ಅಪ್ಪು ಇದೊಂದು ಹೆಸರಲ್ಲ ಬದಲಿಗೆ ಒಂದು ಶಕ್ತಿ ಅಂತ ಹೇಳಿದರೆ ತಪ್ಪಾಗಲಾರದು. ನಿಮ್ಮೆಲ್ಲರಿಗೂ ತಿಳಿದಿರುವಂತೆ ನಮ್ಮ ನಿಮ್ಮೆಲ್ಲರ ಪ್ರೀತಿಯ ಕರ್ನಾಟಕ ರತ್ನವನ್ನು ಕಳೆದುಕೊಂಡು ಇಂದಿಗೆ 11 ತಿಂಗಳು ಕಳೆದು 12 ತಿಂಗಳಾಗಿದೆ. ಆದರೂ ಕೂಡ ಅಪ್ಪು ಅವರನ್ನು ನಾವು ಪ್ರತಿನಿತ್ಯವೂ ಪ್ರತಿಕ್ಷಣವೂ ಕೂಡ ನೆನಪಿಸಿಕೊಳ್ಳುತ್ತೇವೆ ಸಾಮಾನ್ಯವಾಗಿ ಒಬ್ಬ ವ್ಯಕ್ತಿ ಶಾರಿರಿಕವಾಗಿ ನಮ್ಮನ್ನು ಬಿಟ್ಟು ಹೋದ ಮೇಲೆ ಆತನನ್ನು ಒಂದೆರಡು ದಿನ ನೆನಪಿಸಿಕೊಳ್ಳುತ್ತೇವೆ. ಆತ ಕುಟುಂಬಸ್ಥನಾಗಿರಲಿ ಸ್ನೇಹಿತನಾಗಿರಲಿ ಆಪ್ತನಾಗಿರಲಿ ಆದರೆ ಅಪ್ಪು ಅವರು ನಮ್ಮೆಲ್ಲರನ್ನು ಬಿಟ್ಟು ಹೋಗಿ ಸುಮಾರು ಒಂದು ವರ್ಷದ ಸಮೀಪವಾಗಿದೆ. ಆದರೂ ಕೂಡ ಅವರನ್ನು ಮರೆಯಲು ಸಾಧ್ಯವಾಗುತ್ತಿಲ್ಲ ಇದು ಕೇವಲ ರಾಜ್ ಕುಮಾರ ಕುಟುಂಬಕ್ಕೆ ಮಾತ್ರವಲ್ಲದೆ ಇಡೀ ಕರ್ನಾಟಕದ ಜನತೆಗೂ ಕೂಡ ಸಾಧ್ಯವಾಗುತ್ತಿಲ್ಲ.
ಜಾಹೀರಾತು:- ನಂ.1 ವಶೀಕರಣ ಸ್ಪೆಷಲಿಸ್ಟ್ ನಿಮ್ಮ ಜೀವನದ ಯಾವುದೇ ಕಠಿಣ ಮತ್ತು ನಿಗೂಢ ಗುಪ್ತ ಸಮಸ್ಯೆಗಳಿಗೆ ಕೇವಲ 1 ದಿನದಲ್ಲಿ 100ಕ್ಕೆ 100% ರಷ್ಟು ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ ಪಂಡಿತ್ : ಶ್ರೀ ಕೃಷ್ಣ ರಾವ್ 8971687339
ನಿಜಕ್ಕೂ ಅಪ್ಪು ಅವರ ಹೆಸರನ್ನು ಕೇಳುತ್ತಿದ್ದ ಹಾಗೆ ನಮ್ಮ ಮನಸ್ಸಿಗೆ ಅರಿವಿಲ್ಲದೆ ಕಣ್ಣಂಚಿನಲ್ಲಿ ನೀರು ತುಂಬಿಕೊಳ್ಳುತ್ತದೆ ಅಪ್ಪು ಅವರ ಹೆಸರು ನಮ್ಮ ಜೀವದಲ್ಲಿ ಅಷ್ಟು ಬೆರೆತು ಹೋಗಿದೆ ಅಂತ ಹೇಳಿದರು ಕೂಡ ತಪ್ಪಾಗಲಾರದು. ಬದುಕಿದರೆ ಅಪ್ಪು ಅವರ ರೀತಿ ಬದುಕಬೇಕು ಅಂತ ಅನಿಸುತದೆ ನಿಮಗೂ ಕೂಡ ಈ ರೀತಿ ಅನುಭವ ಆಗಿರಬಹುದು ಇದೆಲ್ಲ ಒಂದು ಕಡೆಯಾದರೆ ನೆನ್ನೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ಗಂಧದಗುಡಿ ಪ್ರಿ ಇವೆಂಟ್ ಕಾರ್ಯಕ್ರಮವನ್ನು ರಾಜ್ ಕುಮಾರ್ ಕುಟುಂಬದವರು ಏರ್ಪಡಿಸಿದರು ಈ ಒಂದು ಕಾರ್ಯಕ್ರಮಕ್ಕೆ ಅಪ್ಪುಪರ್ವ ಎಂಬ ಹೆಸರನ್ನು ಇಟ್ಟರು. ಈ ಕಾರ್ಯಕ್ರಮಕ್ಕೆ ಕೇವಲ ಸ್ಯಾಂಡಲ್ವುಡ್ ಮಾತ್ರವಲ್ಲದೆ ದಕ್ಷಿಣ ಭಾರತದ ಸಾಕಷ್ಟು ನಟ ನಟಿಯರಿಗೆ ಈ ಒಂದು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಆಹ್ವಾನವನ್ನು ನೀಡಲಾಗಿತ್ತು.
ಅಂದುಕೊಂಡಂತೆ ಎಲ್ಲಾ ಸ್ಟಾರ್ ನಟ ನಟಿಯರು ಕೂಡ ಈ ವೇದಿಕೆಗೆ ಬಂದು ಅಪ್ಪು ಅವರಿಗೆ ಗೌರವ ಸಲ್ಲಿಸಿ ಗಂಧದಗುಡಿ ಸಿನಿಮಾದ ಬಗ್ಗೆ ಒಂದಷ್ಟು ಹಿತ ಮಾತುಗಳನ್ನು ಆಡಿದರು. ಅಷ್ಟೇ ಅಲ್ಲದೆ ಗಂಧದ ಗುಡಿಸಿನಿಮಾವನ್ನು ನಾವು ಹಿಂದೆಂದೂ ಕಂಡು ಕೇಳರಿಯದ ರೀತಿಯಲ್ಲಿ ಆಚರಿಸಬೇಕು ಈ ಸಿನಿಮಾವನ್ನು ಎಲ್ಲರೂ ನೋಡಬೇಕು ಎಂದು ಹೇಳಿದರು. ಇದೆಲ್ಲ ಒಂದು ಕಡೆಯಾದರೆ ಇದೆ ಮೊದಲ ಬಾರಿಗೆ ಅಪ್ಪು ಅವರಿಗೆ ನಮನ ಸಲ್ಲಿಸಿದ ನಂತರ ಡಾಕ್ಟರ್ ರಾಜಕುಮಾರ್ ಕುಟುಂಬದವರು ಅಪ್ಪು ಅವರ ರಾಜಕುಮಾರ ಸಿನಿಮಾದ “ಗೊಂಬೆ ಹೇಳುತೈತೆ ಮತ್ತೆ ಹೇಳುತೈತೆ ನೀನೇ ರಾಜಕುಮಾರ” ಎಂಬ ಹಾಡನ್ನು ಡಾಕ್ಟರ್ ರಾಜಕುಮಾರ್ ಕುಟುಂಬದ ಎಲ್ಲಾ ಸದಸ್ಯರು ಸೇರಿ ವೇದಿಕೆಯ ಮೇಲೆ ಹೇಳುತ್ತಾರೆ.
ಇದೇ ವೇಳೆಯಲ್ಲಿ ಈ ಹಾಡನ್ನು ಕೇಳುತ್ತ ವೇದಿಕೆಯ ಮೇಲೆ ಅಶ್ವಿನಿ ಪುನೀತ್ ರಾಜಕುಮಾರ್ ಅವರು ಭಾವುಕಾರಾಗುತ್ತಾರೆ ಅಷ್ಟೇ ಅಲ್ಲದೆ ಹಾಡನ್ನು ಕೇಳಿದ ತಕ್ಷಣ ಕಣ್ಣೀರು ಹಾಕುವುದಕ್ಕೆ ಪ್ರಾರಂಭ ಮಾಡುತ್ತಾರೆ ಈ ಕಣ್ಣೀರು ಹಾಡು ಮುಗಿಯುವವರೆಗೂ ಕೂಡ ನಿಲ್ಲುವುದಿಲ್ಲ. ಕೊನೆಗೆ ದುಃಖ ತಾಳಲಾರದೆ ಅಶ್ವಿನಿ ಅವರು ವೇದಿಕೆಯಿಂದ ಕೆಳಗಿಳಿದು ಹೋಗುತ್ತದೆ ನಿಜಕ್ಕೂ ಈ ಒಂದು ಸನ್ನಿವೇಶ ನೋಡಿದರೆ ಎಂತವರ ಮನಸಾದರೂ ಕೂಡ ಒಂದು ಕ್ಷಣ ವಿಚಲತವಾಗುತ್ತದೆ ಅಷ್ಟೇ ಅಲ್ಲದೆ ಕರುಳು ಚೂರ್ ಅನಿಸುತ್ತದೆ. ಬದುಕಿ ಬಾಳಬೇಕಾದ ಅಪ್ಪು ಕನ್ನಡ ಸಿನಿಮಾ ಇಂಡಸ್ಟ್ರಿಯನ್ನು ಬಹುದೊಡ್ಡ ಮಟ್ಟಕ್ಕೆ ತೆಗೆದುಕೊಂಡು ಹೋಗುತ್ತಿದ್ದಂತಹ ವ್ಯಕ್ತಿ ಇದೀಗ ನಮ್ಮ ಜೊತೆ ಇಲ್ಲ ಅಂದರೆ ಅದನ್ನು ಆರಗಿಸಿಕೊಳ್ಳುವಂತಹ ಶಕ್ತಿ ಯಾರಿಗೂ ಕೂಡ ಇರುವುದಿಲ್ಲ.
ಇನ್ನು ಅಶ್ವಿನಿ ಅವರ ಬಗ್ಗೆ ಹೇಳಬೇಕು ಒಂದೆರಡು ದಿನ ತೆರೆಯ ಮೇಲೆ ನೋಡುವ ನಾವೇ ಅಪ್ಪು ಅವರನ್ನು ಇಷ್ಟು ಮಿಸ್ ಮಾಡಿಕೊಳ್ಳುತ್ತಿದ್ದೇವೆ ಇನ್ನು ಸುಮಾರು 20 ವರ್ಷಗಳಿಂದಲೂ ಕೂಡ ದಾಂಪತ್ಯ ಜೀವನ ನಡೆಸಿದ ಅಶ್ವಿನಿ ಅವರ ಪರಿಸ್ಥಿತಿ ಏನಾಗಿರಬೇಡ ಎಂದು ಊಹೆ ಮಾಡಿ ನಿಜಕ್ಕೂ ಈ ವಿಡಿಯೋ ನೋಡಿದರೆ ಅದೆಂತಹ ಕಲ್ಲು ಹೃದಯದವನಾದರೂ ಕೂಡ ಒಂದು ಕ್ಷಣ ಕಣ್ಣೀರು ಹಾಕುತ್ತಾನೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು.? ತಪ್ಪದೇ ಅಪ್ಪು ಅವರ ಬಗ್ಗೆ ಒಂದೆರಡು ಸಾಲುಗಳನ್ನು ಕಾಮೆಂಟ್ ಮಾಡಿ.