ರಾಜ್ಯದಲ್ಲಿ ಈಗ ಎಲ್ಲರ ಚಿತ್ತ ಪುನೀತ್ ಅವರ ಹುಟ್ಟು ಹಬ್ಬದತ್ತ. ಅಭಿಮಾನಿಗಳಿಗಂತೂ ಇದು ಯುಗಾದಿ ಗಿಂತ ಹೆಚ್ಚಿನ ಸಂಭ್ರಮ ತಂದಿದ್ದು, ಈ ಬಾರಿ ಕಳೆದ ವರ್ಷಕ್ಕಿಂತಲೂ ಇನ್ನು ವಿಶೇಷವಾಗಿ ಅಭಿಮಾನಿಗಳು ಅಪ್ಪು ಹುಟ್ಟು ಹಬ್ಬವನ್ನು ಆಚರಿಸುತ್ತಿದ್ದಾರೆ. ಅಪ್ಪು ನಮ್ಮನ್ನೆಲ್ಲ ಆಗಲಿ ನೋಡುತ್ತಿದ್ದಂತೆ ಒಂದುವರೆ ವರ್ಷ ಕಳೆದೇ ಹೋಯಿತು. ಆದರೂ ಕೂಡ ಅವರ ಅಗಲಿಕೆ ನೋವು ಇನ್ನು ಕ್ಷೀಣಿಸಿಲ್ಲ.
ಅವರ ಹುಟ್ಟುಹಬ್ಬ ಹಾಗೂ ಪುಣ್ಯ ಸ್ಮರಣೆ ದಿನ ಕರ್ನಾಟಕದಲ್ಲಿ ಅರ್ಥಪೂರ್ಣವಾಗಿ ಅಪ್ಪು ಹಬ್ಬದಂತೆ ಆಚರಣೆ ಆಗುತ್ತಿದೆ. ಕಳೆದ ವರ್ಷ ಅವರ ಹುಟ್ಟು ಹಬ್ಬದ ಪ್ರಯುಕ್ತ ಅವರ ಕೊನೆಯ ಚಿತ್ರವಾದ ಜೇಮ್ಸ್ ಸಿನಿಮಾ ವನ್ನು ರಿಲೀಸ ಮಾಡಲಾಗಿತ್ತು, ಜೇಮ್ಸ್ ಚಿತ್ರವನ್ನು ಕರ್ನಾಟಕದಾದ್ಯಂತ ಮೆಚ್ಚಿಕೊಂಡಾಡಿ ಸೂಪರ್ ಹಿಟ್ ಕೂಡ ಮಾಡಿ ಅಭಿಮಾನಿಗಳು ತಮ್ಮ ಕೈಲಾದ ಮಟ್ಟಿಗೆ ಈ ಪುಣ್ಯಾತ್ಮನಿಗೆ ನಮನ ಸಲ್ಲಿಸಿದ್ದರು.
ಈ ಬಾರಿ ಇನ್ನೂ ಒಂದು ಹೆಚ್ಚು ಮುಂದೆ ಹೋಗಿ ಅಪ್ಪು ಅವರ ಮಾಲೆ ಹಾಕಿಕೊಂಡು ಅಪ್ಪು ಹುಟ್ಟು ಹಬ್ಬವನ್ನು ಆಚರಣೆ ಮಾಡುತ್ತಿದ್ದಾರೆ. ಈಗಾಗಲೇ ವಿಜಯನಗರ, ಹೊಸಪೇಟೆ ಭಾಗದ ಅವರ ಅಭಿಮಾನಿಗಳು ಪುನೀತ್ ಪುತ್ಥಳಿ ಮುಂದೆ ನಿಂತು ಮಾಲೆ ಧರಿಸಿಕೊಂಡು ಕೇಸರಿ ಬಣ್ಣದ ವಸ್ತ್ರ, ಕೊರಳಿಗೆ ಅಪ್ಪು ಇರುವ ಡಾಲರ್ ಧರಿಸಿ ಅಪ್ಪು ಭಾವಚಿತ್ರ ಹಿಡಿದು ಪೂಜೆ ಮಾಡುತ್ತಿರುವ ದೃಶ್ಯಗಳು ವೈರಲ್ ಆಗಿವೆ.
ಇದರ ಪರ ಹಾಗೂ ವಿರೋಧ ಚರ್ಚೆಗಳ ನಡುವೆ ನಡುವೆಯೂ ಇದಕ್ಕೆ ಕೇರ್ ಮಾಡದ ಅಪ್ಪು ಅಭಿಮಾನಿಗಳು ಪುನೀತ್ ರಾಜಕುಮಾರ್ ಅವರ ಹುಟ್ಟು ಹಬ್ಬದ ದಿನ ಕಾಲ್ನಡಿಗೆಯಲ್ಲಿ ಬಂದು ಸ್ಮಾರಕವನ್ನು ದರ್ಶನ ಮಾಡುವ ತನಕ ಮಾಲೆಯನ್ನು ಧರಿಸೇ ಇರುವ ದೃಢ ನಿರ್ಧಾರದಲ್ಲಿದ್ದಾರೆ. ಅಲ್ಲಿಯವರೆಗೂ ಅಪ್ಪು ಅವರ ಆದರ್ಶ ಗುಣಗಳನ್ನು ಪಾಲಿಸಿಕೊಂಡು, ಅಪ್ಪು ಸ್ವಾಮಿ ಮಾಲೆ ಹಾಕಲು ಇರುವ ನಿಯಮಗಳಂತೆ ಪಾಲಿಸಿಕೊಂಡು ಹೋಗಲಿದ್ದಾರೆ.
ಇದೆಲ್ಲದರ ಜೊತೆ ಮತ್ತೊಂದು ವಿಷಯ ಈಗ ಬಾರಿ ಸುದ್ದಿ ಆಗುತ್ತಿದೆ. ಅದೇನೆಂದರೆ ಅಪ್ಪು ಅವರ ಅಪ್ಪಟ ಅಭಿಮಾನಿ ಆಗಿರುವ ನಿರೂಪಕಿ ಅನುಶ್ರೀ ಅವರು ಅಪ್ಪು ಮಾಲಾಧಾರಿಗಳನ್ನು ಕರೆಸಿ ಸ್ವಂತ ಖರ್ಚಿನಲ್ಲಿ ಊಟ ಹಾಕಿಸಿದ್ದಾರೆ. ಇದರ ವಿಡಿಯೋ ಕೂಡ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ಪ್ರತಿಷ್ಠಿತ ಹೋಟೆಲ್ ಅಲ್ಲಿ ಅಪ್ಪು ಮಲೆ ಧರಿಸುವ ಕೆಲವೊಂದು ಮಾಲಾದಾರಿಗಳಿಗೆ ಜೊತೆ ಅನುಶ್ರೀ ಅವರು ಮಾತಾಡಿಸುತ್ತಿರುವುದು ಮತ್ತು ಅವರನ್ನು ಊಟಕ್ಕೆ ಕರೆದಿರುವುದು ಇದರಲ್ಲಿ ಸ್ಪಷ್ಟ ಆಗುತ್ತಿದೆ.
ಈ ವಿಡಿಯೋದಲ್ಲಿ ಅಪ್ಪು ಅಭಿಮಾನಿಗಳು ಡಾ. ರಾಜಕುಮಾರ್ ಹಾಗೂ ಅಪ್ಪು ಅವರ ಗುಣಗಾನವನ್ನು ಭಕ್ತಿ ಗೀತೆಗಳ ರೀತಿ ಹಾಡಿದ್ದಾರೆ. ಮೊದಲಿಗೆ ಕರುನಾಡಿನ ರಸಿಕರ ರಾಜ ಗಂಧದಗುಡಿಯ ರಾಜಕುಮಾರ ಎಂದು ರಾಜಕುಮಾರ ಅವರನ್ನು ಹೊಗಳಿರುವ ಇವರು ನಂತರ ಪುನೀತ್ ರಾಜಕುಮಾರ್ ಅವರ ಗೀತೆಯನ್ನು ಸಹ ಹಾಡಿದ್ದಾರೆ. ನಿಮ್ಮ ನಡೆ-ನುಡಿಗೆ ನಮಗೆ ದಾರಿದೀಪ, ಆ ಮಾರ್ಗದಿ ನಡೆದರೆ ಬದುಕು ಸಾರ್ಥಕ ನಗುವಿನ ರಾಜಕುಮಾರ ಇತ್ಯಾದಿ ಪದಗಳನ್ನು ಅದರಲ್ಲಿ ಪೋಣಿಸಲಾಗಿದೆ.
ಕೊನೆಯಲ್ಲಿ ಇಬ್ಬರನ್ನು ಸೇರಿಸಿ ನೀವು ಮತ್ತೆ ಈ ಕರ್ನಾಟಕದಲ್ಲಿ ಹುಟ್ಟಿ ಬರಬೇಕು ಅದಕ್ಕಾಗಿ ದೇವರಲ್ಲಿ ಪ್ರಾರ್ಥನೆ ಮಾಡುತ್ತೇವೆ ಎನ್ನುವ ಸಾಲುಗಳನ್ನು ಸೇರಿಸುವ ಮೂಲಕ ದೇವರಿಗೆ ಕೂಡ ತಮ್ಮ ಮೊರೆಯನ್ನು ಇಟ್ಟಿದ್ದಾರೆ. ಈ ವಿಡಿಯೋವನ್ನು ನೋಡಿ ಇದರ ಬಗ್ಗೆ ನಿಮ್ಮ ಅಭಿಪ್ರಾಯವನ್ನು ತಪ್ಪದೆ ಕಮೆಂಟ್ ಮಾಡಿ ತಿಳಿಸಿ.