ಸುಬ್ರಹ್ಮಣ್ಯ ಸ್ವಾಮಿಯ ತಲೆ ಮೇಲೆ ವಿಷ ಹಾಕಿದ್ರೂ ಅಮೃತವಾಗುತ್ತದೆ ಈ ದೇವಾಲಯಕ್ಕೆ ಬಂದರೆ ಎಲ್ಲಾ ರೋಗಗಳಿಗೂ ನಿವಾರಣೆ ಸಿಗುತ್ತದೆ.!
ಸುಬ್ರಹ್ಮಣ್ಯ ಸ್ವಾಮಿಯನ್ನು ಸ್ಕಂದ, ಮುರುಗ ಹೀಗೆಲ್ಲಾ ಕರೆಯುತ್ತಾರೆ. ನಾವು ಕರ್ನಾಟಕದಲ್ಲಿ ಸುಬ್ರಮಣ್ಯ ಸ್ವಾಮಿ ಎಂದು ಪೂಜೆ ಮಾಡುವ ದೇವರನ್ನು ತಮಿಳಿಗರು ಮುರುಗ ಎಂದು ಆರಾಧಿಸುತ್ತಾರೆ. ಈ ಶಿವನ ಪುತ್ರನ ಅನೇಕ ದೇವಾಲಯಗಳು ಭಾರತದಲ್ಲಿ ಇವೆ. ಅದರಲ್ಲೂ ದಕ್ಷಿಣದಲ್ಲಿ ಮುರುಗನಿಗೆ ಭಕ್ತರ ಅತೀ ದೊಡ್ಡ ದಂಡೇ ಇದೆ. ನಮ್ಮ ಪಕ್ಕದ ರಾಜ್ಯವಾದ ತಮಿಳನಾಡಿನಲ್ಲಿ ಕೂಡ ಮುರುಗನನ್ನು ವಿಶೇಷವಾಗಿ ಪೂಜಿಸುತ್ತಾರೆ, ಅಲ್ಲಿ ಮನೆ ಮನೆಗಳಲ್ಲೂ ಕೂಡ ಮುರುಗನ ಭಕ್ತರಿದ್ದಾರೆ. ದೇವಾಲಯಗಳ ತೊಟ್ಟಿಲು ಎಂದು ಕರೆಸಿಕೊಂಡಿರುವ ತಮಿಳುನಾಡಿನಲ್ಲೂ ಕೂಡ ಅನೇಕ ಪುರಾಣ…