ನಟ ಚಂದನ್ ಮತ್ತು ಕವಿತಾ ಗೌಡ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ ಕಲರ್ಸ್ ಕನ್ನಡ ವಾಹಿನಿಯಲ್ಲಿ ಮೂಡಿ ಬರುತ್ತಿದ್ದಂತಹ ಲಕ್ಷ್ಮಿ ಬಾರಮ್ಮ ಧಾರವಾಹಿಯಲ್ಲಿ ನಟ ನಟಿಯಾಗಿ ಕಾಣಿಸಿಕೊಂಡಿದ್ದರು ಇದಕ್ಕೂ ಮುಂಚೆಯೇ ಚಂದನ್ ಅವರು ಸಾಕಷ್ಟು ಧಾರಾವಾಹಿಯಲ್ಲಿ ನಟನೆ ಮಾಡಿದ್ದಾರೆ. ಆದರೆ ಇವರಿಗೆ ಹೆಚ್ಚು ಕೀರ್ತಿ ಮತ್ತು ಯಶಸ್ಸನ್ನು ತಂದುಕೊಟ್ಟ ಧಾರವಾಹಿ ಅಂದರೆ ಅದು ಲಕ್ಷ್ಮಿ ಬಾರಮ್ಮ ಅಂತಾನೆ ಹೇಳಬಹುದು. ಧಾರವಾಹಿಯಲ್ಲಿ ಗಂಡ ಹೆಂಡತಿ ಪಾತ್ರವನ್ನು ನಿಭಾಯಿಸುತ್ತಿದ್ದಂತಹ ಚಂದನ್ ಹಾಗೂ ಕವಿತಾ ನಿಜ ಜೀವನದಲ್ಲಿಯೂ ಕೂಡ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವುದು ನಿಮಗೆ ತಿಳಿದೇ ಇದೆ ಸುಮಾರು 9 ವರ್ಷ ಪ್ರೀತಿಸಿ ವೈವಾಹಿಕ ಜೀವನಕ್ಕೆ ಕಳೆದ ವರ್ಷವಷ್ಟೇ ಕಾಲಿಟ್ಟಿದ್ದಾರೆ.
ಅದ್ದೂರಿಯಾಗಿ ಖಾಸಗಿ ಹೋಟೆಲ್ ಒಂದರಲ್ಲಿ ನಿಶ್ಚಿತಾರ್ಥ ಮಾಡಿಕೊಂಡರು ಆದರೆ ಇವರ ಮದುವೆಯ ಸಮಯದಲ್ಲಿ ಕೋವಿಡ್ ಇದ್ದ ಕಾರಣ ಸರಳವಾಗಿ ಕುಟುಂಬಸ್ಥರ ಸಮ್ಮುಖದಲ್ಲಿ ಮದುವೆ ಮಾಡಿಕೊಳ್ಳುತ್ತಾರೆ. ಮದುವೆಯಾದ ನಂತರ ಕವಿತಾ ಅವರು ಸಂಪೂರ್ಣವಾಗಿ ಕಿರುತೆರೆ ಲೋಕದಿಂದ ದೂರ ಉಳಿದಿದ್ದಾರೆ. ಅಂದರೆ ಯಾವುದೇ ಧಾರವಾಹಿಯಲ್ಲಿ ನಟಿಸುತ್ತಿಲ್ಲ ಆದರೆ ಕವಿತಾ ಅವರು ಕ್ಲಾಸಿಕಲ್ ಡ್ಯಾನ್ಸರ್ ಈ ಕಾರಣಕ್ಕಾಗಿ ತಮ್ಮ ಮನೆಯಲ್ಲಿ ಮಕ್ಕಳಿಗೆ ಡ್ಯಾನ್ಸ್ ಹೇಳಿಕೊಡುತ್ತಿದ್ದಾರೆ. ಚಂದನ್ ಅವರು ಮಾತ್ರ ಸಿಕ್ಕಾಪಟ್ಟೆ ಬ್ಯುಸಿ ಕನ್ನಡ ತೆಲುಗು ಸೇರಿದಂತೆ ಎರಡು ಭಾಷೆಯನ್ನು ಕೂಡ ನಟನೆ ಮಾಡುತ್ತಿದ್ದಾರೆ. ಇನ್ನು ಚಂದನ್ ಕೇವಲ ನಟನೆಯಲ್ಲಿ ಮಾತ್ರ ತಮ್ಮನ್ನು ತಾವು ಗುರುತಿಸಿಕೊಂಡಿಲ್ಲ ಇದರ ಹೊರತಾಗಿ ಹಲವರು ಬಿಸಿನೆಸ್ ಮಾಡುತ್ತಿದ್ದಾರೆ ಹೌದು, ರಿಯಲ್ ಎಸ್ಟೇಟ್ ಸೇರಿದಂತೆ ಬೆಂಗಳೂರಿನಲ್ಲಿ ಖಾಸಗಿ ಹೋಟೆಲ್ ಒಂದನ್ನು ಹೊಂದಿದ್ದಾರೆ.
ಒಟ್ಟಾರಿಯಾಗಿ ಹೇಳುವುದಾದರೆ ಇವರ ಆದಾಯವು ಕೂಡ ಅಧಿಕ ಅಂತಾನೆ ಹೇಳಬಹುದು ಏಕೆಂದರೆ ಒಂದು ಕಡೆ ನಟನೆಯಿಂದ ಆದಾಯ ಬರುತ್ತಿದೆ ಮತ್ತೊಂದು ಕಡೆ ಬಿಸಿನೆಸ್ ನಿಂದಲೂ ಕೂಡ ಆದಾಯ ಬರುತ್ತಿದ್ದರೆ. ಈ ಕಾರಣಕ್ಕಾಗಿ ಬೆಂಗಳೂರಿನಲ್ಲಿ ಸ್ವಂತ ಬಂಗಲೆ ಇದ್ದರೂ ಕೂಡ ಕಳೆದ ತಿಂಗಳಿನ ಅಷ್ಟೇ ಅಪಾರ್ಟ್ಮೆಂಟ್ ಒಂದನ್ನು ಖರೀದಿ ಮಾಡಿದರು. ಇದರ ಜೊತೆಗೆ ತಮ್ಮ ಪತ್ನಿಯ ಹುಟ್ಟುಹಬ್ಬಕ್ಕಾಗಿ ಬೆಲೆಬಾಳುವಂತಹ ದುಬಾರಿ ಚಿನ್ನಭರಣವನ್ನು ಕೂಡ ಉಡುಗೊರೆಯಾಗಿ ನೀಡಿದ್ದಾರೆ ಇವೆಲ್ಲವನ್ನು ನೋಡುತ್ತಿದ್ದಂತಹ ಅಭಿಮಾನಿಗಳಿಗೆ ಮತ್ತು ನೆಟ್ಟಿಗರಿಗೆ ಆಶ್ಚರ್ಯವಾಗಿದೆ. ಅಷ್ಟೇ ಅಲ್ಲದೆ ಚಂದನ್ ಮತ್ತು ಕವಿತಾ ಅವರ ಆಸ್ತಿ ಎಷ್ಟಿರಬಹುದು ಎಂಬುದನ್ನು ತಿಳಿದುಕೊಳ್ಳುವಂತಹ ಕುತೂಹಲವೂ ಕೂಡ ಇದೆ.
ಹೌದು ಸಾಮಾನ್ಯವಾಗಿ ಸೆಲೆಬ್ರೆಟಿಗಳಾಗಿರಲಿ ಅಥವಾ ಕಿರುತರೆ ನಟ ನಟಿಯರಾಗಿರಲಿ ಅವರ ಆಸ್ತಿ ವಿವರವನ್ನು ವೆಬ್ಸೈಟ್ ಒಂದರಲ್ಲಿ ಪ್ರಕಟಿಸಲಾಗುತ್ತದೆ. ಈ ವೆಬ್ ಸೈಟ್ ನಲ್ಲಿ ಸಿಕ್ಕಿರುವ ಮಾಹಿತಿಯ ಪ್ರಕಾರ ನಟ ಚಂದನ್ ಅವರು ಸೀರಿಯಲ್ ಗಳಲ್ಲಿ ನಟನೆ ಮಾಡುತ್ತಲೇ ಸುಮಾರು 30 ಕೋಟಿ ಹಣವನ್ನು ಸಂಪಾದನೆ ಮಾಡಿದ್ದಾರೆ ಎಂಬುದು ತಿಳಿದು ಬಂದಿದೆ. ಕವಿತ ಗೌಡ ಅವರ ವಿಚಾರಕ್ಕೆ ಬರುವುದಾದರೆ ಈಗಾಗಲೇ 20 ಕೋಟಿ ಆಸ್ತಿ ಮೌಲ್ಯವನ್ನು ಹೊಂದಿದ್ದಾರೆ ಎಂಬುದು ತಿಳಿದು ಬಂದಿದೆ ಒಟ್ಟಾರೆಯಾಗಿ ಹೇಳುವುದಾದರೆ ಗಂಡ ಹೆಂಡತಿ ಇಬ್ಬರೂ ಕೂಡ ಇದೀಗ 50 ಕೋಟಿ ಆಸ್ತಿಯನ್ನು ಹೊಂದಿದ್ದಾರೆ.
ಆದರೆ ಕಳೆದ ತಿಂಗಳಷ್ಟೇ ನಟ ಚಂದನ್ ಅವರು ತೆಲುಗು ಕಿರುತೆರೆ ತಂಡದ ಜೊತೆ ಕಿರಿಕ್ ಮಾಡಿಕೊಂಡಿದ್ದಾರೆ ಹೌದು ಧಾರವಾಹಿ ಟೆಕ್ನಿಕಲ್ ತಂಡದಲ್ಲಿ ಇದ್ದಂತಹ ಯುವಕನಿಗೆ ಅ.ವ್ಯಾ.ಚ ಪದಗಳಿಂದ ನಿಂ.ದ.ನೆ ಮಾಡಿದ್ದಾರೆ ಎಂಬ ಕಾರಣದಿಂದಾಗಿ ನಟ ಚಂದನ್ ಮೇಲೆ ಟೆಕ್ನಿಷಿಯನ್ ಟೀಮ್ ಅವರು ಕೈ ಮಾಡಿದ್ದಾರು. ಈ ಕಾರಣದಿಂದ ಬಹಳ ನೋವನ್ನು ಅನುಭವಿಸಿದಂತಹ ಚಂದನ್ ಅವರು ಇನ್ನು ಮುಂದೆ ನಾನು ತೆಲುಗು ಸೀರಿಯಲ್ ನಲ್ಲಿ ಅಭಿನಯಿಸುವುದಿಲ್ಲ ಎಂದು ಕೋಪ ಮಾಡಿಕೊಂಡು ಸೀರಿಯಲ್ಸ್ ನಿಂದ ಹೊರಬಂದ ವಿಚಾರ ನಿಮ್ಮೆಲ್ಲರಿಗೂ ಕೂಡ ತಿಳಿದೇ ಇದೆ. ಸದ್ಯಕ್ಕೆ ಚಂದನ್ ಅವರು ತೆಲುಗು ಕಿರುತೆರೆ ರಂಗವನ್ನು ಬಿಟ್ಟು ಕನ್ನಡಕ್ಕೆ ಮರಳಿ ಬಂದಿದ್ದಾರೆ ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ.