ಇತ್ತೀಚೆಗೆ ಫ್ಯಾನ್ಸ್ ವಾರ್ ಎಂದರೆ ಸಣ್ಣ ಪುಟ್ಟ ವಿಷಯಗಳಿಗೂ ಸಾಮಾಜಿಕ ಜಾಲತಾಣಗಳಲ್ಲಿ ಮಾತಿನ ಚಕಮಕಿಯ ಗಲಾಟೆಗಳು ಸರ್ವೇ ಸಾಮಾನ್ಯವಾಗಿ ಬಿಟ್ಟಿದೆ. ಅಂತಹದ್ದೇ ಒಂದು ಫ್ಯಾನ್ಸ್ ಗಳ ನಡುವೆ ತಂದಿಕ್ಕಿ ತಮಾಷೆ ನೋಡುವ ಪೋಸ್ಟ್ ಒಂದನ್ನು ಬೆಂಗಳೂರಿನ ಫುಟ್ಬಾಲ್ ಕ್ಲಬ್ ಹಂಚಿಕೊಂಡು ಈ ಪೋಸ್ಟ್ ಸದ್ಯಕ್ಕೆ ದರ್ಶನ್, ಪುನೀತ್ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಹೌದು ಇತ್ತೀಚೆಗೆ ಈ ಫ್ಯಾನ್ಸ್ ವಾರ್ ಹೆಚ್ಚಾಗುತ್ತಿದ್ದು ಅದರಲ್ಲೂ ಡಿ ಬಾಸ್ ಫ್ಯಾನ್ಸ್ ಗಳಿಗೆ ಹೆಚ್ಚಾಗಿ ಉರಿಯುವ ಬೆಂಕಿಗೆ ತುಪ್ಪ ಸುರಿಯುವ ಕೆಲಸವನ್ನು ಒಬ್ಬರು ತಪ್ಪಿದರೆ ಮತ್ತೊಬ್ಬರು ಮಾಡುತ್ತಲೇ ಬರುತ್ತಿದ್ದು.
ಅಪ್ಪು ಅಭಿಮಾನಿಗಳಿಗೂ ಸಹ ಇದೇ ರೀತಿಯಲ್ಲಿ ಅಪ್ಪು ಅವರ ಹೆಸರು ಬಳಸಿಕೊಂಡೋ ಇಲ್ಲ ಅವರು ಇಲ್ಲ ಎಂದು ತಿಳಿಯದೇ ತಪ್ಪು ಮಾಡುವ ಕೆಲಸಗಳು ಆಗುತ್ತಿವೆ. ಈ ಬೆಂಗಳೂರು ಫುಟ್ ಬಾಲ್ ಕ್ಲಬ್ ಫೇಸ್ಬುಕ್ ನಲ್ಲಿ ಬೆಂಗಳೂರು fc ಎನ್ನುವ ಫೇಸ್ಬುಕ್ ಖಾತೆ ಹೊಂದಿದ್ದು ಇದರ ಮೂಲಕ ತಮ್ಮ ಕ್ರೀಡಾ ಜೆರ್ಸಿಯನ್ನು ಪ್ರಮೋಟ್ ಮಾಡುವ ಸಲುವಾಗಿ ರಕ್ಷಿತ್ ಶೆಟ್ಟಿ, ಕಿಚ್ಚ ಸುದೀಪ್ ಹಾಗೂ ಯಶ್ ಅವರು ಜೆರ್ಸಿ ತೊಟ್ಟಿರುವಂತೆ ಎಡಿಟ್ ಮಾಡಿ ಪೋಸ್ಟ್ ಅನ್ನು ಸಾಮಾಜಿಕ ಜಾಲತಾಣಗಳಲ್ಲಿ ಇವರಂತೆ ಯಾರೂ ಇಲ್ಲ ಎನ್ನುವ ಕ್ಯಾಪ್ಶನ್ ಬಳಸಿ ಹಂಚಿಕೊಂಡಿದ್ದಾರೆ.
ಇವರ ಈ ರೀತಿಯ ಪೋಸ್ಟ್ ನಿಂದ ಸಹಜವಾಗಿಯೇ ಯಶ್ ಸುದೀಪ್ ರಕ್ಷಿತ್ ಶೆಟ್ಟಿ ಅಭಿಮಾನಿಗಳು ಅಭಿನಂದನೆಗಳನ್ನು ತಿಳಿಸಿ ಖುಷಿ ಪಟ್ಟು ಲೈಕ್ ಕಾಮೆಂಟ್ ಮಾಡಿದ್ದರೆ ಉಳಿದ ಹೀರೋ ಗಳ ಫ್ಯಾನ್ಸ್ ಆಕ್ರೋಶದಿಂದ ಕಿಡಿ ಕಾರಿದ್ದಾರೆ. ಇದಕ್ಕೆ ಕಾರಣ ಕೇವಲ ಮೂವರು ಹೀರೋ ಹೆಸರು ಬಳಸಿಕೊಂಡಿರುವ ಫುಟ್ ಬಾಲ್ ಕ್ಲಬ್ ಉಳಿದ ಹೀರೋ ಗಳು ಅದರಲ್ಲೂ ಹೆಚ್ಚಾಗಿ ಡಿ ಬಾಸ್ ಅಪ್ಪು ಹೆಸರು ಬಳಸದೆ ಇರುವುದಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ.
ಕಿಚ್ಚ ಸುದೀಪ್, ಯಶ್, ರಕ್ಷಿತ್ ಶೆಟ್ಟಿ ಅಂತ ಯಾರೂ ಇಲ್ಲ! 🔥#WeAreBFC #NothingLikeIt pic.twitter.com/ExvvTpF3OY
— Bengaluru FC (@bengalurufc) September 7, 2022
ಇದಿಷ್ಟೇ ಅಲ್ಲದೇ ಕ್ಯಾಪ್ಶನ್ ನಲ್ಲಿ ಇವರಂತೆ ಯಾರೂ ಇಲ್ಲ ಎಂದು ಬರೆದುಕೊಂಡಿರುವ ಬಗ್ಗೆ ತೀ.ವ್ರವಾಗಿ ಖಂಡಿಸಿ ಅಪ್ಪು ಹಾಗೂ ಡಿ ಬಾಸ್ ಅಭಿಮಾನಿಗಳು ಆ.ಕ್ರೋ.ಶ ಹೊರ ಹಾಕಿದ್ದಾರೆ. ದರ್ಶನ್ ಅಭಿಮಾನಿಗಳು ನಮ್ಮ ಡಿ ಬಾಸ್ ಅವರು ನಿಮಗೆ ಏನು ಮಾಡಿದ್ದಾರೆ ಅವರು ನಿಮ್ಮ ಕಣ್ಣಿಗೆ ಕಾಣಿಸಿಲ್ಲವೇ ಎಂದು ಕೆಲವರು ಕಾಮೆಂಟ್ ಮಾಡಿದರೆ ಇನ್ನೂ ಕೆಲವರು ಹಿಂದೆ ಇದೇ ಬೆಂಗಳೂರು fc ಖಾತೆ ಡಿ ಬಾಸ್ ಅವರ ಯಜಮಾನ ಚಿತ್ರದ ಡಿ ಬಾಸ್ ಫೋಟೋ ಹಾಕಿ ಆನೆ ನಡೆದಿದ್ದೆ ದಾರಿ ಎನ್ನುವ ಡೈಲಾಗ್ ಗೆ ತಮ್ಮದೇ ಆದ ರೀತಿಯಲ್ಲಿ bfc ನಡೆದಿದ್ದೆ ದಾರಿ ಎನ್ನುವ ಕ್ಯಾಪ್ಶನ್ ಬಳಸಿ ಹಾಕಿದ್ದ ಪೋಸ್ಟ್ ಅನ್ನು ಸ್ಕ್ರೀನ್ ಶಾಟ್ ತೆಗೆದುಕೊಂಡು ಕಾಮೆಂಟ್ ಬಾಕ್ಸ್ ನಲ್ಲಿ ಹಾಕಿ ನಮ್ಮ ಡಿ ಬಾಸ್ ಯಾವಾಗಲೂ ಆನೆಯ ತರಹ ಎಂದು ಕಾಮೆಂಟ್ ಮಾಡುತ್ತಿದ್ದಾರೆ.
ಆದರೆ ಅಪ್ಪು ಅಭಿಮಾನಿಗಳು ನಮ್ಮ ಅಪ್ಪು ಇಲ್ಲ ಎನ್ನುವ ಕಾರಣಕ್ಕೆ ಅವರನ್ನು ಕೈ ಬಿಟ್ಟು ಈ ರೀತಿ ಅನ್ಯಾಯ ಮಾಡುವುದು ಸರಿಯಲ್ಲ ಯಾಕೆ ಈ ತಾರತಮ್ಯ ಎಂದು ಪ್ರಶ್ನಿಸಿ ಇವರ ತರಹ ಅಪ್ಪು ಇರಲಿಲ್ಲವೇ ಎಂದು ಪ್ರಶ್ನಿಸುತ್ತಿದ್ದಾರೆ. ಇನ್ನೂ ಕೆಲವು ಜನರು ಈ ರೀತಿಯ ಪೋಸ್ಟ್ ನಿಂದ ಫ್ಯಾನ್ಸ್ ವಾರ್ ಶುರು ಆಗುವುದಲ್ಲದೆ ಉರಿಯುವ ಬೆಂಕಿಗೆ ತುಪ್ಪ ಸುರಿದ ಹಾಗೆ ಆಗುತ್ತದೆ ಮೊದಲು ಈ ಕ್ಯಾಪ್ಶನ್ ತೆಗೆದು ಹಾಕಿ ಎಂದು ವಾರ್ನ್ ಮಾಡುತ್ತಿದ್ದಾರೆ. ಒಟ್ಟಾರೆಯಾಗಿ ಹೇಳುವುದಾದರೆ ಅಪ್ಪು ಬದುಕಿಲ್ಲ ಎಂಬ ಕಾರಣಕ್ಕಾಗಿ ಅಪ್ಪು ಅವರನ್ನು ಕಡೆಗಣಿಸಿದ್ದಾರೆ, ದರ್ಶನ್ ಅವರನ್ನು ಮಾಧ್ಯಮದವರು ಬ್ಯಾನ್ ಮಾಡಿದ್ದಾರೆ ಎಂಬ ಕಾರಣಕ್ಕಾಗಿ ದರ್ಶನ್ ಅವರನ್ನು ಕಡೆಗಣಿಸಿ.
ಸದ್ಯಕ್ಕೆ ಪ್ರಚಲಿತದಲ್ಲಿ ಇರುವಂತಹ ಕಿಚ್ಚ ಸುದೀಪ್ ಹಾಗೂ ರಕ್ಷಿತ್ ಶೆಟ್ಟಿ ಮತ್ತು ಯಶ್ ಅವರನ್ನು ಹಾಡಿ ಹೊಗಳುತ್ತಿದ್ದಾರೆ. ನಟ ಬದುಕಿರಲಿ ಬಿಡಲಿ ಆತನಿಗೆ ಸಿಗಬೇಕಾದಂತಹ ಗೌರವವನ್ನು ಸಲ್ಲಿಸಬೇಕು. ಮಾಧ್ಯಮದಿಂದ ದರ್ಶನ ಅವರನ್ನು ಬ್ಯಾನ್ ಮಾಡಿರಬಹುದು ಆದರೆ ಸಾಮಾಜಿಕ ಜಾಲತಾಣದಲ್ಲಿ ಏನು ಬ್ಯಾನ್ ಮಾಡಿಲ್ಲ. ಎಲ್ಲಾ ನಟರನ್ನು ಒಂದೇ ರೀತಿಯಾಗಿ ಕಾಣುವುದು ನಮ್ಮ ಕರ್ತವ್ಯ ಆದರೆ ಈ ರೀತಿ ಈ ತಾರತಮ್ಯ ಮಾಡುತ್ತಿರುವುದು ಎಷ್ಟು ಸರಿ ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೆ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ.