Sunday, April 20, 2025
WhatsApp Group Join Now
Telegram Group Join Now
WhatsApp Group Join Now
Telegram Group Join Now
HomeCinema Updatesಸ್ಯಾಂಡಲ್ ವುಡ್ ಗೂ ಬಂತು ಬಾಯ್ಕಾಟ್ ಬಿಸಿ, ಬನಾರಸ್ ಸಿನಿಮಾವನ್ನು ಬಾಯ್ಕಾಟ್ ಮಾಡುತ್ತಿರುವುದೇಕೆ ಗೊತ್ತಾ.?

ಸ್ಯಾಂಡಲ್ ವುಡ್ ಗೂ ಬಂತು ಬಾಯ್ಕಾಟ್ ಬಿಸಿ, ಬನಾರಸ್ ಸಿನಿಮಾವನ್ನು ಬಾಯ್ಕಾಟ್ ಮಾಡುತ್ತಿರುವುದೇಕೆ ಗೊತ್ತಾ.?

ಬಾಯ್ಕಾಟ್ ಎಂಬುದು ಇತ್ತೀಚಿನ ದಿನದಲ್ಲೇ ಟ್ರೆಂಡ್ ಆಗಿದೆ ಹೌದು ಮೊದಲೆಲ್ಲ ಈ ಹೆಸರು ಬಾಲಿವುಡ್ ನಲ್ಲಿ ಮಾತ್ರ ಕೇಳಿ ಬರುತ್ತಿತ್ತು ಆದರೆ ಇತ್ತೀಚಿನ ದಿನದಲ್ಲಿ ಈ ಹೆಸರು ನಮ್ಮ ಸ್ಯಾಂಡಲ್ವುಡ್ ನಲ್ಲಿ ಕೂಡ ಕೇಳಿ ಬರುತ್ತಿದೆ ಇದಕ್ಕೆ ಮುಖ್ಯ ಕಾರಣವಾದರೂ ಏನು ಎಂಬುದನ್ನು ನೋಡುವುದಾದರೆ. ಬನಾರಸ್ ಸಿನಿಮಾದಲ್ಲಿ ಶಾಸಕ ಜಮೀರ್ ಅಹಮದ್ ಖಾನ್ ಅವರ ಪುತ್ರ ಝೈದ್ ಖಾನ್ ಅವರು ನಾಯಕ ನಟನಾಗಿ ಅಭಿನಯಿಸಿದ್ದಾರೆ. ಇದೇ ಮೊದಲ ಬಾರಿಗೆ ಈ ಸಿನಿಮಾದಲ್ಲಿ ನಟನೆ ಮಾಡುವುದರ ಮೂಲಕ ಸ್ಯಾಂಡಲ್ ವುಡ್ ಗೆ ಪಾದರ್ಪಣೆ ಮಾಡಿದ್ದಾರೆ. ಅಂದ ಹಾಗೆ ಈ ಸಿನಿಮಾ ಪಾನ್ ಇಂಡಿಯಾ ಸಿನಿಮಾ ವಾಗಲಿದೆ ಕನ್ನಡ ಹಿಂದಿ ತಮಿಳು ಸೇರಿದಂತೆ ಸಾಕಷ್ಟು ಭಾಷೆಯಲ್ಲಿ ಈ ಸಿನಿಮಾ ತಯಾರಾಗುತ್ತಿದ್ದು ಮುಂದಿನ ತಿಂಗಳಿನಲ್ಲಿ ಈ ಸಿನಿಮಾ ಬಿಡುಗಡೆಗೆ ಎಲ್ಲ ರೀತಿಯಾದಂತಹ ತಯಾರಿ ಮಾಡಿಕೊಂಡಿದೆ.

ಆದರೆ ಸಿನಿಮಾ ಬಿಡುಗಡೆ ಆಗುವುದಕ್ಕಿಂತ ಮುಂಚೆ ಇದೀಗ ಚಿತ್ರ ತಂಡಕ್ಕೆ ಮತ್ತು ನಾಯಕ ನಟನಿಗೆ ಸಂ.ಕ.ಷ್ಟ ಒಂದು ಎದುರಾಗಿದೆ ಹೌದು ಈ ಸಿನಿಮಾವನ್ನು ಬಿಡುಗಡೆ ಮಾಡಬಾರದು ಒಂದು ವೇಳೆ ಬಿಡುಗಡೆ ಮಾಡಿದರು ಕೂಡ ಈ ಸಿನಿಮಾವನ್ನು ಯಾರು ನೋಡಬಾರದು. ಈ ಸಿನಿಮಾವನ್ನು ಬಾಯ್ಕಟ್ ಮಾಡಿ ಎಂದು ಇದೀಗ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಚರ್ಚೆ ಶುರುವಾಗಿದೆ ಅಷ್ಟಕ್ಕೂ ಬನಾರಸ್ ಸಿನಿಮಾ ವನ್ನು ಬಾಯ್ಕಾಟ್ ಮಾಡುತ್ತಿರುವುದು ಯಾಕೆ ಎಂಬುದನ್ನು ನೋಡುವುದಾದರೆ ಶಾಸಕ ಜಮೀರ್ ಅಹ್ಮದ್ ಖಾನ್ ಕೊಟ್ಟ ಹೇಳಿಕೆಯ ಕಾರಣವಾಗಿದೆ. ಹೌದು ನಿಮ್ಮೆಲ್ಲರಿಗೂ ತಿಳಿದಿರುವಂತಹ ಬೆಂಗಳೂರಿನಲ್ಲಿ ಇರುವಂತಹ ಈದ್ಗ ಮೈದಾನದಲ್ಲಿ ಪ್ರತಿ ವರ್ಷವೂ ಕೂಡ ಮುಸಲ್ಮಾನರಿಗೆ ಸಂಬಂಧಪಟ್ಟಂತಹ ಯಾವುದೇ ಹಬ್ಬವಾದರೂ ಕೂಡ ಅಲ್ಲಿ ಎಲ್ಲ ಮುಸ್ಲಿಂ ಬಾಂಧವರು ನೆರೆದು ನಮಾಜ್ ಮಾಡುವುದಕ್ಕೆ ಅವಕಾಶವಿದೆಯಂತೆ ಆದರೆ.

ನಮ್ಮ ಹಿಂದೂ ಧರ್ಮದ ಭಕ್ತಿ ಭಾವದಿಂದ ಆಚರಿಸುವಂತಹ ಗಣೇಶ ಚತುರ್ಥಿಯನ್ನು ಈದ್ಗ ಮೈದಾನದಲ್ಲಿ ಆಚರಿಸಬಾರದಂತೆ ಅಂದರೆ ಈಗ ಮೈದಾನದಲ್ಲಿ ಗಣೇಶ ಮೂರ್ತಿಯನ್ನು ಇಡಬಾರದು ಇದಕ್ಕೆ ಅವಕಾಶವಿಲ್ಲ ಎಂದು ಶಾಸಕ ಜಮೀರ್ ಅಹಮದ್ ಖಾನ್ ಅವರು ಹೇಳಿಕೆಯನ್ನು ನೀಡಿದ್ದಾರೆ. ಅಂದ ಹಾಗೆ ಈತ ಚಾಮರಾಜಪೇಟೆಯ ಸಚಿವ ಹಾಗಾಗಿ ಅಲ್ಲಿ ಇರುವಂತಹ ಈಗ ಮೈದಾನದಲ್ಲಿ ಈ ಒಂದು ಗಣೇಶ ಚತುರ್ಥಿಯನ್ನು ಮಾಡುವುದಕ್ಕೆ ನಾವು ಅವಕಾಶ ನೀಡುವುದಿಲ್ಲ ಎಂದು ತರಾಟೆಯನ್ನು ತೆಗೆದಿದ್ದರೂ. ಹಿಂದೂ ಪರ ಹೋರಾಟ ಸಂಘದವರು ಮತ್ತು ಹಿಂದೂ ಮುಖಂಡದವರು ನಿಮ್ಮ ಹಬ್ಬಗಳಿಗೆ ಈದ್ಗ ಮೈದಾನವನ್ನು ಬಳಕೆ ಮಾಡುತ್ತೀರಾ ಆಗ ಯಾವುದೇ ರೀತಿಯಾದಂತಹ ವಿರೋಧವನ್ನು ವ್ಯಕ್ತಪಡಿಸುವುದಿಲ್ಲ ಆದರೆ ನಮ್ಮ ಹಿಂದೂ ಧರ್ಮಕ್ಕೆ ಸಂಬಂಧಪಟ್ಟಂತಹ ಹಬ್ಬ ಆಚರಣೆ ಮಾಡುವಾಗ ಯಾಕೆ ಹೀಗೆ ತರಾಟೆಗೆ ತೆಗೆಯುತ್ತಿದ್ದಾರೆ ಎಂದು ಪ್ರಶ್ನೆಯನ್ನು ಕೇಳಿದ್ದಾರೆ.

ಈದ್ಗ ಮೈದಾನ ನಮಗೆ ಸೇರಿದ್ದು ನಮ್ಮ ಸ್ವಂತದ್ದು ಎಂದು ಹೇಳಿಕೆ ನೀಡಿದ್ದಾರೆ ವಾಸ್ತವವಾಗಿ ಹೇಳಬೇಕಾದರೆ ಇದು ಸರ್ಕಾರಿ ಜಾಗ ಈದ್ಗ ಇರುವ ಕಾರಣದಿಂದಾಗಿ ಇದಕ್ಕೆ ಈಗ ಮೈದಾನ ಎಂದು ಹೇಳುತ್ತಿದ್ದಾರೆ ಆದರೆ ಶಾಸಕ ಜಮೀರ್ ಅವರು ಮಾತ್ರ ಇದನ್ನು ತಮ್ಮ ಸ್ವಂತ ಆಸ್ತಿ ಎಂಬಂತೆ ಭಾವಿಸುತ್ತಿದ್ದಾರೆ. ಹಾಗಾಗಿ ಈ ವಿಚಾರದಿಂದ ಕೋಪಗೊಂಡಂತಹ ಹಿಂದೂ ಪರ ಹೋರಾಟಗಾರರು ಮತ್ತು ಹಿಂದೂ ಅಭಿಮಾನಿಗಳು ಜಮೀರ್ ಅಹಮದ್ ಅವರು ಮಗ ನಟನೆ ಮಾಡಿರುವಂತಹ ಬನಾರಸ್ ಸಿನಿಮಾ ವನ್ನು ಬಾಯ್ಕಟ್ ಮಾಡಬೇಕು ಆಗ ಮಾತ್ರ ಇಂಥವರಿಗೆ ಬುದ್ಧಿ ಬರುತ್ತದೆ ಎಂದು ಇದೀಗ ಸೋಶಿಯಲ್ ಮೀಡಿಯಾದಲ್ಲಿ ಹೊಸದೊಂದು ಅಭಿಯಾನ ಶುರು ಮಾಡಿದ್ದಾರೆ.

ಎಲ್ಲರಿಗೂ ತಿಳಿದಿರುವಂತೆ ಲಾಲ್ ಸಿಂಗ್ ಚಡ್ಡಾ ಎಂಬ ಸಿನಿಮಾವನ್ನು ಬಾಯ್ಕಟ್ ಮಾಡಿದ್ದರು ಈ ಸಿನಿಮಾ ಬಾಯ್ಕಾಟ್ ಮಾಡಿದ ನಂತರ ಈ ಸಿನಿಮಾಗೆ ಹಾಕಿದ ಬಂಡವಾಳವು ಕೂಡ ಹಿಂದಿರುಗಿ ಬರಲಿಲ್ಲ. ಇದರ ನಂತರ ರಣಭೀರ್ ಕಪೂರ್ ಅವರ ಬ್ರಹ್ಮಾಸ್ತ್ರ ಸಿನಿಮಾ, ವಿಜಯ್ ದೇವರಕೊಂಡ ಅವರ ಲೈಗರ್ ಸಿನಿಮಾ ಬಾಯ್ಕಟ್ಟಾಗಿದ್ದವು ಇದಾದ ನಂತರ ಇದೇ ಮೊದಲ ಬಾರಿಗೆ ಸ್ಯಾಂಡಲ್ ವುಡ್ ನಲ್ಲಿ ಬನಾರಸ್ ಬಾಯ್ಕಾಟ್ ಆಗಿರುವುದು ಹಾಗಾಗಿ ಈ ಸಿನಿಮಾ ರಿಲೀಸ್ ಆದ ನಂತರ ಸಿನಿಮಾ ಯಾವ ರೀತಿ ಪ್ರದರ್ಶನ ಕಾಣುತ್ತದೆ ಎಂಬುದನ್ನು ಕಾದು ನೋಡಬೇಕಿದೆ ಇದೆ ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ.