ತಿರುಪತಿ ತಿಮ್ಮಪ್ಪನ ಸನ್ನಿಧಿಯೂ ಹಿಂದೂಗಳ ಪಾಲಿಗೆ ಬಹಳ ಪವಿತ್ರವಾದ ಸ್ಥಳ ಭಾರತದಲ್ಲಿ ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಭೇಟಿ ಕೊಡುವ ಕ್ಷೇತ್ರವಾಗಿರುವ ತಿರುಪತಿಯು ಆಂಧ್ರಪ್ರದೇಶದ ಚಿತ್ತೂರಿನಲ್ಲಿದೆ. ತಿರುಪತಿಯಲ್ಲಿ ಬಾಲಾಜಿ ದರ್ಶನವನ್ನು ಪಡೆಯಲು ಪ್ರತಿದಿನ ಲಕ್ಷಾಂತರ ಜನರು ಹೋಗುತ್ತಾರೆ.
ನಿತ್ಯ ದರ್ಶನದ ಭಾಗ್ಯ ಸಿಕ್ಕರೂ ಆ ಅವಕಾಶವನ್ನು ಕೂಡ ಯಾರು ಬಿಟ್ಟು ಕೊಡುವುದಿಲ್ಲ. ಹೀಗೆ ನಾನಾ ವಿಷಯಗಳಿಂದ ದೇಶ ಮಾತ್ರವಲ್ಲದೆ ಪ್ರಪಂಚದ ಗಮನವನ್ನು ಸೆಳೆದಿರುವ ಈ ಜಾಗಕ್ಕೆ ದೇಶದ ಮೂಲೆ ಮೂಲೆಗಳಿಂದ ಬರುವ ಜನರಿಗೆ ಸುವ್ಯವಸ್ಥೆಯನ್ನು ಅಲ್ಲಿನ ದೇವಸ್ಥಾನದ ಆಡಳಿತ ಮಂಡಳಿ ಕಲ್ಪಿಸಿಕೊಟ್ಟಿದೆ.
TTD ಈ ಮೂಲಕ ಸಾವಿರಾರು ಜನರಿಗೆ ಉದ್ಯೋಗಾವಕಾಶವನ್ನು ಕೂಡ ನೀಡಿದೆ ನಮಗೂ ಹೀಗೆ ವೆಂಕಟೇಶ್ವರ ಸ್ವಾಮಿಯ ಸನ್ನಿಧಾನದಲ್ಲಿ ಉದ್ಯೋಗ ಮಾಡುತ್ತ ಸೇವೆ ಸಲ್ಲಿಸಿ ಪುಣ್ಯ ಕಟ್ಟಿಕೊಳ್ಳುವ ಭಾಗ್ಯ ದೊರಕಿದರೆ ಹೇಗಿರುತ್ತೆ ಎಂದುಕೊಂಡವರಿಗೆ ಇದು ಸಕಾಲ. ಯಾಕೆಂದರೆ ತಿರುಪತಿಯಲ್ಲಿ ಉಸ್ತುವಾರಿಯನ್ನು ನೋಡಿಕೊಳ್ಳುವ TTD ಈಗ ಅಧಿಕೃತ ಅಧಿಸೂಚನೆ ಹೊರಡಿಸಿ ತನ್ನಲ್ಲಿ ಖಾಲಿ ಇರುವ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳುವ ಬಗ್ಗೆ ಪ್ರಕಟಿಸಿದೆ.
ಪ್ರತಿಯೊಂದು ಹುದ್ದೆಗೂ ಕೂಡ ಶೈಕ್ಷಣಿಕ ವಿದ್ಯಾರ್ಹತೆ ಜೊತೆಗೆ ಇನ್ನಿತರ ಮಾನದಂಡಗನ್ನೂ ವಿಧಿಸಲಾಗಿದೆ. ಇವುಗಳನ್ನು ಪೂರೈಸುವ ಅಭ್ಯರ್ಥಿಗಳು ಗೋವಿಂದನ ಸನ್ನಿಧಾನದಲ್ಲಿ ಕೆಲಸ ಮಾಡಬಹುದು ಮತ್ತು ಆಕರ್ಷಣೀಯ ವೇತನದ ಸೌಕರ್ಯವೂ ಇದೆ. ಈ ಅವಕಾಶ ಸಾವಿರಾರು ಜನರ ಕನಸು. ನಿಮಗೂ ಕೂಡ ಇದೆ ಇಂತಹದೊಂದು ಆಸಕ್ತಿ ಇದ್ದರೆ ನಿಮಗಾಗಿ ಈ ಹುದ್ದೆಯ ಕುರಿತು ಹೆಚ್ಚಿನ ಮಾಹಿತಿ ಹೀಗಿದೆ ನೋಡಿ…
ಉದ್ಯೋಗ ಸಂಸ್ಥೆ:- TTD
ಹುದ್ದೆಗಳು:- ವಿವಿಧ ಇಂಜಿನಿಯರ್ ಹುದ್ದೆಗಳು
ಹುದ್ದೆಗಳ ವಿಂಗಡಣೆ:-
* EAA Civil – 27 ಹುದ್ದೆಗಳು
* OBC 12 ಹುದ್ದೆಗಳು
* BCA 2 ಹುದ್ದೆಗಳು
* BCB 2 ಹುದ್ದೆಗಳು
* BCD 2 ಹುದ್ದೆಗಳು
* SC 5 ಹುದ್ದೆಗಳು
* ST 2 ಹುದ್ದೆಗಳು
* EWSC 2 ಹುದ್ದೆಗಳು.
ಒಟ್ಟು ಹುದ್ದೆಗಳ ಸಂಖ್ಯೆ:- 56
ಉದ್ಯೋಗ ಸ್ಥಳ:- ತಿರುಪತಿ ತಿರುಮಲ ದೇವಸ್ಥಾನ, ಚಿತ್ತೂರು, ಆಂಧ್ರಪ್ರದೇಶ.
ವೇತನ ಶ್ರೇಣಿ:- 48,440 ರಿಂದ 1,37,220 ಮಾಸಿಕವಾಗಿ…
ಶೈಕ್ಷಣಿಕ ಅರ್ಹತೆಗಳು:-
ಅಭ್ಯರ್ಥಿಗಳು ಸಿವಿಲ್, ಮೆಕ್ಯಾನಿಕಲ್ ವಿಭಾಗದಲ್ಲಿ ಇಂಜಿನಿಯರಿಂಗ್ ಮುಗಿಸಿರಬೇಕು.
ವಯೋಮಿತಿ:-
* ಅರ್ಜಿ ಸಲ್ಲಿಸಲು ಕನಿಷ್ಠ ವಯೋಮಿತಿ 28 ವರ್ಷಗಳು
* ಅರ್ಜಿ ಸಲ್ಲಿಸಲು ಗರಿಷ್ಠ ವಯೋಮಿತಿ 42ವರ್ಷಗಳು.
ಅರ್ಜಿ ಶುಲ್ಕ:- ಅರ್ಜಿ ಸಲ್ಲಿಸಲು ಯಾವುದೇ ರೀತಿ ಶುಲ್ಕ ಇರುವುದಿಲ್ಲ.
ಅರ್ಜಿ ಸಲ್ಲಿಸುವ ವಿಧಾನ:-
* TTD ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ, ಮತ್ತೊಮ್ಮೆ ಅಧಿಸೂಚನೆಯಲ್ಲಿರುವ ಎಲ್ಲಾ ವಿವರಗಳನ್ನು ಸರಿಯಾಗಿ ಓದಿ.
* ಅರ್ಜಿ ಸಲ್ಲಿಸಲು ಇರುವ ಲಿಂಕ್ ಕ್ಲಿಕ್ ಮಾಡಿ, ಕೇಳಿರುವ ಎಲ್ಲಾ ವಿವರಗಳನ್ನು ಸರಿಯಾಗಿ ಭರ್ತಿ ಮಾಡಿ, ಅಭ್ಯರ್ಥಿ ವಯಸ್ಸು ಹಾಗೂ ವಿದ್ಯಾರ್ಹತೆಗೆ ಸಂಬಂಧಿಸಿದ ದಾಖಲೆಗಳ ಪ್ರತಿಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಿ.
* ಅರ್ಜಿ ಸಲ್ಲಿಕೆ ಪೂರ್ತಿ ಆದ ಬಳಿಕ ತಪ್ಪದೇ ಅರ್ಜಿ ಸ್ವೀಕೃತಿ ಪತ್ರ ತೆಗೆದುಕೊಳ್ಳಿ, ಮುಂದಿನ ಹಂತಗಳಲ್ಲಿ ಇದು ಬೇಕಾಗುತ್ತದೆ.
ಆಯ್ಕೆ ವಿಧಾನ:-
* ದಾಖಲೆಗಳ ಪರಿಶೀಲನೆ
* ಸಂದರ್ಶನ
ವೆಬ್ಸೈಟ್ ವಿಳಾಸ: https://ttdrecruitment.aptonline.in
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:- 23 ನವೆಂಬರ್, 2023.