ಈರುಳ್ಳಿ ಎಂದರೆ ಯಾರಿಗೆ ಇಷ್ಟ ಇಲ್ಲ ಹೇಳಿ. ಅಡುಗೆ ರುಚಿ ಹೆಚ್ಚಾಗುವುದೇ ಈರುಳ್ಳಿಯಿಂದ. ಫ್ರೈ ಮಾಡಿದ ಈರುಳ್ಳಿ ಊಟದಲ್ಲಿ ಹೆಚ್ಚು ಇದ್ದಷ್ಟು ಇನ್ನಷ್ಟು ಊಟ ಸೇರುತ್ತದೆ ಎನ್ನುವ ಭಾವನೆ ಹಲವರಲ್ಲಾದರೆ ಇನ್ನೂ ಕೆಲವರಿಗೆ ಪ್ಲೇಟ್ ಸೈಡ್ ಅಲ್ಲಿ ಹಸಿ ಈರುಳ್ಳಿ ಕಟ್ ಮಾಡಿ ಇಡಲೇಬೇಕು. ವೆಜ್ ಊಟ ಆಗಲಿ, ನಾನ್ ವೆಜ್ ಊಟ ಇರಲಿ ಹಸಿ ಈರುಳ್ಳಿಯನ್ನು ಕಟ್ ಮಾಡಿಕೊಂಡು ಆಹಾರದ ಜೊತೆ ಸೇವಿಸುತ್ತಾರೆ.
ಅನೇಕ ಆಹಾರ ಪದಾರ್ಥಗಳಲ್ಲಿ ಹಸಿಯಾಗಿಯೇ ಈರುಳ್ಳಿಯನ್ನು ಕಟ್ ಮಾಡಿ ಸೇರಿಸಿ ಕೊಡಲಾಗುತ್ತದೆ. ಕೆಲವರಿಗೆ ಈ ರೀತಿ ಆಹಾರದಲ್ಲಿ ಹಸಿ ಈರುಳ್ಳಿ ಇದ್ದರೆ ಇಷ್ಟ ಆಗುತ್ತದೆ ಇನ್ನು ಕೆಲವರಿಗೆ ಹಸಿ ಈರುಳ್ಳಿ ತಿನ್ನುವುದರಿಂದ ಬಾಯಿ ವಾಸನೆ ಬರುತ್ತದೆ ಎಂದು ಕಿರಿಕಿರಿ ಆಗುತ್ತದೆ. ಆದರೆ ಹಸಿ ಈರುಳ್ಳಿಯನ್ನು ಸೇವಿಸುವುದರಿಂದ ದೇಹಕ್ಕೆ ಎಷ್ಟು ಉಪಯೋಗ ಎನ್ನುವುದನ್ನು ನೀವು ಅರಿತ ಮೇಲೆ ಅದನ್ನು ಹಸಿಯಾಗಿ ಸೇವಿಸದೆ ಇರಲಾರಿರಿ.
● ನಾವು ತಿಂದ ಆಹಾರ ಸರಿಯಾಗಿ ಜೀರ್ಣ ಆಗದೆ ಹೋದರೆ ನಮಗೆ ಹೊಟ್ಟೆ ಉಬ್ಬರ, ಅಸಿಡಿಟಿ, ತಲೆನೋವು ಬರುತ್ತದೆ. ನಿಧಾನವಾಗಿ ಪಚನ ಶಕ್ತಿ ಕಡಿಮೆಯಾಗಿ ಕೂದಲು ಉದುರುವುದು ಮೂಳೆಗಳು ದುರ್ಬಲಗೊಳ್ಳುವುದು, ಮುಖದಲ್ಲಿ ಗುಳ್ಳೆಗಳು ಏಳುವುದು ಇಂತಹ ಪರಿಣಾಮಗಳು ಕಾಣಿಸಿಕೊಳ್ಳುತ್ತವೆ. ಈ ರೀತಿಯೆಲ್ಲಾ ಆಗಬಾರದು ಜೀರ್ಣಕ್ರಿಯೆ ಚೆನ್ನಾಗಿ ಆಗಬೇಕು ಎಂದರೆ ಆಹಾರದ ಜೊತೆ ತಪ್ಪದೆ ಹಸಿ ಈರುಳ್ಳಿ ಸೇವಿಸಬೇಕು.
● ನಿತ್ಯ ಕರ್ಮಗಳು ಸರಿಯಾಗಿ ಆಗುತ್ತಿಲ್ಲ ಎನ್ನುವವರು ಮಲಬದ್ಧತೆ ಸಮಸ್ಯೆಯಿಂದ ನರಳುತ್ತಿರುವವರು ರಾತ್ರಿ ಊಟದಲ್ಲಿ ತಪ್ಪದೆ ಹಸಿ ಈರುಳ್ಳಿಯನ್ನು ಸೇವಿಸುವುದರಿಂದ ಈ ಸಮಸ್ಯೆಗೆ ಪರಿಹಾರ ಸಿಗುತ್ತದೆ.
● ಈರುಳ್ಳಿಯಲ್ಲಿ ಫೈಬರ್ ಅಂಶ ಹೆಚ್ಚಾಗಿರುತ್ತದೆ, ಹಾಗೂ ಕ್ಯಾಲೋರಿ ಕಡಿಮೆ ಇರುತ್ತದೆ. ದೇಹಕ್ಕೆ ಬೇಕಾದ ವಿಟಮಿನ್ಸ್ ಮಿನರಲ್ಸ್ ಎಲ್ಲವೂ ಕೂಡ ಈರುಳ್ಳಿಯಲ್ಲಿ ಹೇರಳವಾಗಿ ಅಡಗಿದೆ. ಇದನ್ನು ಹಸಿಯಾಗಿಯೇ ಸೇವಿಸುವುದರಿಂದ ಇದೆಲ್ಲವೂ ಹೆಚ್ಚಾಗಿ ದೇಹಕ್ಕೆ ಸೇರುತ್ತದೆ.
● ಈರುಳ್ಳಿಯಲ್ಲಿ ಆಂಟಿ ಸಪ್ಲಮೆಂಟರಿ ಪ್ರಾಪರ್ಟಿ ಇರುವುದರಿಂದ ದೇಹದ ತೂಕ ಕಡಿಮೆ ಮಾಡಿಕೊಳ್ಳಬೇಕು ಎನ್ನುವವರು ಹಸಿ ಈರುಳ್ಳಿಯನ್ನು ಸೇವನೆ ಮಾಡುವುದು ಉತ್ತಮ.
● ಕೆಲವರಿಗೆ ಅಲರ್ಜಿ ಉಂಟಾಗಿ ಕಣ್ಣು ಉರಿ,ಗಂಟಲು ಕೆರೆತ ಯಾವಾಗಲೂ ಮೂಗು ಸೋರುವುದು ಈ ರೀತಿ ಕಿರಿಕಿರಿ ಇರುತ್ತದೆ. ಹಸಿ ಈರುಳ್ಳಿಯನ್ನು ಸೇವಿಸುವುದರಿಂದ ಅದು ಪರಿಹಾರ ಆಗುತ್ತದೆ.
● ಈರುಳ್ಳಿಯನ್ನು ಹಸಿಯಾಗಿ ಸೇವನೆ ಮಾಡುವುದರಿಂದ ದೇಹದಲ್ಲಿ ಹಿಸ್ಟಮೈನ್ ಎನ್ನುವ ಹಾರ್ಮೋನ್ ಬಿಡುಗಡೆ ಆಗುತ್ತದೆ. ಇದರಿಂದ ಚರ್ಮದ ಸೋಂಕುಗಳು ಬರುವುದಿಲ್ಲ ಅಲರ್ಜಿ ಸಮಸ್ಯೆಯೂ ಬರುವುದಿಲ್ಲ. ಚರ್ಮದ ಆರೋಗ್ಯ ರಕ್ಷಣೆಗೆ ಇದು ಸಹಾಯಕ.
● ಈರುಳ್ಳಿ ಒಂದು ಪೌಷ್ಟಿಕ ಆಹಾರ ಇದನ್ನು ಮಧುಮೇಹಿಗಳು ಕೂಡ ಸೇವನೆ ಮಾಡಬಹುದು. ಶುಗರ್ ಪೇಷಂಟ್ಗಳು ಹಸಿ ಈರುಳ್ಳಿ ಸೇವನೆ ಮಾಡುವುದರಿಂದ ಅವರ ದೇಹದಲ್ಲಿ ಇನ್ಸುಲಿನ್ ಅಂಶ ಹೆಚ್ಚಾಗುತ್ತದೆ. ದೇಹದಲ್ಲಿ ಇನ್ಸುಲಿನ್ ನ್ಯಾಚುರಲ್ ಆಗಿ ಹೆಚ್ಚಾಗುವುದರಿಂದ ಆಟೋಮೆಟಿಕ್ ಆಗಿ ಶುಗರ್ ಕಂಟ್ರೋಲಿಗೆ ಕೂಡ ಬರುತ್ತದೆ.
● ಹೃದಯದ ಆರೋಗ್ಯಕ್ಕೂ ಕೂಡ ಈರುಳ್ಳಿ ಸೇವನೆ ಒಳ್ಳೆಯದು ಎನ್ನುವುದು ವೈದ್ಯಕೀಯ ಸಂಶೋಧನೆಗಳಿಂದ ದೃಢಪಟ್ಟಿದೆ.
● ಕ್ಯಾನ್ಸರ್ ನಂತಹ ಮಾರಕ ಕಾ’ಯಿ’ಲೆಗಳು ಬರದಂತೆ ತಡೆಗಟ್ಟಲು ಈ ಈರುಳ್ಳಿ ಸೇವನೆಯಿಂದ ದೇಹಕ್ಕೆ ಸೇರುವ ಪೋಷಕಾಂಶಗಳು ಕಾರಣ ಆಗುತ್ತವೆ. ಇವು ಹೇರಳವಾಗಿ ಸಿಗಬೇಕು ಎಂದರೆ ಹಸಿಯಾಗಿಯೇ ಸೇವನೆ ಮಾಡುವುದು ಒಳ್ಳೆಯದು.
● ಹಸಿ ಈರುಳ್ಳಿ ಆಹಾರದ ರುಚಿ ಕೂಡ ಹೆಚ್ಚಿಸುವುದರಿಂದ ಇನ್ನಷ್ಟು ಊಟ ಸೇರಲು ಕಾರಣವಾಗುತ್ತದೆ. ಎಲ್ಲಾ ಕಾರಣಗಳಿಂದ ತಪ್ಪದೇ ಇನ್ನು ಮುಂದೆ ಹಸಿ ಈರುಳ್ಳಿ ಸೇವಿಸುವ ಅಭ್ಯಾಸ ರೂಢಿಸಿಕೊಳ್ಳಿ.