ಪ್ರತಿಯೊಬ್ಬರ ದೇಹದಲ್ಲಿಯೂ ಕೂಡ ಶ್ವಾಸಕೋಶ ಬಹಳ ಪ್ರಮುಖವಾ ದಂತಹ ಅಂಗವಾಗಿದ್ದು. ಇದರ ಕೆಲಸ ನಮ್ಮ ದೇಹದಲ್ಲಿ ಬಹಳ ಪ್ರಮುಖವಾದದ್ದು ಎಂದೇ ಹೇಳಬಹುದು. ಹೌದು ಅದೇನೆಂದರೆ ಗಾಳಿ ಯಲ್ಲಿರುವಂತಹ ಆಕ್ಸಿಜನ್ ಅಂಶವನ್ನು ತೆಗೆದುಕೊಂಡು ಶರೀರದಲ್ಲಿ ರುವ ಕಾರ್ಬನ್ ಡೈಯಾಕ್ಸೈಡ್ ಅಂಶವನ್ನು ಹೊರಹಾಕುತ್ತದೆ.
ಹಾಗಾಗಿ ಈ ಅಂಗದಲ್ಲಿಯೂ ಕೂಡ ಕ್ಯಾನ್ಸರ್ ಆಗುವಂತಹ ಸಾಧ್ಯತೆಗಳು ಹೆಚ್ಚಾಗಿದೆ. ಆದ್ದರಿಂದ ನಾವು ಶ್ವಾಸಕೋಶದ ಆರೋಗ್ಯವನ್ನು ಕಾಪಾಡಿ ಕೊಳ್ಳುವುದು ಬಹಳ ಮುಖ್ಯವಾಗಿರುತ್ತದೆ. ಒಟ್ಟಾರೆಯಾಗಿ ಗಮನಿಸು ವುದಾದರೆ ಈ ಒಂದು ಶ್ವಾಸಕೋಶದ ಕ್ಯಾನ್ಸರ್ ಯಥೇಚ್ಛವಾಗಿ ಗಂಡಸರಲ್ಲಿ ಕಾಣಿಸಿಕೊಳ್ಳುತ್ತದೆ
ಹಾಗಾದರೆ ಈ ಸಮಸ್ಯೆ ಕಾಣಿಸಿ ಕೊಳ್ಳುವುದಕ್ಕೆ ಪ್ರಧಾನವಾಗಿರುವಂಥ ಕಾರಣಗಳು ಏನು ಎಂದು ನೋಡುವುದಾದರೆ ಹೆಚ್ಚಾಗಿ ಧೂಮಪಾನ ಮಾಡುವುದರಿಂದ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಇದರ ಜೊತೆ ಗಾಳಿಯಲ್ಲಿ ಅಂದರೆ ವಾಯುಮಾಲಿನ್ಯದಿಂದಲೂ ಕೂಡ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ ಹಾಗೂ ಕೆಲವೊಂದು ಕಾರ್ಖಾನೆಗಳಲ್ಲಿ ಕೆಲಸ ಮಾಡುವಂತಹ ಜನರಲ್ಲಿಯೂ ಕೂಡ ಈ ಸಮಸ್ಯೆ ಕಾಣಿಸಿಕೊಳ್ಳಬಹುದು.
ಈ ಶ್ವಾಸಕೋಶದ ಸಮಸ್ಯೆ ಕಾಣಿಸಿಕೊಳ್ಳುವುದಕ್ಕೆ ಹಲವಾರು ರೀತಿಯ ವಿಧಾನಗಳು ಕೂಡ ಇದೆ ಹೌದು ಬೇರೆ ಬೇರೆ ಕಾರಣಗಳಿಂದಲೂ ಕೂಡ ಈ ಸಮಸ್ಯೆ ಕಾಣಿಸಿಕೊಳ್ಳಬಹುದು. ಹಾಗಾದರೆ ಶ್ವಾಸಕೋಶದ ಸಮಸ್ಯೆ ಇದ್ದರೆ ಯಾವ ಕೆಲವು ಲಕ್ಷಣಗಳು ಕಾಣಿಸಿಕೊಳ್ಳುತ್ತದೆ ಎಂದು ನೋಡುವುದಾದರೆ.
* ಪದೇಪದೇ ಕೆಮ್ಮು ಕಾಣಿಸಿಕೊಳ್ಳುವುದು.
* ಕೆಮ್ಮಿದ ಸಮಯದಲ್ಲಿ ಕಫ ಬಂದರೆ ಹಾಗೂ ಅದರಲ್ಲಿ ರಕ್ತ ಕಾಣಿಸಿ ಕೊಂಡರೆ ಇದು ಬಹಳ ಪ್ರಮುಖವಾದ ಲಕ್ಷಣವಾಗಿದೆ.
* ದೇಹದ ತೂಕ ದಿನೇ ದಿನೇ ಕಡಿಮೆಯಾಗುತ್ತಾ ಬರಬಹುದು.
* ದೇಹದ ಯಾವುದೇ ಜಾಗದಲ್ಲಿ ಪದೇ ಪದೇ ನೋವು ಕಾಣಿಸಿಕೊಳ್ಳಬಹುದು.
* ಮೂಳೆಗಳಲ್ಲಿ ನೋವು ಕಾಣಿಸುವುದು.
* ಸ್ವಲ್ಪ ನಡೆದರೂ, ಸ್ವಲ್ಪ ಕೆಲಸ ಮಾಡಿದರೆ ದೇಹದಲ್ಲಿ ಸುಸ್ತು ಕಾಣಿಸಿ ಕೊಳ್ಳುವುದು.
* ಉಸಿರಾಟಕ್ಕೆ ತೊಂದರೆ ಉಂಟಾಗಬಹುದು.
ಈ ಮೇಲೆ ಹೇಳಿದ ಲಕ್ಷಣಗಳು ಕ್ಯಾನ್ಸರ್ ಸಮಸ್ಯೆ ಇದ್ದರೆ ಕಾಣಿಸಿ ಕೊಳ್ಳುವ ಲಕ್ಷಣಗಳಾಗಿವೆ. ಇದರ ಜೊತೆ ಯಾರು ಎತೇಚ್ಛವಾಗಿ ಧೂಮಪಾನ ಮಾಡುತ್ತಿರುತ್ತಾರೋ ಅಂತವರಲ್ಲಿ ಈ ಸಮಸ್ಯೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆಯೊ ಅಂತವರಿಗೆ ಕ್ಯಾನ್ಸರ್ ಸಮಸ್ಯೆ ಇದ್ದೆ ಇರುತ್ತದೆ ಎಂದೇ ಹೇಳಬಹುದು.
ಆದ್ದರಿಂದ ಇಂತಹ ಯಾವುದೇ ದುಶ್ಚಟಗಳು ನಿಮ್ಮಲ್ಲಿ ಇದ್ದರೆ ಅದನ್ನು ಸಂಪೂರ್ಣ ವಾಗಿ ನಿಲ್ಲಿಸುವುದು ನಿಮ್ಮ ಆರೋಗ್ಯದ ದೃಷ್ಟಿಯಿಂದ ತುಂಬಾ ಒಳ್ಳೆಯದು. ಹೀಗೆ ಮೇಲೆ ಹೇಳಿದ ಲಕ್ಷಣಗಳು ಇಂಥವರಲ್ಲಿ ಪದೇ ಪದೇ ಕಾಣಿಸಿ ಕೊಳ್ಳುತ್ತಿದ್ದರೆ ತಕ್ಷಣವೇ ನೀವು ಆಸ್ಪತ್ರೆಗೆ ಹೋಗಿ ಅಲ್ಲಿ ವೈದ್ಯರು ಹೇಳುವಂತಹ ಕೆಲವೊಂದಷ್ಟು ಔಷಧಿಗಳನ್ನು ತೆಗೆದುಕೊಳ್ಳುವುದು ಮುಖ್ಯ ಹಾಗೂ ಈ ಸಮಸ್ಯೆ ಯಾವ ಕಾರಣಕ್ಕಾಗಿ ಕಾಣಿಸಿಕೊಳ್ಳುತ್ತದೆ ಎನ್ನುವುದನ್ನು ತಿಳಿದುಕೊಳ್ಳುವುದು ಕೂಡ ಅಷ್ಟೇ ಮುಖ್ಯವಾಗಿರುತ್ತದೆ.
ಧೂಮಪಾನ ಮಾಡದೇ ಇರುವವರಲ್ಲಿಯೂ ಕೂಡ ಈ ಶ್ವಾಸಕೋಶದ ಕ್ಯಾನ್ಸರ್ ಆಗುವ ಸಾಧ್ಯತೆಗಳು ಇರುತ್ತದೆ. ಇಂಥವರಲ್ಲಿ ಕಾಣಿಸಿ ಕೊಳ್ಳಲು ಕಾರಣ ಏನು ಎಂದು ನೋಡುವುದಾದರೆ ಮೊದಲೇ ಹೇಳಿದಂತೆ ವಾಯು ಮಾಲಿನ್ಯದಿಂದ, ಹೆಚ್ಚು ಹೊಗೆ ಬರುವಂತಹ ಕಾರ್ಖಾನೆಗಳಲ್ಲಿ ಕೆಲಸ ಮಾಡುವವರು ಹೀಗೆ ಇವುಗಳಿಂದಲೂ ಕೂಡ ಕೆಲವೊಂದಷ್ಟು ಜನರಲ್ಲಿ ಶ್ವಾಸಕೋಶದ ಕ್ಯಾನ್ಸರ್ ಆಗುವ ಸಾಧ್ಯತೆಗಳು ಇರುತ್ತದೆ.
ಶ್ವಾಸಕೋಶದ ಕ್ಯಾನ್ಸರ್ ಸಮಸ್ಯೆಯಲ್ಲಿ ನಾಲ್ಕು ಸ್ಟೇಜ್ ಇರುತ್ತದೆ.
ಮೊದಲನೇ ಹಂತ ಮತ್ತು ಎರಡನೇ ಹಂತ ಪ್ರಾರಂಭದಲ್ಲಿ ಕಾಣಿಸಿ ಕೊಳ್ಳುವಂತಹ ಸಮಸ್ಯೆಯಾಗಿದ್ದು ಈ ಸಮಸ್ಯೆ ನಿಮಗೆ ತಿಳಿದ ತಕ್ಷಣ ನೀವು ಈ ಸಮಸ್ಯೆಯನ್ನು ದೂರ ಮಾಡಿಕೊಳ್ಳಬಹುದು.
ಹಾಗೂ ಮೂರನೇ ಹಂತ ನಾಲ್ಕನೇ ಹಂತದಲ್ಲಿ ಕ್ಯಾನ್ಸರ್ ನಮ್ಮ ಇಡೀ ದೇಹವನ್ನು ಹಬ್ಬಿರುತ್ತದೆ ಇದನ್ನು ಕೊನೆಯ ಸ್ಟೇಜ್ ಅಂದರೆ ಕೊನೆಯ ಹಂತದ ಕ್ಯಾನ್ಸರ್ ಎಂದು ಹೇಳಬಹುದು. ಈ ಸಮಯದಲ್ಲಿ ನೀವು ಇದನ್ನು ಗುಣಪಡಿಸಲು ಸಾಧ್ಯವಾಗುವುದಿಲ್ಲ ಬದಲಿಗೆ ಈ ರೋಗ ಲಕ್ಷಣಗಳನ್ನು ಕಡಿಮೆ ಮಾಡಬಹುದು ಅಷ್ಟೇ.