Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

ದೊಡ್ಡವಳಾದ ಮೇಲೆ ಏನಾಗುತ್ತೀಯ ಅಂತ ಅಪ್ಪು ಪುತ್ರಿ ವಂದಿತಾ ನಾ ಕೇಳಿದಕ್ಕೆ ಆಕೆ ಕೊಟ್ಟ ಉತ್ತರವೇನು ಗೊತ್ತ.? ನಿಜಕ್ಕೂ ಆಶ್ಚರ್ಯ ಆಗುತ್ತೆ

Posted on June 9, 2022 By Kannada Trend News No Comments on ದೊಡ್ಡವಳಾದ ಮೇಲೆ ಏನಾಗುತ್ತೀಯ ಅಂತ ಅಪ್ಪು ಪುತ್ರಿ ವಂದಿತಾ ನಾ ಕೇಳಿದಕ್ಕೆ ಆಕೆ ಕೊಟ್ಟ ಉತ್ತರವೇನು ಗೊತ್ತ.? ನಿಜಕ್ಕೂ ಆಶ್ಚರ್ಯ ಆಗುತ್ತೆ

ನಮ್ಮ ನಿಮ್ಮೆಲ್ಲರ ಪ್ರೀತಿಯ ಅಪ್ಪು ಪುನೀತ್ ರಾಜ್ ಕುಮಾರ್ ಅವರು ಸಿನಿಮಾದಲ್ಲಿ ಮಿಂಚಿದ್ದು ಅಷ್ಟೇ ಅಲ್ಲದೆ ನಿಜ ಜೀವನದಲ್ಲಿಯೂ ಸಹ ಒಬ್ಬ ದೊಡ್ಡ ಸ್ಟಾರ್ ನಟನಾಗಿ ಜನರ ಮನಸ್ಸಿನಲ್ಲಿ ಉಳಿದುಕೊಂಡಿದ್ದಾರೆ. ಹೀಗೆ ಪುನೀತ್ ರಾಜ್ ಕುಮಾರ್ ಅವರು ಚಿತ್ರರಂಗಕ್ಕೆ ಬಂದು ಅತ್ಯುತ್ತಮ ನಾಯಕನಾಗಿ ಸಾಕಷ್ಟು ಸಿನಿಮಾಗಳನ್ನು ನಮಗೆ ನೀಡಿದ್ದಾರೆ. ಅವರು ಮಾಡಿರುವಂತಹ ಸಾಕಷ್ಟು ಸಿನಿಮಾಗಳು ಯಾವುದಾದರೂ ಒಂದು ಉತ್ತಮ ಸಂದೇಶವನ್ನು ನಮಗೆ ನೀಡುವಂತಹದ್ದು ಆಗಿದೆ. ಪುನೀತ್ ರಾಜ್ ಕುಮಾರ್ ಅವರು ಬಾಲ ನಟನಾಗಿ ಚಿತ್ರರಂಗಕ್ಕೆ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಯನ್ನು ಮಾಡಿದರು ಇವರು ನಟಿಸಿರುವಂತಹ ಸಿನಿಮಾಗಳು ವಸಂತ ಗೀತಾ, ಭಕ್ತ ಪ್ರಹಲಾದ, ಯಾರಿವನು, ಭಾಗ್ಯವಂತ, ಚಲಿಸುವ ಮೋಡಗಳು, ಎರಡು ನಕ್ಷತ್ರ, ಬೆಟ್ಟದ ಹೂವು ಈಗಿನ ಸಿನಿಮಾಗಳಲ್ಲಿ ಅವರು ಬಾಲ ನಟನಾಗಿ ನಟಿಸಿ ಸೈ ಎನಿಸಿಕೊಂಡಿದ್ದಾರೆ.

ಅಷ್ಟೇ ಅಲ್ಲದೆ ಬೆಟ್ಟದ ಹೂವು ಸಿನಿಮಾದಲ್ಲಿ ರಾಮು ಪಾತ್ರಕ್ಕಾಗಿ ಪುನೀತ್ ರಾಜ್ ಕುಮಾರ್ ಅವರಿಗೆ ರಾಷ್ಟ್ರೀಯ ಪ್ರಶಸ್ತಿ ದೊರಕಿದೆ. ಪುನೀತ್ ರಾಜ್ ಕುಮಾರ್ ಅವರ ಅಪ್ಪು ಸಿನಿಮಾದ ಮೂಲಕ ನಾಯಕ ನಟನಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು ಅಪ್ಪು ಸಿನಿಮಾದ ನಂತರ ಸಾಕಷ್ಟು ಸಿನಿಮಾಗಳಲ್ಲಿ ಪುನೀತ್ ರಾಜ್ ಕುಮಾರ್ ಅವರ ನಟನೆಯನ್ನು ಮಾಡಿದ್ದಾರೆ. ಪುನೀತ್ ರಾಜಕುಮಾರ್ ಅವರು ನಾಯಕನಟನಾಗಿ ಅಭಿನಯಿಸಿರುವಂತಹ ಸಿನಿಮಾಗಳೆಂದರೆ ನಮ್ಮ ಬಸವ, ಯಾರೆ ಕೂಗಾಡಲಿ, ವೀರ ಕನ್ನಡಿಗ, ಅಭಿ, ಪೃಥ್ವಿ, ಮೌರ್ಯ, ವಂಶಿ, ಮಿಲನ, ಆಕಾಶ್ ಮೈತ್ರಿ ಬಿಂದಾಸ್ ಅಣ್ಣಾಬಾಂಡ್ ಪರಮಾತ್ಮ ಜಾಕಿ ರಣವಿಕ್ರಮ ನಿನ್ನಿಂದಲೇ, ಚಕ್ರವ್ಯೂಹ, ದೊಡ್ಮನೆ ಹುಡುಗ, ಪವರ್, ರಾಜ್ ಕುಮಾರ, ಅಂಜನಿಪುತ್ರ, ನಟಸಾರ್ವಭೌಮ, ಇನ್ನು ಅನೇಕ ಸಿನಿಮಾಗಳಲ್ಲಿ ಪುನೀತ್ ರಾಜಕುಮಾರ್ ಅವರ ನಟನೆ ಅಮೋಘವಾಗಿದೆ.

ಅಷ್ಟೇ ಅಲ್ಲದೆ ಪುನೀತ್ ರಾಜ್ ಕುಮಾರ್ ಅವರು ಕನ್ನಡದ ಕೋಟ್ಯಾಧಿಪತಿ ಎನ್ನುವಂತಹ ಕನ್ನಡದ ಅತೀ ದೊಡ್ಡ ಶೋ ಮೂಲಕ ಅತ್ಯಂತ ಹೆಚ್ಚಿನ ಮಟ್ಟದಲ್ಲಿ ಗೌರವಕ್ಕೆ ಪಾತ್ರರಾಗಿದ್ದಾರೆ. ಪುನೀತ್ ರಾಜಕುಮಾರ್ ಅವರು ನಮ್ಮೆಲ್ಲರನ್ನು ಆಗಲಿರುವುದು ನಮ್ಮಿಂದ ಇನ್ನು ಸಹ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ, ಪುನೀತ್ ಅವರು ನಮ್ಮಿಂದ ದೈಹಿಕವಾಗಿ ದೂರವಾಗಿದ್ದರು ಸಹ ಮಾನಸಿಕವಾಗಿ ಯಾವಾಗಲೂ ನಮ್ಮ ಜೊತೆಯಲ್ಲಿ ಇರುತ್ತಾರೆ. ಅಭಿಮಾನಿಗಳು ಇಂದಿಗೂ ಸಹ ಅವರು ಇಲ್ಲದಂತಹ ನೋವನ್ನು ಸಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ, ಸಾಕಷ್ಟು ಜನರು ಅಪ್ಪು ಅವರ ಫೋಟೋವನ್ನು ತಮ್ಮ ದೇವರ ಮನೆಯಲ್ಲಿ ಇಟ್ಟುಕೊಂಡು ಪೂಜೆಯನ್ನು ಸಲ್ಲಿಸುತ್ತಾರೆ ಪರಮಾತ್ಮ ಎಂದೇ ಹೇಳಿಕೊಂಡು ಅವರ ಪೂಜೆಯನ್ನು ಇಂದಿಗೂ ಸಹ ಮಾಡುತ್ತಿದ್ದಾರೆ.

ಪುನೀತ್ ರಾಜ್ ಕುಮಾರ್ ಅವರು ನಮ್ಮೆಲ್ಲರನ್ನು ಅಗಲಿ 7 ತಿಂಗಳು ಕಳೆದು ಹೋಗಿದೆ ಆದರೂ ಅಪ್ಪು ಇಲ್ಲ ಎನ್ನುವುದನ್ನು ಒಪ್ಪಿಕೊಳ್ಳಲು ನಮ್ಮ ಮನಸ್ಸಿಗೆ ಸಾಧ್ಯ ಆಗುತ್ತಿಲ್ಲ, ಯಾವುದಾದರೂ ಒಂದು ರೂಪದಲ್ಲಿ ಅವರು ನಮ್ಮ ಜೊತೆಯಲ್ಲಿಯೇ ಇದ್ದಾರೆ ಅನಿಸುತ್ತದೆ. ಪುನೀತ್ ರಾಜ್ ಕುಮಾರ್ ಅವರು ಸಾಕಷ್ಟು ಜನ ಅನಾಥರು ಮತ್ತು ವೃದ್ದರನ್ನು ಸಾಕುವಂತಹ ಕೆಲಸವನ್ನು ಸಹ ಮಾಡಿದ್ದರು, ಸಾಕಷ್ಟು ಅನಾಥಾಶ್ರಮಗಳು ಮತ್ತು ವೃದ್ಧಾಶ್ರಮಗಳನ್ನು ಪುನೀತ್ ರಾಜ್ ಕುಮಾರ್ ಅವರ ಸಹಾಯವನ್ನು ನೀಡಿ ಅವರ ಜೀವನವನ್ನು ನೋಡಿಕೊಳ್ಳುತ್ತಿದ್ದರು. ಇಷ್ಟೆಲ್ಲ ಸಹಾಯವನ್ನು ಮಾಡುವಂತಹ ಪುನೀತ್ ರಾಜ್ ಕುಮಾರ್ ಅವರು ಯಾರೊಂದಿಗೂ ಸಹ ತಾವು ಮಾಡುತ್ತಿದ್ದಂತಹ ಯಾವ ಕೆಲಸಗಳನ್ನು ಹೊರಗಡೆ ಹೇಳಿಕೊಳ್ಳುತ್ತಿರಲಿಲ್ಲ.

ಸಾಕಷ್ಟು ಕುಟುಂಬಗಳಿಗೆ ಪುನೀತ್ ರಾಜ್ ಕುಮಾರ್ ಅವರು ನೆರವಾಗಿದ್ದಾರೆ ಇವರ ಬಳಿ ಕಷ್ಟ ಎಂದು ಯಾರು ಕೇಳಿಕೊಂಡು ಬಂದರು ಸಹ ಅವರನ್ನು ಬರಿಗೈಯ್ಯಲ್ಲಿ ಕಳಿಸುತ್ತಿರಲಿಲ್ಲ ಅಷ್ಟೊಂದು ಉದಾರವಾದ ಮನೋಭಾವರಾಗಿದ್ದರು. ಸಿನಿಮಾದಲ್ಲಿ ನಟಿಸಿ ಹೀರೋ ಎನಿಸಿಕೊಳ್ಳುವುದು ಸುಲಭ, ಆದರೆ ನಿಜಜೀವನದಲ್ಲಿ ಹೀರೋ ಎನಿಸಿಕೊಳ್ಳುವುದು ತುಂಬಾ ಕಷ್ಟ ಆದರೆ ಪುನೀತ್ ರಾಜ್ ಕುಮಾರ್ ಅವರು ಸಿನಿಮಾದಲ್ಲಿ ಹೀರೋ ಎಂದು ಹೇಗೆ ಗುರುತಿಸಿಕೊಂಡರು ಅದೇ ರೀತಿಯಲ್ಲಿ ನಿಜಜೀವನದಲ್ಲಿಯೂ ಸಹ ಹೀರೋ ರೀತಿಯ ಕೆಲಸಗಳನ್ನು ಮಾಡಿದ್ದಾರೆ ಇಂತಹ ಉತ್ತಮ ಮನಸ್ಥಿತಿ ಎಲ್ಲರಿಗೂ ಬರಲು ಸಾಧ್ಯವಿಲ್ಲ.

ಪುನೀತ್ ರಾಜ್‌ಕುಮಾರ್ ಅವರ ಬೆಂಬಲವಾಗಿ ಅವರ ಪತ್ನಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರು ಸಹ ನೆರವಾಗಿ ಅವರ ಜೊತೆಯಲ್ಲಿ ನಿಂತಿದ್ದರು. ಪುನೀತ್ ರಾಜ್ ಕುಮಾರ್ ಅವರು ಉತ್ತಮವಾದಂತಹ ನಟ ಅಷ್ಟೇ ಅಲ್ಲದೇ ನಿರ್ಮಾಪಕ, ನಿರ್ದೇಶಕ, ಸಂಗೀತಗಾರನು ಸಹ ಆಗಿದ್ದರು. ಇವರು ಉತ್ತಮ ಹಾಡುಗಾರರು ಆಗಿ ಸಾಕಷ್ಟು ಹಾಡುಗಳನ್ನು ಕನ್ನಡ ಸಿನಿಮಾ ಇಂಡಸ್ಟ್ರಿಗೆ ನೀಡಿದ್ದಾರೆ. ಪುನೀತ್ ರಾಜ್ ಕುಮಾರ್ ಮತ್ತು ಅಶ್ವಿನಿ ಅವರಿಗೆ ಇಬ್ಬರು ಹೆಣ್ಣು ಮಕ್ಕಳು ಇದ್ದಾರೆ, ಇಬ್ಬರು ಹೆಣ್ಣುಮಕ್ಕಳನ್ನು ಸಹ ಉತ್ತಮವಾದಂತಹ ಒಂದು ವಾತಾವರಣದಲ್ಲಿ ಉದಾರ ಮನೋಭಾವದ ಸ್ಥಿತಿಯಲ್ಲಿ ಬೆಳೆಸಿದ್ದಾರೆ. ದೃತಿ ಮತ್ತು ವಂದಿದೆ ಎಂಬ ಪುನೀತ್ ಅವರ ಮಕ್ಕಳು ಇಬ್ಬರೂ ಸಹ ವಿದ್ಯಾಭ್ಯಾಸದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.

ಪುನೀತ್ ಅವರ ಹಿರಿಯ ಪುತ್ರಿ ಧೃತಿ ಅವರು ತಮ್ಮ ಉನ್ನತ ವ್ಯಾಸಂಗಕ್ಕಾಗಿ ವಿದೇಶಕ್ಕೆ ಹೋಗಿ ವಿದ್ಯಾಭ್ಯಾಸವನ್ನು ಮುಂದುವರೆಸುತ್ತಿದ್ದಾರೆ. ಅಪ್ಪು ಅವರ ಎರಡನೇ ಪುತ್ರಿ ವಂದಿತ ಅವರು ಈಗ ಹತ್ತನೇ ತರಗತಿಯಲ್ಲಿ ಉತ್ತೀರ್ಣರಾಗಿದ್ದು ಅವರು ಮುಂದೆ ಯಾವುದೇ ರೀತಿಯಾದಂತಹ ದೊಡ್ಡ ಕೆಲಸಗಳಿಗೆ ಹೋಗದೆ ತಮ್ಮ ತಂದೆ ಮಾಡುತ್ತಿದ್ದಂತ ಸಮಾಜ ಸೇವೆಯನ್ನು ಮುಂದುವರಿಸಿ ಕೊಂಡು ಅಪ್ಪು ಅವರ ಟ್ರಸ್ಟ್ ಅನ್ನು ಮುಂದುವರಿಸುತ್ತೇನೆ ಈ ಟ್ರಸ್ಟ್ ನಾ ಮುಖಾಂತರ ಬಡ ವಿದ್ಯಾರ್ಥಿಗಳಿಗೆ ಶಿಕ್ಷಣ ಒದಗಿಸುತ್ತೆನೆ ಹಾಗೂ ಹಿರಿಯರಿಗೆ ಆಸರೆ ಆಗುತ್ತೆನೆ ಎಂದು ಹೇಳಿದ್ದಾರೆ. ಸಮಾನ್ಯವಾಗಿ ಸ್ಟಾರ್ ನಟರ ಮಕ್ಕಳು ದೊಡ್ಡವರಾದಮೇಲೆ ಹೀರೋ ಅಥವಾ ಹೀರೋಯಿನ್ ಅಥವಾ ಬಿಸಿನೆಸ್ ಮ್ಯಾನ್ ಆಗಬೇಕು ಅಂತ ಬಯಸುತ್ತಾರೆ ಆದರೆ ಅಪ್ಪು ಅವರ ಪುತ್ರಿ ವಂದಿತಾ ಮಾತ್ರ ಸಮಾಜಕ್ಕಾಗಿ ನಾನು ಶ್ರಮಿಸುತ್ತೆನೆ ಬಡವ ಬಲ್ಲಿದ ಹಾಗೂ ವಿದ್ಯಾರ್ಥಿಗಳಿಗೆ ಸಹಾಯ ಮಾಡುತ್ತೆನೆ ಅಂತ ಹೇಳಿದ್ದು ನಿಜಕ್ಕೂ ಆಶ್ಚರ್ಯವೇ. ತಂದೆಯಂತೆ ಮಗಳು ಕೂಡ ದಾನ ಧರ್ಮ ಮಾಡುವಂತಹ ಈ ನಿರ್ಧಾರ ತೆಗೆದುಕೊಂಡಿರುವುದನ್ನು ನಾವು ಮೆಚ್ಚಲೇ ಬೇಕು. ಈ ಮಾಹಿತಿಯನ್ನು ತಪ್ಪದೆ ಶೇರ್ & ಲೈಕ್ ಮಾಡಿ ಹಾಗೂ ವಂದಿತಾ ಅವರ ಈ ನಿರ್ಧಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ದಯವಿಟ್ಟು ಕಾಮೆಂಟ್ ಮುಖಾಂತರ ತಿಳಿಸಿ.

Cinema Updates Tags:Appu, Vanditha
WhatsApp Group Join Now
Telegram Group Join Now

Post navigation

Previous Post: ಪ್ರಿಯಾಮಣಿ ವೈವಾಹಿಕ ಜೀವನದಲ್ಲಿ ಕ’ಲ’ಹ, ಮುಸ್ತಫನಿಂದ ವಿ’ಚ್ಛೇ’ದ’ನ ಪಡೆಯಿತ್ತಿರುವ ಪ್ರಿಯಾಮಣಿ ಕಾರಣ ಕೇಳಿದ್ರೆ ನಿಜಕ್ಕೂ ಶಾ’ಕ್ ಆಗ್ತೀರ.
Next Post: ವಿಜ್ಞೇಶ್ ಶಿವನ್ ಜೊತೆ ಸಪ್ತಪದಿ ತುಳಿದ ನಯನತಾರ, ನಯನತಾರಗೆ ಇದು ಎಷ್ಟನೇ ಮದುವೆ ಗೊತ್ತಾ. ?

Leave a Reply Cancel reply

Your email address will not be published. Required fields are marked *

Copyright © 2025 Kannada Trend News.


Developed By Top Digital Marketing & Website Development company in Mysore