ಈಗಿನ ಕಾಲದಲ್ಲಿ ಮನುಷ್ಯರಿಗೆ ಹಣವು ಬಹಳ ಮುಖ್ಯ ಸಾಧನವಾಗಿದೆ. ಹಣ ಇಲ್ಲದಿದ್ದರೆ ಜೀವನದಲ್ಲಿ ಏನೂ ಕೂಡ ನಡೆಯುವುದಿಲ್ಲ, ಹಾಗೆ ಹಣ ಒಂದಿದ್ದರೆ ನಮ್ಮ ಜೀವನದ 90% ಸಮಸ್ಯೆಗಳನ್ನು ನಾವು ಪರಿಹಾರ ಮಾಡಿಕೊಳ್ಳಬಹುದು ಹೀಗಾಗಿ ಎಲ್ಲೆಡೆ ಕೂಡ ಹಣದ ಮೂಲಕವೇ ವ್ಯವಹಾರ ನಡೆಯುತ್ತಿವೆ.
ಆದರೆ ಭಕ್ತಿ ವಿಚಾರದಲ್ಲಿ ಈ ಮಾತು ಸಲ್ಲುವುದಿಲ್ಲ. ಮನಸ್ಸಿನಲ್ಲಿ ಶುದ್ಧ ಭಕ್ತಿ ಇದ್ದರೆ ಸಾಕು ಆದರೆ ನೀವು ನಿಮ್ಮ ಭಕ್ತಿಯ ಜೊತೆ ಹರಕೆ ರೂಪದಲ್ಲಿ ಸಲ್ಲಿಸುವುದೆಲ್ಲವೂ ಕೂಡ ಸದುದ್ದೇಶಕ್ಕಾಗಿ ವಿನಿಯೋಗವಾಗುತ್ತದೆ ಎನ್ನುವುದನ್ನು ನಂಬಿ ಭಕ್ತರು ಕಾಣಿಕೆ, ನೈವೇದ್ಯವನ್ನು ಕೂಡ ಹಣದ ರೂಪದಲ್ಲಿ ಅರ್ಪಿಸುತ್ತಿದ್ದಾರೆ.
ಈ ರೀತಿ ಹಣದ ವಿಚಾರವಾಗಿ ಹೆಚ್ಚು ಪ್ರಚಲಿತದಲ್ಲಿರುವ ದೇವಾಲಯಗಳಲ್ಲಿ ನಮ್ಮ ಕರ್ನಾಟಕದಲ್ಲಿ ಅನೇಕ ಪ್ರಸಿದ್ಧ ಶ್ರೀ ಕ್ಷೇತ್ರಗಳಿವೆ. ಇನ್ನು ಕೆಲವು ಅಷ್ಟೇ ಮಹಿಮೆಯನ್ನು ಹೊಂದಿದ್ದರು ಕೂಡ ಪ್ರಚಲಿತಕ್ಕೆ ಬರದಿದ್ದರೂ ಇಲ್ಲಿ ಈ ದೇವತೆಗಳಿಗೆ ನಡೆದುಕೊಳ್ಳುವ ಭಕ್ತಾದಿಗಳಿಗೆ ಆ ತಾಯಿ ಶಕ್ತಿ ಏನು ಎನ್ನುವುದು ಗೊತ್ತಾಗಿರುತ್ತದೆ.
ಕಾಲ ಕಳೆದಂತೆ ಕ್ರಮೇಣವಾಗಿ ಎಲ್ಲರ ಗಮನವನ್ನು ಸೆಳೆಯುತ್ತದೆ ಈ ಪಟ್ಟಿಗೆ ಸೇರಲಿದೆ ಬಳ್ಳಾರಿಯಲ್ಲಿರುವ ಗಾಣಾಕಟ್ಟೆ ಮಾಯಮ್ಮ ದೇವಸ್ಥಾನ. ಇದನ್ನು ಗಾಣಾಕಟ್ಟೆ ಮಾರಮ್ಮ ದೇವಸ್ಥಾನ ಎಂದು ಕೂಡ ಕರೆಯುತ್ತಾರೆ. ಈ ದೇವಸ್ಥಾನ ವಿಚಾರ ಏನೆಂದರೆ ಇಲ್ಲಿ ಭಕ್ತರು ಹಣವನ್ನು ತುಲಾಭಾರ ಮಾಡಿಸಿ ದೇವಿಗೆ ಅರ್ಪಿಸುವುದಾಗಿ ಹೇಳಿ ಹರಕೆಯನ್ನು ಕಟ್ಟಿಕೊಂಡು ಹೋಗುತ್ತಾರೆ.
ಹೆಚ್ಚಾಗಿ ಸಂತಾನ ಫಲಕ್ಕಾಗಿ ಇಂತಹ ಹರಕೆಯನ್ನು ಹೋರುತ್ತಾರೆ. ಇದನ್ನು ಹೊರತುಪಡಿಸಿ ವ್ಯಾಪಾರ, ವ್ಯವಹಾರ, ವಿವಾಹ ವಿಳಂಬ, ಆರೋಗ್ಯ ಸಮಸ್ಯೆ ಇನ್ನೂ ಯಾವುದೇ ಮನುಷ್ಯ ಸಹಜವಾದ 108 ಸಮಸ್ಯೆಗಳಿದ್ದರೂ ಕೂಡ ಇಲ್ಲಿ ಹರಕೆ ಹೊರಬಹುದು.
ಇಲ್ಲಿರುವ ದೇವಿಯನ್ನು ಕೊಲ್ಲಾಪುರ ಶ್ರೀ ಮಹಾಲಕ್ಷ್ಮಿ ಅವತಾರ ಎಂದೇ ನಂಬಲಾಗುತ್ತದೆ. ಕೊಲ್ಲಾಪುರದಿಂದ ಎಮ್ಮೆಯ ಮೇಲೆ ವ್ಯಾಪಾರಕ್ಕಾಗಿ ಚಿನ್ನವನ್ನು ಹೊತ್ತು ತಂದ ವ್ಯಾಪಾರಿ ಒಬ್ಬ ತೂಕ ಮಾಡಲು ತಂದ ಕಲ್ಲನ್ನು ಇಲ್ಲೇ ಬಿಟ್ಟು ಹೋಗಿದ್ದರಿಂದ ಅದು ಮರುದಿನ ದೇವರ ಕಲ್ಲಾಗಿ ಪರಿವರ್ತನೆ ಹೊಂದಿ ಅಂದಿನಿಂದ ಮಾರಮ್ಮನಾಗಿ ಗ್ರಾಮಸ್ಥರಿಂದ ಪೂಜೆಗೆ ಒಳಪಟ್ಟಿತು ಎನ್ನುವುದು ಸ್ಥಳ ಪುರಾಣ.
ಈಗಲೂ ಪ್ರತಿದಿನ ಸಂಜೆ 6:30 ಕ್ಕೆ ಊರಿನ ತುಂಬಾ ದೇವಿಯ ಉತ್ಸವ ಬರುತ್ತದೆ. ಭಕ್ತಾದಿಗಳು ತಮಗೆ ಯಾವುದೇ ವಿಷಯದಲ್ಲಿ ಗೊಂದಲವಾದರೂ ಎರಡು ಚೀಟಿ ತಂದು ತಾಯಿಯ ಬಳಿ ಅನುಮತಿ ಕೇಳುತ್ತಾರೆ ತಾಯಿಯ ಪಲ್ಲಕ್ಕಿ ಮೇಲೆ ಚೀಟಿ ಹಾಕಿ ಯಾವುದು ಅವರ ಬಳಿ ಬರುತ್ತದೆ ಅದು ತಾಯಿಯ ನುಡಿ ಎಂದು ನಂಬುತ್ತಾರೆ.
ಪ್ರತಿ ಅಮಾವಾಸ್ಯೆಗೂ ವಿಶೇಷ ಪೂಜೆ ಇದ್ದು ಅನ್ನಸಂತರ್ಪಣೆಯೂ ಕೂಡ ಏರ್ಪಟ್ಟಿರುತ್ತದೆ ಮತ್ತು ದೂರದಿಂದ ಬರವ ಭಕ್ತಾದಿಗಳಿಗೆ ಇಲ್ಲಿ ಉಳಿದುಕೊಳ್ಳಲು ಕೂಡ ವ್ಯವಸ್ಥೆ ಮಾಡಿಕೊಡಲಾಗಿದೆ. ಈ ದೇವಸ್ಥಾನದ ನೆಲದಲ್ಲಿ ಒಂದೇ ಒಂದು ರಾತ್ರಿ ಕಳೆದರೂ ಸಾಕು ಅಮ್ಮನ ಮಡಿಲಲ್ಲಿ ಸಮಯ ಕಳೆದ ಅನುಭವ ಬಂದು ಸಾಕ್ಷಾತ್ ಜಗನ್ಮಾತೆ ಮಾಯಮ್ಮ ನಿಮ್ಮ ಸಮಸ್ಯೆಗಳನ್ನು ಆಲಿಸಿ ಪರಿಹರಿಸುತ್ತಾಳೆ ಎನ್ನುವ ನಂಬಿಕೆ ಬಲವಾಗಿದೆ.
ಇಷ್ಟು ಶಕ್ತಿಯುತ ದೇವಸ್ಥಾನಕ್ಕೆ ದಿನೇ ದಿನೇ ಭಕ್ತಾದಿಗಳ ಸಂಖ್ಯೆ ಹೆಚ್ಚುತ್ತಿದೆ, ಅದರಲ್ಲೂ ಅಮಾವಾಸ್ಯೆ ದಿನದಂದು ಜನಜಂಗುಳಿ ಇರುತ್ತದೆ. ನೀವು ಸಹ ನಿಮ್ಮ ಕುಟುಂಬದವರೊಂದಿಗೆ ಸಾಧ್ಯವಾದರೆ ಈ ಕಡೆ ಪ್ರಯಾಣ ಬೆಳೆಸಿ ದೇವಸ್ಥಾನಕ್ಕೆ ಹೋಗುವವರಿಗೆ ಅನುಕೂಲವಾಗಲು ವಿಳಾಸ ಹೀಗಿದೆ ನೋಡಿ.
ಬಳ್ಳಾರಿಯಿಂದ ಇದು ಸುಮಾರು 120km ದೂರದಲ್ಲಿದೆ. ಬಳ್ಳಾರಿಯಿಂದ 94km ದೂರದಲ್ಲಿರುವ ಕೊಟ್ಟೂರಿನಿಂದ 24km ದೂರದಲ್ಲಿದೆ. ಬೆಂಗಳೂರಿನಿಂದ ಹೋಗುವವರೆಗೆ 263 km ಅಂತರವಾಗುತ್ತದೆ ಮತ್ತು ದಾವಣಗೆರೆವರೆಗೂ ಕೂಡ ರೈಲು ವ್ಯವಸ್ಥೆ ಇದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ನೋಡಿ.!