ದರ್ಶನ್ ಅವರನ್ನು ಅಭಿಮಾನಿಗಳು ಪ್ರೀತಿಯಿಂದ ಹಲವು ಹೆಸರುಗಳಲ್ಲಿ ಕರೆಯುತ್ತಾರೆ ದಾಸ, ಚಾಲೆಂಜಿಂಗ್ ಸ್ಟಾರ್, ದಚ್ಚು, ಸುಂಟರಗಾಳಿ, ಒಡೆಯ, ಯಜಮಾನ ಈ ರೀತಿ ಹಲವು ಹೆಸರುಗಳಲ್ಲಿ ಕರೆದರೂ ಸ್ಯಾಂಡಲ್ವುಡ್ ಸುಲ್ತಾನ ಎಂದು ಹೇಳುವುದು ಸ್ವಲ್ಪ ಎಲ್ಲದಕ್ಕಿಂತ ವಿಶೇಷವಾಗಿದೆ. ದರ್ಶನ್ ಅವರನ್ನು ಹೀಗೆ ಹೇಳಲು ಕಾರಣ ಕೂಡ ಇದೆ ಮತ್ತು ದರ್ಶನ್ ಅವರನ್ನು ಯಾರು ಮೊದಲು ಈ ಹೆಸರಿನಿಂದ ಗುರುತಿಸಿದರು ಎನ್ನುವುದನ್ನು ಕೂಡ ತಿಳಿದುಕೊಳ್ಳಬೇಕು ಎಂದರೆ ಈ ಅಂಕಣವನ್ನು ಪೂರ್ತಿ ಓದಿ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಕನ್ನಡದ ಹೆಸರಾಂತ ನಟ ತೂಗುದೀಪ್ ಶ್ರೀನಿವಾಸ್ ಅವರ ಹಿರಿಯ ಪುತ್ರ. ಇಷ್ಟು ದೊಡ್ಡ ನಟನ ಮಗನಾದರು ಕೂಡ ದರ್ಶನ್ ಅವರು ಬೆಳೆದಿದ್ದು ಅಪ್ಪನ ಹೆಸರು ಹೇಳಿಕೊಂಡು ಅಲ್ಲ, ತಮ್ಮ ಸ್ವಂತ ಪರಿಶ್ರಮದಿಂದ ಸ್ಯಾಂಡಲ್ವುಡ್ ನಲ್ಲಿ ಶಾಸ್ತ್ರಿ ಈ ಮಟ್ಟಕ್ಕೆ ಬೆಳೆದು ನಿಂತಿದ್ದಾರೆ.
ಆರಂಭದಲ್ಲಿ ಲೈಟ್ ಬಾಯ್ ಆಗಿ ಕೆಲಸಕ್ಕೆ ಸೇರಿಕೊಂಡ ದರ್ಶನ್ ಅವರು ಅವರ ತಂದೆ ತೀರಿಕೊಂಡ ಬಳಿಕ ಜೀವನ ನಡೆಸಲು ಹಲವಾರು ಕಷ್ಟಗಳನ್ನು ಪಟ್ಟಿದ್ದಾರೆ. ಸಂಸಾರ ನಿರ್ವಹಣೆಗಾಗಿ ಹಾಲನ್ನು ಕರೆದು ಮಾರುವ ವೃತ್ತಿಯನ್ನು ಕೂಡ ಮಾಡುತ್ತಿದ್ದ ದರ್ಶನ ಅವರು ವಿದ್ಯಾಭ್ಯಾಸದಲ್ಲಿ ಅಷ್ಟೊಂದು ಆಸಕ್ತಿ ತೋರದೆ ನೀನಾಸಂ ಸೇರಿಕೊಂಡು ರಂಗ ಶಿಕ್ಷಣದ ಕಡೆಗೆ ಗಮನಕೊಟ್ಟರು. ನಂತರ ಬಂದು ಚಲನಚಿತ್ರ ರಂಗದಲ್ಲಿ ಲೈಟ್ ಬಾಯ್ ಹಾಗೂ ಸಹಾಯಕ ನಿರ್ದೇಶಕನಾಗಿ ಸೇರಿಕೊಂಡರು ಇವರು. ಜೊತೆಗೆ ಮೊದಮೊದಲಿಗೆ ಹೊಟ್ಟೆಪಾಡಿಗಾಗಿ ಸಣ್ಣಪುಟ್ಟ ಪಾತ್ರಗಳನ್ನು ಕೂಡ ಮಾಡಿದ್ದಾರೆ ದಾಸ. ದರ್ಶನ್ ಅವರು ಮೆಜೆಸ್ಟಿಕ್ ಸಿನಿಮಾದಲ್ಲಿ ನಾಯಕನಟನ ಪಾತ್ರಕ್ಕೆ ಆಯ್ಕೆಯಾದರು. ಮೆಜೆಸ್ಟಿಕ್ ಚಿತ್ರದ ಅದ್ಭುತವಾದ ಗೆಲುವಿನ ನಂತರ ನಡೆದಿದ್ದೆಲ್ಲ ಇತಿಹಾಸ ಎಂದೇ ಹೇಳಬಹುದು. ಆನಂತರ ಧ್ರುವ, ಕಿಟ್ಟಿ, ನಿನಗೋಸ್ಕರ ಈ ರೀತಿ ಸಿನಿಮಾಗಳಲ್ಲಿ ದರ್ಶನ್ ಅವರು ಕಾಣಿಸಿಕೊಂಡರು.
ಮತ್ತೊಮ್ಮೆ ಅವರಿಗೆ ಬ್ರೇಕ್ ನೀಡಿದ ಸಿನಿಮಾ ನನ್ನ ಪ್ರೀತಿಯ ರಾಮು. ಈ ಸಿನಿಮಾದಲ್ಲಿ ದರ್ಶನ್ ಅವರ ನಟನೆಗೆ ಮನಸೋಲದವರೇ ಇಲ್ಲ. ಇಂದಿಗೂ ಕೂಡ ದರ್ಶನ್ ಅವರ ಫೇವರೆಟ್ ಸಿನಿಮಾಗಳಲ್ಲಿ ಹಾಗೂ ಅಭಿಮಾನಿಗಳಿಗೆ ದರ್ಶನ್ ಅವರಲ್ಲಿ ಇಷ್ಟವಾದ ಸಿನಿಮಾಗಳಲ್ಲಿ ನಮ್ಮ ಪ್ರೀತಿಯ ರಾಮು ಮೊದಲನೇ ಸ್ಥಾನದಲ್ಲಿ ಇರುತ್ತದೆ. ಈ ಸಿನಿಮಾದ ಗೆಲುವಿನ ನಂತರ ದರ್ಶನ್ ಅವರ ವೃತ್ತಿ ಮತ್ತೊಂದು ರೀತಿಯಲ್ಲಿ ಬದಲಾಗಿತ್ತು. ನಂತರ ದರ್ಶನ್ ಅವರು ನಟಿಸಿದ ಬಹುತೇಕ ಎಲ್ಲಾ ಸಿನಿಮಾಗಳು ಕೂಡ ಸೂಪರ್ ಹಿಟ್ ಸಿನಿಮಾಗಳೇ. ಮತ್ತೊಂದು ಹೆಮ್ಮೆಯ ವಿಚಾರ ಏನೆಂದರೆ ಕನ್ನಡದಲ್ಲಿ ಎಲ್ಲಾ ನಟರಿಗಿಂತ ದರ್ಶನ್ ಅವರಿಗೆ ಅಭಿಮಾನಿಗಳು ಹೆಚ್ಚಾಗಿ ಇದ್ದಾರೆ. ದರ್ಶನ್ ಅವರು ಕೂಡ ಅಭಿಮಾನಿಗಳನ್ನು ಅಷ್ಟೇ ಪ್ರೀತಿಯಿಂದ ಕಾಣುತ್ತಾರೆ ಇದೇ ಕಾರಣಕ್ಕಾಗಿ ದರ್ಶನ್ ಎಂದರೆ ಎಲ್ಲರಿಗೂ ಪ್ರೀತಿ.
ಪ್ರಾಣಿಗಳ ಬಗ್ಗೆ ವಿಶೇಷ ಕಾಳಜಿ ಹೊಂದಿರುವ ಇವರು ಮೈಸೂರಿನ ತಮ್ಮ ಫಾರಂ ಹೌಸಿನಲ್ಲಿ ಹಲವಾರು ಪ್ರಾಣಿಗಳನ್ನು ಸಾಕುತ್ತಿದ್ದಾರೆ ಹಾಗೂ ಝೂನಲ್ಲಿ ಕೂಡ ಹಲವಾರು ಪ್ರಾಣಿಗಳನ್ನು ದತ್ತು ತೆಗೆದುಕೊಂಡು ಸಾಕುತ್ತಿದ್ದಾರೆ. ವೈಯುಕ್ತಿಕ ಬದುಕಿನಲ್ಲಿ ಮಾತ್ರ ಕೆಲವೊಮ್ಮೆ ವಿವಾದ ಮಾಡಿಕೊಳ್ಳುವ ದರ್ಶನವರು ಸಿನಿಮಾ ವಿಚಾರವಾಗಿ ಹೇಳುವುದಾದರೆ ಸ್ಯಾಂಡಲ್ವುಡ್ ಅನ್ನು ಆಳುತ್ತಿರುವ ಕಿಂಗ್ ಎಂದು ಹೇಳಬಹುದು ಹಾಗಾಗಿ ಇವರನ್ನು ಬಾಕ್ಸ್ ಆಫೀಸ್ ಸುಲ್ತಾನ ಎಂದು ಕೂಡ ಕರೆಯುತ್ತಾರೆ. ಅವರನ್ನು ಮೊದಲು ಈ ಹೆಸರಿನಲ್ಲಿ ಕರೆದಿದ್ದು ಕನ್ನಡದ ಹೆಸರಾಂತ ಪತ್ರಕರ್ತ “ಪಾರ್ಥ ಸಾರಥಿ” ಅವರು. ದರ್ಶನ್ ಅವರ ಸಿನಿಮಾಗಳು ಹಿಟ್ ಆದರೆ ಅದು ಎಷ್ಟರ ಮಟ್ಟಿಗೆ ಹಿಸ್ಟರಿ ಕ್ರಿಯೇಟ್ ಮಾಡುತ್ತದೆ ಮತ್ತು ಗಲ್ಲಾ ಪೆಟ್ಟಿಗೆಯನ್ನು ಎಷ್ಟು ಭರ್ತಿ ಮಾಡುತ್ತದೆ ಎನ್ನುವುದನ್ನು ಹತ್ತಿರದಿಂದ ಕಂಡಿದ್ದ ಇವರು ದರ್ಶನ್ ಅವರ ಆಪ್ತ ಬಳಗದ ಸ್ನೇಹಿತರು ಕೂಡ ಆಗಿದ್ದರು. ದರ್ಶನ್ ಅವರ ಬಗ್ಗೆ ನಿಮ್ಮ ಅಭಿಪ್ರಾಯವೇನು.? ತಪ್ಪದೆ ಕಾಮೆಂಟ್ ಮುಖಾಂತರ ತಿಳಿಸಿ.