ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ದೊಡ್ಡಮನೆಯ ರಾಜಕುಮಾರನಂತೆ ಬದುಕಿ ಉಳಿದಂತೆ ಕರ್ನಾಟಕದ ಮನೆಮನೆಗಳಲ್ಲೂ ಮುದ್ದು ಮಗನಂತೆ ಪ್ರೀತಿ ಪಡೆದು ಅಪ್ಪು ಎಂದು ಕರೆಸಿಕೊಂಡರು. ಪುನೀತ್ ರಾಜ್ ಕುಮಾರ್ ಅವರು ಬಾಲ್ಯದಿಂದಲೇ ಸಿನಿಮಾಗಳಲ್ಲಿ ಅಭಿನಯಿಸಿದ ಕಾರಣದಿಂದಲೋ ಅಥವಾ ಅವರು ಎಲ್ಲರ ಹೃದಯಕ್ಕೂ ಹತ್ತಿರ ಇರುವ ಕಾರಣವೋ ಗೊತ್ತಿಲ್ಲ ಪ್ರತಿಯೊಬ್ಬರಿಗೂ ಸಹ ಇವರು ತಮ್ಮ ಮನೆ ಮಗನೆಂದೇ ಎನಿಸುತ್ತಾರೆ. ಪುನೀತ್ ರಾಜ್ ಕುಮಾರ್ ಅವರು ಅವರ ತಂದೆಯ ಜೊತೆ ಸಿನಿಮಾಗಳಲ್ಲಿ ಅಭಿನಯಿಸಲು ಶುರುಮಾಡಿ ನಂತರ ಆಗಿನ ಕಾಲದಲ್ಲೇ ಅಷ್ಟು ಚಿಕ್ಕ ವಯಸ್ಸಿನಲ್ಲಿಯೇ ತಾವು ಎಂತಹ ಅದ್ಭುತ ಕಲಾವಿದ ಎಂಬುದನ್ನು ನಿರೂಪಿಸಿ ಆ ದಿನಗಳಲ್ಲಿ ಬಹಳ ಬೇಡಿಕೆ ಇದ್ದ ಬಾಲನಟ ಆಗಿದ್ದರು. ಅವರು ಅಭಿನಯಿಸಿದ್ದ ಒಂದೊಂದು ಸಿನಿಮಾಗಳು ಕೂಡ ತುಂಬಾ ಅದ್ಭುತವಾದ ಕಥೆಗಳನ್ನು ಹೊಂದಿದ್ದವು, ಜೊತೆಗೆ ಪುನೀತ್ ಅವರ ಅಭಿನಯವು ಸಹ ಮೋಡಿ ಮಾಡುವಂತೆ ಇತ್ತು. ಪುನೀತ್ ರಾಜ್ ಕುಮಾರ್ ಅವರು ಪ್ರೇಮದ ಕಾಣಿಕೆ ಎನ್ನುವ ಸಿನಿಮಾದಲ್ಲಿ ಮೊದಲಬಾರಿಗೆ ಕಾಣಿಸಿಕೊಂಡರು. ನಂತರ ಡಾಕ್ಟರ್ ರಾಜಕುಮಾರ್ ಅವರ ಜೊತೆ ಚಲಿಸುವ ಮೋಡಗಳು, ಯಾರಿವನು, ಎರಡು ನಕ್ಷತ್ರಗಳು, ಭಕ್ತ ಪ್ರಹ್ಲಾದ, ಪರಶುರಾಮ, ವಸಂತಗೀತ ಸೇರಿದಂತೆ ಹಲವಾರು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಇದಲ್ಲದೆ ಬೆಟ್ಟದ ಹೂವು ಭಾಗ್ಯವಂತ ಮುಂತಾದ ಸಿನಿಮಾಗಳಲ್ಲಿ ಕೂಡ ತಮ್ಮ ಅದ್ಬುತ ನಟನೆಯಿಂದ ಎಲ್ಲರ ಮನಗೆದ್ದಿದ್ದಾರೆ.
ರಾಜ್ ಕುಮಾರ್ ಅವರು ಬಾಲ್ಯದಲ್ಲಿ ನಟಿಸಿದ್ದ ಬೆಟ್ಟದ ಹೂವು ಎನ್ನುವ ಸಿನಿಮಾಕ್ಕೆ ರಾಷ್ಟ್ರಪ್ರಶಸ್ತಿಯನ್ನು ಕೂಡ ಪಡೆದಿದ್ದರು. ಪುನೀತ್ ರಾಜ್ ಕುಮಾರ್ ಅವರು ಬಾಲನಟನಾಗಿ ಸುಮಾರು 29 ಕ್ಕಿಂತಲೂ ಹೆಚ್ಚು ಸಿನಿಮಾಗಳಲ್ಲಿ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿ ಕನ್ನಡ ಚಲನಚಿತ್ರರಂಗದ ಇತಿಹಾಸದಲ್ಲಿ ತನ್ನದೇ ಆದ ಒಂದು ವಿಭಿನ್ನ ರೀತಿಯ ಛಾಪನ್ನು ಮೂಡಿಸಿದ್ದಾರೆ. ನಂತರ ಕೆಲವು ವರ್ಷಗಳವರೆಗೆ ಸಿನಿಮಾದಿಂದ ಬ್ರೇಕ್ ತೆಗೆದುಕೊಂಡಿದ್ದ ಪುನೀತರಾಜಕುಮಾರ್ ಅವರು ಆ ಸಮಯದಲ್ಲಿ ತಮ್ಮದೇ ಕುಟುಂಬದ ಪ್ರೊಡಕ್ಷನ್ ಆದ ವಜ್ರೇಶ್ವರಿ ಕಂಬೈನ್ಸ್ ಉಸ್ತುವಾರಿಯನ್ನು ನೋಡಿಕೊಳ್ಳುತ್ತಿದ್ದರು. ತಾಯಿಯಾದ ಪಾರ್ವತಮ್ಮ ರಾಜಕುಮಾರ್ ಅವರು ವಜ್ರೇಶ್ವರಿ ಕಂಬೈನ್ಸ್ ನಿರ್ಮಾಪಕಿ ಆದ್ದರಿಂದ ತಾಯಿಯ ಕೆಲಸಗಳಿಗೆ ಕೈಜೋಡಿಸುವ ನಿರ್ಧಾರ ಮಾಡಿ ಅವರ ಸಹಾಯಕ್ಕೆ ಇದ್ದರು. ಹಲವು ವರ್ಷಗಳ ನಂತರ ಮತ್ತೆ ಪುನೀತ್ ರಾಜಕುಮಾರ್ ಅವರು ಅಪ್ಪು ಎನ್ನುವ ಸಿನಿಮಾದ ಮೂಲಕ ಕನ್ನಡ ಸಿನಿಮಾ ರಂಗದಲ್ಲಿ ನಾಯಕನಟನಾಗಿ ಮಿಂಚಲು ಸಿದ್ಧರಾದರು. ಆ ಸಿನಿಮಾವು ಕೂಡ ಅದ್ಭುತವಾಗಿ ಯಶಸ್ಸನ್ನು ಕಂಡು ಮುಂದೆ ಪುನೀತ್ ರಾಜಕುಮಾರ್ ಅವರು ಕೂಡ ಒಬ್ಬ ಭರವಸೆಯ ನಾಯಕ ಎನ್ನುವ ಭರವಸೆಯು ಆ ಸಿನಿಮಾದ ಮೂಲಕ ಸಿಕ್ಕಿತ್ತು. ತದ ನಂತರ ಪುನೀತ್ ರಾಜಕುಮಾರ್ ಅವರು ನಾಯಕನಟನಾಗಿ ಕನ್ನಡದ ಹಲವಾರು ಸಿನಿಮಾಗಳಲ್ಲಿ ನಟಿಸಿ ಕನ್ನಡಕ್ಕೆ ಹಲವು ಬ್ಲಾಕ್ಬಸ್ಟರ್ ಸಿನಿಮಾ ಗಳನ್ನು ನೀಡಿದ್ದರು.
ಪುನೀತ್ ರಾಜಕುಮಾರ್ ಅವರು ನಟಿಸಿದ್ದ ಅಪ್ಪು, ಅಭಿ, ಆಕಾಶ್, ಅಜಯ್, ಮೌರ್ಯ, ಬಿಂದಾಸ್, ಅರಸು, ವೀರ ಕನ್ನಡಿಗ, ಮಿಲನ, ಪೃಥ್ವಿ, ಮೈತ್ರಿ, ಪವರ್, ಜಾಕಿ, ರಾಮ್, ರಾಜ್, ಯಾರೇ ಕೂಗಾಡಲಿ, ಹುಡುಗರು, ದೊಡ್ಮನೆ ಹುಡುಗ, ಅಂಜನಿಪುತ್ರ, ನಟಸಾರ್ವಭೌಮ, ಚಕ್ರವ್ಯೂಹ, ರಣವಿಕ್ರಮ, ರಾಜಕುಮಾರ, ಯುವರತ್ನ ಸೇರಿದಂತೆ ಹಲವಾರು ಸಿನಿಮಾಗಳಲ್ಲಿ ಅಭಿನಯಿಸಿದ್ದರು. ಅವರು ಅಭಿನಯಿಸಿದ ಬಹುತೇಕ ಎಲ್ಲಾ ಸಿನಿಮಾಗಳು ಕೂಡ ಸೂಪರ್ ಹಿಟ್ ಸಿನಿಮಾಗಳೇ ಆಗಿವೆ. ಇದರ ಜೊತೆ ಪುನೀತ್ ರಾಜಕುಮಾರ್ ಅವರು ಕನ್ನಡ ಕಿರುತೆರೆಯಲ್ಲಿ ಕೂಡ ನಿರೂಪಕರಾಗಿ ಕಾಣಿಸಿಕೊಂಡು ಕೆಲವು ರಿಯಾಲಿಟಿ ಶೋಗಳನ್ನು ಹೋಸ್ಟ್ ಕೂಡ ಮಾಡಿದ್ದರು. ಕನ್ನಡದ ಕೋಟ್ಯಾಧಿಪತಿ ಮತ್ತು ಫ್ಯಾಮಿಲಿ ಪವರ್ ಎನ್ನುವ ಕಿರುತೆರೆಯ 2 ಕಾರ್ಯಕ್ರಮಗಳನ್ನು ಪುನೀತ್ ರಾಜಕುಮಾರ್ ಅವರು ನಡೆಸಿಕೊಡುವ ಮೂಲಕ ಕಿರುತೆರೆಯ ಅಭಿಮಾನಿಗಳ ಮನಸ್ಸನ್ನು ಕೂಡ ಗೆದ್ದಿದ್ದರು. ಇದಲ್ಲದೆ ಇವರು ಹೊಂದಿದ್ದ ಸಾಮಾಜಿಕ ಕಳಕಳಿಯಿಂದ ಹಲವಾರು ಸಮಾಜಮುಖಿ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಅನಾಥಾಶ್ರಮಗಳು ವೃದ್ಧಾಶ್ರಮಗಳು ಶಕ್ತಿಧಾಮ ಗೋಶಾಲೆ ಇವುಗಳಿಗೆಲ್ಲಾ ಪುನೀತ್ ರಾಜಕುಮಾರ್ ಅವರು ಅಪಾರ ಪ್ರಮಾಣದಲ್ಲಿ ಕೊಡುಗೆ ನೀಡಿದ್ದಾರೆ. ಅಲ್ಲದೆ ಪಿಆರ್ಕೆ ಪ್ರೊಡಕ್ಷನ್ಸ್ ಕೂಡ ಶುರು ಮಾಡಿ ಆ ಮೂಲಕ ಹೊಸ ಪ್ರತಿಭೆಗಳಿಗೆ ಅವಕಾಶ ಕೊಡುವ ಕೆಲಸವನ್ನು ಮಾಡುತ್ತಿದ್ದಾರೆ ಇವರ ಎಲ್ಲಾ ಕಾರ್ಯಗಳಿಗೂ ಕುಟುಂಬದ ಸಹಕಾರ ಇದ್ದೇ ಇರುತ್ತದೆ.
ಇದರಲ್ಲಿ ಪ್ರಮುಖವಾಗಿ ಪುನೀತ್ ರಾಜಕುಮಾರ್ ಅವರ ಪತ್ನಿ ಅಶ್ವಿನಿ ಅವರು. ಅಶ್ವಿನಿ ಹಾಗೂ ಪುನೀತ್ ರಾಜಕುಮಾರ್ ಅವರು ಪ್ರೀತಿಸಿ ಮದುವೆಯಾಗಿದ್ದರು. ಪುನೀತ್ ರಾಜಕುಮಾರ್ ಅವರ ಅಪ್ಪು ಸಿನಿಮಾದಲ್ಲಿ ಅಭಿನಯಿಸುವ ಮೊದಲೇ ಇವರಿಬ್ಬರಿಗೂ ವಿವಾಹವಾಗಿತ್ತು. ಪುನೀತ್ ರಾಜಕುಮಾರ್ ಹಾಗೂ ಅಶ್ವಿನಿ ದಂಪತಿಗೆ ಧೃತಿ ಹಾಗೂ ವಂದನ ಎನ್ನುವ ಮುದ್ದಾದ ಹೆಣ್ಣು ಮಕ್ಕಳಿದ್ದಾರೆ. ವಂದನ ಅವರು ತಾಯಿಯ ಜೊತೆ ಬೆಂಗಳೂರಿನಲ್ಲೇ ವಾಸವಾಗಿದ್ದು ಈ ಬಾರಿ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಉತ್ತಮ ಅಂಕಗಳೊಂದಿಗೆ ತೇರ್ಗಡೆಯಾಗಿದ್ದಾರೆ. ದೃತಿ ಕೂಡ ವಿದ್ಯಾಭ್ಯಾಸದಲ್ಲಿ ತುಂಬಾ ಮುಂದೆ ಇದ್ದು ಸ್ಕಾಲರ್ಶಿಪ್ ಪಡೆದು ವಿದೇಶದಲ್ಲಿ ತಮ್ಮ ವಿದ್ಯಾಭ್ಯಾಸವನ್ನು ಮುಂದುವರಿಸುತ್ತಿದ್ದಾರೆ. ಧೃತಿ ಅವರು ವಿದೇಶದಲ್ಲಿಯ ತಮ್ಮ ಜೀವನಶೈಲಿಯ ಬಗ್ಗೆ ಹಲವಾರು ಫೋಟೋಗಳನ್ನು ಆಗಾಗ ಶೇರ್ ಮಾಡುತ್ತಿರುತ್ತಾರೆ. ಕ್ರೀಡಾ ಚಟುವಟಿಕೆಗಳಲ್ಲಿ ಆಸಕ್ತಿ ಬೆಳೆಸಿಕೊಂಡಿರುವ ಇವರು ತಂದೆ ರೀತಿಯಲ್ಲೇ ಪರಿಸರದ ಬಗ್ಗೆ ಅಪಾರ ಕಾಳಜಿ ಹೊಂದಿದ್ದಾರೆ. ಇದಕ್ಕೆ ಸಂಬಂಧಪಟ್ಟ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುವ ಫೋಟೋಗಳನ್ನು ಕೂಡ ಅಪ್ಲೋಡ್ ಮಾಡುತ್ತಿರುತ್ತಾರೆ ಇದರ ಜೊತೆಗೆ ತಮ್ಮ ಸ್ನೇಹಿತೆಯರ ಜೊತೆ ಸಮಯ ಕಳೆಯುವ ಫೋಟೋವನ್ನು ಕೂಡ ಹಂಚಿಕೊಳ್ಳುತ್ತಾರೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೆ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ ಹಾಗೇ ಈ ಮಾಹಿತಿಯನ್ನು ಶೇರ್ & ಲೈಕ್ ಮಾಡಿ ಧನ್ಯವಾದಗಳು ಸ್ನೇಹಿತರೆ.