ನಮ್ಮಲ್ಲಿ ಪ್ರತಿಯೊಬ್ಬರೂ ಕೂಡ ಇಂದಿನ ಕಾಲಮಾನದಲ್ಲಿ ಜೀವಿಸುತ್ತಿರುವಂತಹ ಪ್ರತಿಯೊಂದು ಕ್ಷಣವನ್ನು ಕೂಡ ಕೇವಲ ಹಣದ ಸಂಪಾದನೆಗಾಗಿಯೇ ನಾವು ಇದ್ದೇವೆ ಎನ್ನುವ ರೀತಿ ಬದುಕುತ್ತಿದ್ದಾರೆ. ಆದರೆ ಬಹಳ ಹಿಂದಿನ ದಿನಗಳಲ್ಲಿ ನಮ್ಮ ಹಿರಿಯರು ಅಂದರೆ ನಮ್ಮ ಪೂರ್ವಜರು ಯಾವುದೇ ರೀತಿಯಾದಂತಹ ಆಡಂಬರದ ಜೀವನವನ್ನು ನಡೆಸುವುದಕ್ಕಾಗಿ ಕೆಲಸವನ್ನು ಮಾಡುತ್ತಿರಲಿಲ್ಲ.
ಬದಲಿಗೆ ಅವರು ತಿನ್ನುವಂತಹ ಆಹಾರಕ್ಕಾಗಿ ಅವರು ಇರುವಂತಹ ಸ್ಥಳದಲ್ಲಿ ಎಷ್ಟು ಸಾಧ್ಯವೊ ಅಷ್ಟು ಬೆಳೆಯನ್ನು ಬೆಳೆಯುತ್ತಾ ತಮ್ಮ ಜೀವನವನ್ನು ಸಾಗಿಸುತ್ತಿದ್ದರು. ಆದರೆ ಇತ್ತೀಚಿನ ದಿನದಲ್ಲಿ ಪ್ರತಿಯೊಬ್ಬರೂ ಕೂಡ ಪ್ರತಿಯೊಂದು ಕೆಲಸವನ್ನು ಹಣದ ಸಂಪಾದನೆಗೆಂದೇ ಮುಂದೆ ಇದ್ದಾರೆ.
ಬಡತನ ಹಾಗೂ ದಾರಿದ್ರ್ಯಕ್ಕೆ ಇದೇ ಕಾರಣ…!
ಹಣದ ಸಂಪಾದನೆ ಮಾಡುವ ಮೂಲಕ ಕೆಲವೊಂದು ತಪ್ಪು ದಾರಿಗಳನ್ನು ಸಹ ಹಿಡಿಯುತ್ತಿದ್ದಾರೆ ಎಂದು ಹೇಳಬಹುದು. ಹೌದು ಒಬ್ಬ ವ್ಯಕ್ತಿಯನ್ನು ಸಾಯಿಸುವುದರ ಮೂಲಕವೂ ಹಣವನ್ನು ಸಂಪಾದನೆ ಮಾಡುವಂತಹ ಪರಿಸ್ಥಿತಿಗೆ ಬಂದು ತಲುಪಿದ್ದಾರೆ ಎಂದರೆ ನೀವೇ ಆಲೋಚನೆ ಮಾಡಿ ಇನ್ನು ಯಾವ ವಿಚಾರದಲ್ಲೆಲ್ಲ ಮನುಷ್ಯರು ಬದಲಾಗುತ್ತಿದ್ದಾರೆ ಎಂದು.
ಆದ್ದರಿಂದಲೇ ಇಂದಿನ ಜಗತ್ತು ಕೂಡ ಹಲವಾರು ವಿಚಿತ್ರವಾದoತಹ ಘಟನೆಗಳನ್ನು ಸೃಷ್ಟಿಸುತ್ತಿದೆ ಎಂದು ಹೇಳಿದರೆ ತಪ್ಪಿಲ್ಲ. ಹಾಗಾಗಿ ಪ್ರತಿಯೊಬ್ಬ ಮನುಷ್ಯನು ಕೂಡ ನಾವು ನಮ್ಮ ಜೀವನದಲ್ಲಿ ನಾವು ಮಾಡುತ್ತಿರುವಂತಹ ತಪ್ಪುಗಳು ಯಾವುದು ಎನ್ನುವುದನ್ನು ಅರಿತು ಅದನ್ನು ಸರಿಪಡಿಸಿಕೊಂಡು ಜೀವನವನ್ನು ಉನ್ನತವಾದಂತ ಮಟ್ಟದಲ್ಲಿ ತೆಗೆದುಕೊಂಡು ಹೋಗುವುದು ಬಹಳ ಮುಖ್ಯವಾಗಿರುತ್ತದೆ.
ಪುರುಷರಿಗೆ ಕಿವಿ ಮಾತು…! 2 ನಿಮಿಷ ಬಿಡುವು ಮಾಡಿಕೊಂಡು ನೋಡಿ.!
ಹಾಗಾದರೆ ಈ ದಿನ ನಾವು ನಮ್ಮ ಜೀವನದಲ್ಲಿ ಅಂದರೆ ಮನುಷ್ಯರು ತಿಳಿದು ಮಾಡುತ್ತಿರುವಂತಹ ತಪ್ಪುಗಳು ಯಾವುವು ಎನ್ನುವಂತಹ ಮಾಹಿತಿಯ ಬಗ್ಗೆ ತಿಳಿದುಕೊಳ್ಳುತ್ತಾ ಹೋಗೋಣ.
* ಇಂದಿನ ಯುಗದಲ್ಲಿ ನಾವು ಕೆಲವೊಂದಷ್ಟು ಮಾಹಿತಿಗಳು ತಿಳಿದಿದ್ದರೂ ಕೂಡ ಹುಂಡಿಗೆ ಹಾಕುವ ದುಡ್ಡನ್ನು ದೇವರು ತೆಗೆದುಕೊಳ್ಳುವುದಿಲ್ಲ ಅಂತ ಗೊತ್ತಿದ್ದರೂ 100 ರೂಪಾಯಿ ಹಾಕುತ್ತಾರೆ, ಹಾಕುವ ಅನ್ನವನ್ನು ಭಿಕ್ಷುಕ ತಿನ್ನುತ್ತಾನೆ ಎಂದು ಗೊತ್ತಿದ್ದರೂ ಹಳಸಿದ ಅನ್ನವನ್ನು ಹಾಕುತ್ತಾರೆ.
* ಜಪ ಮಾಲೆಯ 108 ಮಣಿಗಳನ್ನ ಜಪಿಸುವಾಗ, ಮನಸ್ಸು ಅಲ್ಲಿ ಇಲ್ಲಿ ಎಲ್ಲೆಲ್ಲೂ ಅಲೆದಾಡುತ್ತದೆ ಆದರೆ ನೋಟುಗಳನ್ನ ಎಣಿಸುವಾಗ ಮನಸ್ಸು ಏಕಾಗ್ರತೆಯನ್ನು ಹೊಂದಿರುತ್ತದೆ.
* ಬಡವ ಹೊಟ್ಟೆ ತುಂಬಿಸಲು ಕಷ್ಟಪಡುತ್ತಾನೆ, ಸಿರಿವಂತ ಹೊಟ್ಟೆ ಕರಗಿಸಲು ಜಿಮ್ ನಲ್ಲಿ ಬೆವರು ಸುರಿಸುತ್ತಾನೆ,
* ಬಡವ ಕೆಲಸಕ್ಕಾಗಿ ಕಾಯುತ್ತಾನೆ, ಶ್ರೀಮಂತ ಸ್ಥಾನಮಾನಕ್ಕಾಗಿ ಕುಸ್ತಿ ಆಡುತ್ತಾನೆ. ಬಾರದ ನಿದ್ರೆಗಾಗಿ ಹೊರಳಾಡುತ್ತಾನೆ.
ಒಂದೇ ಕ್ಷಣದಲ್ಲಿ ಜಿಪ್ ರಿಪೇರಿ ಮಾಡಬಹುದು.!
* ಬಡವನ ಬೆವರು ಬದುಕಿಗಾಗಿ, ಸಿರಿವಂತನ ಬದುಕು ಶೋಕಿಗಾಗಿ.
* ತಿನ್ನಲು ಅನ್ನವಿಲ್ಲದ ಸ್ಥಿತಿ ಬಡವನಿಗಾದರೆ ತಿನ್ನಲು ಸಮಯವಿಲ್ಲದ ಸ್ಥಿತಿ ತಿನ್ನಲಾಗದ ಸ್ಥಿತಿ ಶ್ರೀಮಂತನಿಗೆ.
* ಕಲಿಯುಗದಲ್ಲಿ ತಂದೆತಾಯಿ ಸ್ಮಾರ್ಟ್ ಫೋನ್ ನಲ್ಲಿ ಮಕ್ಕಳು ವಿಡಿಯೋ ಗೇಮ್ ನಲ್ಲಿ, ಗೆಳೆಯ ಗೆಳತಿಯರು ಫೇಸ್ಬುಕ್, ಹೆಂಡತಿ ಟಿವಿಯಲ್ಲಿ ಗಂಡ ಲ್ಯಾಪ್ಟಾಪ್ ನಲ್ಲಿ ರೈತರು ಸಾಲದ ಸುಳಿಯಲ್ಲಿ.
* ಬಟ್ಟೆಯನ್ನು ಧರಿಸಿದ ಬೊಂಬೆಗೆ ಜೀವವಿರುವುದಿಲ್ಲ ಜೀವವಿರುವ ಬಡವನಿಗೆ ಧರಿಸಲು ಬಟ್ಟೆಯಿಲ್ಲ.
* ಪುಸ್ತಕ ಹೇಳಿತು ತಲೆತಗ್ಗಿಸಿ ನನ್ನನ್ನು ನೋಡು, ನಾನು ನಿನ್ನನ್ನು ಸದಾ ತಲೆ ಎತ್ತುವಂತೆ ಮಾಡುತ್ತೇನೆ. ಮೊಬೈಲ್ ಹೇಳಿತು ತಲೆತಗ್ಗಿಸಿ ಒಮ್ಮೆ ನನ್ನನ್ನು ನೋಡು, ಮತ್ಯಾವತ್ತು ನಿನ್ನನ್ನು ತಲೆ ಎತ್ತದಂತೆ ಮಾಡುತ್ತೇನೆ.
* ದಾಹವೆಂದು ನೀರು ಕೇಳಿದವರ ಜೀವ ಉಳಿಸದೆ ಶವಕ್ಕೆ ಅಮೃತ ಸುರಿದರೆ ಏನು ಫಲ? ತಂದೆ ತಾಯಿಯ ಸೇವೆಯನ್ನ ಮಾಡದೆ ನಿತ್ಯ ಶಿವಪೂಜೆ ಮಾಡಿದರೆ ಏನು ಫಲ?
* ಹಸಿದು ಬಂದವನಿಗೆ ಹಿಡಿ ಅನ್ನವನ್ನು ಕೊಡದೆ ಕೋಟಿ ಹಣ ದಾನ ಮಾಡಿದರೆ ಏನು ಫಲ.