ಅಪ್ಪು ಇದೊಂದು ಹೆಸರಲ್ಲ ಶಕ್ತಿ ಶಕ್ತಿಗಿಂತಲೂ ಮನಸ್ಸಿಗೆ ಬಹಳ ಹತ್ತಿರವಾದಂತಹ ಹೆಸರು ಅಂತ ಹೇಳಿದರೆ ತಪ್ಪಾಗಲಾರದು ಅಪ್ಪು ಅವರು ನಮ್ಮನ್ನು ಬಿಟ್ಟು ಹೋಗಿ 10 ತಿಂಗಳ ಕಳೆಯುತ್ತಾ ಬಂದಿದೆ. ಈ 10 ತಿಂಗಳಲ್ಲಿ ಅಪ್ಪು ಅವರನ್ನು ನಾವು ಸ್ಮರಿಸಿಕೊಳ್ಳದ ನೆನಪಿಸಿಕೊಳ್ಳದ ದಿನವೇ ಇಲ್ಲ ಅಂತ ಹೇಳಬಹುದು. ಪ್ರತಿನಿತ್ಯವೂ ಪ್ರತಿಕ್ಷಣವೂ ಒಂದಲ್ಲ ಒಂದು ವಿಚಾರಕ್ಕೆ ನಾವು ನೆನಪಿಸಿಕೊಳ್ಳುತ್ತಲೇ ಇರುತ್ತೇವೆ. ಅಪ್ಪು ಅವರು ಮಾಡಿರುವಂತಹ ದಾನ ಧರ್ಮದ ಬಗ್ಗೆ ಹೆಚ್ಚಾಗಿ ಹೇಳಬೇಕಾದಂತಹ ಅಗತ್ಯ ಇಲ್ಲ ಏಕೆಂದರೆ ಅಪ್ಪು ಅವರು ಬದುಕಿದ್ದಾಗ ಈ ವಿಚಾರ ಎಲ್ಲಿಯೂ ಹೊರ ಬಂದಿರಲಿಲ್ಲ ಆದರೆ ಅಪ್ಪು ಅವರು ನಮ್ಮೆಲ್ಲರನ್ನು ಬಿಟ್ಟು ಅ.ಗ.ಲಿ ಹೋದ ನಂತರ.
ಪ್ರತಿನಿತ್ಯವೂ ಕೂಡ ಒಬ್ಬರಲ್ಲ ಒಬ್ಬರು ಅಭಿಮಾನಿಗಳಾಗಿರಬಹುದು ಚಿತ್ರರಂಗಕ್ಕೆ ಸಂಬಂಧಪಟ್ಟಂತಹ ವ್ಯಕ್ತಿಗಳ ಆಗಿರಬಹುದು ಅಥವಾ ಸಮಾಜ ಸೇವಕರಾಗಿರಬಹುದು ಎಲ್ಲರೂ ಕೂಡ ಅಪ್ಪು ನಮಗೆ ಇಂತಹ ಸಹಾಯ ಮಾಡಿದ್ದಾರೆ ಎಂದು ಎಲ್ಲಾ ಕಡೆ ಹೇಳಿಕೊಂಡು ಬರುತ್ತಿದ್ದಾರೆ. ಇದರಿಂದಲೇ ನಮಗೆ ತಿಳಿಯುತ್ತದೆ ಅಪ್ಪು ಅವರು ದಾನ ಧರ್ಮ ಮಾಡುವುದರಲ್ಲಿ ಎತ್ತಿದ ಕೈ ಅಂತ. ಇನ್ನು ಸಾಕಷ್ಟು ಜನರಿಗೆ ತಿಳಿದಿಲ್ಲ ಅಪ್ಪು ಅವರು ದಾನ ಧರ್ಮಕ್ಕೆ ಅಂತ ಎಷ್ಟು ಮೀಸಲಿಡುತ್ತಿದ್ದರು ಅಂತ ನಿಮಗೆ ಗೊತ್ತಿಲ್ಲದ ಒಂದು ವಿಚಾರವನ್ನು ಹೇಳುತ್ತಿದ್ದೇವೆ. ನಿಮ್ಮೆಲ್ಲರಿಗೂ ತಿಳಿದಿರುವಂತೆ ಅಪ್ಪು ಅವರು ಕನ್ನಡದ ಕೋಟ್ಯಾಧಿಪತಿ ಎಂಬ ಕಾರ್ಯಕ್ರಮವನ್ನು ನಡೆಸಿಕೊಡುತ್ತಿದ್ದರು.
ಈ ಕಾರ್ಯಕ್ರಮದಿಂದ ಇವರಿಗೆ ಸುಮಾರು 8 ಕೋಟಿ ರೂಪಾಯಿ ಸಂಭಾವನೆ ಬರುತ್ತಿತ್ತು ಈ ಎಂಟು ಕೋಟಿ ಸಂಭಾವನೆಯಲ್ಲಿ ಒಂದು ರೂಪಾಯಿಯೂ ಕೂಡ ಅವರು ತೆಗೆದುಕೊಳ್ಳುತ್ತಿರಲಿಲ್ಲ ಬದಲಾಗಿ ಎಲ್ಲವನ್ನು ಕೂಡ ಸಮಾಜ ಸೇವೆಗೆ ಮೀಸಲು ಇಡುತ್ತಿದ್ದರು. ಇದಿಷ್ಟು ಮಾತ್ರವಲ್ಲದೇ ಅಪ್ಪು ಅವರು ನಟನೆಯನ್ನು ಹೊರತು ಪಡಿಸಿ ಹಲವಾರು ಹೋಟೆಲ್ ಮತ್ತು ಉದ್ಯಮವನ್ನು ಒಳಗೊಂಡಿದ್ದರು. ಈ ಎಲ್ಲಾ ಉದ್ಯಮಗಳಿಂದ ಬರುತ್ತಿದ್ದಂತಹ ಲಾಭದಲ್ಲಿ ಶೇಕಡ 40ರಷ್ಟು ಭಾಗವನ್ನು ಸಮಾಜ ಸೇವೆಗೆಂದು ಮೀಸಲಿಡುತ್ತಿದ್ದರು. ಅಪ್ಪು ಅವರು ಒಂದು ಕೋಟಿ ರೂಪಾಯಿ ಸಂಪಾದನೆ ಮಾಡಿದರೆ ಅದರಲ್ಲಿ 40 ಲಕ್ಷ ರೂಪಾಯಿಗಳನ್ನು ಸಮಾಜ ಸೇವೆಗೆ ಖರ್ಚು ಮಾಡುತ್ತಿದ್ದರಂತೆ.
ಅಪ್ಪು ಅವರು ಬದುಕಿಸಿದಷ್ಟು ದಿನ ಕೂಡ ಇಷ್ಟು ಸಹಾಯವನ್ನು ಮಾಡಿದ್ದಾರೆ ಕೇವಲ ಇದಿಷ್ಟು ಮಾತ್ರವಲ್ಲದೆ ಅಪ್ಪು ಅವರ ಮೈಸೂರಿನಲ್ಲಿ ನಡೆಸುತ್ತಿರುವಂತಹ ಶಕ್ತಿ ಧಾಮ ಎಂಬ ಸಂಸ್ಥೆಗೆ ಯಾವುದೇ ರೀತಿಯಾದಂತಹ ಆರ್ಥಿಕ ಸಮಸ್ಯೆಗಳು ಬರಬಾರದು ಅಂತ ಈ ಸಂಸ್ಥೆಗೆ ಇದಾಗಲೇ ನೂರಾರು ಕೋಟಿ ರೂಪಾಯಿಯನ್ನು ಡೆಪಾಸಿಟ್ ಮಾಡಿದ್ದಾರೆ. ಅಂದರೆ ಅಪ್ಪು ಅವರು ಮುಂದಿನ ದಿನದಲ್ಲಿ ಈ ಸಂಸ್ಥೆಗೆ ಯಾವುದೇ ರೀತಿಯಾದಂತಹ ಸಹಾಯ ಧನ ಮಾಡದೆ ಇದ್ದರೂ ಕೂಡ ಈ ಸಂಸ್ಥೆ ಮುನ್ನಡೆಸಿಕೊಂಡು ಹೋಗಬೇಕು ಅಷ್ಟು ಸಹಾಯ ಧನವನ್ನು ಈಗಾಗಲೇ ಬ್ಯಾಂಕ್ ನಲ್ಲಿ ಡೆಪಾಸಿಟ್ ಮಾಡಿದ್ದಾರೆ. ಇವೆಲ್ಲವನ್ನೂ ನೋಡುತ್ತಿದ್ದರೆ ಅಪ್ಪು ಅವರ ಎಷ್ಟು ಮುಂದಾಲೋಚನೆಯನ್ನು ಹೊಂದಿದ್ದರು ಎಂಬುವುದು ತಿಳಿಯುತ್ತದೆ.
ಅಪ್ಪು ಅವರು ತಾವು ಎಷ್ಟು ಹಣವನ್ನು ಖರ್ಚು ಮಾಡುತ್ತಿದ್ದೆವು ಅಥವಾ ದಾನ ಧರ್ಮ ಮಾಡಿದ್ದೇವೆ ಎಂಬ ವಿಚಾರವನ್ನು ಎಲ್ಲಿಯೂ ಹೇಳಿಕೊಂಡಿರಲಿಲ್ಲ. ಆದರೆ ಈ ವಿಚಾರದ ಬಗ್ಗೆ ಮೊಟ್ಟಮೊದಲ ಬಾರಿಗೆ ಮೈಕೋ ನಾಗರಾಜ್ ಅವರು ಸಂದರ್ಶನ ಒಂದರಲ್ಲಿ ಹೇಳಿದ್ದಾರೆ ಮೈಕೋ ನಾಗರಾಜ ಅವರು ಹೇಳಿದಂತಹ ಈ ಮಾತನ್ನು ಕೇಳಿದರೆ ನಿಜಕ್ಕೂ ಎಂತವರ ಕಣ್ಣಲ್ಲಾದರೂ ಕೂಡ ನೀರು ಬರುತ್ತದೆ. ಹೌದು ಅಪ್ಪು ಅವರ ಬಗ್ಗೆ ಯಾರಿಗೂ ತಿಳಿಯದಂತಹ ಕೆಲವು ಆಸಕ್ತಿದಾಯಕ ವಿಚಾರವನ್ನು ಮೈಕೋ ನಾಗರಾಜ ಅವರು ತಿಳಿಸಿದ್ದಾರೆ ಆ ವಿಡಿಯೋ ಈ ಕೆಳಗಿದೆ ಈ ವಿಡಿಯೋವನ್ನು ನೋಡಿ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ.