Saturday, April 19, 2025
WhatsApp Group Join Now
Telegram Group Join Now
WhatsApp Group Join Now
Telegram Group Join Now
HomeAstrologyಮಕರ ರಾಶಿ ಸ್ತ್ರೀ ರಹಸ್ಯ.!

ಮಕರ ರಾಶಿ ಸ್ತ್ರೀ ರಹಸ್ಯ.!

 

ರಾಶಿ ಚಕ್ರದಲ್ಲಿ ಬಹಳ ಗಂಭೀರವಾದಂತಹ ರಾಶಿ ಯಾವುದೆಂದರೆ ಮಕರ ರಾಶಿ. ಇದರ ಒಂದು ಸಂಕೇತದಲ್ಲಿರುವಂತಹ ಪ್ರಾಣಿ ಅದೃಷ್ಟದೇವತೆ ಎಂದೇ ಕರೆಯಲ್ಪಡುವಂತಹ ಲಕ್ಷ್ಮಿಯ ವಾಹನ. ಮಕರ ಎನ್ನುವ ಹೆಸರಲ್ಲಿಯೆ ಏನೋ ಒಂದು ಸೆಳೆತ ಇದೆ. ಅಂತಹದ್ದರಲ್ಲಿ ಈ ರಾಶಿಯ ಮಹಿಳೆಯರು ಹೇಗೆ ಇರಬಹುದು ಇವರಿಗೆ ಏನು ಇಷ್ಟ ಹಾಗೂ ಯಾವ ವಿಚಾರವನ್ನು ಇವರು ಎಲ್ಲರಿಂದ ಮುಚ್ಚಿಡಲು ಪ್ರಯತ್ನಿಸುತ್ತಾರೆ ಹೀಗೆ ಮಕರ ರಾಶಿಯ ಸ್ತ್ರೀ ರಹಸ್ಯದ ಬಗ್ಗೆ ಈ ದಿನ ತಿಳಿಯೋಣ.

ಮಕರ ಎಂದರೆ ಸಂಸ್ಕೃತದಲ್ಲಿ ಮೊಸಳೆ ಎಂಬ ಅರ್ಥ ಇದೆ. ದೇಹ ಮೊಸಳೆಯದಾಗಿದ್ದು ಮುಖ ಮೇಕೆಯಂತೆ ಇದೆ, ಒಟ್ಟಾರೆಯಾಗಿ ಹೇಳಬೇಕು ಎಂದರೆ ಸಮುದ್ರ ಮೇಕೆ ಎಂದು ಕೂಡ ಇದನ್ನು ಹೇಳುತ್ತಾರೆ. ಇದು ಶಕ್ತಿ ಹಾಗೆಯೇ ಕಠಿಣತೆಯ ಸೂಚಕ. ಆದರೆ ನಾವು ಮೇಕೆ ಎಂದ ಕೂಡಲೇ ಗಮನಿಸುವುದು ಮೊಸಳೆಯನ್ನು ಇದಕ್ಕೂ ಈ ಮೊಸಳೆಗೂ ಏನು ಸಂಬಂಧ ಎನ್ನುವುದನ್ನು ಈ ಕೆಳಗೆ ತಿಳಿಯೋಣ.

ಈ ಮಕರ ರಾಶಿ ಸೌಮ್ಯ ಹಾಗೂ ಶಾಂತವಾಗಿರುವಂತಹ ಸ್ತ್ರೀ ಚಿನ್ಹೆ. ಹೆಣ್ಣು ಮಕ್ಕಳು ಹೇಗೆ ಇರುತ್ತಾರೆ ಅವರ ನಡವಳಿಕೆ ಹೇಗೆ ಇರುತ್ತದೆ ಎನ್ನುವುದನ್ನು ಗುರುತಿಸುವುದೇ ಈ ಚಿನ್ಹೆ. ಭೂಮಿ ಹಾಗೂ ನೀರಿನ ಸಂಯೋಜನೆ ಇರುವುದರಿಂದ ಈ ರಾಶಿಯ ಜನ ಎಲ್ಲೇ ಹೋದರು ಕೂಡ ಅಲ್ಲಿಗೆ ತಕ್ಕಂತೆ ಹೊಂದಿಕೊಳ್ಳುತ್ತಾರೆ.

ಈ ಸುದ್ದಿ ಓದಿ:- ಯಾವ ರಾಶಿ ಅವರಿಗೆ ಯಾವ ಅಕ್ಷರದ ಹೆಸರು ಇಡಬೇಕು ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.!

ಹೆಜ್ಜೆ ಗುರುತನ್ನು ಬಿಡದೆ ಇವರು ಸರಾಗವಾಗಿ ತಪ್ಪಿಸಿಕೊಳ್ಳುವ ಗುಣ ಸ್ವಭಾವ ಇವರದ್ದಾಗಿರುತ್ತದೆ ವಿದ್ಯಾಭ್ಯಾಸ, ಅದೃಷ್ಟ ಹಾಗೂ ಸಮೃದ್ಧಿ ಎಂದರೆ ಮಕರ. ಇವರು ಯಾರ ಮೇಲೂ ಕೂಡ ತಕ್ಷಣಕ್ಕೆ ಕೋಪಿಸಿಕೊಳ್ಳುವುದಿಲ್ಲ ಸ್ವಲ್ಪ ದಿನಗಳವರೆಗೆ ಅವರು ನಿಮ್ಮ ಬಗ್ಗೆ ಏನು ಮಾತನಾಡುತ್ತಿದ್ದಾರೆ ಎನ್ನುವುದನ್ನು ಗಮನದಲ್ಲಿಟ್ಟುಕೊಂಡು ಒಂದೇ ಸಮನೆ ಅವರು ನಿಮ್ಮ ಮೇಲೆ ಕೋಪಗೊಳ್ಳುತ್ತಾರೆ.

ಅಂತಹ ಸಂದರ್ಭದಲ್ಲಿ ಅವರಿಂದ ತಪ್ಪಿಸಿ ಕೊಳ್ಳುವುದು ಕಷ್ಟ. ಕೆಲವೊಮ್ಮೆ ಅವರು ಬೇರೆಯವರಿಗೆ ಸರಿಪಡಿಸಿ ಕೊಳ್ಳುವಂತೆ ಹೇಳುತ್ತಾರೆ ಹಾಗೂ ಅವಕಾಶವನ್ನು ಕೊಡುತ್ತಾರೆ ಹಾಗೂ ಅವರು ಬದಲಾಗಲಿಲ್ಲ ಎಂದರೆ ಅವರಿಗೆ ತಕ್ಕ ಪಾಠ ಕಲಿಸುತ್ತಾರೆ ಇನ್ನು ದುಡ್ಡಿನ ವಿಚಾರದಲ್ಲಿ ಇವರ ತಲೆ ಮಷೀನ್ ರೀತಿ ಕೆಲಸ ಮಾಡುತ್ತದೆ

ಹಾಗೆಯೇ ಕಲೆ ಸಾಹಿತ್ಯದಲ್ಲಿಯೂ ಕೂಡ ಇವರಿಗೆ ಹೆಚ್ಚಿನ ಆಸಕ್ತಿ ಇದೆ. ಯಾವುದೇ ಒಂದು ಕೆಲಸವನ್ನು ತೆಗೆದುಕೊಂಡರೂ ಅದನ್ನು ಬಹಳ ಕಷ್ಟದಿಂದ ಇಷ್ಟದಿಂದ ಅದನ್ನು ಪೂರ್ತಿ ಮಾಡುತ್ತಾರೆ. ತಮ್ಮ ಪರಿಶ್ರಮ ವನ್ನು ನೂರಕ್ಕೆ ನೂರರಷ್ಟು ಹಾಕುವುದರ ಮೂಲಕ ಯಶಸ್ಸನ್ನು ಪಡೆದುಕೊಳ್ಳುತ್ತಾರೆ.

ಈ ಸುದ್ದಿ ಓದಿ:-ಸಾಲ ಕೊಡುವಾಗ ಪಡೆಯುವಾಗ ಈ ಮ್ಯಾಜಿಕ್ ನಂಬ‌ರ್ ಹೇಳಿಕೊಳ್ಳಿ | ಸಾಲ ತೀರುತ್ತೆ, ಕೊಟ್ಟ ಹಣ ವಾಪಸ್ ಬರುತ್ತೆ.!

ಇವರು ಏನೇ ಇಷ್ಟ ಪಟ್ಟರು ಕೂಡ ಅದನ್ನು ಪಡೆದುಕೊಳ್ಳುವವರೆಗೂ ಅವರು ತಮ್ಮ ಛಲವನ್ನು ಬಿಡುವುದಿಲ್ಲ. ಗೊತ್ತಿಲ್ಲದೆ ಇರುವ ವಿಚಾರ ಗಳನ್ನು ಗೊತ್ತಿರುವವರ ಬಳಿ ಕೇಳಿ ತಿಳಿದುಕೊಳ್ಳುತ್ತಾರೆ. ಆನಂತರ ಆದರಿಂದ ತಮ್ಮ ಆಸೆಗಳನ್ನು ಪೂರ್ತಿ ಮಾಡಿಕೊಳ್ಳುತ್ತಾರೆ. ಇವರು ತಮ್ಮ ಗುರಿ ಸಾಧನೆಗೆ ಎಷ್ಟೇ ದೂರಕ್ಕೆ ಹೋಗುವುದಿದ್ದರೂ ಕೂಡ ಹಿಂದೆ ಮುಂದೆ ನೋಡುವುದಿಲ್ಲ ತಮ್ಮ ಗುರಿಯನ್ನು ಸಾಧಿಸುವ ಕಡೆ ತಮ್ಮ ಗಮನವನ್ನು ಹೊಂದಿರುತ್ತಾರೆ.

ಯಾವುದೇ ವಿಷಯವನ್ನು ತೆಗೆದು ಕೊಂಡರೂ ಅವರು ಅದರಲ್ಲಿ ಅತಿ ಹೆಚ್ಚಿನ ಆಸಕ್ತಿಯನ್ನು ಹೊಂದಿರುತ್ತಾರೆ. ಎಲ್ಲದರ ಬಗ್ಗೆಯೂ ಕೂಡ ಸಂಪೂರ್ಣವಾಗಿ ತಿಳಿದುಕೊಂಡಿರುತ್ತಾರೆ ಎಲ್ಲದರಲ್ಲಿಯೂ ನಿಪುಣರು ಕೂಡ ಹೌದು. ಯಾವುದೇ ಒಂದು ಕೆಲಸವನ್ನು ಮಾಡುತ್ತಿದ್ದರೆ ಅದನ್ನು ಪೂರ್ಣ ಮಾಡುವ ತನಕ ಅದನ್ನು ಬಿಡುವುದಿಲ್ಲ. ಇವರು ಶಿಸ್ತಿನ ಕಡೆ ಹೆಚ್ಚಿನ ಗಮನವನ್ನು ವಹಿಸುತ್ತಾರೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

https://youtu.be/ZnL4UyuOujM?si=P1Mn6dG3vh6_zCN1