ ಅವರು ಇನ್ನು ಕೂಡ 18 ರ ಯುವತಿಯಂತೆ ಕಾಣುತ್ತಾರೆ. ಇವರು ಈಗಾಗಲೇ ಕಾದಂಬರಿ ಎನ್ನುವ ಮೇಗಾ ದಾರವಾಹಿಯಲ್ಲಿ ನಟಿಸಿ ಇವರ ಹೆಸರನ್ನು ಶ್ವೇತ ಎನ್ನುವ ಬದಲು ಕಾದಂಬರಿ ಎಂದು ಜನ ಗುರುತಿಸುವಷ್ಟು ಪ್ರೇಕ್ಷಕರ ಮನಸಿಗೆ ಹತ್ತಿರವಾಗಿದ್ದಾರೆ.
ಈ ಧಾರಾವಾಹಿ ಮುಗಿದು ದಶಕಗಳೇ ಕಳೆದರೂ ಕೂಡ ಆ ಪಾತ್ರದ ಪಾಪುಲರಿಟಿ ಇನ್ನು ಕಡಿಮೆ ಆಗಿಲ್ಲ. ಇದಾದ ಬಳಿಕ ವರ್ಷ ತಂಗಿಗಾಗಿ ಇನ್ನು ಮುಂತಾದ ಸಿನಿಮಾಗಳಲ್ಲಿ ತಂಗಿ ಪಾತ್ರದಲ್ಲಿ ದರ್ಶನ್ ಮತ್ತು ವಿಷ್ಣುವರ್ಧನ್ ಅವರೊಂದಿಗೆ ಕಾಣಿಸಿಕೊಂಡಿದ್ದರು. ಆದರೆ ಬೆಳ್ಳಿತರೆ ಇವರ ಬದುಕಿಗೆ ಅಷ್ಟೊಂದು ಬೆಳಕು ತರಲಿಲ್ಲ ನಂತರ ಕಿರುತೆರೆ ಕಡೆಗೆ ಮುಖ ಮಾಡಿದ ಇವರು ಸಾಲಕ್ಕೊಂದು ಸಲಾಂ ಎನ್ನುವ ಮತ್ತು ಕುಣಿಯೋಣ ಬಾರ ಎನ್ನುವ ಡ್ಯಾನ್ಸಿಂಗ್ ಶೋ ಕೂಡ ನಡೆಸಿಕೊಟ್ಟರು. ಜೊತೆಗೆ ಕನ್ನಡದ ಮೂರನೇ ಆವೃತ್ತಿಯ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಕಂಟೆಸ್ಟೆಂಟ್ ಆಗಿ ಕೂಡ ಭಾಗವಹಿಸಿದ್ದರು.
ನಂತರ ಸುವರ್ಣ ವಾಹಿನಿಯಲ್ಲಿ ಡ್ಯಾನ್ಸ್ ಚಾಂಪಿಯನ್ಸ್ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಕಿರುತೆಯಲ್ಲಿ ಮತ್ತೊಮ್ಮೆ ಇವರಿಗೆ ಹೆಸರು ತಂದು ಕೊಟ್ಟಿದ್ದು ಇವರು ಮಜಾ ಟಾಕೀಸ್ ಅಲ್ಲಿ ಒಬ್ಬ ಹಾಸ್ಯಗಾರ್ತಿಯಾಗಿ ಕಾಣಿಸಿಕೊಂಡಿದ್ದು. ಮಜಾ ಟಾಕೀಸ್ ಕಾರ್ಯಕ್ರಮದಲ್ಲಿ ಸೃಜನ್ ಅವರ ಪೇರ್ ಆಗಿ ರಾಣಿ ಎನ್ನುವ ಪಾತ್ರದಲ್ಲಿ ಶ್ವೇತ ಚಂಗಪ್ಪ ಅವರು ಜನರಿಗೆ ಬಹಳ ಇಷ್ಟ ಆಗಿದ್ದರು. ಸದ್ಯಕ್ಕೆ ತಮ್ಮ ಬಿಸಿನೆಸ್ ಹಾಗೂ ಯೌಟ್ಯೂಬ್ ಚಾನೆಲ್ ಜೊತೆಗೆ ಝೀ ಕನ್ನಡ ವಾಹಿನಿಯ ಮತ್ತೊಂದು ಹೆಸರಾಂತ ರಿಯಾಲಿಟಿ ಶೋ ಜೋಡಿ ನಂಬರ್ ಒನ್ ಕಾರ್ಯಕ್ರಮವನ್ನು ನಿರೂಪಣೆ ಮಾಡುತ್ತಿದ್ದಾರೆ.
ಈ ಶೋಗೆ ಸಂಭಾವನೆ ಆಗಿ ಪ್ರತಿ ಎಪಿಸೋಡಿಗೆ ಅನುಶ್ರೀ ಅವರು ಪಡೆಯುತ್ತಿದ್ದ ಸಂಭಾವನೆಗಿಂತ ಹೆಚ್ಚು ಹಣವನ್ನು ಶ್ವೇತ ಚಂಗಪ್ಪ ಪಡೆಯುತ್ತಿದ್ದಾರೆ ಎನ್ನುವ ಸುದ್ದಿಗಳು ಕೂಡ ಹರಿದಾಡುತ್ತಿವೆ. ಹೌದು ಅನುಶ್ರೀ ಅವರು ಒಂದು ಎಪಿಸೋಡ್ ನಡೆಸುವುದಕ್ಕೆ ಸುಮಾರು 80 ರಿಂದ ಒಂದು ಲಕ್ಷ ರೂಪಾಯಿ ಸಂಬಾವನೆ ಪಡೆಯುತ್ತಾರೆ. ಆದರೆ ಶ್ವೇತ ಚಂಗಪ್ಪನವರು ಒಂದು ಲಕ್ಷಕ್ಕೂ ಅಧಿಕ ಸಂಭವನೆ ಪಡೆಯುತ್ತಿದ್ದಾರಂತೆ ಅಲ್ಲದೆ ಇವರು ಬಹಳ ಚೆನ್ನಾಗಿ ಕಾರ್ಯಕ್ರಮ ನಡೆಸಿಕೊಡುತ್ತಿರುವ ಕಾರಣ ಅನುಶ್ರೀ ಅವರಿಗೆ ಇವರು ಕಾಂಪಿಟೇಶನ್ ಅಗಲಿದ್ದಾರೆ ಎನ್ನುವ ಮಾತುಗಳನ್ನು ಕೂಡ ಜನ ಆಡುತ್ತಿದ್ದಾರೆ. ಸೌಂದರ್ಯದ ಜೊತೆಗೆ ಟ್ಯಾಲೆಂಟ್ ಎಂದಿಗೂ ಒಟ್ಟಿಗೆ ಇರುವುದಿಲ್ಲ ಎನ್ನುತ್ತಾರೆ ಅದಕ್ಕೆ ಅನ್ವರ್ಥದ ರೀತಿ ಇದ್ದರೆ ಶ್ವೇತ ಚಂಗಪ್ಪ ಅವರು. ನಿಮ್ಮ ಪ್ರಕಾರ ಬೆಸ್ಟ್ ಆಂಕರ್ ಯಾರು ಅನುಶ್ರೀನ ಅಥವಾ ಶ್ವೇತಾ ಚಂಗಪ್ಪನ ತಪ್ಪದೆ ಕಾಮೆಂಟ್ ಮುಖಾಂತರ ತಿಳಿಸಿ.