ವೈದ್ಯೋ ನಾರಾಯಣ ಹರಿ ಎಂದು ಹೇಳುವ ಆ ಸತ್ಯವಂತ ಕಾಲ ಮುಗಿದಿದೆ ಅನಿಸುತ್ತದೆ. ಈಗ ಎಲ್ಲೆಡೆ ಆಸ್ಪತ್ರೆಗಳೂ ಕೂಡ ಹಣ ಮಾಡುವ ದಂಧೆಗೆ ಇಳಿದಿವೆ. ಜನಸಾಮಾನ್ಯರು ಕಾಯಿಲೆ ಕಷ್ಟ ಬಂದರೆ ಆಸ್ಪತ್ರೆಗೆ ಹೋಗಲು ಹೆದರುವ ಪರಿಸ್ಥಿತಿ ನಿರ್ಮಾಣ ಆಗಿದೆ. ಬಡವ ಬಲ್ಲಿದ ಎನ್ನುವ ವ್ಯತ್ಯಾಸ ನೋಡದೆ ಖಾಸಗಿ ಆಸ್ಪತ್ರೆಗಳು ಮಾತ್ರ ಅಲ್ಲದೆ ಸರ್ಕಾರಿ ಆಸ್ಪತ್ರೆಗಳಲ್ಲೂ ಕೂಡ ಹಣ ಪೀಕುವವರನ್ನು ನೋಡಿ ಜನ ಹೈರಾಣಾಗಿ ಹೋಗಿದ್ದಾರೆ.
ಇವರೆಲ್ಲರ ನಡುವೆ ಕೆಲ ವೈದ್ಯರು ಇನ್ನೂ ಸಹ ತಮ್ಮ ವೃತ್ತಿ ಧರ್ಮಕ್ಕೆ ಅನ್ಯಾಯ ಮಾಡದಂತೆ ಪ್ರಾಮಾಣಿಕತೆಯಿಂದ ಬದುಕುತ್ತಿದ್ದಾರೆ. ಜನರ ಪ್ರಾಣ ಉಳಿಸಬಹುದಾದಂತಹ ಜನರ ಕಾಯಿಲೆಯನ್ನು ಗುಣ ಮಾಡಿ ಅವರನ್ನು ಆರೋಗ್ಯವಂತರನ್ನಾಗಿ ಮಾಡಬಹುದಾದಂತ ಕೆಲಸವನ್ನು ದೇವರ ವರಪ್ರಸಾದ ಎಂದು ಭಾವಿಸಿ, ಸೇವಾ ಮನೋಭಾವದಿಂದ ಆ ವೃತ್ತಿ ಮಾಡುವ ವೈದ್ಯರೊಬ್ಬರು ಬೆಂಗಳೂರಿನಲ್ಲಿದ್ದಾರೆ.
ಬೆಂಗಳೂರಿನ ಗುಟ್ಟಹಳ್ಳಿ ಸಮೀಪದಲ್ಲಿರುವ ಶ್ರೀನಿವಾಸ್ ಕ್ಲಿನಿಕ್ ವೈದ್ಯರಾದ ಡಾ. ಎಸ್. ಆರ್ ವೆಂಕಟೇಶ್ ಅವರು ಇದಕ್ಕೆ ಸಾಕ್ಷಿ ಎಂದೇ ಹೇಳಬಹುದು. ಯಾಕೆಂದರೆ ಈ ವೈದ್ಯರು ಹಣಕ್ಕೆ ಮೊದಲು ಪ್ರಾಮುಖ್ಯತೆ ಕೊಡುವುದಿಲ್ಲ ಮೊದಲು ರೋಗಿಯ ಸಮಸ್ಯೆ ನೋಡಿ ಚಿಕಿತ್ಸೆ ಕೊಟ್ಟು ನಂತರ ಹಣದ ಬಗ್ಗೆ ಮಾತನಾಡುತ್ತಾರೆ.
ಅದರಲ್ಲೂ ಇವರು ತೆಗೆದುಕೊಳ್ಳುವ ಅವರ ಚಾರ್ಜ್ 30 ರೂಪಾಯಿಗಳು ಮಾತ್ರ. ಜೊತೆಗೆ ಸಮಸ್ಯೆ ಹೆಚ್ಚಿದ್ದು ಬಹಳ ಕಷ್ಟದಲ್ಲಿ ಇರುವವರನ್ನು ಕಂಡರೆ ಇವರೇ ಹಣಕೊಟ್ಟು ಕಳುಹಿಸುತ್ತಾರೆ, ಅಂತಹ ಸಹೃದಯವಂತರು. ಇವರ ಬಗ್ಗೆ ಕೇಳಿ ಬರುವ ಮತ್ತೊಂದು ಮಾತು ಏನು ಎಂದರೆ ದಿನಕ್ಕೆ ನೂರಕ್ಕಿಂತ ಹೆಚ್ಚು ರೋಗಿಗಳು ಇವರ ಬಳಿ ಬರುತಾರಂತೆ. ಇವರ ಕೈಗುಣವೂ ಕೂಡ ಉತ್ತಮವಾಗಿದ್ದು ಅದೇ ಕಾರಣಕ್ಕಾಗಿ ಇವರ ಕ್ಲಿನಿಕ್ ಯಾವಾಗಲೂ ರಷ್ ಇರುತ್ತದೆಯಂತೆ.
ಇಳಿ ವಯಸ್ಸಿನಲ್ಲೂ ಸಹ ಇವರು ತಾವು ಕಲಿತಿರುವ ವಿದ್ಯೆ ನಾಲ್ಕು ಜನಕ್ಕೆ ಉಪಯೋಗ ಆಗಬೇಕು ಎನ್ನುವ ಕಾರಣಕ್ಕಾಗಿ ರಾತ್ರಿ 12 ಗಂಟೆಯಾದರೂ ಸಹ ಬರುವ ರೋಗಿಗಳನ್ನೆಲ್ಲಾ ನೋಡಿ ಮುಗಿಸಿ ಮನೆಗೆ ಹೋಗುವುದಂತೆ. ಇಂತಹ ವೈದ್ಯರು ಕೂಡ ನಮ್ಮ ನಡುವೆ ಇದ್ದಾರೆ ಎನ್ನುವುದು ಬಹಳ ಆಶ್ಚರ್ಯ. ನೊಂದವರ ಪಾಲಿಗೆ ದೇವರಂತೆ ಕಾಣುತ್ತಿರುವ ಇವರ ಈ ಗುಣ ಈಗಿನ ಕಾಲದ ವೈದ್ಯರು ಅಳವಡಿಸಿಕೊಳ್ಳುವಂತಾಗಲಿ.
ಇತ್ತೀಚಿಗೆ ಇವರನ್ನು ಕಲಾ ಮಾಧ್ಯಮ ಎನ್ನುವ ಯೂಟ್ಯೂಬ್ ಚಾನೆಲ್ ಅವರು ಸಂಪರ್ಕ ಮಾಡಿ ಸಂದರ್ಶನ ನಡೆಸಿದ್ದಾರೆ. ಆ ಸಂದರ್ಶನದಲ್ಲಿ ಈ ಕುರಿತು ಅವರನ್ನು ಪ್ರಶ್ನೆಗಳನ್ನು ಸಹ ಕೇಳಲಾಗಿದೆ ಈಗಿನ ಕಾಲದಲ್ಲಿ ವೈದ್ಯ ಲೋಕ ಈ ರೀತಿ ಆಗಿದೆ ಎಂದು ಜನ ನೊಂದು ಕೊಂಡಿದ್ದಾರೆ. ಇದರ ನಡುವೆ ನೀವು ಬಹಳ ವಿಶೇಷ. ಇದೇ ಕಾರಣಕ್ಕಾಗಿ ನೀವು ಪ್ರಸಿದ್ಧಿ ಆಗಿದ್ದೀರಿ ಈ ಬಗ್ಗೆ ನಿಮ್ಮ ಅಭಿಪ್ರಾಯ ಏನು ಎಂದು ಕೇಳಿದಾಗ ನಾನು ಮೂಲತಃ ಬಡ ಕುಟುಂಬದಿಂದ ಬಂದವನು ನನಗೆ ಬಡವರ ಸಮಸ್ಯೆ, ಕಷ್ಟ ಗೊತ್ತು ಎಂದು ಮಾತು ಶುರು ಮಾಡುತ್ತಾರೆ ಇವರು.
ತುಂಬಾ ಕಷ್ಟಪಟ್ಟು ನಾನು ಈ ವೃತ್ತಿಗೆ ಬಂದಿದ್ದೇನೆ. ಜೀವನದಲ್ಲಿ ಸುಖ-ದುಃಖ ಎರಡನ್ನು ಸಹ ನಾನು ಕಂಡಿದ್ದೇನೆ. ಬಡ ಜನರು ಬದುಕುವುದಕ್ಕಾಗಿಯೇ ಬಹಳ ಕಷ್ಟ ಪಡುತ್ತಿದ್ದಾರೆ ಅವರಿಗೆ ಕಾಯಿಲೆ ಬಂದರೆ ಕಡಿಮೆ ಬೆಲೆಯ ಆಂಟಿಬಯೋಟಿಕ್ ಅಥವಾ ಟಾನಿಕ್ ತರುವುದಕ್ಕೂ ಹಣ ಇರುವುದಿಲ್ಲ ಅದನ್ನು ನೋಡಿದ್ದೇನೆ. ಹೀಗಿರುವಾಗ ಹೆಚ್ಚು ಹಣ ಅವರಿಗೆ ಚಾರ್ಜ್ ಮಾಡಿ ಆ ಹಣ ತೆಗೆದುಕೊಂಡು ನಾನೇನು ಮಾಡಲಿ ಎನ್ನುವ ದೊಡ್ಡ ಗುಣ ಇವರದ್ದು. ಅವರ ಎಲ್ಲಾ ಮಾತುಗಳನ್ನು ಕೇಳಲು ಈ ವಿಡಿಯೋವನ್ನು ಪೂರ್ತಿಯಾಗಿ ನೋಡಿ.