ಈ ಬ್ರಹ್ಮಾಂಡ ಇರುವುದು ನಾವು ಕೇಳಿದ್ದನ್ನು ಕೊಡಲು ಹಾಗಾಗಿ ಯಾವಾಗಲೂ ಒಳ್ಳೆಯದನ್ನೇ ಕೇಳಬೇಕು, ಇದನ್ನು ಯೂನಿವರ್ಸ್ ಜೊತೆ ಇರುವ ಕನೆಕ್ಷನ್ ಎನ್ನುತ್ತಾರೆ. ಒಮ್ಮೆ ಯುನಿವರ್ಸಿಗೆ ಕನೆಕ್ಟ್ ಆದರೆ ಸಾಕು ಬದುಕು ಸಾರ್ಥಕವಾಗುತ್ತದೆ ನಾವು ಗಮನಿಸಿರಬಹುದು ಕೆಲವರು ಬಹಳ ಒಳ್ಳೆಯವರಾಗಿರುತ್ತಾರೆ.
ಆದರೂ ಕೂಡ ಅವರಿಗೆ ಕಷ್ಟಗಳು ಜಾಸ್ತಿ. ಹಣಕಾಸಿನ ಸಮಸ್ಯೆಯಿಂದ ಬಳಲುತ್ತಿರುತ್ತಾರೆ, ಅಲ್ಲದೇ ಅನೇಕ ಸಮಸ್ಯೆಗಳು ಕಾಡುತ್ತಿರುತ್ತದೆ. ಅವರು ಒಳ್ಳೆಯವರಾಗಿದ್ದರು ಯಾರಿಗೂ ಮೋಸ ವಂಚನೆ ದ್ರೋಹ ಮಾಡದಿದ್ದರೂ ಅವರಿಗೆ ಆ ಕಷ್ಟ ಏಕೆ ಬಂತು ಎಂದು ಹೇಳುವುದಾದರೆ ನೆಗೆಟಿವಿಟಿ ಕಾರಣದಿಂದ ಎನ್ನಬಹುದು.
ಆ ವ್ಯಕ್ತಿ ಒಳ್ಳೆಯವರಾಗಿದ್ದರು ಅವರ ಜೊತೆ ಸಂಪರ್ಕದಲ್ಲಿರುವ ವ್ಯಕ್ತಿಗಳು ನೆಗೆಟಿವ್ ವ್ಯಕ್ತಿಗಳಾಗಿದ್ದರೆ ಅವರ ಚಕ್ರಗಳ ಜೊತೆಗಿರುವ ಕನೆಕ್ಷನ್ ಇವರಿಗೂ ಟ್ರಾನ್ಸ್ಫರ್ ಆಗಿ ಇವರು ಸಮಸ್ಯೆ ಪಡುವಂತಾಗುತ್ತದೆ. ಯಾಕೆಂದರೆ ಒಬ್ಬ ವ್ಯಕ್ತಿ ಹಾಗೂ ಇನ್ನೊಬ್ಬ ವ್ಯಕ್ತಿಗಳ ನಡುವಿನ ಮಾತುಕತೆಗಳು ಎರಡು ವ್ಯಕ್ತಿಗಳ ನಡುವಿನ ಚಕ್ರಗಳ ಕನೆಕ್ಷನ್ ಕೂಡ ಆಗಿರುತ್ತದೆ.
ವಿಶುದ್ದಿ ಚಕ್ರದ ಮೂಲಕ ಮಾತನಾಡುತ್ತೇವೆ, ಅನಾಥ ಚಕ್ರದ ಮೂಲಕ ಭಾವನೆಗಳಿಗೆ ಸ್ಪಂದಿಸುತ್ತೇವೆ. ನೇರವಾಗಿ ಮಾತ್ರವಲ್ಲದೆ ಒಂದು ಅಗೋಚರ ಮಾಧ್ಯಮದ ಮೂಲಕ ಸಂಪರ್ಕಿಸಿದರೂ ಕೂಡ ನೆಗೆಟಿವಿಟಿ ಹಬ್ಬತ್ತದೆ ಇದಕ್ಕೆ ಪರಿಹಾರ ಏನೆಂದರೆ ನೆಗೆಟಿವಿಟಿಯನ್ನು ಹೋಗಲಾಡಿಸಿಕೊಳ್ಳುವುದು.
ನೆಗೆಟಿವಿಟಿಯನ್ನು ಹೋಗಲಾಡಿಸಿಕೊಳ್ಳಲು ಮೊದಲಿಗೆ ಕೋ’ಪ ಹಾಗೂ ಒತ್ತಡವನ್ನು ಬಿಡಬೇಕು. ಕೋ’ಪ ಮತ್ತು ಒತ್ತಡಕ್ಕೆ ಮೂಲ ಕಾರಣ ಮೂಲಧಾರ ಚಕ್ರದಲ್ಲಿ ವಿಕಾರಗಳು ಉಂಟಾಗಿರುವುದು, ಮೂಲಾಧಾರ ಚಕ್ರದಲ್ಲಿ ಉಂಟಾಗಿರುವ ಬ್ಲಾಕೇಜ್ ಗಳು ಕೂಡ ಕಾರಣ. ಅವು ವ್ಯಕ್ತಿಯನ್ನು ಮಾನಸಿಕವಾಗಿ ಕುಗ್ಗಿಸುತ್ತದೆ, ಅವನ ಜೀವ ಹಾಗೂ ಜೀವನದ ಬೆಲೆ ತಿಳಿಸಲು ಆ ಬ್ಲಾಕೇಜ್ ಕ್ಲಿಯರ್ ಮಾಡಬೇಕು.
ಇದನ್ನು ಹೇಗೆ ಮಾಡುವುದು ಎಂದರೆ ಬೀಜಾಕ್ಷರಗಳ ಮೂಲಕ ಮಾಡಬಹುದು. ಲಂ ಎನ್ನುವ ಬೀಜಾಕ್ಷರವನ್ನು 108 ಬಾರಿ ಬ್ರಾಹ್ಮಿ ಮುಹೂರ್ತದಲ್ಲಿ ಹೇಳುವುದರಿಂದ ಸಮಸ್ಯೆ ಪರಿಹಾರ ಆಗುತ್ತದೆ. ಆದರೆ ಇಲ್ಲಿರುವ ಮತ್ತೊಂದು ಟ್ವಿಸ್ಟ್ ಏನೆಂದರೆ ಈ ರೀತಿ ನಾವುಯೂನಿವರ್ಸ್ ಜೊತೆ ಕಲೆಕ್ಟ್ ಆಗಬೇಕು ಅಥವಾ ನಾವು ಹೇಳುವ ಬೀಜಾಕ್ಷರಗಳು ಫಲ ಕೊಡಬೇಕು ಎಂದರೆ ನಮ್ಮ ಚಕ್ರಗಳು ಆಕ್ಟಿವೇಟ್ ಆಗಲು ರೇಖೀ ದೀಕ್ಷೆ ಪಡೆದರೆ ಉತ್ತಮ.
ಆಗ ನಾವು ಸರಿಯಾದ ಮಾರ್ಗದಲ್ಲಿ ನಾವಂದುಕೊಂಡ ಸ್ಥಾನವನ್ನು ಬೇಗ ತಲುಪುತ್ತೇವೆ. ಅಲ್ಲದೇ ಶಕ್ತಿಪತ್ ಮೂಲಕ ದೀಕ್ಷೆ ಮಾಡುವಾಗಲೇ ನಮ್ಮಲ್ಲಿರುವ 40% ನೆಗೆಟಿವಿಟಿಯನ್ನು ಅಲ್ಲೇ ದೂರ ಮಾಡಲಾಗುತ್ತದೆ. ಹಾಗಾಗಿ ರೇಖೇ ದೀಕ್ಷೆ ಒಂದು ಮಾರ್ಗದರ್ಶನ ಎಂದೇ ಹೇಳಬಹುದು.
ಹಾಗೆ ಹಣಕಾಸಿನ ಸಮಸ್ಯೆ ಉಂಟಾಗಿದೆ ಎಂದರೆ ಮಣಿಚಕ್ರದ ಬ್ಲಾಕೇಜ್ ನಿಂದ ಉಂಟಾಗಿರುತ್ತದೆ. ಈ ಮಣಿಚಕ್ರವು ಹಳದಿ ಬಣ್ಣದಲ್ಲಿ ನಮ್ಮ ನಾಭಿಯಿಂದ ಮೂರು ಇಂಚು ಮೇಲೆ ಹಾಗೂ ಹೊಟ್ಟೆಯಿಂದ ಕೆಳಗೆ ಇರುತ್ತದೆ. ಇದು ಆಕ್ಟಿವೇಟ್ ಮಾಡಬೇಕು ಎಂದರೆ ಕೂಡ ರಂ ಎನ್ನುವ ಬೀಜಾಕ್ಷರವನ್ನು ಪಠಿಸಬೇಕು.
ರೇಖೀ ದೀಕ್ಷೆ ಆದ ನಂತರ ಬೀಜಾಕ್ಷರವನ್ನು ಪಠಿಸಿ ಯುನಿವರ್ಸ್ ಜೊತೆ ಕನೆಕ್ಟ್ ಆದಾಗ ನಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳುವುದರ ಬದಲು ಪಾಸಿಟಿವ್ ಆಗಿ ನನಗೆ ಬೇಕಾದಷ್ಟು ದುಡ್ಡು ಇದೆ, ನಾನು ಸಂತೋಷವಾಗಿದ್ದೇನೆ, ನಾನು ಅಂದುಕೊಂಡ ಕೆಲಸ ಆಗಿದೆ ಎನ್ನುವ ರೀತಿ ಪಾಸಿಟಿವ್ ಆಗಿ ಹೇಳಿಕೊಳ್ಳುತ್ತಿದ್ದರೆ ಜೀವನದಲ್ಲಿ ಇನ್ನೂ ಹೆಚ್ಚಿಗೆ ಸಾಧನೆ ಮಾಡಬಹುದು. ರೇಖೀದೀಕ್ಷೆ ಬಗ್ಗೆ ಹೆಚ್ಚಿನ ಮಾಹಿತಿ ಬೇಕಿದ್ದರೆ ಈ ಕೆಳಗಿನ ಸಂಖ್ಯೆಗಳನ್ನು ಸಂಪರ್ಕಿಸಿ.
ಗೀತಾ ಚಂದ್ರಶೇಖರ್,
AP Reiki Centre,
KR ಪೇಟೆ,
ಮಂಡ್ಯ.
6363225069, 8050580790.