ಆಶಿಕ ರಂಗನಾಥ್ ಅವರು ಮೂಲತಃ ತುಮಕೂರಿನವ ರಾಗಿದ್ದು ಇವರು ಬೆಳೆದಿದ್ದು ತಮ್ಮ ಸ್ವಂತ ಊರು ತುಮಕೂರಿನಲ್ಲಿಯೇ ಇವರ ತಂದೆ ಎನ್ ರಂಗನಾಥ್ ಇವರು ಸಿವಿಲ್ ಗುತ್ತಿಗೆದಾರರಾಗಿ ಕೆಲಸ ಮಾಡುತ್ತಿದ್ದರು ಮತ್ತು ಇವರ ತಾಯಿ ಬಿ ಸುಧಾ ಇವರು ಗೃಹಿಣಿ ಹಾಗೂ ಇವರಿಗೆ ಮತ್ತೊಬ್ಬ ಮಗಳಿದ್ದು ಅವರು ಅನುಷಾ ಇವರು ಕೂಡ ನಟಿಯಾಗಿದ್ದಾರೆ. ಇವರು ತಮ್ಮ ಪಿಯು ವಿದ್ಯಾಭ್ಯಾಸಕ್ಕಾಗಿ ಬೆಂಗಳೂರಿಗೆ ತೆರಳಿದರು ಅಲ್ಲಿ ಕೋರಮಂಗಲ ಬೆಂಗಳೂರಿನ ಜ್ಯೋತಿ ನಿವಾಸ್ ಕಾಲೇಜಿನಲ್ಲಿ ತಮ್ಮ ಪಿಯು ಶಿಕ್ಷಣವನ್ನು ಮುಗಿಸಿದರು ನಂತರ ಇವರು ಬೆಂಗಳೂರಿನ ಎಂಇಎಸ್ ಕಾಲೇಜಿನಲ್ಲಿ ಪದವಿಯನ್ನು ಪಡೆದರು ಹಾಗೂ ಇವರು ನೃತ್ಯದಲ್ಲಿಯೂ ಕೂಡ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದರು.
ಫ್ರೆಶ್ ಫೇಸ್ ಸ್ಪರ್ಧೆಯ ಸಮಯದಲ್ಲಿ ತೆಗೆದ ಚಿತ್ರಗಳನ್ನು ನೋಡಿದ ನಂತರ ನಿರ್ದೇಶಕ ಮಹೇಶ್ ಬಾಬು ಅವರು ತಮ್ಮ ಚೊಚ್ಚಲ ಚಿತ್ರ ವಾದಂತಹ ಕ್ರೇಜಿಬಾಯ್ ಚಿತ್ರಕ್ಕೆ ನಟನೆಯನ್ನು ಮಾಡುವುದಾಗಿ ಕೇಳುತ್ತಾರೆ ನಂತರ ಆಶಿಕಾ ಅವರು ಈ ಚಿತ್ರಕ್ಕೆ ನಟಿಯಾಗಿ ನಟಿಸುವುದಕ್ಕೆ ಒಪ್ಪಿಕೊಂಡು ನಟನೆ ಯನ್ನು ಮಾಡುತ್ತಾರೆ ಈ ಚಿತ್ರದ ಮೂಲಕ ಆಶಿಕಾ ರಂಗನಾಥ್ ಅವರು ಕನ್ನಡ ಚಲನಚಿತ್ರ ರಂಗಕ್ಕೆ ಪಾದರ್ಪಣೆಯನ್ನು ಮಾಡುತ್ತಾರೆ ಹಾಗೂ ಈ ಚಿತ್ರ ನೂರು ದಿನಗಳ ಕಾಲ ಪ್ರದರ್ಶನವನ್ನು ಕೂಡ ಪೂರೈಸುತ್ತದೆ ಹಾಗೂ ಈ ಚಿತ್ರ ಆಶಿಕ ಅವರಿಗೆ ಹೆಚ್ಚಿನ ಪಾತ್ರಗಳನ್ನು ತಂದುಕೊಡುತ್ತದೆ ಹಾಗೂ ಈ ಚಿತ್ರದ ನಂತರ ಹಲವಾರು ಚಿತ್ರಗಳಲ್ಲಿ ನಟನೆ ಮಾಡುವುದಕ್ಕೆ ಅವಕಾಶಗಳು ಕೂಡ ಬರುತ್ತದೆ.
ಅದರಂತೆ ಆಶಿಕ ಅವರು ಹಲವಾರು ಚಿತ್ರಗಳನ್ನು ಕೂಡ ನಟನೆ ಮಾಡುತ್ತಾರೆ ಹಾಗೂ 1916ರ ಚಿತ್ರ ಕ್ರೇಜಿಬಾಯ್ ಮೂಲಕ ಖ್ಯಾತಿಗೆ ಏರುತ್ತಾರೆ ಇದರಿಂದ ಕರ್ನಾಟಕದ ಎಲ್ಲಾ ಅಭಿಮಾನಿಗಳು ಇವರನ್ನು ಕರ್ನಾಟಕದ ಕ್ರಶ್ ಎಂದು ಕರೆಯುತ್ತಾರೆ ಹಾಗೂ ಮಾಸ್ ಲೀಡರ್ ಚಿತ್ರದ ನಂತರ ಆಶಿಕ ಅವರು ಮುಗುಳುನಗೆ ಚಿತ್ರದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಅವರೊಟ್ಟಿಗೆ ನಟಿಯಾಗಿ ಅಭಿನಯಿಸಿದ್ದು ಈ ಚಿತ್ರವು ಕೂಡ ಹೆಚ್ಚಿನ ಯಶಸ್ಸನ್ನು ಕಂಡಿದ್ದು ಈ ಚಿತ್ರವನ್ನು ನಿರ್ದೇಶಕರಾದಂತಹ ಯೋಗರಾಜ್ ಭಟ್ ಅವರು ನಿರ್ದೇಶಿಸಿದ್ದು
ಈ ಚಿತ್ರದಲ್ಲಿ ಬರುವಂತಹ ಕೆಲವೊಂದು ಹಾಡುಗಳು ಹೆಚ್ಚಿನ ಜನಪ್ರಿಯತೆಯನ್ನು ಕೂಡ ಪಡೆದುಕೊಂಡಿದೆ ಈ ಚಿತ್ರದಲ್ಲಿ ಆಶಿಕ ಅವರು ತಮ್ಮದೇ ಆದಂತಹ ಮುಗ್ಧತೆಯ ಅಭಿನಯದ ಮೂಲಕ ಅಭಿನಯಿಸಿ ಎಲ್ಲಾ ಹುಡುಗರ ಮನಸ್ಸನ್ನು ಕದ್ದಿದ್ದರೂ. ನಂತರ ರಾಜು ಕನ್ನಡ ಮೀಡಿಯಂ ಎಂಬ ಚಿತ್ರದಲ್ಲಿ ಯೂ ಕೂಡ ನಟನೆ ಮಾಡಿದ್ದು ಈ ಚಿತ್ರವನ್ನು ನರೇಶ್ ಕುಮಾರ್ ಅವರು ನಿರ್ದೇಶಿಸಿದ್ದಾರೆ ಹಾಗೂ ನಂತರ ನಟ ಶರಣ್ ಅವರ ಚಿತ್ರ ವಾದಂತಹ ರಾಂಬೊ ಟು ಸಿನಿಮಾದಲ್ಲಿ ಆಶಿಕ ಅವರು ನಟಿಯಾಗಿ ನಟಿಸಿದ್ದಾರೆ.
ಹೀಗೆ ತಾಯಿಗೆ ತಕ್ಕ ಮಗ ಗರುಡ ರಂಗ ಮಂದಿರ ಅವತಾರ ಪುರುಷ ರೆಮೋ ಹೀಗೆ ಹಲವಾರು ಚಿತ್ರಗಳಲ್ಲಿ ನಟನೆ ಮಾಡಿದ್ದಾರೆ. ಅದರಲ್ಲಿಯೂ ಮುಖ್ಯವಾಗಿ ಅವತಾರ ಪುರುಷ ಸಿನಿಮಾವು ಹಾಸ್ಯ ತ್ರಿಲ್ಲರ್ ಚಲನಚಿತ್ರವಾಗಿದ್ದು ಈ ಸಿನಿಮಾವನ್ನು ಸುನಿ ಅವರು ನಿರ್ದೇಶಿಸಿದ್ದು ಈ ಸಿನಿಮಾದಲ್ಲಿ ನಟನ ಪೋಷಕ ಪಾತ್ರದಲ್ಲಿ ಸಾಯಿ ಕುಮಾರ್ ನಟಿಸಿದ್ದು ನಟಿ ಭವ್ಯ ಹಾಗೂ ನಟ ಶ್ರೀನಗರ್ ಕಿಟ್ಟಿ ಅಭಿನಯಿ ಸಿದ್ದು ಈ ಚಿತ್ರಕ್ಕೆ ಅರ್ಜುನ್ ಜನ್ಯ ಅವರು ಸಂಗೀತ ನಿರ್ದೇಶನ ಮಾಡಿದ್ದಾರೆ.