
ವಂಶಿಕಾ ಹೆಸರು ಈಗ ಕರ್ನಾಟಕದಾದ್ಯಂತ ಫುಲ್ ಫೇಮಸ್. ಐದು ವರ್ಷ ವಯಸ್ಸಿನ ಈ ಚಿಕ್ಕ ವಂಶಿಕಾ ಸದ್ಯಕ್ಕೆ ಕನ್ನಡ ಕಿರುತೆಯನ್ನು ಆಳುತ್ತಿದ್ದಾಳೆ ಎಂದರೆ ಸುಳ್ಳಾಗಲಾರದು. ಕನ್ನಡ ಕಿರುತೆರೆಯಲ್ಲಿ ಕಲರ್ಸ್ ಕನ್ನಡ ವಾಹಿನಿಗೆ ಪ್ರಸಾರವಾಗಿದ್ದ ನಮ್ಮ ಸೂಪರ್ ಸ್ಟಾರ್ ಎನ್ನುವ ರಿಯಾಲಿಟಿ ಶೋನಲ್ಲಿ ವನ್ಷಿಕಾ ಮತ್ತು ಆಕೆಯ ತಾಯಿ ತೇಜಸ್ವಿನಿ ಕಂಟೆಸ್ಟೆಂಟ್ಗಳಾಗಿ ಭಾಗವಹಿಸಿದ್ದರು. ಅಮ್ಮ ಮಗಳು ಕಾರ್ಯಕ್ರಮದಲ್ಲಿ ವಿನ್ನರ್ ಕೂಡ ಆದರು. ಈ ರಿಯಾಲಿಟಿ ಶೋ ಪ್ರತಿದಿನವೂ ಕೂಡ ಒಂದಲ್ಲೊಂದು ವಿಶೇಷತೆಯಿಂದ ಜನಮನ್ನಣೆ ಪಡೆದು ಅದ್ಭುತವಾದ ಟಿ ಆರ್ ಪಿ ಗಳಿಸಿ ಕೊಂಡಿತ್ತು. ಕಾರ್ಯಕ್ರಮವನ್ನು ನೋಡುತ್ತಿದ್ದ ವೀಕ್ಷಕರಿಗೆ ವನ್ಷಿಕ ಅಂತು ಬಹಳ ಮನರಂಜನೆ ಕೊಟ್ಟು ಎಲ್ಲರ ಪ್ರೀತಿಯನ್ನು ಗಳಿಸಿಕೊಂಡಿದ್ದಳು. ಈ ಕಾರಣದಿಂದಲೇ ಕಾರ್ಯಕ್ರಮ ಮುಗಿದ ಬಳಿಕವೂ ವನ್ಷಿಕಾಗೆ ಇದ್ದ ಕ್ರೇಜ್ ಕಡಿಮೆ ಆಗಲೇ ಇಲ್ಲ.
ಸಾಮಾಜಿಕ ಜಾಲತಾಣದಲ್ಲಿ ಕೂಡ ವಂಶಿಕಾ ಮಾಡುವ ತುಂಟ ತರಲೆಗಳ ವಿಡಿಯೋಗಳು ಹಾಗೂ ಅವಳು ಮಾಡುವ ರೀಲ್ಸ್ ಗಳು ತುಂಬಾ ವೈರಲ್ ಆಗುತ್ತಿವೆ. ಕನ್ನಡ ಚಲನಚಿತ್ರರಂಗದ ಬಾಲನಟನಾಗಿ ಎಲ್ಲರ ಮೆಚ್ಚುಗೆ ಗಳಿಸಿದ ಮಾಸ್ಟರ್ ಆನಂದ್ ಅವರ ಪುತ್ರಿಯಾಗಿರುವ ವಂಶಿಕಾ ಅಪ್ಪನನ್ನೇ ಮೀರಿಸುವಷ್ಟು ತುಂಟಿ ಹಾಗು ಅಷ್ಟೇ ಟ್ಯಾಲೆಂಟ್ ಕೂಡ ಹೊಂದಿದ್ದಾಳೆ. ವಂಶಿಕಾಗೆ ಈಗಾಗಲೇ ಸೋಶಿಯಲ್ ಮೀಡಿಯಾದಲ್ಲಿ ತುಂಬಾ ಫಾಲೋವರ್ಸ್ ಇದ್ದಾರೆ. ಇವಳ ಪ್ರತಿಯೊಂದು ವಿಡಿಯೋಗಳಿಗೂ ಕೂಡ ಲಕ್ಷಾಂತರ ಮಂದಿ ಲೈಕ್ಸ್ ಕೊಟ್ಟು ಕಮೆಂಟ್ ಮಾಡುತ್ತಾರೆ. ಸದ್ಯಕ್ಕೆ ವಂಶಿಕಾ ಕರ್ನಾಟಕದಲ್ಲಿ ಫುಲ್ ಫೇಮಸ್ ಸೆಲೆಬ್ರಿಟಿ ಆಗಿ ಹೋಗಿದ್ದಾಳೆ ಮತ್ತು ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಗಿಚ್ಚ ಗಿಲ್ಲಿ ಗಿಲ್ಲಿ ಎನ್ನುವ ರಿಯಾಲಿಟಿ ಶೋ ಅಲ್ಲಿ ಕೂಡ ವನ್ಷಿಕಾ ಭಾಗವಹಿಸುತ್ತಿದ್ದಾಳೆ. ಗಿಚ್ಚ ಗಿಲಿ ಗಿಲಿ ಕಾರ್ಯಕ್ರಮದಲ್ಲಿ ವಂಶಿಕಾಳೇ ಆ ಶೋನ ಫಸ್ಟ್ ಅಟ್ರಾಕ್ಷನ್ ಎನ್ನಬಹುದು.
ಪ್ರತಿ ವಾರವು ಕೂಡ ಅವಳು ಮಾಡುವ ಸ್ಕಿಟ್ ಗಳು ಪ್ರೇಕ್ಷಕರನ್ನು ಬಿದ್ದು ಬಿದ್ದು ನಗುವಂತೆ ಮಾಡುತ್ತವೆ. ಜೊತೆಗೆ ಅವಳು ಮಾಡುವ ಕ್ಯೂಟ್ ಅಭಿನಯ, ಅವಳು ಕೊಡುವ ಅದ್ಭುತ ಎಕ್ಸ್ಪ್ರೆಶನ್ಗಳು, ತನಗೆ ತಾನೆ ಬಿಲ್ಡಪ್ ಕೊಟ್ಟಿಕೊಂಡು ಎಲ್ಲರನ್ನೂ ನಗಿಸುವ ಪರಿ, ಇಂತಹ ಕಠಿಣ ಡೈಲಾಗ್ ಗಳನ್ನು ಕೂಡ ಪಟಪಟ ಹೇಳುವ ಅವಳ ಬುದ್ಧಿವಂತಿಕೆ ಎಲ್ಲರಿಗೂ ಇಷ್ಟವಾಗಿ ಹೋಗಿದೆ. ಇವಳ ಸ್ಕಿಟ್ ನೋಡುವ ಸಲುವಾಗಿಯೇ ವಾರಾಂತ್ಯ ಬರುವ ವರೆಗೂ ಕಾಯುವ ಅಭಿಮಾನಿಗಳು ಇದ್ದಾರೆ. ಈಗ ಮತ್ತೊಂದು ವಿಷಯ ಮಾಸ್ಟರ್ ಆನಂದ್ ಅವರ ತಲೆಗೆ ಹೊಳೆದಿದೆ. ಈ ಬಾರಿ ಬಿಗ್ ಬಾಸ್ ಶೋಗೆ ಮಗಳನ್ನು ಕಳಿಸಿದರೆ ಹೇಗೆ ಎನ್ನುವ ಮಾತುಗಳನ್ನಾಡಿದ್ದಾರೆ ಮಾಸ್ಟರ್ ಆನಂದ್ ಅವರು. ಅವರು ಈ ರೀತಿ ಹೇಳಲು ಕಾರಣ ಕೂಡ ಇದೆ.
ಬೆಳಿಗ್ಗೆ 9:30 ಆದರೂ ಕೂಡ ವಂಶಿಕ ಹಾಗೂ ಅವರ ತಾಯಿ, ನಿದ್ದೆಯಿಂದ ಎದ್ದಿರಲಿಲ್ಲ ಹಾಗಾಗಿ ಮಾಸ್ಟರ್ ಆನಂದ್ ಅವರು ಅವರಿಬ್ಬರು ಮಲಗಿರುವ ವಿಡಿಯೋ ಮಾಡಿ ಬೆಳಿಗ್ಗೆ 9:30 ಆದರೂ 11 ಅಥವಾ 12 ಆದರೂ ಇವರಿಬ್ಬರು ಏಳುವುದೇ ಇಲ್ಲ. ಹಾಗಾಗಿ ಇವರಿಬ್ಬರನ್ನು ಬಿಗ್ ಬಾಸ್ ಮನೆಗೆ ಕಳುಹಿಸಿ ನಿದ್ದೆ ಇಲ್ಲದೆ ಹೇಗೆ ಪರದಾಡುತ್ತಾರೆ ಎಂದು ನೋಡುವ ಕುತೂಹಲ ನನಗೆ ಇದೆ ಎನ್ನುವ ಮಾತುಗಳನ್ನು ಹೇಳಿದ್ದಾರೆ. ಈ ಮಾತು ನಿಜವಾದರೆ ವಂಶಿಕಾ ಅತಿ ಚಿಕ್ಕ ವಯಸ್ಸಿನಲ್ಲಿಯೇ ಬಿಗ್ ಬಾಸ್ ಮನೆಗೆ ಹೋದ ಮೊದಲ ಬಾಲಕಿ ಆಗುತ್ತಾರೆ. ಆನಂದ್ ಅವರ ಈ ನಿರ್ಧಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು. ? ತಪ್ಪದೆ ಕಾಮೆಂಟ್ ಮುಖಾಂತರ ತಿಳಿಸಿ ಈ ಮಾಹಿತಿಯನ್ನು ಶೇರ್ & ಲೈಕ್ ಮಾಡಿ.