ಕೆಲವೇ ವರ್ಷಗಳ ಹಿಂದೆ ಜಾತಿ ಮತ್ತು ಆದಾಯ ಪ್ರಮಾಣ ಪತ್ರವನ್ನು ಪಡೆಯಬೇಕು ಎಂದರೆ ತಿಂಗಳೇ ಕಳೆಯುತ್ತಿತ್ತು. ಆದರೆ, ಸರ್ಕಾರ ಜಾತಿ ಮತ್ತು ಆದಾಯ ಪ್ರಮಾಣ ಪತ್ರವನ್ನು ಆನ್ಲೈನ್ ಮೂಲಕ ಪಡೆಯುವಂತಹ ಸೌಲಭ್ಯವನ್ನು ಜಾರಿಗೆ ತಂದಿದ್ದು, ಕೇವಲ 5 ನಿಮಿಷಗಳಲ್ಲಿ ನೀವೀಗ ಆನ್‌ಲೈನಿನಲ್ಲಿ ಜಾತಿ ಮತ್ತು ಆದಾಯ ಪ್ರಮಾಣ ಪತ್ರವನ್ನು ಪಡೆಯಬಹುದು. ಇದೀಗ ಜಾತಿ ಮತ್ತು ಆದಾಯ ಪ್ರಮಾಣಪತ್ರಕ್ಕಾಗಿ ದಿನಗಟ್ಟಲೆ, ತಿಂಗಳುಗಟ್ಟಲೆ ನಾಡಕಛೇರಿ ಬಳಿ ಅಲೆಯುವಂತಿಲ್ಲ. ನೀವು ಕುಳಿತಲ್ಲೇ ನಿಮ್ಮ ಮೊಬೈಲ್‌ನಲ್ಲಿ ಅಥವಾ ಕಂಪ್ಯೂಟರ್‌ನಲ್ಲಿ ತೆಗೆದುಕೊಳ್ಳಬಹುದು.
ಹೌದು, ಮಧ್ಯವರ್ತಿಗಳ ಹಾವಳಿ ತಪ್ಪಿಸಲು ಸರ್ಕಾರ ಈ ವ್ಯವಸ್ಥೆವನ್ನು ಜಾರಿಗೆ ತಂದಿದ್ದು, ನಿಮಿಷಗಳಲ್ಲೇ ಕಂಪ್ಯೂಟರ್ ಅಥವಾ ಮೊಬೈಲ್ ಫೋನ್‌ಗಳ ಮೂಲಕ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಪಡೆಯಬಹುದಾಗಿದೆ. ನಿಮ್ಮ ರೇಷನ್ ಕಾರ್ಡ್ ನಂಬರ್ ಒಂದಿದ್ದರೆ ಆನ್‌ಲೈನಿನಲ್ಲೇ ಈಗ ಜಾತಿ ಮತ್ತು ಆದಾಯ ಪ್ರಮಾಣ ಪತ್ರವನ್ನು ಕ್ಷಣಮಾತ್ರದಲ್ಲಿ ಪಡೆಯಬಹುದಾಗಿದೆ
ಸರ್ಕಾರ ವಿತರಿಸುವಂತಹ ಜಾತಿ ಮತ್ತು ಆದಾಯ ಪ್ರಮಾಣ ಪತ್ರವನ್ನು ಆನ್ಲೈನ್ ಮೂಲಕ ಪಡೆಯುವಂತಹ ಸೌಲಭ್ಯವನ್ನು ಜಾರಿಗೆ ತರಲಾಗಿದೆ. ನಿಮ್ಮ ರೇಷನ್ ಕಾರ್ಡ್ ನಂಬರ್ ಸಹಾಯದಿಂದ ಈ ಪ್ರಮಾಣಪತ್ರಗಳನ್ನು ಪಡೆಯಬಹುದಾಗಿದೆ. ಸರ್ಕಾರವು ಮಧ್ಯವರ್ತಿಗಳ ಹಾವಳಿ ತಪ್ಪಿಸಲು ಈ ವ್ಯವಸ್ಥೆ ಜಾರಿಗೆ ತಂದಿದೆ. ಇದರಿಂದ ಸಮಯದ ಉಳಿತಾಯವಾಗುತ್ತದೆ. ಕೇವಲ 5 ರಿಂದ 10 ನಿಮಿಷಗಳಲ್ಲಿ ಕಂಪ್ಯೂಟರ್ ಅಥವಾ ಮೊಬೈಲ್ ಫೋನ್ ಗಳಲ್ಲಿ ರೂ 25 ಶುಲ್ಕವನ್ನು ಪಾವತಿಸಿ ಪಡೆಯಬೇಕಾಗುತ್ತದೆ.
ಮೊಬೈಲ್‌ನಲ್ಲಿ ಈ ಮಾರ್ಗ ಅನುಸರಿಸಿ
* ಮೊದಲು nadakacheri.karnataka.gov.in ಗೆ ಭೇಟಿ ನೀಡಿ.
* ಅಲ್ಲಿ ಮೇಲ್ಭಾಗದ ಎಡಗಡೆ ಕಾಣಿಸುವ ಮೂರೂ ಗೆರೆ ಇರುವ home ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
* ಆನ್ಲೈನ್ ಅಪ್ಲಿಕೇಶನ್ ಮೇಲೆ ಕ್ಲಿಕ್ ಮಾಡಿ ಅಪ್ಲೈ ಆನ್ಲೈನ್ ಅನ್ನು ಆಯ್ಕೆ ಮಾಡಿಕೊಳ್ಳಬೇಕು.
* ನಂತರ ಮೊಬೈಲ್ ನಂಬರ್ ಮೂಲಕ ಲಾಗಿನ್ ಆಗಿ, ಮೇಲೆ ಕಾಣಿಸುವ ನ್ಯೂ ರಿಕ್ವೆಸ್ಟ್ ಮೇಲೆ ಕ್ಲಿಕ್ ಮಾಡಿ ಆಗ ಆಯ್ಕೆಗಳು ಬರುತ್ತವೆ.
* ಆಗ ನಿಮಗೆ ಬೇಕಾದ ಆಯ್ಕೆಯನ್ನು ಆಯ್ದುಕೊಳ್ಳಿ.
* ನಿಮಗೆ ಅಗತ್ಯವಿರುವ ಸದಸ್ಯರ ಆಯ್ಕೆ ಮಾಡಿ ಪರಿಶೀಲಿಸಿ.(ಪ್ರಮಾಣ ಪತ್ರದಲ್ಲಿ ಹೆಸರು ತಪ್ಪು ಇದ್ದಲ್ಲಿ ನಿಮ್ಮ ನಾಡಕಛೇರಿ ಅಥವಾ ಅಟಲ್ ಜೀ ಕೇಂದ್ರಗಳಿಗೆ ಹೋಗಿ ತಿದ್ದುಪಡಿಗೆ ಅರ್ಜಿ ಸಲ್ಲಿಸಬಹುದು).
* ನಿಮಗೆ ಬೇಕಾದ ಪ್ರಮಾಣ ಪತ್ರಗಳನ್ನು ಆಯ್ದುಕೊಂಡ ನಂತರ Pay Service ಎಂಬುದರ ಮೇಲೆ ಕ್ಲಿಕ್ ಮಾಡಿ ಶುಲ್ಕ ಪಾವತಿಸಿ. ನಂತರ ಪ್ರಮಾಣ ಪತ್ರಗಳ ಡೌನ್‌ಲೋಡ್ ಲಭ್ಯ.
* ನೀವು ನಾಡಕಛೇರಿಗೆ ಹೋಗಿ ಜಾತಿ ಆದಾಯ ಪ್ರಮಾಣ ಪತ್ರಕ್ಕಾಗಿ ಅರ್ಜಿ ಸಲ್ಲಿಸಿದ್ದರೇ ಅವರು ನಿಮಗೆ ನೀಡಿರುವ ಸ್ವೀಕೃತಿ ನಂಬರ್(Acknowledgement Number) ನೀಡಿ ಡೌನ್‌ಲೋಡ್ ಮಾಡಿಕೊಳ್ಳಬಹುದು. ಪುನಃ ಅದೇ ಕಛೇರಿಗೆ ಹೋಗುವ ಅಗತ್ಯವಿಲ್ಲ.
ನಾವು ತಿಳಿಸಿದ ಈ ಸೇವೆಗಳನ್ನು ಪಡೆಯಲು ಅಧಿಕೃತ ವೆಬ್‌ಸೈಟ್ ವಿಳಾಸ nadakacheri.karnataka.gov.in/ajsk ಅಥವಾ www.nadakacheri.karnataka.gov.in/Home.aspx
ಈ ಅಂಶಗಳನ್ನು ನೆನಪಿಡಿ
ನೀವು ಅರ್ಜಿ ಸಲ್ಲಿಸುವಾಗ ಪ್ರಿಂಟರ್ ಸಂಪರ್ಕ ಇದ್ದರೆ ಆಗಲೇ ಪ್ರಿಂಟ್ ತೆಗೆದುಕೊಳ್ಳಬಹುದು. ಅಥವಾ Save PDF ಎಂಬುದನ್ನು ಕ್ಲಿಕ್ ಮಾಡಿ ಮೊಬೈಲ್ ನಲ್ಲೇ ಅಥವಾ ಕಂಪ್ಯೂಟರ್ ನಲ್ಲೇ ಸೇವ್ ಮಾಡಿ ಇಟ್ಟಿಕೊಳ್ಳಬಹುದು. ಪ್ರಿಂಟ್ ಪಡೆಯಲು ಇಮೇಲ್ ಗೆ ಕಳುಹಿಸಿಕೊಂಡೋ ಅಥವಾ ಪೆನ್‌ಡ್ರೈವ್ ಮೂಲಕ ತೆಗೆದುಕೊಂಡು ಯಾವಾಗ ಬೇಕಾದರೂ ಪ್ರಿಂಟ್ ತೆಗೆದುಕೊಳ್ಳಬಹುದು.