ನಿನ್ನೆಯಷ್ಟೇ ಬೆಂಗಳೂರಿನಲ್ಲಿ 7ನೇ ಫೀಲಂ ಫೇರ್ ಫೆಸ್ಟಿವಲ್ ಅವಾರ್ಡ್ ಫಂಕ್ಷನ್ ಏರ್ಪಡಿಸಲಾಗಿದೆ ಇದೇ ಮೊದಲ ಬಾರಿಗೆ ಬೆಂಗಳೂರಿನಲ್ಲಿ ಈ ಒಂದು ಫಿಲಂ ಫೇರ್ ಫೆಸ್ಟಿವಲ್ ಅವಾರ್ಡ್ ಫಂಕ್ಷನ್ ಅನ್ನು ಏರ್ಪಡಿಸಿರುವುದು. ಈ ಅವಾರ್ಡ್ ಫಂಕ್ಷನ್ ಗೆ ತಮಿಳು, ತೆಲುಗು, ಮಲಯಾಳಂ, ಹಿಂದಿ ಹಾಗೂ ಕನ್ನಡ ಸಿನಿಮಾರಂಗದ ನಟ ನಟಿಯರು ಪಾಲ್ಗೊಂಡಿದ್ದಾರೆ. ಈ ಅವಾರ್ಡ್ ಫಂಕ್ಷನ್ ಗೆ ನಟಿ ಮೇಘನಾ ರಾಜ್ ಅವರು ಕೂಡ ಬಂದಿದ್ದಾರೆ ಗೋಲ್ಡನ್ ಕಲರ್ ಡ್ರೆಸ್ ನಲ್ಲಿ ಮೇಘನಾ ರಾಜ್ ಅವರು ದೇವತೆಯಂತೆ ಕಂಗೊಳಿಸುತ್ತಿದ್ದಾರೆ. ಈ ಫಿಲಂ ಫೆಸ್ಟಿವಲ್ ನಲ್ಲಿ ಸಿನಿಮಾದಲ್ಲಿ ಅತ್ಯುತ್ತಮವಾಗಿ ನಟನೆ ಮಾಡಿದಂತಹ ನಾಯಕ ನಟರಿಗೂ, ನಟಿಯರಿಗೂ, ನಿರ್ದೇಶಕರಿಗೂ ಹಾಗೂ ಸಂಗೀತ ನಿರ್ದೇಶಕರು ಸೇರಿದಂತೆ ಹಲವಾರು ತಂತ್ರಜ್ಞರಿಗೆ ಅವಾರ್ಡ್ ಅನ್ನು ಕೊಡಲಾಗುತ್ತದೆ.
ಅದೇ ರೀತಿಯಲ್ಲಿ ಲೈಫ್ ಟೈಮ್ ಅಚೀವ್ಮೆಂಟ್ ಎಂಬ ಪ್ರಶಸ್ತಿಯನ್ನು ಚಿರಂಜೀವಿ ಸರ್ಜಾ ಅವರಿಗೆ ನೀಡಿದ್ದಾರೆ ಈ ಒಂದು ಅವಾರ್ಡ್ ಅನ್ನು ಸ್ವೀಕರಿಸುವಂತಹ ಅದೃಷ್ಟ ಚಿರಂಜೀವಿ ಸರ್ಜಾ ಅವರಿಗೆ ಇಲ್ಲ. ಹೌದು ನಿಮ್ಮೆಲ್ಲರಿಗೂ ತಿಳಿದಿರುವಂತೆ ಕಳೆದ ಎರಡು ವರ್ಷಗಳ ಹಿಂದೆ ಚಿರಂಜೀವಿ ಸರ್ಜಾ ಅವರು ನಮ್ಮೆಲ್ಲರನ್ನು ಬಿಟ್ಟು ಹೋದ ವಿಚಾರ ನಿಮಗೆ ತಿಳಿದೇ ಇದೆ. ಹಾಗಾಗಿ ಈ ಲೈಫ್ ಟೈಮ್ ಅಚೀವ್ಮೆಂಟ್ ಅವಾರ್ಡ್ ಅನ್ನು ಇದೀಗ ಚಿರಂಜೀವಿ ಸರ್ಜಾ ಅವರ ಧರ್ಮಪತ್ನಿ ಆದಂತಹ ಮೇಘನಾ ರಾಜ್ ಅವರು ಸ್ವೀಕರಿಸಿದ್ದಾರೆ.
ಚಿರಂಜೀವಿ ಸರ್ಜಾ ಅವರು ನಾಯಕ ನಟರಾಗಿ ತೆರೆಯ ಮೇಲೆ ನಟನೆ ಮಾಡುವುದಕ್ಕಿಂತ ಮುಂಚೆ ಅರ್ಜುನ್ ಸರ್ಜಾ ಅವರ ಜೊತೆ ಹಾಗೂ ಅವರ ತಮ್ಮ ಕಿಶೋರ್ ಸರ್ಜಾ ಅವರ ಜೊತೆ ನಾಲ್ಕೈದು ವರ್ಷ ಜೂನಿಯರ್ ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಕೆಲಸ ಮಾಡಿದ್ದರು. ತದನಂತರ 2009ರಲ್ಲಿ ತೆರೆಕಂಡಂತಹ ವಾಯುಪುತ್ರ ಸಿನಿಮಾದ ಮೂಲಕ ನಾಯಕ ನಟರಾಗಿ ಗುರುತಿಸಿಕೊಂಡರು. ಅಲ್ಲಿಂದ ಸುಮಾರು 20 ಸಿನಿಮಾದಲ್ಲಿ ನಟರಾಗಿ ಅಭಿನಯ ಮಾಡಿದ್ದಾರೆ ತಮ್ಮ ಜೀವನದುದ್ದಕ್ಕೂ ಸಿನಿಮಾಗಾಗಿಯೇ ಕೊಡುಗೆಯನ್ನು ನೀಡಿದ ಕಾರಣ ಚಿರಂಜೀವಿ ಸರ್ಜಾ ಅವರ ಪ್ರತಿಭೆಯನ್ನು ಗುರುತಿಸಿ ಅವರಿಗೆ ಲೈಫ್ ಟೈಮ್ ಅಚೀವ್ಮೆಂಟ್ ಎಂಬ ಬಿರುದನ್ನು ನೀಡಿದ್ದಾರೆ.
ಈ ಅವಾರ್ಡ್ ಫಂಕ್ಷನ್ ನಲ್ಲಿ ಮಾತನಾಡಿದಂತಹ ಮೇಘನಾ ರಾಜ್ ಅವರು ಚಿರು ಇಲಿಯವರೆಗೂ ಯಾವುದೇ ಪ್ರಶಸ್ತಿಯನ್ನು ಸ್ವೀಕಾರ ಮಾಡಿರಲಿಲ್ಲ ಈ ಬಾರಿ ಅವರಿಗಾಗಿ ಪ್ರಶಸ್ತಿಯನ್ನು ನಾನು ಸ್ವೀಕರಿಸಿದ್ದೇನೆ. ಒಂದು ವೇಳೆ ಚಿರು ಬದುಕಿದ್ದರೆ ಖಂಡಿತವಾಗಿಯೂ ಕೂಡ ಎಷ್ಟು ಖುಷಿ ಪಡುತ್ತಿದ್ದರು ಎಂದು ವೇದಿಕೆಯ ಮೇಲೆ ಭಾವುಕರಾಗಿದ್ದಾರೆ. ಅಷ್ಟೇ ಅಲ್ಲದೆ ಚಿರು ಪರವಾಗಿ ಪಡೆದುಕೊಂಡಂತಹ ಪ್ರಶಸ್ತಿಯನ್ನು ತಮ್ಮ ಮನೆಗೆ ತೆಗೆದುಕೊಂಡು ಹೋಗಿ “ನೋಡು ಚಿರು ಫೈನಲ್ಲಿ ನಿನ್ನ ಬ್ಲ್ಯಾಕ್ ಲೇಡಿ ಮನೆಯಲ್ಲಿದ್ದಾಳೆ. ನನಗೆ ಸರಿಯಾಗಿ ಕಾಣಿಸುತ್ತಿದೆ ಒಂದೊಮ್ಮೆ ನೀವು ಈ ಅವಾರ್ಡ್ ಸ್ವೀಕರಿಸಿದರೇ ನಿಮ್ಮ ರಿಯಾಕ್ಷನ್, ಮುಖದ ಭಾವ ಏನಿರುತ್ತಿತ್ತು ಎಂಬುದನ್ನು ನಾನು ಈಗಲೂ ಹೇಳಬಲ್ಲೆ. ಇಂತ ಇನ್ನಷ್ಟು ಸಾಧನೆಗಳು ನಿಮ್ಮದಾಗಲಿ ಎಂದು ಮೇಘನಾ ಚಿರುಗಾಗಿ ಅವಾರ್ಡ್ ಜೊತೆ ಪೋಟೋ ಶೇರ್ ಮಾಡಿ ಶುಭ ಹಾರೈಸಿದ್ದಾರೆ.
ಚಿರು ಚಿತ್ರರಂಗದಲ್ಲಿ ಸಾಗಿ ಬಂದ ಹಾದಿಯನ್ನು ಸ್ಮರಿಸಿ ಫಿಲ್ಮ್ ಫೇಸ್ಟ್ ನಲ್ಲಿ ಚಿರುಗೆ ಜೀವಮಾನದ ಸಾಧನೆ ಅವಾರ್ಡ್ ನೀಡಲಾಗಿದೆ ಸದ್ಯಕ್ಕೆ ಮೇಘನಾ ರಾಜ್ ಅವರು ತಮ್ಮ instagram ಖಾತೆಯಲ್ಲಿ ಶೇರ್ ಮಾಡಿಕೊಂಡಿರುವಂತಹ ಈ ಫೋಟೋ ನೋಡಿ ಅಭಿಮಾನಿಗಳು ಚಿರು ಅವರನ್ನು ತುಂಬಾನೇ ಮಿಸ್ ಮಾಡಿಕೊಳ್ಳುತ್ತಿದ್ದಾರೆ. ಆದರೂ ಮೇಘನಾ ರಾಜ್ ಅವರಿಗೆ ಆದಷ್ಟು ಅನ್ಯಾಯ ಮತ್ತು ಯಾರಿಗೂ ಆಗಿಲ್ಲ ಅಂತಾನೆ ಹೇಳಬಹುದು, ಚಿರು ಚಿರು ಇಲ್ಲದೆ ಇವರ ಜೀವನವೇ ಒಂದು ರೀತಿಯಲ್ಲಿ ನಶ್ವರವಾದಂತಿದೆ ಆದರೂ ಕೂಡ ಮಗುವಿನ ಮುಖ ನೋಡಿಕೊಂಡು ಇನ್ನೂ ಕೂಡ ಜೀವನ ಸಾಗಿಸುತ್ತಿದ್ದಾರೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ನಮಗೆ ಕಮೆಂಟ್ ಮುಖಾಂತರ ತಿಳಿಸಿ.