ಕನ್ನಡದಲ್ಲಿ ವಿಷ್ಣುವರ್ಧನ್, ಬಚ್ಚನ್, ರೋಮಿಯೋ, ಜಾಕಿ ಮುಂತಾದ ಸಿನಿಮಾಗಳಲ್ಲಿ ನಟಿಸಿ ಕನ್ನಡದ ಹೀರೋಯಿನ್ ಎಂದೆನಿಸಿಕೊಂಡಿರುವ ಭಾವನಾ ಮೆನನ್ ಮೂಲತಃ ಮಲಯಾಳಂ ಅವರು. ಕನ್ನಡ ಹಾಗೂ ಮಲಯಾಳಂ ಸಿನಿಮಾಗಳಲ್ಲಿ ಬಹಳ ಬೇಡಿಕೆ ನಟಿ ಆಗಿರವ ಇವರು ಈಗ ಕನ್ನಡದವರನ್ನು ಕೈ ಹಿಡಿದು ಕನ್ನಡದವರೇ ಆಗಿದ್ದಾರೆ ಎನ್ನಬಹುದು.
ಭಾವನ ಯಾವಾಗಲೂ ಸಿಂಪಲ್ ಆಗಿಯೇ ಕಾಣಿಸಿಕೊಳ್ಳುತ್ತಾರೆ ಹಾಗೂ ತಮ್ಮ ಸಹಜ ನಗುನಿಂದ ಎಲ್ಲರ ಗಮನ ಸೆಳೆಯುತ್ತಾರೆ. ಆದರೆ ಈ ಬಾರಿ ಆಕೆ ತೊಟ್ಟಿದ್ದ ಉಡುಪಿನ ಕಾರಣದಿಂದಾಗಿ ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿದ್ದಾರೆ. ತನ್ನ ಮೇಲೆ ಆಗುತ್ತಿರುವ ಈ ಟ್ರೋಲ್ ಹಾಗೂ ನೆಗೆಟಿವ್ ಕಾಮೆಂಟ್ ಬಗ್ಗೆ ಭಾವನ ಪೋಸ್ಟ್ ಕೂಡ ಹಾಕಿದ್ದು, ಇದು ಹೆಚ್ಚಾಗುತ್ತಿದ್ದಂತೆ ಅನೇಕ ನಟಿ ಮಣಿಗಳು ಈಗ ಭಾವನ ಪರವಾಗಿ ಬ್ಯಾಟ್ ಬೀಸುತಿದ್ದಾರೆ.
ಯಾವಾಗಲೂ ಟ್ರೆಡಿಶನಲ್ ಆಗಿ ಕಾಣಿಸಿಕೊಂಡು ಲಕ್ಷಣವಾಗಿ ಮಿಂಚುತ್ತಿದ್ದ ಭಾವನಾ ಅವರ ಮೇಲೆ ಈ ರೀತಿ ಟ್ರೋಲ್ ಆಗಲು ಕಾರಣ ಆಗಿದ್ದು ಏನು ಗೊತ್ತಾ? ಭಾವನ ಅವರಿಗೆ ಯುಎಇ ಇಂದ ಗೋಲ್ಡನ್ ವೀಸಾ ಅವಾರ್ಡ್ ಸಿಕ್ಕಿದೆ. ಇದನ್ನು ಸ್ವೀಕರಿಸಲು ಕಾರ್ಯಕ್ರಮಕ್ಕೆ ಹೋದ ಭಾವನ ಅವರು ಅಲ್ಲಿ ನೆರೆದಿದ್ದವರ ಎಲ್ಲರ ಖುಷಿಗಾಗಿ ಅವರೆಲ್ಲರ ಒತ್ತಾಯದ ಮೇಲೆ ಗೋಲ್ಡನ್ ವೀಸ ಪಡೆದು ಸಂತಸದಿಂದ ಸ್ಟೆಪ್ಸ್ ಹಾಕಿದ್ದಾರೆ.
ಹಾಡಿನ ಬೀಟಿಗೆ ಕುಣಿಯುತ್ತಿದ್ದಂತೆ ಅವರ ಕೈಗಳು ಮೇಲಾದಾಗ ಬಟ್ಟೆ ಆಚೀಚೆ ಹೋಗಿದೆ. ಆದರೆ ಅವರು ಈ ಬಾರಿ ಫ್ಯಾಷನ್ ಆದ ಟಾಪ್ ತರಿಸಿದ್ದರು. ಆ ಟಾಪ್ ಒಳಗಡೆ ಚರ್ಮದ ಬಣ್ಣದ್ದೇ ಒಳ ಉಡುಪು ಇದ್ದರೂ ಕೂಡ ಅನೇಕ ಮಂದಿ ಕೆಲವೇ ಸೆಕೆಂಡುಗಳ ವಿಡಿಯೋ ಬೈಟ್ ನೋಡಿ ಅವರು ಒಳ ಉಡುಪಿ ಧರಿಸೇ ಇಲ್ಲ ಎನ್ನುವ ರೀತಿ ಭಾವಿಸಿಕೊಂಡು ಅದೇ ವಿಷಯಕ್ಕಾಗಿ ಪಬ್ಲಿಕ್ ಎದರು ಈ ರೀತಿ ನಡೆದುಕೊಳ್ಳುತ್ತಿದ್ದೀರಲ್ಲ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.
ಅದಕ್ಕೆ ಅವರ ಜೀವನದಲ್ಲಿ ಆಗಿರುವ ಕೆಲವು ಪಾಸ್ಟ್ ಘಟನೆಗಳನ್ನು ಸೇರಿಸಿ ಕಮೆಂಟ್ ಮಾಡಿ ಭಾವನವರಿಗೆ ಭಾವನಾತ್ಮಕವಾಗಿ ನೋಯಿಸಿದ್ದಾರೆ. ಈ ಕುರಿತು ಭಾವನಾ ಅವರು ಪೋಸ್ಟ್ ಹಾಕಿದ್ದು ಎಲ್ಲವೂ ಸರಿ ಹೋಗುತ್ತದೆ, ನನ್ನ ಆತ್ಮೀಯರಿಗಾಗಿ ನಾನು ಸರಿ ಹೋಗಬೇಕು ಎಂದು ನಾನು ಎಷ್ಟೇ ಪ್ರಯತ್ನವನ್ನು ಪ್ರತಿದಿನ ಮಾಡುತ್ತಿದ್ದರೂ ಕೂಡ ಜನರು ನನ್ನನ್ನು ಮತ್ತೆ ಕತ್ತಲೆಗೆ ನೂಕುವ ಕೆಲಸ ಮಾಡುತ್ತಿದ್ದಾರೆ.
ಅದರಿಂದ ಅವರಿಗೆ ಏನು ಖುಷಿ ಸಿಗುತ್ತದೆಯೋ ಏನೋ ಗೊತ್ತಿಲ್ಲ. ಅವರ ಆ ಮಾತುಗಳು ನನ್ನನ್ನು ಬಹಳ ನೋಯಿಸುತ್ತಿದೆ ಎಂದು ಹೇಳಿ, ಅವರು ಆ ರೀತಿ ಎಕ್ಸ್ಪೋಸ್ ಆಗೋ ರೀತಿ ಬಟ್ಟೆ ಹಾಕಿಕೊಂಡು ಹೋಗಿರಲಿಲ್ಲ ತಾವು ಸ್ಲಿಪ್ ಹಾಕಿದ್ದೆ ಕೂಡ ಹೇಳಿಕೊಂಡಿದ್ದಾರೆ. ನಟಿ ಮಣಿಯರಿಗೆ ಹೀಗಾಗುವುದು ಹೊಸದೇನಲ್ಲ. ಪಬ್ಲಿಕ್ ಆಗಿ ಅವರು ಕಾಣಿಸಿಕೊಂಡಾಗ ಉದ್ದೇಶಪೂರ್ವಕವಾಗಿಯೇ ಕೆಲವು ಇಂತಹ ವಿಷಯಗಳನ್ನು ಹುಡುಕಿ ಅವರನ್ನು ಟ್ರೋಲ್ ಮಾಡಲಾಗುತ್ತದೆ.
ಕಂಟೆಂಟ್ ಗಳಿಗಾಗಿ ಈ ರೀತಿ ಮಾಡುವವರ ವಿರುದ್ಧ ಅನೇಕ ಬಾರಿ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಆಗಿದ್ದರು ಕೂಡ ಇದು ನಿಲ್ಲುತ್ತಿಲ್ಲ. ಈಗ ಇನ್ಸ್ಟಾಗ್ರಾಮ್ ಪ್ರಭಾವಿ ಆಯಿಷಾ ಮಾರ್ಕೆರೆಸ್ ಕೂಡ ಭಾವನ ಅವರ ಪರವಾಗಿ ಧ್ವನಿ ಎತ್ತಿದ್ದು ಎಲ್ಲರಿಗೂ ಅವರವರ ಇಚ್ಚೆ ಬಟ್ಟೆ ಧರಿಸಲು ಅವಕಾಶವಿದೆ ನಟಿಮಣಿಯರ ಬಗ್ಗೆ ತೀರ ಪರ್ಸನಲ್ ಆಗಿ ತೆಗೆದುಕೊಳ್ಳಬಾರದು ಎಂಬರ್ಥದಲ್ಲಿ ಮಾತನಾಡಿ ಅಕಸ್ಮಾತ್ ಅವರು ಸ್ಲಿಪ್ ಧರಿಸದೇ ಇದ್ದಿದ್ದರೆ ಏನಾಯ್ತು ಅವರನ್ನು ಗಲ್ಲಿಗೇರಿಸಲು ಆಗುತ್ತದೆಯೇ? ಆ ರೀತಿ ಇರುವುದು ಕಾನೂನುಬಾಹಿರ ಎನ್ನುವುದಕ್ಕೆ ನಾವು ಅಫ್ಘಾನಿಸ್ತಾನದಲ್ಲಿ ಇದ್ದೇವಾ ಎಂದು ಕೇಳಿದ್ದಾರೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ಕಮೆಂಟ್ ಮೂಲಕ ತಿಳಿಸಿ.