Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

ದಿನಕ್ಕೆ ಒಂದು ಕೋಟಿ ಮಾತ್ರ ಬಿಗ್ ಬಾಸ್ ಹೋಗ್ತಿನಿ ಅಂದಿದ್ದ ಆರ್ಯವರ್ಧನ್ ಗುರೂಜಿ ವಿಡಿಯೋ ವೈರಲ್

Posted on December 11, 2022 By Kannada Trend News No Comments on ದಿನಕ್ಕೆ ಒಂದು ಕೋಟಿ ಮಾತ್ರ ಬಿಗ್ ಬಾಸ್ ಹೋಗ್ತಿನಿ ಅಂದಿದ್ದ ಆರ್ಯವರ್ಧನ್ ಗುರೂಜಿ ವಿಡಿಯೋ ವೈರಲ್

 

ಬಿಗ್ ಬಾಸ್ ಮನೆಗೆ ಹೋಗುವ ಮುನ್ನವೇ ಸಂಭಾವನೆ ವಿಚಾರಕ್ಕೆ ಟ್ರೋಲ್ ಆಗಿದ್ದ ಆರ್ಯವರ್ಧನ್ ಗುರೂಜಿ.

ನಾನು ಅಂದರೆ ನಂಬರ್ ನಂಬರ್ ಎಂದರೆ ನಾನು ಈ ಡೈಲಾಗ್ ಹೇಳಿಕೊಂಡು ಕರ್ನಾಟಕದಾದ್ಯಂತ ಮನೆ ಮಾತಾಗಿರುವ ನಂಬರ್ ಗುರೂಜಿ ಎಂದೇ ಕರೆಸಿಕೊಳ್ಳುತ್ತಿರುವ ಆರ್ಯವರ್ಧನ್ ಅವರ ಹಳೆ ಟ್ರೋಲಿಂಗ್ ವಿಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ಬಹಳ ವೈರಲ್ ಆಗುತ್ತಿದೆ. ಆರ್ಯವರ್ಧನ್ ಅವರು ಮಾಧ್ಯಮಗಳಲ್ಲಿ ಪ್ರಚಲಿತವಾಗುತ್ತಿದ್ದಂತೆ ಅವರನ್ನು ಅನೇಕ ಬಾರಿ ಟ್ರೋಲ್ ಮಾಡಲಾಗಿದೆ.

ಟ್ರೋಲ್ ಮಾಡುವವರಿಗೆ ಆರ್ಯವರ್ಧನ್ ಅವರು ಮಾತನಾಡುವ ಪ್ರತಿ ವಿಷಯ ಕೂಡ ಕಂಟೆಂಟ್ ಆಗಿರುತ್ತದೆ. ಯಾಕೆಂದರೆ ವಿಷಯಜ್ಞಾನ ಅಳವಾಗಿದ್ದರೂ ಕೂಡ ಅವಿದ್ಯಾವಂತನಂತೆ ಮಾತನಾಡಿ ಮಾತುಗಳಲ್ಲಿ ಸಿಕ್ಕಿಹಾಕಿಕೊಳ್ಳುತ್ತಾರೆ ಇವರು. ಒಮ್ಮೊಮ್ಮೆ ಅವರು ಹೇಳುವ ರೀತಿಗೂ ನಡೆದುಕೊಳ್ಳುವ ರೀತಿಗೂ ಸಾಕಷ್ಟು ವ್ಯತ್ಯಾಸ ಇರುತ್ತದೆ.

ಹೀಗಾಗಿ ಅವರನ್ನು ಟ್ರೋಲ್ ಮಾಡಲಾಗುತ್ತಿದೆ. ಈಗ ಬಿಗ್ ಬಾಸ್ ಕಾರ್ಯಕ್ರಮದ ಕುರಿತ ಅವರು ಆಡಿದ ಮಾತಿನಿಂದ ಸಿಕ್ಕಿಹಾಕಿಕೊಂಡಿರುವ ಇವರ ವಿಡಿಯೋ ಹೊಸ ರೂಪದಲ್ಲಿ ಬಹಳ ವೈರಲ್ ಆಗುತ್ತಿದೆ. ಹಿಂದೊಮ್ಮೆ ಕಾರು ಡ್ರೈವ್ ಮಾಡುತ್ತಾ, ಸಂದರ್ಶನಕಾರೊಬ್ಬರಿಗೆ ಇವರು ಉತ್ತರಿಸುತ್ತಿದ್ದರು. ಆ ಸಮಯದಲ್ಲಿ ಬಿಗ್ ಬಾಸ್ ಕಾರ್ಯಕ್ರಮದ ಬಗ್ಗೆ ಪ್ರಶ್ನೆ ಕೇಳಿದ್ದರು.

ನನ್ನನ್ನು ಬಿಗ್ ಬಾಸ್ ಕಾರ್ಯಕ್ರಮಕ್ಕೆ ಪ್ರತಿ ಸಲ ಕರೆಯುತ್ತಾರೆ ಆದರೆ ನಾನು ನನ್ನ ಸಂಭಾವನೆಯನ್ನು ಒಂದು ದಿನಕ್ಕೆ ಒಂದು ಕೋಟಿ ಕೊಡಿ ಎಂದು ಕೇಳುತ್ತಿದ್ದೇನೆ ಅವರು ಕೊಡುವುದಿಲ್ಲ ಎಂದರು ನನ್ನ ಮಾತಿಗೆ ಒಪ್ಪಲಿಲ್ಲ ಹೀಗಾಗಿ ನಾನು ಕೂಡ ಈ ಕಾರ್ಯಕ್ರಮದಲ್ಲಿ ಭಾಗವಹಿಸುವುದಿಲ್ಲ ಎಂದು ಹೇಳಿಬಿಟ್ಟೆ ಎಂದು ಹೇಳಿರುವ ವಿಡಿಯೋ ಈಗ ಟ್ರೋಲಿಗರಿಗೆ ಸಿಕ್ಕಿ.

ಆಗ ಈ ರೀತಿ ಹೇಳಿದ್ದಾರೆ ಈಗ ಯಾಕೆ 9ನೇ ಸೀಸನ್ ನಲ್ಲಿ ಬಿಗ್ ಬಾಸ್ ಮನೆಗೆ ಹೋಗಿದ್ದಾರೆ. ಹಾಗಾದರೆ ಈ ಅವರಿಗೆ ಒಂದು ದಿನಕ್ಕೆ ಒಂದು ಕೋಟಿ ಕೊಡುತ್ತಿದ್ದಾರಾ ಎಂದು ಕಾಲೆಳೆದಿದ್ದಾರೆ. ಆರ್ಯವರ್ಧನ್ ಅವರು ಆಡಿರುವ ಮಾತುಗಳಿಗೆ ರಂಗಣ್ಣನವರ ಕೆಲವು ಡೈಲಾಗ್ ಗಳನ್ನು ಸೇರಿಸಿ ವಿಡಿಯೋ ಮಾಡಲಾಗಿದೆ. ಈ ವಿಡಿಯೋ ನೋಡಿದವರು ನಕ್ಕು ನಕ್ಕು ಸುಸ್ತಾಗಬೇಕು ಆ ರೀತಿ ವಿಡಿಯೋವನ್ನು ಎಡಿಟ್ ಮಾಡಲಾಗಿದೆ.

ಅದಕ್ಕೆ ಸೂಕ್ತವಾಗುವಂತೆ ರಂಗಣ್ಣ ಅವರ ಫೇಮಸ್ ಡೈಲಾಗ್ ಗಳನ್ನು ಸೇರಿಸಿರುವುದು ಇದಕ್ಕೆ ಮತ್ತಷ್ಟು ಹಾಸ್ಯವನ್ನು ಸೇರಿಸಿದಂತಿದೆ. ಎರಡು ಕೂಡ ಬಹಳ ಮ್ಯಾಚ್ ಆಗಿ ಕೊನೆಯಲ್ಲಿ ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಸಿನಿಮಾದ ಡೈಲಾಗ್ ಕೂಡ ಸೇರಿಸಲಾಗಿದೆ. ಆ ಸಿನಿಮಾದ ಒಂದು ಸಂದರ್ಭದಲ್ಲಿ ನಾಯಕನಿಗೆ ಆತನ ಸ್ನೇಹಿತ ನೀನೆನು ಶಾರುಖ್ ಖಾನ್ ರೀತಿ ಇದ್ದೀಯಾ? ಬ್ಯಾಂಕ್ ಜನಾರ್ಧನ್ ಕಡೆ ತಮ್ಮನ ರೀತಿ ಇದ್ದೀಯ ಎಂದು ಹೇಳಿದ ಡೈಲಾಗ್ ಆರ್ಯವರ್ಧನ್ ಅವರ ಈ ವಿಡಿಯೋಗೆ ತುಂಬಾ ಚೆನ್ನಾಗಿ ಸಿಂಕ್ ಆಗುತ್ತಿದೆ.

ಸದ್ಯಕ್ಕೀಗ ಬಿಗ್ ಮನೆಯಲ್ಲಿರುವ ಆರ್ಯವರ್ಧನ್ ಅವರು ಅಡುಗೆ ಮನೆಯಲ್ಲಿ ಹೆಚ್ಚು ಗುರುತಿಸಿಕೊಂಡು ಟಾಸ್ಕ್ ಗಳಲ್ಲೂ ಕೂಡ ತಮಗಾದಷ್ಟು ಪ್ರಯತ್ನ ಮಾಡಿ ಎಂಟರ್ಟೈನಿಂಗ್ ವಿಷಯದಲ್ಲಿ ಮಾತ್ರ ಮನೆಯಲ್ಲಿ ಎಲ್ಲರಿಗಿಂತ ಲೀಡ್ ಅಲ್ಲಿ ಇದ್ದಾರೆ. ಸದ್ಯಕ್ಕೆ ಈಗ ಬಿಗ್ ಬಾಸ್ ಮನೆಯಲ್ಲಿ ಆರ್ಯ ವರ್ಧನ್ ಅವರನ್ನು ನೋಡುತ್ತಿದ್ದರೆ ಹೊರಗಿದ್ದ ಆರ್ಯವರ್ಧನ್ ಅವರಿಗೂ ಈಗ ಮನೆ ಸೇರಿದ ಅವರಿಗೂ ಬಹಳ ವ್ಯತ್ಯಾಸ ಕಾಣಿಸುತ್ತಿದೆ.

ಬಿಗ್ ಬಾಸ್ ಮನೆಯಲ್ಲಿರುವ ಎಲ್ಲಾ ಕಂಟೆಸ್ಟೆಂಟ್ ಗಳಿಗಿಂತಲೂ ಇವರೇ ಮುಗ್ಧರಂತೆ ಕಾಣುತ್ತಿದ್ದು ತಾವು ಮಾಡಿಕೊಳ್ಳುವ ಎಡವಟ್ಟಿನಿಂದ ಮತ್ತು ಮಾತುಗಳಿಂದ ಮನೆಯ ಎಲ್ಲರನ್ನು ಮತ್ತು ಪ್ರೇಕ್ಷಕರನ್ನು ನಕ್ಕು ನಗಿಸುತ್ತಿದ್ದಾರೆ. ಅಲ್ಲದೆ ಈ ಬಾರಿಯ ವಿನ್ನರ್ ಕೂಡ ಆರ್ಭವರ್ಧನ್ ಅವರೇ ಆಗಲಿದ್ದಾರೆ ಎನ್ನುವ ಊಹಾಪೋಹಗಳು ಜೋರಾಗಿದೆ.

Entertainment Tags:Aryavardhan guruji, Bigboss season 9
WhatsApp Group Join Now
Telegram Group Join Now

Post navigation

Previous Post: ನಟಿ ಆಶು ರೆಡ್ಡಿ ಕಾಲು ಚಪ್ಪರಿಸಿ ನೆಕ್ಕಿದ ನಿರ್ದೇಶಕ ರಾಮ್ ಗೋಪಾಲ್ ರೆಡ್ಡಿ ವಿಡಿಯೋ ವೈರಲ್
Next Post: ಮುನಿಸು ಮರೆತು ಮತ್ತೆ ಒಂದಾದ ದೋಸ್ತಿಗಳು, ಕ್ರಾಂತಿ ಸಿನಿಮಾ ಸಂದರ್ಶನದಲ್ಲಿ ದರ್ಶನ್ ಬಾಯಲ್ಲಿ ಸುದೀಪ್ ಹೆಸರು ಕೇಳಿ ಬೆರಗಾದ ಅಭಿಮಾನಿಗಳು.

Leave a Reply Cancel reply

Your email address will not be published. Required fields are marked *

Copyright © 2025 Kannada Trend News.


Developed By Top Digital Marketing & Website Development company in Mysore