ಸಿನಿಮಾ ತಯಾರಾಗಿ ರಿಲೀಸ್ ಆಗುವುದು ಎಂದರೆ ಅದು ಆ ಸಿನಿಮಾದ ನಾಯಕ ನಿರ್ದೇಶಕ ನಿರ್ಮಾಪಕ ಸೇರಿದಂತೆ ಇಡೀ ತಂಡಕ್ಕೆ ಅಗ್ನಿಪರೀಕ್ಷೆ. ಆದರೆ ಬಿಡುಗಡೆ ವೇಳೆ ಅಥವಾ ಚಿತ್ರ ಸೆಟ್ಟೇರುತ್ತಿದ್ದಂತೆ ನೆಗೆಟಿವ್ ವೈಬ್ರೇಶನ್ ಅಥವಾ ಕಮೆಂಟ್ ಬಂದು ಬಿಟ್ಟರೆ ಅದನ್ನು ಮುಂದುವರಿಸಿಕೊಂಡು ಹೋಗುವ ಧೈರ್ಯ ಹೆಚ್ಚಿನ ಜನರಲ್ಲಿ ಇರುವುದಿಲ್ಲ. ಹೀಗೆ ಕನ್ನಡದ ಚಿತ್ರ ಒಂದಕ್ಕೆ ಮೊದಲ ದಿನದಿಂದಲೂ ಬಾಯ್ಕಾಟ್ ಮಾಡುವಂತೆ ಒತ್ತಡ ಇತ್ತು.
ರಿಲೀಸ್ ವೇಳೆಯಲ್ಲೂ ಸಿನಿಮಾ ನೋಡುವುದೇ ಇಲ್ಲ ಎಂದು ಹಲವಾರು ಜನರು ವಿರೋಧಿಸಿದ್ದರು. ಇದು ಬೇರಾವ ಸಿನಿಮಾ ಅಲ್ಲ ಅದ್ಬುತ ಪ್ರೇಮ ಕಾವ್ಯದ ಮೂಲಕ ಕನ್ನಡದಲ್ಲಿ ಬಹಳ ದಿನಗಳ ನಂತರ ಟೈಮ್ ಟ್ರಾವೆಲಿಂಗ್ ಕಥೆಯನ್ನು ಕಟ್ಟಿಕೊಟ್ಟಿರುವ ಬನಾರಸ್ ಎನ್ನುವ ಚಿತ್ರ. ಈ ಚಿತ್ರಕ್ಕೆ ಶಾಸಕ ಜಮೀರ್ ಅಹ್ಮದ್ ಅವರ ಪುತ್ರ ಝೈಂದ್ ಖಾನ್ ನಾಯಕರಾಗಿದ್ದಾರೆ.
ಸಿನಿಮಾ ಬಗ್ಗೆ ಬೇರೇನು ಸಮಸ್ಯೆ ಇಲ್ಲದಿದ್ದರೂ ಝೈದ್ ಖಾನ್ ಅವರು ನಾಯಕ ಎನ್ನುವ ವಿಷಯವನ್ನು ಇಟ್ಟುಕೊಂಡು ರಾಜಕೀಯವಾಗಿ ಹಾಗೂ ಧರ್ಮದ ವಿಚಾರದಲ್ಲಿ ತಗಾದೆ ತೆಗೆದು ಚಿತ್ರ ತಡೆಯುವಂತೆ ಕಿಡಿಗೇಡಿಗಳು ಬೆಂಕಿ ಹಚ್ಚುತ್ತಿದ್ದರು. ಇದೆಲ್ಲದ ನಡುವೆ ನವೆಂಬರ್ 4ರಂದು ಬಿಡುಗಡೆಯಾದ ಬನಾರಸ್ ಚಿತ್ರವು ಮೆಲ್ಲಮೆಲ್ಲಗೆ ಅರ್ಧದಷ್ಟು ಚಿತ್ರಗಳನ್ನು ಮಂದಿರಗಳನ್ನು ಪಡೆದುಕೊಳ್ಳುತ್ತಾ ಕಲೆಕ್ಷನ್ ವಿಚಾರದಲ್ಲೂ ಕೂಡ ಸಮಾಧಾನಕರ ರೆಸ್ಪಾನ್ಸ್ ಪಡೆದುಕೊಳ್ಳುತ್ತಿದೆ.
ಈಗ ಸಿನಿಮಾ ಎರಡನೇ ವಾರಕ್ಕೆ ಮುನ್ನುಗುತ್ತಿದ್ದೆ ಇನ್ನೂ ಸಹ ಚಿತ್ರತಂಡ ಪ್ರಚಾರ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿದೆ. ನಟ ಝೈಂದ್ ಖಾನ್ ಮತ್ತು ನಿರ್ದೇಶಕ ಜಯತೀರ್ಥ ಅವರು ತಮ್ಮ ಹೆಗಲಿಗೆ ಹೊತ್ತುಕೊಂಡು ಸಿನಿಮಾವನ್ನು ಜವಾಬ್ದಾರಿತವಾಗಿ ಜನರಿಗೆ ತಲುಪಿಸುವ ಕೆಲಸ ಮಾಡುತ್ತಿದ್ದಾರೆ. ಈ ನಡುವೆ ಸಂದರ್ಶನಕ್ಕೆ ಸಿಕ್ಕ ಜಯತೀರ್ಥ ಅವರು ಸಿನಿಮಾ ಕುರಿತಂತೆ ಹಲವಾರು ವಿಷಯಗಳನ್ನು ಹಂಚಿಕೊಂಡಿದ್ದಾರೆ.
ಸಿನಿಮಾ ಈವರೆಗೆ ಮಾಡಿರುವ ಕಲೆಕ್ಷನ್ ಮತ್ತು ಸಿನಿಮಾ ಬಗ್ಗೆ ಮೊದಲ ದಿನದಿಂದ ಬಂದ ಅಡೆತಡೆ ಹಾಗೂ ಈಗ ಸಿನಿಮಾ ಪಡೆದುಕೊಳ್ಳುವ ರೆಸ್ಪಾನ್ಸ್ ಬನಾರಸ್ ಸಿನಿಮಾದ ಕುರಿತು ತಮಗಾದ ಅದ್ಭುತ ಅನುಭವ ಎಲ್ಲದರ ಕುರಿತು ಹಂಚಿಕೊಂಡಿದ್ದಾರೆ. ಜಯತೀರ್ಥ ಅವರು ಕರ್ನಾಟಕದ ಪ್ರವಾಸ ಮಾಡುತ್ತಾ, ಸಾಧ್ಯವಾದಷ್ಟು ಎಲ್ಲಾ ಚಿತ್ರಮಂದಿರಗಳಿಗೂ ಭೇಟಿ ಕೊಡುತ್ತಿದ್ದಾರೆ.
ಈ ಸಮಯದಲ್ಲಿ ಶಿರಾ ಪಟ್ಟಣದ ಚಿತ್ರಮಂದಿರ ಒಂದಕ್ಕೆ ಹೋಗಿದ್ದಾಗ ರೈತರ ಗುಂಪೊಂದು ಅಲ್ಲಿ ಸಿನಿಮಾ ನೋಡಲು ಬಂದಿತ್ತಂತೆ. ಆಗ ಸಿನಿಮಾ ನೋಡಿದ ರೈತರು ಹೇಳಿದ್ದು ಇಷ್ಟೇ. ಈ ಚಿತ್ರದ ಕಥೆ ನಮಗೆಲ್ಲ ಬಹಳ ಇಷ್ಟ ಆಗಿದೆ ಇದೇ ರೀತಿ ನಾಲ್ಕೈದು ಸಿನಿಮಾ ಕನ್ನಡದಲ್ಲಿ ಬಂದುಬಿಟ್ಟರೆ ಹಿಂದೂ ಮುಸ್ಲಿಂ ಎಲ್ಲರೂ ಒಂದಾಗಿ ಬಿಡುತ್ತಾರೆ ಎಂದ ಮಾತು ಇನ್ನೂ ನನ್ನ ಮನಸಲ್ಲಿ ಹಾಗೆ ಕೂತಿದೆ ಎಂದು ತಮಗಾದ ಅನುಭವವನ್ನು ಜಯತೀರ್ಥ ಅವರು ಹೇಳಿಕೊಂಡಿದ್ದಾರೆ.
ಇನ್ನು ಸಿನಿಮಾ ವಿಚಾರ ಹೇಳುವುದಾದರೆ ಝೈಂದ್ ಖಾನ್ ಅವರ ಅಭಿನಯ ಮತ್ತು ಇಂಪ್ರೂವ್ಮೆಂಟ್ ನೋಡಿದರೆ, ಧರ್ಮದ ವಿಚಾರವಾಗಿ ಅವರನ್ನು ಭೇದ ಮಾಡುವುದು ಬಿಟ್ಟು ನಮ್ಮವರು ಎಂದು ಕಾಣಬೇಕು ಅವರೀಗ ನಮ್ಮವರೇ ಆಗಿದ್ದಾರೆ ಅನಿಸುತ್ತದೆ. ರಾಜಕೀಯ ವ್ಯಕ್ತಿಯ ಮಗನಾದ ಕಾರಣ ದೊಡ್ಡ ಬಜೆಟ್ ನ ಮಾಸ್ ಸಿನಿಮಾದ ಮೂಲಕ ಲಾಂಚ್ ಆಗುತ್ತಾರೆ ಎಂದು ಎಲ್ಲರೂ ಭಾವಿಸಿದ್ದರು.
ಆದರೆ ಇವರು ಕ್ಲಾಸ್ ಕಥೆಯನ್ನು ಎತ್ತಿಕೊಂಡು ಉತ್ತಮ ಚಿತ್ರಕಥೆಯೊಂದಿಗೆ ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟಿರುವುದು ಒಳ್ಳೆಯ ನಡಿಗೆ ಆಗಿದೆ. ಬನಾರಸ್ ಖಂಡಿತವಾಗಿಯೂ ಕನ್ನಡಿಗರಿಗೆ ನಿರಾಸೆ ಉಂಟುಮಾಡದ ಸಿನಿಮಾವಾಗಿದೆ. ಹೆಚ್ಚಿನ ಮಂದಿ ಚಿತ್ರಮಂದಿರದೆಡೆ ಧಾವಿಸಲಿ ಸಿನಿಮಾ ತಂಡಕ್ಕೆ ಶುಭವಾಗಲಿ ಎಂದು ಹಾರೈಸೋಣ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ಕಮೆಂಟ್ ಮಾಡಿ