ಇಂದಿನ ಕಾಲದಲ್ಲಿ ಒಳ್ಳೆಯ ಹೆಂಡತಿ ಸಿಗುವುದು ತುಂಬಾ ಕಷ್ಟವಾಗಿದೆ. ಒಂದು ವೇಳೆ ಸಿಕ್ಕರೆ ಅದು ನಿಮ್ಮ ಅದೃಷ್ಟ ಎಂದೇ ಹೇಳಬಹುದು. ಗಂಡನೇ ಆಗಲಿ, ಹೆಂಡತಿಯೇ ಆಗಲಿ ಉತ್ತಮ ಸಂಗಾತಿ ಆಗುವುದು ತುಂಬಾ ಕಷ್ಟ. ಸುಂದರ ಮತ್ತು ಆದರೆ ಉತ್ತಮ ಪತಿ ಅಥವಾ ಪತ್ನಿ ಸಿಕ್ಕಾಗ ನಿಜಕ್ಕೂ ಬದುಕು ನೆಮ್ಮದಿಯಿಂದ ಕೂಡಿರುತ್ತದೆ ಒಂದು ವೇಳೆ ಪತಿ ಸರಿಯಾಗಿಲ್ಲದಿದ್ದರೆ ಪತ್ನಿಗೆ ನೆಮ್ಮದಿ ಇರುವುದಿಲ್ಲ.
ಪತ್ನಿ ಸರಿಯಾಗಿ ಇಲ್ಲದಿದ್ದರೆ ಪತಿಗೆ ನೆಮ್ಮದಿ ಇರುವುದಿಲ್ಲ. ಹಾಗಾಗಿ ಉತ್ತಮ ಜೀವನವನ್ನು ಸಾಗಿಸುವ ಇಚ್ಛೆ ಇದ್ದರೆ ಇಬ್ಬರೂ ಕೂಡ ಉತ್ತಮ ಗುಣವನ್ನು ಹೊಂದಿರ ಬೇಕು. ಹಾಗಾದರೆ ಈ ದಿನ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿ ದಂತೆ ಉತ್ತಮ ಪತ್ನಿ ಯಾಗಿರುವವಳು ಯಾವ ರೀತಿಯ ಕೆಲವು ಲಕ್ಷಣಗಳನ್ನು ಹೊಂದಿರುತ್ತಾಳೆ.
ಹಾಗೂ ಅವಳು ತನ್ನ ವಿಚಾರವಾಗಿ ಹಾಗೂ ಅವಳ ಗಂಡನ ವಿಚಾರ ವಾಗಿ ಹಾಗೂ ಅವಳ ಗಂಡನ ಕುಟುಂಬದ ವಿಚಾರವಾಗಿ ಹೀಗೆ ಪ್ರತಿ ಯೊಂದರ ಬಗ್ಗೆಯೂ ಕೂಡ ಒಳ್ಳೆಯ ಭಾವನೆಯನ್ನು ಇಟ್ಟುಕೊಂಡಿರು ತ್ತಾಳೆ. ಹಾಗಾದರೆ ಈ ದಿನ ಉತ್ತಮ ಪತ್ನಿ ಯಾಗಿರುವವಳು ಯಾವ ಕೆಲವು ಗುಣಲಕ್ಷಣಗಳನ್ನು ಹೊಂದಿರುತ್ತಾಳೆ ಎನ್ನುವ ಮಾಹಿತಿಯ ಬಗ್ಗೆ ಈ ದಿನ ಸಂಪೂರ್ಣವಾಗಿ ತಿಳಿದುಕೊಳ್ಳೋಣ.
* ಕೆಲವು ಗುಣಗಳನ್ನು ಹೊಂದಿರುವ ಮಹಿಳೆಯರು ಇಡಿ ಕುಟುಂಬ ವನ್ನು ಸಂತೋಷದಿಂದ ಇಡುತ್ತಾರೆ.
* ಒಂದು ವೇಳೆ ಯಾವುದೆ ತೊಂದರೆ ಬಂದರೂ ಶೀಘ್ರ ಪರಿಹಾರ ಕಂಡುಕೊಳ್ಳುತ್ತಾರೆ. ಅವರ ಮಕ್ಕಳು ಸಹ ಅತ್ಯಂತ ಯಶಸ್ವಿ ಮತ್ತು ಸಂತೋಷದ ಜೀವನವನ್ನು ನಡೆಸುತ್ತಾರೆ. ಸರಿ ಮತ್ತು ತಪ್ಪುಗಳ ನಡುವೆ ವ್ಯತ್ಯಾಸವನ್ನು ಗುರುತಿಸಿ ಸರಿಯಾದ ನಿರ್ಧಾರ ಕೈಗೊಳ್ಳುತ್ತಾರೆ.
* ಅಂತಹ ಮಹಿಳೆಯರು ಉತ್ತಮವಾಗಿ ವರ್ತಿಸುತ್ತಾರೆ ಮತ್ತು ಮಕ್ಕಳ ನ್ನು ಸುಸಂಸ್ಕೃತರನ್ನಾಗಿ ಮಾಡುತ್ತಾರೆ. ಹಣವನ್ನು ಉಳಿಸುವ ಗುಣ ಮಹಿಳೆಗೆ ಇರಬೇಕು. ಸ್ವಲ್ಪ ಹಣವನ್ನು ಉಳಿಸುವ ಗುಣವಿದ್ದರೆ ಅಂತಹ ಮಹಿಳೆ ತುಂಬಾ ಅದೃಷ್ಟಶಾಲಿಯಾಗಿರುತ್ತಾಳೆ. ಹಣ ಉಳಿಸುವ ಪ್ರವೃತ್ತಿಯನ್ನು ಬೆಳೆಸಿಕೊಂಡರೆ ನಮ್ಮ ಕಷ್ಟ ಕಾಲದಲ್ಲಿ ಪ್ರಯೋಜನಕ್ಕೆ ಬರುತ್ತದೆ.
* ಸಂವೇದನಾಶೀಲ ಮಹಿಳೆ ತನ್ನ ಕುಟುಂಬವನ್ನು ಪ್ರತಿ ಕಷ್ಟದಿಂದ ರಕ್ಷಿಸುತ್ತಾಳೆ.
* ಮಹಿಳೆಗೆ ಇರುವ ಕೆಲವು ಪ್ರಮುಖ ಗುಣಗಳಲ್ಲಿ ತಾಳ್ಮೆಯೂ ಒಂದು ಪ್ರಮುಖ ಗುಣವಾಗಿದೆ.
* ಯಾವ ಮಹಿಳೆಗೆ ತಾಳ್ಮೆಯಿರುತ್ತದೆಯೊ ಅವಳ ಪತಿ ಬಹಳ ಅದೃಷ್ಟಶಾಲಿ ಏಕೆಂದರೆ ಅಂತಹ ಮಹಿಳೆ ತಾಳ್ಮೆಯಿಂದ ಪ್ರತಿ ಕಷ್ಟವನ್ನು ಎದುರಿಸುತ್ತಾಳೆ.
* ಎಂಥಹ ಕಷ್ಟ ಬಂದರೂ ತನ್ನ ಪತಿಗೆ ಬೆನ್ನೆಲುಬಾಗಿ ನಿಂತುಕೊಳ್ಳುತ್ತಾಳೆ ಕಷ್ಟದ ಸಮಯದಲ್ಲಿ ಪತಿಗೆ ಪತ್ನಿಯ ನೆರವು ಸಿಕ್ಕರೆ ಎಂತಹ ಕಷ್ಟವನ್ನು ಬೇಕಾದರೂ ಎದುರಿಸಬಹುದು.
* ಒಳ್ಳೆಯ ಗುಣವನ್ನು ಹೊಂದಿರುವ ಮಹಿಳೆ ಯಾವತ್ತಿಗೂ ಗಂಡನ ಮನೆಯವರ ಸಂತೋಷವನ್ನು ಬಯಸುತ್ತಾಳೆ. ಗಂಡನ ಸುಖ ದುಃಖಗಳಲ್ಲಿ ತಾನು ಭಾಗಿ ಆಗುತ್ತಾಳೆ. ಗಂಡನ ಮನೆಯ ಕಷ್ಟಗಳನ್ನು
ನೆರೆಹೊರೆಯವರ ಹತ್ತಿರ ಆಗಲಿ ಅಥವಾ ತವರುಮನೆಯಲ್ಲಿ
ಆಗಲಿ ಹೇಳಿಕೊಳ್ಳುವುದಿಲ್ಲ. ಮದುವೆಯಾಗುವ ಪ್ರತಿಯೊಂದು ಹೆಣ್ಣು ಕೆಲವು ಗುಣಗಳನ್ನು ಹೊಸದಾಗಿ ಕಲಿತುಕೊಳ್ಳಬೇಕು ಇನ್ನು ಕೆಲವು ಗುಣಗಳನ್ನು ಬದಲಾಯಿಸಿಕೊಳ್ಳಬೇಕು.
ಈ ಮಾಹಿತಿಯನ್ನು ಎಲ್ಲಾ ಹೆಣ್ಣುಮಕ್ಕಳು ಪಾಲಿಸಿದರೆ ಒಳ್ಳೆಯದು. ಇದರಿಂದ ಅವಳು ತನ್ನ ಜೀವನಪರ್ಯಂತ ಒಳ್ಳೆಯ ರೀತಿಯಾಗಿ ಬದುಕಬಹುದು ಹಾಗೂ ಯಾವುದೇ ಎಂತದ್ದೇ ಸಮಯದಲ್ಲಿಯೂ ಕೂಡ ಯಾರಿಂದಲೂ ಇಲ್ಲ ಸಲ್ಲದ ಮಾತನ್ನು ಕೇಳುವ ಅವಶ್ಯಕತೆ ಬರುವುದಿಲ್ಲ. ಆದ್ದರಿಂದ ಮೇಲೆ ಹೇಳಿದ ಅಷ್ಟು ಗುಣಗಳನ್ನು ಒಬ್ಬ ಮಹಿಳೆ ಯಾದವಳು ಹೊಂದಿದ್ದರೆ ಅವಳು ಉತ್ತಮ ಪತ್ನಿ ಎಂದೇ ಹೇಳಬಹುದಾಗಿದೆ.