ಅಕ್ಟೋಬರ್ 29, 2021 ಕರ್ನಾಟಕದ ಪಾಲಿಗೆ ಬಹಳ ಕೆಟ್ಟ ದಿನ ಎನ್ನಬಹುದು ಯಾಕೆಂದರೆ ಕರುನಾಡಿನ ಮಾಣಿಕ್ಯ ಒಂದು ಅಂದು ಮಣ್ಣಲ್ಲಿ ಮಣ್ಣಾಯಿತು. ದೊಡ್ಮನೆ ಕುಟುಂಬದ ರಾಜಕುಮಾರ ಪುನೀತ್ ರಾಜಕುಮಾರ್ ಅವರ ರಾಜ್ ಕುಟುಂಬ ಮಾತ್ರವಲ್ಲದೆ ಇಡೀ ಕರ್ನಾಟಕದ ಪಾಲಿಗೆ ಮನೆ ಮಗನ ರೀತಿ ಇದ್ದರು. ಬಾಲ್ಯದಿಂದಲೂ ಅಭಿನಯ ಮತ್ತು ತಮ್ಮ ಸಿರಿಕಂಠದಿಂದ ಮತ್ತು ಅದ್ಭುತ ಡ್ಯಾನ್ಸಿಂಗ್ ಮೂಲಕ ಮೋಡಿ ಮಾಡಿ ಅಪಾರ ಅಭಿಮಾನಿಗಳನ್ನು ಹೊಂದಿದ್ದ ಪುನೀತ್ ರಾಜ್ ಕುಮಾರ್ ಅವರು ಬೆಳೆದ ಬಳಿಕ ಕೂಡ ತಮ್ಮ ಪ್ರಬುದ್ಧತೆಯ ನಡತೆ, ನಯ ವಿನಯ, ಸಮಾಜಸೇವೆ ಇನ್ನಿತರ ಕಾರಣಗಳಿಂದ ಪ್ರತಿಯೊಬ್ಬರ ಹೃದಯ ಗೆದ್ದಿದ್ದರು. ಕರುನಾಡ ಕಣ್ಮಣಿ ಯನ್ನು ಪ್ರೀತಿಸದ ಹೃದಯವೇ ಇಲ್ಲ ಎನ್ನಬಹುದು. ಯಾಕೆಂದರೆ ಪ್ರತಿಯೊಂದು ಮನೆಮನೆಗಳಲ್ಲೂ ಕೂಡ ಚಿಕ್ಕ ಮಕ್ಕಳಿಂದ ಹಿಡಿದು ವೃದ್ಧರವರೆಗೆ ಎಲ್ಲರೂ ಕೂಡ ಪುನೀತ್ ರಾಜ್ ಕುಮಾರ್ ಅವರ ಅಪ್ಪಟ ಅಭಿಮಾನಿಗಳೇ ಎನ್ನುವ ಮಾತು ಸತ್ಯ. ಇಷ್ಟೆಲ್ಲಾ ಅಭಿಮಾನಿಗಳ ಆರಾಧ್ಯ ದೈವವಾಗಿದ್ದ ಪುನೀತ್ ರಾಜಕುಮಾರ್ ಅವರು ನಮ್ಮನ್ನೆಲ್ಲಾ ಅಗಲಿ ಅರ್ಧ ವರ್ಷಕ್ಕಿಂತಲೂ ಹೆಚ್ಚಿನ ದಿನಗಳು ಕಳೆದಿದ್ದರೂ ಕೂಡ ಪುನೀತ್ ಕುಟುಂಬವಾಗಲಿ ಅಭಿಮಾನಿಗಳೇ ಆಗಲಿ ಕರುನಾಡಿನ ಜನತೆ ಆಗಲಿ ಅವರು ನಮ್ಮನ್ನೆಲ್ಲಾ ಅಗಲಿ ಹೋಗಿದ್ದಾರೆ ಎನ್ನುವ ವಿಷಯವನ್ನು ಒಪ್ಪಲು ಇನ್ನು ಕೂಡ ತಯಾರಾಗಿಲ್ಲ.
ಇದ್ದಕ್ಕಿದ್ದ ಹಾಗೆ ಬರಸಿಡಿಲಿನಂತೆ ಅಬ್ಬರಿಸಿದ ಪುನೀತ್ ಸಾವಿನ ಸುದ್ದಿ ಇಡೀ ಕರ್ನಾಟಕದಾದ್ಯಂತ ಸೂತಕದ ಛಾಯೆ ನಿರ್ಮಿಸಿತ್ತು. ಪುನೀತ್ ಸಾವು ರಾಜ್ ಕುಟುಂಬ ಮಾತ್ರವಲ್ಲದೆ, ಕನ್ನಡ ಚಿತ್ರರಂಗಕ್ಕೆ ಮಾತ್ರವಲ್ಲದೆ ಇಡೀ ಕರುನಾಡಿಗೆ ತುಂಬಲಾಗದ ನಷ್ಟ ಎಂದರೆ ಆ ಮಾತು ಅಕ್ಷರಶಃ ಸತ್ಯ. ಅಷ್ಟೊಂದು ಗಟ್ಟಿಮುಟ್ಟಾಗಿ ಆರೋಗ್ಯಕರ ಜೀವನ ನಡೆದ ನಡೆಸುತ್ತಿದ್ದ ಪುನೀತ್ ಅವರು ಹೃದಯಾಘಾತದಿಂದ ನಿ’ಧ’ನ’ರಾದರು ಎನ್ನುವ ಸುದ್ದಿ ಹಬ್ಬಿದ ಕೂಡಲೇ ಎಲ್ಲರೂ ಕೂಡ ಒಂದು ಕ್ಷಣ ದಂಗಾಗಿ ಹೋದರು. ಅಪ್ಪು ಎಂದರೆ ಹಾಗೆ ಅವರು ಎಲ್ಲರ ಹೃದಯಕ್ಕೂ ತುಂಬಾ ಹತ್ತಿರವಾಗಿದ್ದ ವ್ಯಕ್ತಿತ್ವ. ಅವರು ನಟಿಸುತ್ತಿದ್ದ ಸಿನಿಮಾಗಳು, ಅವರು ಆಯ್ದುಕೊಳ್ಳುತ್ತಿದ್ದ ಕಥೆಗಳು, ಇದರ ಜೊತೆಗೆ ಹೆಣ್ಣುಮಕ್ಕಳು ರೈತರು ಬಡವರು ಹಾಗೂ ವನ್ಯಜೀವಿ ಮತ್ತು ಪರಿಸರದ ಬಗ್ಗೆ ಅಪ್ಪು ಅವರು ಹೊಂದಿದ್ದ ಕಾಳಜಿ ಮತ್ತು ಇದಕ್ಕಾಗಿ ಅವರು ತೊಡಗಿಕೊಳ್ಳುತ್ತಿದ್ದ ಸಮಾಜಮುಖಿ ಕಾರ್ಯಕ್ರಮಗಳು ಎಲ್ಲವೂ ಕೂಡ ಪುನೀತ್ ರಾಜ್ ಕುಮಾರ್ ಅವರನ್ನು ತಮ್ಮ ಮನೆ ಮಗ ಎಂದು ಒಪ್ಪಿಕೊಳ್ಳುವಂತೆ ಮಾಡಿತ್ತು ಇಂತಹ ದೇವರ ಮಗನ ಸಾ’ವಿ’ನ ಸುದ್ದಿ ಯಾರಿಗೆ ಆದರೂ ನಂಬಲು ಅಸಾಧ್ಯವೇ.
ಈ ಸುದ್ದಿ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದ್ದಂತೆ ಇದು ಸುಳ್ಳಾಗಲಿ ಎಂದು ದೇವರಲ್ಲಿ ಹರಕೆ ಇಟ್ಟಿದ್ದರು. ಆದರೂ ಕೂಡ ನಮ್ಮೆಲ್ಲರ ಪ್ರೀತಿಯ ಅಪ್ಪು ಎದ್ದು ಬರಲೇ ಇಲ್ಲ ಈಗಲೂ ಕೂಡ ಅಪ್ಪು ಅವರು ಇನ್ನು ಇಲ್ಲ ಎನ್ನುವ ವಿಷಯವನ್ನು ಮಾತ್ರ ಯಾರೂ ಕೂಡ ಒಪ್ಪಲು ಸಿದ್ದವಿಲ್ಲ. ಅಪ್ಪು ಅವರನ್ನು ತುಂಬು ಹೃದಯದಿಂದ ಪ್ರೀತಿಸುತ್ತಿದ್ದ ಅಪಾರ ಅಭಿಮಾನಿ ಬಳಗವೇ ಕರ್ನಾಟಕದಲ್ಲಿತ್ತು ಅಪ್ಪು ಅವರ ಸಾವಿನ ಬಳಿಕ ತಮ್ಮ ಅಭಿಮಾನ ಏನು ಎನ್ನುವುದನ್ನು ಇಡೀ ಪ್ರಪಂಚಕ್ಕೆ ಪರಿಚಯ ಮಾಡಿಕೊಟ್ಟಿದ್ದರು ಅಭಿಮಾನಿಗಳು. ಅಪ್ಪು ಅವರು ನಿಧನ ಹೊಂದಿದ ದಿನದಿಂದ ಹಿಡಿದು ಅವರ ಒಂದಲ್ಲ ಒಂದು ವಿಚಾರದಲ್ಲಿ ದಾಖಲೆ ಸೃಷ್ಟಿ ಮಾಡಿ ಅಭಿಮಾನಿಗಳು ಅಭಿಮಾನವನ್ನು ಮೆರೆದಿದ್ದಾರೆ. ಅಪ್ಪು ಅವರ ಅಂತಿಮ ದರ್ಶನಕ್ಕೆ ಬಂದಿದ್ದ ಅಭಿಮಾನಿಗಳು 25 ಲಕ್ಷಕ್ಕೂ ಹೆಚ್ಚಿದ್ದರು ಈಗಲೂ ಕೂಡ ಪ್ರತಿದಿನವೂ ಅಪಾರ ಸಂಖ್ಯೆಯಲ್ಲಿ ಅವರ ಸಮಾಧಿಯ ದರ್ಶನಕ್ಕೆ ಅಭಿಮಾನಿಗಳು ಬರುತ್ತಿದ್ದಾರೆ. ಇದರ ಜೊತೆಗೆ ಅಪ್ಪು ಅವರ ಕೊನೆಯ ಸಿನಿಮಾ ವಾದ ಜೇಮ್ಸ್ ಸಿನಿಮಾವನ್ನು ಅವರ ಹುಟ್ಟು ಹಬ್ಬದ ಪ್ರಯುಕ್ತ ಮಾರ್ಚ್ 17ರಂದು ಬಿಡುಗಡೆ ಮಾಡಲಾಗಿತ್ತು. ಅಪ್ಪು ಅವರ ಹುಟ್ಟಿದ ದಿನವನ್ನು ಹಬ್ಬವನ್ನಾಗಿ ಆಚರಿಸಿದ ಕರುನಾಡಿನ ಅಭಿಮಾನಿಗಳು ಅವರ ಹೆಸರಿನಲ್ಲಿ ರಕ್ತದಾನ ಅನ್ನದಾನ ನೇತ್ರದಾನ ಸೇರಿದಂತೆ ಹಲವಾರು ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಕೊಂಡರು.
ಜೇಮ್ಸ್ ಸಿನಿಮಾವನ್ನು ಭರ್ಜರಿ ಪ್ರದರ್ಶನ ಕಾಣುವಂತೆ ಮಾಡಿ ಸೂಪರ್ಹಿಟ್ ಮಾಡಿದರು ಆದರೆ ಅಭಿಮಾನಿಗಳ ಮನಸ್ಸಿನಲ್ಲಿ ಮಾತ್ರ ಇನ್ನು ಮುಂದೆ ತಾವು ತನ್ನ ನೆಚ್ಚಿನ ನಟನ ಸಿನಿಮಾವನ್ನು ತೆರೆಮೇಲೆ ಕಾಣಲು ಸಾಧ್ಯವಿಲ್ಲ ಎನ್ನುವ ನೋವು ಕಡಿಮೆಯಾಗಿರಲಿಲ್ಲ. ಆದರೆ ಈಗ ಅದಕ್ಕೊಂದು ತಂತ್ರಜ್ಞಾನ ರೆಡಿಯಾಗುತ್ತಿದೆ ಈ ತಂತ್ರಜ್ಞಾನದ ಮೂಲಕ ಪುನೀತ್ ಅವರನ್ನು ಮತ್ತೊಮ್ಮೆ ತೆರೆಯ ಮೇಲೆ ಕಾಣಬಹುದು. ಅನ್ರಿಯಲ್ ಎಂಜಿನ್ ಎನ್ನುವ ವಿಶ್ವದ ಅಡ್ವಾನ್ಸ್ ಟೆಕ್ನಾಲಜಿಯ ಮೂಲಕ ಪುನೀತ್ ಅವರನ್ನು ತೆರೆಮೇಲೆ ಕಾಣುವಂತೆ ಮಾಡಬಹುದಂತೆ. ಇದುವರೆಗೆ ಈ ತಂತ್ರಜ್ಞಾನವನ್ನು ಅಡ್ವಾನ್ಸ್ ಗೇಮಿಂಗ್ ಪ್ಲಾಟ್ಫಾರ್ಮ್ ಗಳಲ್ಲಿ ಮತ್ತು ವರ್ಚುವಲ್ ಸ್ಟುಡಿಯೋಗಳಲ್ಲಿ ಸೆಟ್ಗಳಲ್ಲಿ ಕ್ಯಾರೆಕ್ಟರ್ ಗಳನ್ನು ಕ್ರಿಯೇಟ್ ಮಾಡಲು ಬಳಸುತ್ತಿದ್ದರು. ಇದೀಗ ಈ ಟೆಕ್ನಾಲಜಿಯನ್ನು ಬಳಸಿಕೊಂಡು ಅಪ್ಪು ಅವರನ್ನು ಮತ್ತೊಮ್ಮೆ ತೆರೆಮೇಲೆ ತರುವ ಪ್ರಯತ್ನ ನಡೆಸಲಾಗುತ್ತಿದೆ ಎನ್ನುವ ಬಗ್ಗೆ ಮಾತುಗಳು ಕೇಳಿಬರುತ್ತಿವೆ. ಆದರೂ ಕೂಡ ಇದಕ್ಕೆ ಬಹಳ ದೊಡ್ಡ ಮಟ್ಟದ ಬಜೆಟ್ ಬೇಕಾಗಿದ್ದು ಕರ್ನಾಟಕದ ಹೆಸರಾಂತ ನಿರ್ಮಾಣ ಸಂಸ್ಥೆಯೊಂದು ಈ ಜವಾಬ್ದಾರಿಯನ್ನು ಹೊತ್ತುಕೊಂಡಿದೆಯಂತೆ. ಈಗಾಗಲೇ ಇದಕ್ಕೆ ಸಂಬಂಧಪಟ್ಟ ಮೊದಲ ಹಂತದ ಎಲ್ಲಾ ಕೆಲಸಗಳು ಮುಕ್ತಾಯವಾಗಿದ್ದು ಸದ್ಯದಲ್ಲಿ ಅಭಿಮಾನಿಗಳಿಗೆ ಈ ವಿಷಯದ ಬಗ್ಗೆ ವರದಿ ತಲುಪಲಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಮತ್ತೊಮ್ಮೆ ಪುನೀತ್ ಅವರನ್ನು ತೆರೆ ಮೇಲೆ ಕಾಣುವ ಸಂಭ್ರಮ ಅಭಿಮಾನಿಗಳ ಪಾಲಿಗೆ ಸಿಗಲಿದೆ. ನೀವು ಅಪ್ಪು ಅವರನ್ನು ತೆರೆಮೇಲೆ ಕಾಣಲು ಇಷ್ಟ ಪಡುತ್ತಿರ.? ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ಕಾಮೆಂಟ್ ಮುಖಾಂತರ ತಿಳಿಸಿ.