ಪರಸ್ಪರ ನಿಶಿದ್ಧ ಆಹಾರ ಎಂದರೇನು ಯಾವ ಆಹಾರಗಳು ಪರಸ್ಪರ ನಿಶಿದ್ದ, ಯಾವ ಆಹಾರವನ್ನು ಸೇವನೆ ಮಾಡಬಾರದು ಎಂದು ಈ ದಿನ ತಿಳಿಯೋಣ. ಅರೋಗ್ಯ ಪದ್ಧತಿಯಲ್ಲಿ ಪುರಾತನ ಕಾಲದಿಂದಲೂ ಇಂದಿಗೂ ನಡೆದು ಕೊಂಡು ಬಂದಿರುವ ಪದ್ಧತಿ ಎಂದರೆ ಅದು ಆಯುರ್ವೇದ, ಆಯುರ್ವೇ ದದ ಪ್ರಕಾರ ವಿರುದ್ಧ ಸ್ವಭಾವವಿರುವ ಆಹಾರ ಪದಾರ್ಥಗಳನ್ನು ಪರಸ್ಪರ ನಿಶಿದ್ದ ಅಂದರೆ ವಿರುದ್ಧ ಆಹಾರ ಎಂದು ಕರೆಯುತ್ತಾರೆ.
ಈ ಆಹಾರಗಳನ್ನು ಸೇವಿಸಬೇಕಿದ್ದರೆ ರುಚಿಯಾಗಿದ್ದರೂ ದೇಹಕ್ಕೆ ಕೆಟ್ಟ ಪರಿಣಾಮವನ್ನು ಬೀರುತ್ತದೆ. ಜೀರ್ಣ ಶಕ್ತಿ ಕಡಿಮೆಯಾಗಿ ಜಠರದ ಸಮಸ್ಯೆಗೂ ಕಾರಣ ಆಗುತ್ತವೆ. ಹೊರಗಿನ ವಾತಾವರಣದಲ್ಲಿ ಬೆಂಕಿ ಹೊತ್ತಿಕೊಂಡಾಗ ಬೆಂಕಿಯನ್ನು ಆರಿಸಲು ಹೇಗೆ ನೀರನ್ನು ಬಳಸುತ್ತೇ ವೋ ನಮ್ಮ ದೇಹದಲ್ಲಿ ಜೀರ್ಣಕ್ರಿಯೆಯೂ ಇದೇ ರೀತಿ ಕೆಲಸ ಮಾಡುತ್ತದೆ.
ಅಂದರೆ ಹೊರಗಿನ ಬೆಂಕಿಗೆ ನಾವು ಎಣ್ಣೆ ಅಥವಾ ತುಪ್ಪ ಸುರಿದರೆ ಅದು ಹೇಗೆ ಮತ್ತಷ್ಟು ಹೊತ್ತಿ ಉರಿಯುವುದೋ ಅದೇ ರೀತಿ ನಮ್ಮ ದೇಹದಲ್ಲಿ ಜೀರ್ಣಕ್ರಿಯೆ ಚುರುಕಾಗಿ ನಡೆಯಬೇಕೆಂದರೆ ಸಮರ್ಪಕವಾದ ಆಹಾರ ಸೇವಿಸಬೇಕು. ಇಲ್ಲದಿದ್ದರೆ ಜೀರ್ಣಕ್ರಿಯೆಯು ನಿಧಾನವಾಗಿ ದೇಹದಲ್ಲಿ ವಿಷಕಾರಿ ಅಂಶಗಳು ಉತ್ಪತ್ತಿಗೊಂಡು ಆರೋಗ್ಯ ಹದಗೆಡುತ್ತದೆ. ಹಾಗಾಗಿ ವಿರುದ್ಧ ರೀತಿಯ ಆಹಾರ ಪದಾರ್ಥ ಗಳನ್ನು ಯಾವತ್ತೂ ಒಮ್ಮೆಲೆ ಸೇವಿಸಬಾರದು.
* ಪರಸ್ಪರ ವಿರುದ್ಧ / ನಿಶಿದ್ದ ಆಹಾರಗಳು
* ತುಳಸಿಯೊಂದಿಗೆ ಹಾಲು ಸೇರಿಸಬಾರದು.
* ಸಿಹಿ ಆಹಾರದೊಂದಿಗೆ ಮೂಲಂಗಿ ಮೆಂತೆ ಸೊಪ್ಪು ಸೇವಿಸಬಾರದು.
* ಹಸಿ ತರಕಾರಿಯೋಂದಿಗೆ ಸಿಹಿ ಪದಾರ್ಥ ಸೇವಿಸಬಾರದು.
* ನೇರಳೆ ಹಣ್ಣು ತಿಂದಾಗ ಮೊಸರು ಮಜ್ಜಿಗೆ ಸೇವಿಸಬಾರದು.
* ಹಾಲಿನ ಜೊತೆ ಉಪ್ಪನ್ನು ಸೇವಿಸಬಾರದು.
* ಬಿಸಿ ಅಡುಗೆ ಹಾಗೂ ತಂಗಳು ಅಡಿಗೆ ಒಟ್ಟಿಗೆ ಸೇವಿಸಬಾರದು.
• ಮೊಸರು ಮಜ್ಜಿಗೆ ಬೆಣ್ಣೆ ಪಂಚಲೋಹದ ಪಾತ್ರೆಯಲ್ಲಿಟ್ಟು ಸೇವಿಸಬಾರದು.
* ಜೇನುತುಪ್ಪ ಹಾಗೂ ಹಸಿ ತರಕಾರಿ ಒಮ್ಮೆಲೆ ಯಾವುದೇ ಕಾರಣಕ್ಕೂ ಸೇವಿಸಬಾರದು.
* ಸಿಹಿ ಆಹಾರದೊಂದಿಗೆ ಈರುಳ್ಳಿ ಸೇವಿಸಬಾರದು.
* ಮೊಸರು ಮಜ್ಜಿಗೆ ಜೊತೆ ಬಾಳೆಹಣ್ಣು ಎಂದಿಗೂ ಸೇವಿಸಬಾರದು.
* ಹಸಿ ತರಕಾರಿಯೊಂದಿಗೆ ಬೆಣ್ಣೆ ಸೇವಿಸಬಾರದು.
* ಅನ್ನದ ಜೊತೆ ಹಣ್ಣು ಸೇವನೆ ಮಾಡಬಾರದು.
* ಮೂಲಂಗಿ ನುಗ್ಗೆಕಾಯಿಯೊಂದಿಗೆ ಹಾಲು ಸೇವಿಸಬಾರದು.
* ಯಾವುದೇ ಹುಳಿ ಸೇವಿಸಿದ ನಂತರ ಹಾಲನ್ನು ಕುಡಿಯಬಾರದು.
* ಮಜ್ಜಿಗೆ ಹಾಗೂ ಮೊಸರಿನ ಜೊತೆ ತುಪ್ಪ ಸೇವಿಸಬಾರದು.
* ಮೂಲಂಗಿ ಮತ್ತು ಉದ್ದಿನ ಬೇಳೆಯನ್ನು ಒಟ್ಟಿಗೆ ಸೇವಿಸಬಾರದು.
* ಬಾಳೆಹಣ್ಣನ್ನು ಎಂದಿಗೂ ಹಾಲಿನೊಂದಿಗೆ ಸೇವಿಸುವುದು ಒಳಿತಲ್ಲ.
* ಮೊಸರು ಮತ್ತು ಚೀಸ್ ಅನ್ನು ಒಟ್ಟಿಗೆ ಸೇವಿಸಬಾರದು ಮಲಬದ್ಧತೆ ಉಂಟಾಗುತ್ತದೆ.
* ಸಮಪ್ರಮಾಣದಲ್ಲಿ ಜೇನುತುಪ್ಪ ಹಾಗೂ ತುಪ್ಪವನ್ನು ಒಟ್ಟಿಗೆ ಸೇವನೆ ಮಾಡುವುದು ಒಳ್ಳೆಯದಲ್ಲ.
* ಜೇನುತುಪ್ಪವನ್ನು ಬಿಸಿ ಮಾಡಿ ಸೇವಿಸಬಾರದು
* ಚಹಾ ಕುಡಿದ ತಕ್ಷಣ ಮೊಸರನ್ನು ಸೇವಿಸಬಾರದು.
* ಹುಳಿ ಮತ್ತು ಸಿಹಿ ಹಣ್ಣುಗಳನ್ನು ಒಟ್ಟಿಗೆ ತಿನ್ನಬಾರದು
* ಉದ್ದಿನ ಬೇಳೆ ಮತ್ತು ಮೊಸರನ್ನು ಸೇವಿಸಬಾರದು
* ಪೈನಾಪಲ್ ಜೊತೆ ಹಾಲನ್ನು ಸೇರಿಸಬಾರದು
* ಚಹಾ ಅಥವಾ ಕಾಫಿಯ ನಂತರ ತಕ್ಷಣ ತಣ್ಣೀರನ್ನು ಸೇವಿಸಬಾರದು
* ಜೇನುತುಪ್ಪದ ಜೊತೆ ಮೂಲಂಗಿ ದ್ರಾಕ್ಷಿ ಒಟ್ಟಿಗೆ ತಿನ್ನಬಾರದು
* ಊಟ ಆದ ತಕ್ಷಣ ಕಾಫಿ ಟೀ ಅಥವಾ ಜ್ಯೂಸನ್ನು ಕುಡಿಯಬಾರದು.
* ಮಜ್ಜಿಗೆಯ ಜೊತೆ ತುಪ್ಪವನ್ನು ಸೇವಿಸಬಾರದು
* ಯಾವುದೇ ಬಿಸಿ ಇರುವ ಆಹಾರವನ್ನು ಜೇನುತುಪ್ಪದ ಜೊತೆ ಸೇವಿಸಬಾರದು.
* ಖಾರ ಪದಾರ್ಥಗಳನ್ನು ಹಾಲಿನೊಂದಿಗೆ ಸೇವಿಸಬಾರದು.
* ಕುದಿಯುವ ನೀರಿಗೆ ಜೇನುತುಪ್ಪ ಸೇರಿಸಿ ಸೇವಿಸಬಾರದು.
* ಪಾಯಸದ ಜೊತೆ ಹುಳಿ ಪದಾರ್ಥವನ್ನು ಸೇವಿಸಬೇಡಿ.
* ಕಡಲೆಕಾಯಿ ತಿಂದ ನಂತರ ನೀರು ಕುಡಿಯಬಾರದು.
ಈ ಆಹಾರ ಪದಾರ್ಥಗಳನ್ನು ರುಚಿಗೋಸ್ಕರ ಸೇವಿಸುವುದಾದರೆ ಅಂದರೆ ಮೊಸರು ಮತ್ತು ಜೇನುತುಪ್ಪ ಸೇವನೆ ಮಾಡಬಾರದು. ಆದರೆ ಪಂಚಾಮೃತವನ್ನು ಮೊಸರು ಮತ್ತು ಜೇನುತುಪ್ಪವನ್ನು ಸೇರಿಸಿ ತಯಾರಿಸಲಾಗುತ್ತದೆ.
ಪಂಚಾಮೃತವನ್ನು ಪ್ರಸಾದದ ರೂಪದಲ್ಲಿ ಹೇಗೆ ಸೇವಿಸುತ್ತೇವೋ ಅದೇ ರೀತಿ ಯಾವಾಗಾದರೂ ಒಮ್ಮೆ ರುಚಿಗೋಸ್ಕರ ಕಡಿಮೆ ಪ್ರಮಾಣದಲ್ಲಿ ಸೇವಿಸಬಹುದು ಅತಿಯಾದ ಸೇವನೆ ಆರೋಗ್ಯಕ್ಕೆ ಒಳ್ಳೆಯದಲ್ಲ. ಇವೆಲ್ಲವೂ ಪರಸ್ಪರ ನಿಶಿದ್ಧ ಆಹಾರಗಳು ಇವುಗಳನ್ನು ಸೇವನೆ ಮಾಡು ವುದರಿಂದ ಜೀರ್ಣಶಕ್ತಿ ಹಾಳಾಗಿ ಜೀರ್ಣಕ್ರಿಯೆ ನಿಧಾನವಾಗುತ್ತದೆ. ಇದರಿಂದ ಅಜೀರ್ಣ ಸಮಸ್ಯೆ, ಮಲಬದ್ಧತೆ, ಹೊಟ್ಟೆ ನೋವು ಇನ್ನು ಮುಂತಾದ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ.