ಪ್ರತಿಯೊಬ್ಬ ಮಕ್ಕಳಲ್ಲಿಯೂ ಕೂಡ ಹಠಮಾರಿತನ ಅಥವಾ ಮೊಂಡು ತನ ಎನ್ನುವುದು ಇದ್ದೇ ಇರುತ್ತದೆ. ಆದರೆ ಅದನ್ನು ಹೇಗೆ ಸರಿಪಡಿಸು ವುದು ಎನ್ನುವುದನ್ನು ಪ್ರತಿಯೊಬ್ಬ ತಂದೆ ತಾಯಿಗಳು ತಿಳಿದುಕೊಂಡಿರು ವುದು ಬಹಳ ಮುಖ್ಯವಾಗಿರುತ್ತದೆ. ಅದರಲ್ಲೂ ಬಹಳ ಮುಖ್ಯವಾಗಿ ಈ ರೀತಿಯಾದಂತಹ ಸಮಸ್ಯೆ ಮಕ್ಕಳಲ್ಲಿ ಕಾಣಿಸಿಕೊಳ್ಳುವುದು ಸರ್ವೇ ಸಾಮಾನ್ಯ ಎಂದು ಹೇಳಬಹುದು.
ಏಕೆಂದರೆ ಆ ಮಕ್ಕಳ ವಯಸ್ಸಿಗೆ ತಕ್ಕಂತೆ ಅವರು ಈ ರೀತಿಯ ಎಲ್ಲಾ ಸ್ವಭಾವಗಳನ್ನು ಹೊಂದಿರುತ್ತಾರೆ. ಆದ್ದರಿಂದ ಇದನ್ನು ನಾವು ತಪ್ಪು. ಈ ರೀತಿ ಅವರು ಹಠ ಮಾಡಬಾರದು ಎಂದು ಹೇಳಲು ಸಾಧ್ಯವಿಲ್ಲ. ಯಾವ ಯಾವ ವಯಸ್ಸಿನಲ್ಲಿ ಯಾವ ರೀತಿಯ ಮನಸ್ಥಿತಿ ಇರುತ್ತದೆಯೋ ಆ ರೀತಿ ಮಕ್ಕಳು ನಡೆದುಕೊಳ್ಳು ತ್ತಾರೆ ಆದರೆ ಅದು ಅತಿಯಾದರೆ ಕೆಡುಕಾಗುತ್ತದೆ.
ಆದ್ದರಿಂದ ಮಕ್ಕಳಲ್ಲಿ ಹೆಚ್ಚಿನ ಹಠಮಾರಿತನ ಮೊಂಡುತನವನ್ನು ಆದ ಷ್ಟು ಚಿಕ್ಕವಯಸ್ಸಿನಿಂದಲೇ ಕಡಿಮೆ ಮಾಡುವುದು ಬಹಳ ಮುಖ್ಯವಾಗಿ ರುತ್ತದೆ. ಏಕೆಂದರೆ ಮಕ್ಕಳು ದೊಡ್ಡವರಾಗಿ ಬೆಳೆದ ನಂತರ ಇದೇ ರೀತಿ ಯ ಹಠಮಾರಿತನ ಮೊಂಡುತನ ಇದ್ದರೆ ಅವರು ತಮ್ಮ ಜೀವನದಲ್ಲಿ ಯಾವುದೇ ರೀತಿಯಾದಂತಹ ಒಳ್ಳೆಯ ಬುದ್ಧಿಯನ್ನು ಒಳ್ಳೆಯ ನಡವ ಳಿಕೆಯನ್ನು ಕಲಿತುಕೊಳ್ಳಲು ಸಾಧ್ಯವಾಗುವುದಿಲ್ಲ.
ಸಣ್ಣಪುಟ್ಟ ವಿಚಾರ ಗಳಿಗೂ ಕೂಡ ಹಠವನ್ನು ಮೊಂಡುತನವನ್ನು ಮಾಡುತ್ತಿರುತ್ತಾರೆ. ಆದ್ದ ರಿಂದ ಯಾವ ವಯಸ್ಸಿನಲ್ಲಿ ಯಾವ ರೀತಿಯಾಗಿ ಇರಬೇಕು ಆ ರೀತಿಯಾಗಿ ಇರುವುದು ಬಹಳ ಮುಖ್ಯವಾಗಿರುತ್ತದೆ. ಅದರಲ್ಲೂ ಹೆಚ್ಚು ಹಠಮಾರಿತನ ಮತ್ತು ಮೊಂಡುತನವನ್ನು ಕಡಿಮೆ ಮಾಡುವುದಕ್ಕೆ ಯಾವ ಕೆಲವು ವಿಧಾನಗಳನ್ನು ಅನುಸರಿಸಬೇಕು ಹಾಗೂ ಮಕ್ಕಳು ಈ ರೀತಿಯಾದ ಗುಣವನ್ನು ಹೊಂದುವುದಕ್ಕೆ ಬಹಳ ಪ್ರಮುಖವಾದಂತಹ ಕಾರಣಗಳೇನು ಎನ್ನುವುದನ್ನು ಈ ದಿನ ತಿಳಿದುಕೊಳ್ಳುತ್ತಾ ಹೋಗೋಣ.
ಮಕ್ಕಳು ಹಠಮಾರಿತನ ಮಾಡುವುದು ಕೇವಲ ಒಂದೇ ಒಂದು ವಿಷಯ ಕ್ಕೆ ಸೀಮಿತವಾಗಿರುವುದಿಲ್ಲ. ಬದಲಿಗೆ ಹೆಚ್ಚು ಟಿವಿ ನೋಡುವುದಾಗಿರ ಬಹುದು, ಹೆಚ್ಚು ಮಾತನಾಡುವುದಾಗಿರಬಹುದು, ಬೇರೆಯವರಿಗೆ ತೊಂದರೆ ಮಾಡುವುದಾಗಿರಬಹುದು, ತಂದೆ ತಾಯಿಗಳ ಮಾತಿಗೆ ಬೆಲೆಯನ್ನು ಕೊಡದೆ ಇರಬಹುದು, ಹೀಗೆ ಪ್ರತಿಯೊಂದರಲ್ಲಿಯೂ ಕೂಡ ಮಕ್ಕಳು ಹಠಮಾರಿತನವನ್ನು ತೋರಿಸುತ್ತಿರುತ್ತಾರೆ. ಹಾಗೂ ಈ ರೀತಿಯ ಸಮಸ್ಯೆ ಎದುರಾಗುವುದಕ್ಕೆ ಬಹಳ ಪ್ರಮುಖವಾದಂತಹ ಕಾರಣ ಏನು ಎಂದು ನೋಡುವುದಾದರೆ.
• ತಂದೆ ತಾಯಿಗಳು ಮಕ್ಕಳನ್ನು ಅತಿಯಾಗಿ ಮುದ್ದು ಮಾಡುವುದು.
ಹೌದು ತಂದೆ ತಾಯಿಗಳು ಮಕ್ಕಳನ್ನು ಬೆಳೆಸುವಂತಹ ಸಮಯದಲ್ಲಿ ಅಂದರೆ ಆ ಮಗು ಒಮ್ಮೆ ನನಗೆ ಏನಾದರೂ ತಿಂಡಿ ಬೇಕು ಎಂದು ಅಳುತ್ತಿದ್ದರೆ ಆ ಸಮಯದಲ್ಲಿ ತಂದೆ ತಾಯಿಗಳು ಅಳುವುದನ್ನು ನಿಲ್ಲಿಸುವುದಕ್ಕೆ ನಿನಗೆ ಬೇಕಿದ್ದನ್ನು ಕೊಡುತ್ತೇನೆ ಈಗ ಸುಮ್ಮನಿರು ಎಂದು ಹೇಳುತ್ತಾರೆ.
ಆಗ ಆ ಮಗು ತಕ್ಷಣವೇ ತನ್ನ ಅಳುವನ್ನು ನಿಲ್ಲಿಸುತ್ತದೆ. ಈ ರೀತಿಯಾಗಿ ಮಕ್ಕಳನ್ನು ನೀವೇ ಸಮಾಧಾನ ಮಾಡುವುದಕ್ಕೆ ಈ ರೀತಿಯಾದಂತಹ ವಿಧಾನವನ್ನು ಅನುಸರಿಸಿದರೆ ಮಕ್ಕಳು ಅದನ್ನೇ ಅಭ್ಯಾಸ ಮಾಡಿಕೊಳ್ಳು ತ್ತಾರೆ. ಹೌದು ನಾನು ಈ ರೀತಿ ಮಾಡುವುದರಿಂದ ನನ್ನ ತಂದೆ ತಾಯಿ ಗಳು ನನಗೆ ಬೇಕಾದಾಗ ಕೇಳಿದ್ದನ್ನು ತಂದುಕೊಡುತ್ತಾರೆ ಎನ್ನುವುದನ್ನು ತಮ್ಮ ಮನಸ್ಸಿನಲ್ಲಿ ಇಟ್ಟುಕೊಳ್ಳುತ್ತಾರೆ. ಆದ್ದರಿಂದ ಈ ವಿಚಾರದ ಬಗ್ಗೆ ಹೆಚ್ಚಿನ ಗಮನವನ್ನು ವಹಿಸುವುದು ಒಳ್ಳೆಯದು.
• ಹಾಗೂ ಮಕ್ಕಳಿಗೆ ಯಾವುದೇ ಕೆಲಸವನ್ನು ಕೊಡದೆ ಅವರ ಕೆಲಸವನ್ನು ನಾವೇ ಮಾಡುವುದು ಕೂಡ ಬಹಳ ಪ್ರಮುಖವಾದಂತಹ ಕಾರಣ ಎಂದೇ ಹೇಳಬಹುದು. ಉದಾಹರಣೆಗೆ ಮಕ್ಕಳಿಗೆ ಹೋಂವರ್ಕ್ ಮಾಡಿಕೊಡುವುದು, ಅವರಿಗೆ ಸ್ನಾನ ಮಾಡಿಸುವುದಾಗಿರಬಹುದು ಬಟ್ಟೆ ಹಾಕುವುದಾಗಿರಬಹುದು ಅವರಿಗೆ ಶೂ ಹಾಕುದಾಗಿರಬಹುದು ಹೀಗೆ ಪ್ರತಿಯೊಂದು ಕೂಡ ತಂದೆ-ತಾಯಿಗಳೇ ಮಾಡುವುದರಿಂದ ಮಕ್ಕಳಿಗೆ ಯಾವುದೇ ರೀತಿಯ ಜವಾಬ್ದಾರಿ ಬರುವುದಿಲ್ಲ. ಇವೆಲ್ಲವನ್ನೂ ಸಹ ಚಿಕ್ಕಂದಿನಿಂದಲೇ ಕಲಿಸುವುದು ಒಳ್ಳೆಯದು. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ