Thursday, April 24, 2025
WhatsApp Group Join Now
Telegram Group Join Now
WhatsApp Group Join Now
Telegram Group Join Now
HomeViral News3ನೇ ಮದ್ವೆ ಆಗ್ತಿರೋ ಚಿರಂಜೀವಿ ಪುತ್ರಿ ಶ್ರೀಜಾಗೆ ಚಿರು ಉಡುಗೊರೆಯಾಗಿ ಕೊಡ್ತಾ ಇರೋ ಈ ಭವ್ಯ...

3ನೇ ಮದ್ವೆ ಆಗ್ತಿರೋ ಚಿರಂಜೀವಿ ಪುತ್ರಿ ಶ್ರೀಜಾಗೆ ಚಿರು ಉಡುಗೊರೆಯಾಗಿ ಕೊಡ್ತಾ ಇರೋ ಈ ಭವ್ಯ ಬಂಗಲೆ ಬೆಲೆ ಎಷ್ಟು ಗೊತ್ತ.? ತಲೆ ಸುತ್ತೊದು ಗ್ಯಾರಂಟಿ

ತೆಲುಗು ಭಾಷೆಯ ಮೆಗಾಸ್ಟಾರ್ ಚಿರಂಜೀವಿ (Megha star Chiranjeevi) ಅವರು ಬಾಷೆ ಗಡಿ ದಾಟಿ ಇಡೀ ದೇಶದಾದ್ಯಂತ ಚಿರಪರಿಚಿತರು. ತೆಲುಗಿನಲ್ಲಿ ಕಳೆದ 4 ದಶಕದಲ್ಲಿ ಸುಮಾರು 150ಕ್ಕೂ ಹೆಚ್ಚು ಸಿನಿಮಾಗಳನ್ನು ಕೊಟ್ಟು ಸಾಕಷ್ಟು ಹಿಟ್ ಪಡೆದಿರುವ ಇವರು ಈಗಲೂ ಸಹ ಬಹು ಬೇಡಿಕೆಯ ನಟ. ಜೊತೆಗೆ ನಿರ್ಮಾಪಕನಾಗಿ ಉದ್ಯಮಿ ಆಗಿ ಕೂಡ ಗುರುತಿಸಿಕೊಂಡಿರುವ ಮೆಗಾಸ್ಟಾರ್ ಅವರಿಗೆ ಅವರ ಸಾಧನೆಯನ್ನು ನೋಡಿ ಹಲವಾರು ಪ್ರಶಸ್ತಿಗಳನ್ನು ಕೊಡಲಾಗಿದೆ.

ದೇಶದ ಅತ್ಯುತ್ತಮ ಮೂರನೆ ನಾಗರಿಕ ಪ್ರಶಸ್ತಿ ಆದ ಪದ್ಮಭೂಷಣವನ್ನು ಕೂಡ ಪಡೆದಿರುವ ಇವರು ಸಿನಿಮಾಗಳಿಗೆ ಸಂಬಂಧಿಸಿದ ಫಿಲಂ ಫೇರ್ ಅವಾರ್ಡ್, ನಂದಿ ಪ್ರಶಸ್ತಿ, ಅತ್ಯುನ್ನತ ಚಲನಚಿತ್ರ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಯನ್ನು ಬಾಚಿಕೊಂಡಿದ್ದಾರೆ. ರಾಜಕೀಯ ವಲಯದಲ್ಲೂ ಕೂಡ ಸಂಚಲನ ಮೂಡಿಸಿದ್ದ ಇವರು ಭಾರತದ ಪ್ರಭಾವಶಾಲಿ ನಾಯಕರುಗಳಲ್ಲಿ ಒಬ್ಬರು.

ಇನ್ನು ಚಿರಂಜೀವಿಯವರ ವೈಯಕ್ತಿಕ ಬದುಕಿನ ಬಗ್ಗೆ ಹೇಳುವುದಾದರೆ ದಾಂಪತ್ಯದಲ್ಲಿ ಎಂದೂ ಕೂಡ ಒಂದು ಸಣ್ಣ ವಿವಾದವನ್ನು ಮಾಡಿಕೊಂಡವರಲ್ಲ. ನಟ ಅಲ್ಲು ರಾಮಲಿಂಗಯ್ಯ ಎನ್ನುವವರ ಪುತ್ರಿ ಯಾದ ಸುರೇಖಾ (Surekha) ಎನ್ನುವವರನ್ನು ಕೈಹಿಡಿದ ಇವರಿಗೆ ಮೂರು ಜನ ಮಕ್ಕಳು. ಎರಡು ಹೆಣ್ಣು ಮಕ್ಕಳು ಹಾಗೂ ಒಬ್ಬ ಮಗ ಪುತ್ರ ರಾಮ್ ಚರಣ್ (Ram Charan Thej) ತೇಜ್ ತೆಲುಗು ಇಂಡಸ್ಟ್ರಿಯ ಸ್ಟಾರ್ ಹೀರೋ.

ಮಗಧೀರ, ನೇನೇ ಅವುನು ಮುಂತಾದ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. ಇನ್ನು ಹೆಣ್ಣು ಮಕ್ಕಳ ಬಗ್ಗೆ ಹೇಳುವುದಾದರೆ ಹಿರಿಯ ಮಕ್ಕಳ ಹೆಸರು ಸುಶ್ಮಿತಾ (Sushmitha) ಹಾಗೂ ಕಿರಿಯ ಮಗಳ ಹೆಸರು ಶ್ರೀಜಾ (Shreeja) . ಸುಶ್ಮಿತಾ ಅವರು ಯಾವುದೇ ವಿವಾದಗಳಿಲ್ಲದೆ ಅಪ್ಪನ ಹೆಸರು ಉಳಿಸುವ ಕೆಲಸವನ್ನು ಮಾಡಿಕೊಂಡು ಇಂಡಸ್ಟ್ರಿಯಿಂದ ದೂರ ಉಳಿದು ನೆಮ್ಮದಿಯ ಜೀವನ ಸಾಗಿಸುತ್ತಿದ್ದಾರೆ.

ಆದರೆ ಶ್ರೀಜಾ ಅವರ ಸುದ್ದಿಗಳು ಆಗಾಗ ವಿ-ವಾ-ದಗಳಾಗಿ ಮಾಧ್ಯಮದವರಿಗೆ ನ್ಯೂಸ್ ಟಾಪಿಕ್ ಆಗಿಬಿಡುತ್ತದೆ. ಶ್ರೀಜಾ ಅವರು ಹೆಚ್ಚಾಗಿ ಮದುವೆ ವಿಚಾರದಿಂದಲೇ ಸುದ್ದಿ ಆಗಿರುತ್ತಾರೆ. 2007ರಲ್ಲಿ ಸಿರೀಷ್ ಭಾರದ್ವಾಜ್ (Sirish Bharadvaj) ಎನ್ನುವವರನ್ನು ಪ್ರೀತಿಸಿ ಮದುವೆ ಆಗಿದ್ದ ಇವರು ತಂದೆಯ ಮತ್ತು ಕುಟುಂಬದವರ ವಿ-ರೋ-ಧದ ನಡುವೆ ಓಡಿ ಹೋಗಿ ಮದುವೆ ಮಾಡಿಕೊಂಡಿದ್ದರು. ಆಗ ಮಾಧ್ಯಮಗಳಲ್ಲೂ ಅದು ಭಾರಿ ಸುದ್ದಿ ಆಗಿತ್ತು.

ನಿವ್ರತಿ ಎನ್ನುವ ಹೆಣ್ಣು ಮಗಳನ್ನು ಕೂಡ ಈ ದಂಪತಿಗಳು ಪಡೆದಿದ್ದರು ಆದರೆ ನಂತರ ನಾನಾ ಕಾರಣಗಳಿಂದ ಮನಸ್ತಾಪ ಮೂಡಿ ಇಬ್ಬರು 2011 ರಲ್ಲಿ ವಿ-ಚ್ಛೇ-ದ-ನ ಪಡೆದು ದೂರವಾಗಿದ್ದಾರೆ. ನಂತರ ತಂದೆಯ ಮನೆಯಲ್ಲಿ ಇದ್ದ ಶ್ರೀಜಾ ಅವರು ಮತ್ತೆ ಮರುಮದುವೆ ಆಗುವ ನಿರ್ಧಾರ ಮಾಡಿದ್ದರು. ಈ ಬಾರಿ ಇದರ ತಂದೆ ಚಿರಂಜೀವಿ ಅವರೇ ಅದ್ದೂರಿಯಾಗಿ ಇವರ ವಿವಾಹವನ್ನು ಮಾಡಿದ್ದರು. ಬೆಂಗಳೂರಿನ ದೇವನಹಳ್ಳಿಯಲ್ಲಿ ಇರುವ ಚಿರು ಫಾರ್ಮ್ ಹೌಸ್ ಅಲ್ಲಿ 2016ರಲ್ಲಿ ಅದ್ದೂರಿಯಾಗಿ ಉದ್ಯಮಿ ಕಲ್ಯಾಣ್ ದೇವ್ (Kalyan dev ) ಎನ್ನುವವರೊಂದಿಗೆ ಶ್ರೀಜಾ ವಿವಾಹ ಜರಗಿತ್ತು ಈ ಜೋಡಿಗೆ ನವೀಷ್ಕ ಎನ್ನುವ ಹೆಣ್ಣು ಮಗಳು ಇದ್ದಾಳೆ.

ಆ ಮದುವೆ ಸಮಯದಲ್ಲಿ ಮಗಳಿಗಾಗಿ ಕೋಟ್ಯಾಂತರ ಮೌಲ್ಯದ ಆಸ್ತಿಯನ್ನು ಚಿರಂಜೀವಿ ಅವರು ನೀಡಿದ್ದರು. ಈಗ ಮತ್ತೊಂದು ಬೃಹತ್ ಬಂಗಲೆಯನ್ನು ಮಗಳಿಗಾಗಿ ಚಿರಂಜೀವಿ ಅವರ ಕಟ್ಟಿಸುತ್ತಿದ್ದಾರೆ. ಹೈದರಾಬಾದ್ ನ ಎಂಎಲ್ಎ ಕಾಲೋನಿಯಲ್ಲಿ (Hyderabad MLA Colony) ಮೇಲೆ 25 ಕೋಟಿ ಖರ್ಚು ಮಾಡಿ ಈ ಬಂಗಲೆಯನ್ನು ಕಟ್ಟಿಸುತ್ತಿದ್ದಾರಂತೆ. ಕೆಲ ಮೂಲಗಳ ಪ್ರಕಾರ ಶ್ರೀಜಾ ಅವರು ಎರಡನೇ ಮದುವೆಯನ್ನು ಕೂಡ ಮುರಿದುಕೊಂಡಿದ್ದಾರಂತೆ. ಇನ್ನು ಎರಡನೇ ಪತಿಯಿಂದ ದೂರ ಆಗಿರುವಂತಹ ಶ್ರೀಜಾ ಅವರು ಕಳೆದ ಎರಡು ವರ್ಷಗಳಿಂದ ತಮ್ಮ ಆತ್ಮೀಯ ಗೆಳೆಯನ ಜೊತೆ ಸುತ್ತಾಡುತ್ತಿದ್ದಾರಂತೆ.

ಕೆಲವು ಮೂಲಗಳ ಪ್ರಕಾರ ಶ್ರೀಜಾ ಮೂರನೇ ಮದುವೆಗೆ ಸಿದ್ದರಾಗಿದ್ದಾರೆ ಹಾಗಾಗಿ ಚಿರಂಜೀವಿಯವರು ಭವ್ಯ ಬಂಗಲೆ ಒಂದನ್ನು ಕಟ್ಟಿಸಿ ಅದನ್ನು ಮದುವೆಗೆ ಉಡುಗೊರೆಯಾಗಿ ಕೊಡುತ್ತಿದ್ದಾರೆ ಎಂಬ ಮಾಹಿತಿ ದೊರೆತಿದೆ. ಅದೇನೇ ಆಗಲಿ ಇತ್ತೀಚಿಗಂತೂ ನಟ ನಟಿಯರ ಬದುಕಿನಲ್ಲಿ ಮದುವೆ ಎಂಬುವುದು ಒಂದು ರೀತಿಯ ಆಟದ ವಸ್ತುವಾಗಿದೆ. ಬೇಸರವಾದ ನಂತರ ಬಿಟ್ಟು ಬೇರೊಂದು ಆಟಿಕೆಯನ್ನು ಕೊಂಡುಕೊಳ್ಳುವ ಹಾಗೆ ಪತಿಯರನ್ನು ಕೂಡ ಬದಲಾಯಿಸುತ್ತಿದ್ದಾರೆ ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ಕಮೆಂಟ್ ಮಾಡಿ.