ಸಂಖ್ಯಾಶಾಸ್ತ್ರದಲ್ಲಿ ಹುಟ್ಟಿದ ದಿನಾಂಕವನ್ನು ಆಧರಿಸಿ ಜೀವನದ ಅದೃಷ್ಟ ವನ್ನು ಹಾಗೂ ಏಳಿಗೆಯನ್ನು ಬಹಳ ಸುಲಭವಾಗಿ ನಿರ್ಧರಿಸಬಹುದು. ಯಾರಾದರೂ ಸರಿ 1, 10, 19, 28 ಈ ದಿನಾಂಕದಲ್ಲಿ ಹುಟ್ಟಿದ್ದರೆ ಅವರಿಗೆ ಸೂರ್ಯನ ಪ್ರಭಾವ ಎನ್ನುವುದು ಹೆಚ್ಚಾಗಿರುತ್ತದೆ. ಅವರ ಹುಟ್ಟಿದ ದಿನಾಂಕವನ್ನು ಕೂಡಿದಾಗ 1 ಎಂಬ ಸಂಖ್ಯೆ ಬಂದರೆ ಅವರ ಮೇಲೆ ಸೂರ್ಯನ ಪ್ರಭಾವ ಎನ್ನುವುದು ಹೆಚ್ಚಾಗಿರುತ್ತದೆ.
ಇವರಿಗೆ ನಾಯಕತ್ವದ ಗುಣ ಎನ್ನುವುದು ಹೆಚ್ಚಾಗಿರುತ್ತದೆ. ತಮ್ಮ ಮಾತೇ ನಡೆಯಬೇಕು ಎಂಬ ಘರ್ವವನ್ನು ಹೊಂದಿದವರಾಗಿರುತ್ತಾರೆ. ಸೂರ್ಯನ ಶಾಖ ಬೆಳಿಗ್ಗೆ ಕಡಿಮೆ ಇರುತ್ತದೆ ಅದೇ ರೀತಿ ಮಧ್ಯಾಹ್ನದ ಸಮಯದಲ್ಲಿ ಶಾಖದ ಪ್ರಭಾವ ಎನ್ನುವುದು ಹೆಚ್ಚಾಗಿ ಇರುತ್ತದೆ ಮಧ್ಯಾಹ್ನ ಹೆಚ್ಚಾಗಿ ಸೂರ್ಯನು ಪ್ರಕಾಶಿಸುತ್ತಾನೆ.
ಅದಕ್ಕೆ ಸಂಖ್ಯೆ 1 ಇದ್ದವರು ಅಥವಾ ಮೇಲೆ ಹೇಳಿದ ಈ ದಿನಾಂಕದಲ್ಲಿ ಜನಿಸಿದವರು ಸಹ ಸೂರ್ಯನ ರೀತಿಯೇ ಜೀವನದ ಆರಂಭದಲ್ಲಿ ಹೆಚ್ಚು ಏಳಿಗೆಯನ್ನು ಕಾಣುವುದಿಲ್ಲ. ಬದಲಿಗೆ ಇವರಿಗೆ 25 ವರ್ಷ ತುಂಬಿದ ಬಳಿಕ ಇವರಿಗೆ ಅದೃಷ್ಟ ಎನ್ನುವುದು ಕೂಡಿಬರುತ್ತದೆ. 25ರ ನಂತರ ಯಾವ ಸಮಯ ದಲ್ಲಿ ಅದೃಷ್ಟ ಬರುತ್ತದೆ ಎಂದು ನೋಡುವುದಾದರೆ ತಮ್ಮ 28ನೇ ವಯಸ್ಸಿನಲ್ಲಿ ಭಾರೀ ಅದೃಷ್ಟವನ್ನು ಹೊಂದುತ್ತಾರೆ.
ಅದೃಷ್ಟ ಸಂಖ್ಯೆ 1 ಇದ್ದವರಿಗೆ 28ನೇ ವಯಸ್ಸಿನಲ್ಲಿ ಅದೃಷ್ಟ ಕೂಡಿಬರುತ್ತದೆ ಹಾಗೆಯೇ 2, 11, 20, 29 ಈ ದಿನಾಂಕದಲ್ಲಿ ಹುಟ್ಟಿದವರಿಗೆ ಅದೃಷ್ಟ ಸಂಖ್ಯೆ 2 ಆಗಿರುತ್ತದೆ ಹುಟ್ಟಿದ ದಿನಾಂಕ ಅಷ್ಟನ್ನು ಕೂಡಿದರೆ 2 ಎಂಬ ಸಂಖ್ಯೆ ಬಂದರೆ ಅದು ಅವರ ಅದೃಷ್ಟ ಸಂಖ್ಯೆಯಾಗುತ್ತದೆ. ಇವರ ಗುಣ ಸ್ವಭಾವ ಯಾವ ರೀತಿಯಾಗಿ ಇರುತ್ತದೆ ಎಂದು ನೋಡುವುದಾದರೆ ಇವರು ಸ್ವಲ್ಪ ದಿನಗಳ ಕಾಲ ಚೆನ್ನಾಗಿದ್ದರೆ ಮತ್ತೆ ಸ್ವಲ್ಪ ದಿನಗಳ ಕಾಲ ಚೆನ್ನಾಗಿರುವುದಿಲ್ಲ.
ಅಮಾವಾಸ್ಯೆಯಿಂದ ಪೌರ್ಣಮಿ ವರೆಗೆ ಹೆಚ್ಚು ಆಕ್ಟಿವ್ ಆಗಿ ಇದ್ದರೆ ಮತ್ತೆ ಪೌರ್ಣಮಿ ಯಿಂದ ಅಮಾವಾಸ್ಯೆ ವರೆಗೆ ಆಕ್ಟಿವ್ ಆಗಿ ಇರುವುದಿಲ್ಲ. ರಾತ್ರಿ ಸಮಯದಲ್ಲಿ ಅತಿ ಹೆಚ್ಚು ಆಲೋಚನೆ ಗಳನ್ನು ಇವರು ಮಾಡುತ್ತಾರೆ ಇವರು ಹೆಚ್ಚಾಗಿ ಯಾರನ್ನು ಸಹ ಸ್ನೇಹಿತರನ್ನಾಗಿ ಮಾಡಿಕೊಳ್ಳುವುದಿಲ್ಲ ನಾಯಕತ್ವದ ಗುಣ ಇವರಲ್ಲಿ ಇರುವುದಿಲ್ಲ. ಮತ್ತೊಬ್ಬರನ್ನು ಹಿಂಬಾಲಿಸುವಂತಹ ಗುಣ ಇವರಲ್ಲಿ ಹೆಚ್ಚಾಗಿರುತ್ತದೆ. ಈ ಅದೃಷ್ಟ ಸಂಖ್ಯೆ ಹೊಂದಿದ ವ್ಯಕ್ತಿಗಳು ತಮ್ಮ 23ನೇ ವಯಸ್ಸಿಗೆ ಅದೃಷ್ಟವನ್ನು ಹೊಂದುತ್ತಾರೆ.
ಹಾಗೆಯೇ 3, 12, 21, 30 ಈ ದಿನಾಂಕದಲ್ಲಿ ಹುಟ್ಟಿದವರಿಗೆ ಅಥವಾ ಇವರ ಹುಟ್ಟಿದ ದಿನಾಂಕವನ್ನು ಕೂಡಿದರೆ 3 ಸಂಖ್ಯೆ ಬರುವವರಿಗೆ ಜೀವನದಲ್ಲಿ ಕಲಾ ರಂಗದಲ್ಲಿ ಬೆಳೆಯುವಂತಹ ವಿಶೇಷವಾದ ಶಕ್ತಿ ಇರುತ್ತದೆ. ಇವರ ಜೀವನದಲ್ಲಿ ಸೆಲೆಬ್ರಿಟಿಗಳಾಗುವಂತಹ ಅವಕಾಶಗಳು ಅದ್ಭುತವಾಗಿ ಇರುತ್ತದೆ.
ಹೆಚ್ಚಾಗಿ ಹುಟ್ಟಿದ ದಿನಾಂಕ ಕೂಡಿದಾಗ 3 ಸಂಖ್ಯೆ ಬರುವಂತಹ ಶೇಕಡ 90ರಷ್ಟು ಜನರು ಸೆಲೆಬ್ರಿಟಿಗಳಾಗುತ್ತಾರೆ. ವಯಸ್ಸು 30 ರವರೆಗೆ ಒಂದು ರೀತಿಯ ಜೀವನವಾದರೆ 30ರ ನಂತರ ಮತ್ತೊಂದು ರೀತಿಯ ಜೀವನವನ್ನು ಇವರು ಕಾಣುತ್ತಾರೆ. ಇವರು ಅತ್ಯುತ್ತಮವಾದ ಜೀವನವನ್ನು ನಡೆಸುತ್ತಾರೆ. ಅದೇ ರೀತಿ ಇವರು 30 ವರ್ಷದ ನಂತರ ಅನೇಕ ರೀತಿಯ ಯಶಸ್ಸನ್ನು ಕಾಣುತ್ತಾರೆ.
ಹಾಗೆಯೇ 4, 13, 22, 30 ಈ ದಿನಾಂಕದಲ್ಲಿ ಹುಟ್ಟಿದವರಿಗೆ ಅಥವಾ ಜನ್ಮ ದಿನಾಂಕವನ್ನು ಕೂಡಿದರೆ 4 ಸಂಖ್ಯೆ ಬರುವವರಿಗೆ ಇವರಿಗೆ 31ನೇ ವರ್ಷ ತುಂಬಿದ ನಂತರ ಇವರ ಜೀವನದಲ್ಲಿ ಭಾರಿ ಅದೃಷ್ಟ ಎನ್ನುವುದು ಬರುತ್ತದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.
https://youtu.be/sjujQz5tDUA?si=ipgWRDgs2QsKiS2Z