ಕರ್ನಾಟಕದಲ್ಲಿ ಆಡಳಿತದಲ್ಲಿರುವ ಕಾಂಗ್ರೆಸ್ ಸರ್ಕಾರವು (Congress Government) ರಾಜ್ಯದ ಜನತೆಗಾಗಿ ಐದು ಗ್ಯಾರಂಟಿ ಯೋಜನೆಗಳನ್ನು (Gyaranty Schemes) ಜಾರಿಗೆ ತಂದಿದೆ. ಕರ್ನಾಟಕ ವಿಧಾನಸಭಾ ಚುನಾವಣೆ – 2023ರ (Karnataka Assembly Election – 2023) ವೇಳೆ ಇದೇ 5 ಖಾತ್ರಿ ಯೋಜನೆಗಳ ಭರವಸೆಯೇ ಕಾಂಗ್ರೆಸ್ ಗೆ ಬಹುಮತ ಬೆಂಬಲ ಬರಲು ಕಾರಣವಾಯಿತು ಎಂದರೆ ತಪ್ಪಾಗಲಾರದು.
ಕಾಂಗ್ರೆಸ್ ಪಕ್ಷ ನೀಡಿದ್ದ ಈ ಗ್ಯಾರಂಟಿ ಯೋಜನೆಗಳ ಭರವಸೆಯನ್ನು ನಂಬಿ ಜನರು ಕಾಂಗ್ರೆಸ್ ಪಕ್ಷಕ್ಕೆ ಐದು ವರ್ಷಗಳ ಆಡಳಿತ ನಡೆಸುವುದಕ್ಕೆ ಅನುಮತಿ ನೀಡಿದ್ದಾರೆ ಹಾಗೆ ಅಧಿಕಾರಕ್ಕೆ ಬಂದ ಕೂಡಲೇ ಸರ್ಕಾರವು ಕೂಡ ನುಡಿದಂತೆ ನಡೆದು ತನ್ನ ಮಾತನ್ನು ಉಳಿಸಿಕೊಂಡಿದೆ.
ಆದರೆ ಗ್ಯಾರಂಟಿ ಯೋಜನೆಗಳು ಜಾರಿಗೆ ಬಂದ ದಿನದಿಂದಲೂ ಕೂಡ ಒಂದಲ್ಲ ಒಂದು ವದಂತಿಗಳು ಇದರ ಕುರಿತು ಹಬ್ಬುತ್ತಲೇ ಇದೆ ಸದ್ಯಕ್ಕೆ ರಾಜ್ಯದಲ್ಲಿ ಹರಿದಾಡುತ್ತಿರುವ ಸುದ್ದಿ ಏನೆಂದರೆ ಲೋಕಸಭಾ ಚುನಾವಣೆ ನಂತರ ಕರ್ನಾಟಕದಲ್ಲಿ ಗ್ಯಾರಂಟಿ ಯೋಜನೆಗಳು ಸ್ಥಗಿತಗೊಳ್ಳಲಿದೆ ಎನ್ನುವುದು.
ರಾಜ್ಯದಲ್ಲಿ ಗೃಹಜ್ಯೋತಿ ಗೃಹಲಕ್ಷ್ಮಿ ಅನ್ನಭಾಗ್ಯ ಶಕ್ತಿಯೋಜನೆ ಮತ್ತು ಯುವನಿಧಿ ಎನ್ನುವ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರಲಾಗಿದೆ ಈ ಯೋಜನೆಗಳ ಪ್ರಕಾರ ಬಗ್ಗೆ ಕುಟುಂಬವೊಂದಕ್ಕೆ ವರ್ಷಕ್ಕೆ ಕನಿಷ್ಠ 50 ಸಾವಿರ ಹಣ ಉಳಿತಾಯ ಆಗುತ್ತಿದೆ. ಮಹಿಳೆಯರು, ನಿರುದ್ಯೋಗಿಗಳು, ಆರ್ಥಿಕವಾಗಿ ಹಿಂದುಳಿದವರು ಮತ್ತು APL ಕಾರ್ಡ್ ದಾರರು ಸೇರಿದಂತೆ ಎಲ್ಲರಿಗೂ ಅನ್ವಯವಾಗುವಂತಹ ಯೋಜನೆಗಳನ್ನು ಜಾರಿಗೆ ತರಲಾಗಿದೆ.
ಪ್ರತಿಯೊಂದು ಯೋಜನೆಯ ಬಜೆಟ್ ಕೂಡ ದೊಡ್ಡ ಗಾತ್ರದಲ್ಲಿದ್ದು ಇದು ಕಾಂಗ್ರೆಸ್ ಸರ್ಕಾರಕ್ಕೆ ಊಹೆಗೂ ಮೀರಿದ ಹೊರೆಯಾಗಿದೆ ಎಂದು ಸುದ್ದಿ ಆಗಿದೆ ಹಾಗಾಗಿ ಇದೇ ಕಾರಣದಿಂದ ಆಗಾಗ ಈ ಯೋಜನೆ ಮುಂದಿನ ತಿಂಗಳಿನಿಂದ ಸ್ಥಗಿತಗೊಳ್ಳುತ್ತದೆ ಆ ಗ್ಯಾರಂಟಿ ಯೋಜನೆ ಇನ್ನು ಮುಂದೆ ಜಾರಿಯಲ್ಲಿರುವ ಇರುವುದಿಲ್ಲ ಎನ್ನುವ ಸುದ್ದಿ ಹರಿದಾಡುತ್ತಿರುತ್ತದೆ.
ಆದರೆ ರಾಜ್ಯದ ಮುಖ್ಯಮಂತ್ರಿಗಳು (CM) ಸೇರಿದಂತೆ ಕಾಂಗ್ರೆಸ್ ಪಕ್ಷದ ಸಚಿವರು ತಮ್ಮ ಗ್ಯಾರಂಟಿ ಯೋಜನೆಗಳನ್ನು ಮಾದರಿ ಯೋಜನೆಗಳು (Model Schemes) ಎಂದು ಘೋಷಿಸಿಕೊಂಡಿದ್ದಾರೆ ಮತ್ತು ಕರ್ನಾಟಕದಲ್ಲಿ ಪ್ರಯೋಗವಾದ ಈ ಗ್ಯಾರಂಟಿ ಯೋಜನೆಗಳನ್ನು ಅನುಸರಿಸಿ ಲೋಕಸಭಾ ಚುನಾವಣೆಯನ್ನು ಕೂಡ ಗೆಲ್ಲಲು ಕಾಂಗ್ರೆಸ್ ಮತ್ತೆ ಐದು ಗ್ಯಾರಂಟಿ ಯೋಜನೆಗಳನ್ನು ಇಡಿ ದೇಶಕ್ಕೆ ಅನ್ವಯವಾಗುವಂತೆ ಘೋಷಿಸಿದೆ.
ಇತ್ತು ಈ ಬಾರಿ ಮಹಿಳೆಯರನ್ನೇ ಪ್ರಧಾನವಾಗಿ ಇಟ್ಟುಕೊಂಡು ಮಹಿಳಾ ಖಾತರಿ ನ್ಯಾಯ ಯೋಜನೆ ಎಂದು ಹೆಸರಿಟ್ಟು ಇವುಗಳನ್ನು ಪ್ರಣಾಳಿಕೆಯಲ್ಲಿ ಘೋಷಿಸಲಾಗುತ್ತಿದೆ. ಇಂತಹ ಸಂದರ್ಭದಲ್ಲಿ ರಾಜ್ಯದಲ್ಲಿ ಐದು ವರ್ಷಗಳವರೆಗೆ ಜಾರಿಯಲ್ಲಿರುವ ಭರವಸೆ ನೀಡಿ ಅನುಷ್ಠಾನಗೊಳಿಸಿರುವ ಗ್ಯಾರಂಟಿ ಯೋಜನೆಗಳನ್ನು ಸ್ಥಗಿತಗೊಳಿಸುವುದು ಏಕೆ ಎನ್ನುವುದು ನಿಮ್ಮ ಗೊಂದಲ ಆಗಿರಬಹುದು ಇದಕ್ಕೆ ಸ್ಪಷ್ಟನೆ ಹೀಗಿದೆ ನೋಡಿ.
ಯಾವುದೇ ಪತ್ರಿಕೆ ಹೇಳಿಕೆಗಳಲ್ಲಾಗಲಿ ಅಥವಾ ಮಾಧ್ಯಮದ ಎದುರಾಗಲಿ ಕಾಂಗ್ರೆಸ್ ಪಕ್ಷದ ಯಾವುದೇ ಮುಖಂಡರು ಕೂಡ ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳು ಲೋಕಸಭಾ ಚುನಾವಣೆ ನಂತರ ಸ್ಥಗಿತಗೊಳ್ಳುತ್ತಿವೆ ಎನ್ನುವುದನ್ನು ಬಹಿರಂಗವಾಗಿ ಹೇಳಿಕೊಂಡಿಲ್ಲ.
ಆದರೆ ಬಲವಾದ ಮೂಲಗಳ ಪ್ರಕಾರವಾಗಿ ಮುಂದೆ ಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಸೋತಲ್ಲಿ ರಾಜ್ಯದಲ್ಲಿ ಜಾರಿ ಇರುವ ಗ್ಯಾರಂಟಿ ಯೋಜನೆಗಳು ಬಜೆಟ್ ಕೊರತೆಯಿಂದಾಗಿ ನಿಲುವ ಸಾಧ್ಯತೆ ಇದೆ ಎನ್ನುವ ವದಂತಿ ಹಬ್ಬಿದೆ.
ಆದರೆ ಇದು ಕೇವಲ ಗಾಳಿ ಸುದ್ದಿ ಆಗಿದ್ದು ಈ ಬಗ್ಗೆ ಸರ್ಕಾರದ ಸ್ಪಷ್ಟಪಡಿಸುವವರಿಗು ಕೂಡ ಯಾವುದನ್ನು ಸಂಪೂರ್ಣವಾಗಿ ನಂಬದೇ ಇವುಗಳಿಗೆ ಕಿವಿಗೊಳದೇ ಇರುವುದೇ ಉತ್ತಮ ಮತ್ತು ಲೋಕಸಭಾ ಚುನಾವಣೆ ನಡೆದು ಕಾಂಗ್ರೆಸ್ ಪಕ್ಷ ಸೋಲುವುದಕ್ಕೂ ರಾಜ್ಯದಲ್ಲಿ ಗೆದ್ದಿರುವ ಕಾಂಗ್ರೆಸ್ ಪಕ್ಷ ಗ್ಯಾರಂಟಿ ಯೋಜನೆಗಳನ್ನು ಸ್ಥಗಿತಗೊಳಿಸುವುದಕ್ಕೂ ಸಂಬಂಧವಿಲ್ಲ ಎಂದು ಸಹ ಯೋಚಿಸಬಹುದು.